ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅಪ್ಪಟ ಕನ್ನಡದ ವಿನಯ

ಅಪ್ಪಟ ಕನ್ನಡದ ವಿನಯ ಮಲ್ಲಿಕಾರ್ಜುನ ಕಡಕೋಳ . ನಿನ್ನೆ ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ಮುತ್ತಿನಹಾರ, ಎಂಬ ಕಸ್ತೂರಿಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ ವಿನಯಶೀಲ ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ. ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು ಬಡತನ. ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಂದ ಬಳುವಳಿಯಾಗಿ ಬಂದುದು ಅಭಿಜಾತ ಅಭಿನಯ. ಗುಬ್ಬಿ ಕಂಪನಿಯಲ್ಲಿ ತಂದೆಯ ಪಾತ್ರಾಭಿನಯ ಕಂಡು, ಕಲಿತು ಕೃಷ್ಣಲೀಲೆ ನಾಟಕದ ಬಾಲಪಾತ್ರದೊಂದಿಗೆ ರಂಗಭೂಮಿ ಪ್ರವೇಶ. ಗುಬ್ಬಿಕಂಪನಿ, ಸುಬ್ಬಯ್ಯನಾಯ್ಡು ಕಂಪನಿಯ ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ರಂಗಾಭಿನಯ ತಿಳಿನೀರು ಕುಡಿದಂತೆ ಒಲಿದು ಬಂದುದು. ಮೇರುನಟನಾಗಿ ಬದುಕಿನುದ್ದಕ್ಕೂ ಡಾ. ರಾಜ್ ಬಾಳಿದ್ದು ವಿನಯವಂತಿಕೆ. ಅದು ಕನ್ನಡದ ವಿನಯ ಮತ್ತು ಅನನ್ಯತೆಯ ಅನುಸಂಧಾನ. ಸಿನೆಮಾದಲ್ಲಿ ಯಥೇಚ್ಛ ಅವಕಾಶಗಳಿದ್ದಾಗಲೂ ವೃತ್ತಿ ಕಂಪನಿ ನಾಟಕಗಳನ್ನು ರಾಜಕುಮಾರ ಮರೆಯಲಿಲ್ಲ. ಬನಶಂಕರಿ ಜಾತ್ರೆಯಲ್ಲಿ ಸಾಹುಕಾರ, ಬೇಡರ ಕಣ್ಣಪ್ಪ ನಾಟಕಗಳ ಪ್ರದರ್ಶನ. ಬನಶಂಕರಿಯಲ್ಲಿ ರಾಜಕುಮಾರ ಜತೆಗೆ ಚಿತ್ರಬ್ರಹ್ಮ ನಾಮಾಂಕಿತ ಜಿ. ವಿ. ಅಯ್ಯರ್, ಹಾಸ್ಯರಸಋಷಿ ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆದವಾನಿ ಲಕ್ಷ್ಮಿದೇವಿ, ಪಂಡರೀಬಾಯಿ, ಮೈನಾವತಿ, ಹೀಗೆ ಅನೇಕ ರಂಗದಿಗ್ಗಜರು ಸೇರಿ ಮದ್ರಾಸ ಚಲನಚಿತ್ರ ಕಲಾವಿದರ ಸಂಘದಿಂದ ನಾಟಕಗಳ ಪ್ರದರ್ಶನ. ಆ ಕಾಲದಲ್ಲಿ ರಾಮಸಾಗರದ ಹನುಮಂತಪ್ಪ, ಡಾವಣಗೇರಿಯ ಆರ್. ಜಿ. ಶಿವಕುಮಾರ್ ಬನಶಂಕರಿ ಜಾತ್ರೆಯಲ್ಲಿ ಗುತ್ತಿಗೆ ಮೇಲೆ ಕ್ಯಾಂಪ್ ಮಾಡಿಸುತ್ತಿದ್ದರು. ನೆನಪಿರಲಿ ಈಗಿನ ಗುತ್ತಿಗೆದಾರರ ಕಲ್ಚರಲ್ ಮಾಫಿಯಾ ಅವರದಾಗಿರಲಿಲ್ಲ. ಅಭಿಮಾನಿಗಳನ್ನು ದೇವರೆಂದು ಕರೆದ ಕನ್ನಡದರತ್ನ ಡಾ. ರಾಜಕುಮಾರ ಅವರಂತಹ ಮಹಾನ್ ರಂಗಚೇತನ ಕನ್ನಡ ವೃತ್ತಿರಂಗಭೂಮಿಯಿಂದ ಬಂದವರೆಂಬ ಹೆಮ್ಮೆನಮ್ಮದು. ಅಂಥವರು ಬದುಕಿದ ರಂಗಭೂಮಿಯ ಆತ್ಮಗೌರವ ಕಟ್ಟುನಿಟ್ಟಾಗಿ ಕಾಪಾಡೋಣ ಎಂಬ ರಂಗಸಂಕಲ್ಪ ಅವರ ಜನ್ಮದಿನದಂದು ಮಾಡೋಣ. ***********

ಅಪ್ಪಟ ಕನ್ನಡದ ವಿನಯ Read Post »

ಕಾವ್ಯಯಾನ

ಕಾವ್ಯಯಾನ

ಶಂಕಿತರು-ಸೊಂಕಿತರು ನಾಗರಾಜ ಮಸೂತಿ.. ಹೆಜ್ಜೆ ಗುರುತುಗಳು ಮಾಯವಾಗಿ ಕಂಗಾಲದ ರಸ್ತೆಗಳು, ಮೇಲ್ಮುಖವಾಗಿ ಮುಗಿಲನ್ನೆ ದಿಟ್ಟಿಸುವ ಗಿಡಮರಗಳು, ಗಿಜಗೂಡುವ ಸರಕಾರಿ ಕಛೇರಿಗಳ ಖಾಲಿ ಮನಸ್ಥಿತಿಯ ಗೋಡೆಗಳು, ಬೆಳಕು ಕಾಣದೆ ಕತ್ತಲಾವರಿಸಿದ ದವಾಖಾನ ಕೋಣಿಗಳು, ಫಿನಾಯಿಲ್ ವಾಸನೆ ಆವರಿಸಿಕೊಂಡು ತಳತಳ ಅನ್ನುತ್ತಿವೆ ಅಮವಾಸ್ಯೆ ಪೂಜೆಗೆ ಸಿದ್ಧವಾದಂತೆ, ಓಣಿಯ ಬೀದಿಗಳೆಲ್ಲ ಲೊಚುಗುಟ್ಟುತ್ತಿವೆ ಸಿಂಗಾರಗೊಂಡು, ಗಟಾರಗಳೆಲ್ಲ ಕಂದಮ್ಮಗಳಂತೆ ಪೌಡರ್ ಬಳಿದುಕೊಂಡು ವಧು ವರರ ವೇದಿಕೆಗೆ ಸಿದ್ಧವಾದಂತಿವೆ ಸಂಜೆ ಹೊತ್ತಿಗೆ ಕತ್ತಲೆ ಮೆತ್ತಿಕೊಂಡ ಆವರಣಕ್ಕೆಲ್ಲ ಬೀದಿ ದೀಪಗಳು ಬೆಳಕು ಹರಿಸಿ, ಕಛೇರಿ ಕಟ್ಟಡಗಳು, ಲೈಟ್ ಕಂಬಗಳು, ಗಿಡಮರಗಳು, ಗಟಾರಗಳು ಒಟ್ಟಾಗಿ ಒಂದೇ ಪ್ರಶ್ನೆ ಎತ್ತಿವೆ, ಕಿಟಕಿಯಿಂದ ಇಣುಕುವ ಮನುಷ್ಯನನ್ನು, ಇದಕ್ಕೆಲ್ಲ ಕಾರಣೀಭೂತರಾರು ? *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಯಾತ್ರಿಕ ವಿಭಾ ಪುರೋಹಿತ್ ಜಗದೆದೆಯ ತುಂಬ ಹತ್ತಿ ಉರಿಯುತ್ತಿದೆ ಬತ್ತಲಾರದ ಜ್ವಾಲೆ. ಹಾದಿ ಮುಗಿಯುವುದಿಲ್ಲ ಮುಗಿದರದು ಹಾದಿಯಲ್ಲ ! ಯಾತ್ರೆ ಮುಂದುವರೆದಿದೆ ಹೊಸ ಹೊಸ ದೇಶ ಪ್ರದೇಶವನು ತೆಕ್ಕೆಯೊಳಗೆ ನುಂಗಿದೆ. ನೂರು,ಸಾವಿರ,ಲಕ್ಷಗಳ ದಾಟುತ್ತಲಿದೆ ರಕ್ತಬೀಜಾಸುರನ ನೆತ್ತರಿನ ಹನಿಗಳಿಗಿಂತ ವಿಷಾಣು ಹರಡುತ್ತ,ಹಬ್ಬುತ್ತ ರಕ್ಕಸನಂತೆ ಮೀರಿ ಬೆಳೆಯುತ್ತಲಿದೆ ಮನುಕುಲವ ಕಂಗೆಡಿಸುತ್ತಿದೆ. ಹೊರಗಿಂದ ಬಂದವರು ಸುಮ್ಮನೆ ಬರಲಿಲ್ಲ ಇಂದಿಗೂ ಹಂಚುತ್ತಲೇ ಇರುವರು ಬೆನ್ನು ಹಿಂದೆ ನಿಂತು ಚೂರಿ ಹಾಕಿದರು ಕಾಡುಪಾಪದ ರುಚಿಗೆ ಸೋತವರು ಸಂಜೆ ಹಕ್ಕಿಯ ದನಿಗೆ ಕಿವುಡರಾದವರು ನೋವು ಕೇಕೆ ಹಾಕುತ್ತಿದ್ದರೂ, ನಲಿವು ಮರೆಯಲ್ಲಿ ನಿಂತು ಹಣಿಕೆಹಾಕುತ್ತಿರುವಂತೆ ಮನಸಿನ ಯಾವುದೋ ಒಂದು ಮೂಲೆಯಲ್ಲಿ……. ಈಗೀಗ ಕಣ್ಮುಚ್ಚಿ ದರೆ ನಿದ್ದೆ ಸುಳಿಯುವುದಿಲ್ಲ ಸುಳಿದರೂ ಆ ಸುಳಿಯಲ್ಲಿ ಇರುಳೋ,ಬೆಳಕೋ, ಒಂದೂ ತಿಳಿಯುವುದಿಲ್ಲ ತಾನಿರುದಿಲ್ಲವೆಂಬ ಸಂಶಯ ಆ ಯಾತ್ರಿಕನಿಗೆ ಯಾವಾಗ ಬರುವುದೋ ? ದೇವರೇ ಬಲ್ಲ ! ನಕ್ಕ ನಿಮಿಷಗಳೀಗ ದಿಗ್ಬಂಧನದಲಿವೆ. ಸರಪಳಿ ಸಾಗುತ್ತಲಿದೆ ಕೊನೆಯಿರದ ದಾರಿಯಲಿ ಶಂಖನಾದ ಘಂಟೆ ಜಾಗಟೆಗಳಾದವು ಚಪ್ಪಾಳೆಗಳ ತಾಳದಲ್ಲಿ ಕಾಣದ ಮೂಲಮೂರ್ತಿಗೆ ಹರಿವಾಣ ಸೇವೆಯಾಯ್ತು ಹಚ್ಚಿಟ್ಟ ಹಣತೆಗಳು ಹೋರಾಡುತ್ತಿವೆ ಇಂದಿಗೂ ಕತ್ತಲಿನ ವಿರುದ್ಧ ಯುದ್ಧದ ಅಂತ್ಯ ಅರಿಯದೇ ! ಬೆಳಗುತ್ತಿವೆ ರಕ್ಷಕರಿಗೆ ದಾರಿ ದೀಪವಾಗತ್ತ….. ಇನ್ನೂ ಯಾಕೆ ಪೀಡಿಸುವೆ ? ಭಯಾನಕತೆ ತೋರದಿರು ಸಮಾಧಿಯಾಗಿಬಿಡು ಮುಗಿಸಿ “ಮಹಾಯಾತ್ರೆ” . **********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ದಿ ಲಾಸ್ಟ್ ಲೆಕ್ಚರ್ ಮೂಲ: Ryandy pash ಕನ್ನಡಕ್ಕೆ: ಎಸ್. ಉಮೇಶ್ “ಅದ್ಭುತಕನಸುಗಳನ್ನು ಕಾಣಲು ಪ್ರಯತ್ನಿಸಿ, ನಿಮ್ಮ ಮಕ್ಕಳಿಗೂ ಸಹ ಅಂತಹ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಿ. ಮಕ್ಕಳು ಕತ್ತಲಿನ ಪ್ರಪಂಚದಿಂದ ಹೊರಬಂದು ಬೆಳಕಿನ ಸುಂದರ ಪ್ರಪಂಚವನ್ನು ನೋಡುವಂತೆ ಮಾಡಿ – Ryandy pash ಇದೊಂದು ಸಾವಿನ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆ ಸಾರಿದ ಕಂಪ್ಯೂಟರ್ ವಿಜ್ಞಾನಿಯ ರೋಚಕ ಕಥೆಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂ. ಮ. ಸಾ. ಸಂ. ನೀಡುವ ಪ್ರತಿಷ್ಠಿತ *ಅರಳು ಸಾಹಿತ್ಯ ಪ್ರಶಸ್ತಿ” ಪಡೆದ ಜನಮೆಚ್ಚುಗೆಯ ನಂಬರ್ ಒನ್ ಕೃತಿಯಾಗಿದೆ. ಈ ಕೃತಿಗೆ ವಿಶ್ವೇಶ್ವರ ಭಟ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಮೂಲ ಲೇಖಕರು Ryandy pash(ಪ್ರೊಫೆಸರ್, ಕಾರ್ನಿಗಿ ವಿಶ್ವವಿದ್ಯಾಲಯ) ಮತ್ತು ಜೆಫ್ರಿ ಜೆಲ್ಲೊ. ಮೈಸೂರಿನ ಧಾತ್ರಿ ಪ್ರಕಾಶನದಿಂದ ಹೊರಬಂದ ಕೃತಿಯಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅಲ್ಲಿನ ಉಪನ್ಯಾಸಕರಿಗೆ “ಅಂತಿಮ ಉಪನ್ಯಾಸ” ನೀಡುವ ಅವಕಾಶವನ್ನು ಕಲ್ಪಿಸಿಕೊಡುತ್ತವೆ. ಸಾವು – ಬದುಕಿನ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ಉಪನ್ಯಾಸದ ವೇದಿಕೆಯಲ್ಲಿ ಹಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಬೇಕು. ಪ್ರೊ. Ryandy pash ಗೆ ಇಂತಹ ಅವಕಾಶ ಒದಗಿದಾಗ ಅದು ನಿಜಕ್ಕೂ ಅಂತಿಮ ಉಪನ್ಯಾಸವಾಗಲಿದೆ ಎಂದು ಆತ ಊಹಿಸಿಯೇ ಇರಲಿಲ್ಲ. ಕಾರಣ ವೈದ್ಯರು ಆತನಿಗೆ ಕ್ಯಾನ್ಸರ್ ಇರುವಿಕೆಯನ್ನು ದೃಢಪಡಿಸಿದ್ದರು. Ryany ಯ ಉಪನ್ಯಾಸ ಸಾವಿನ ಬಗ್ಗೆ ಇರಬಹುದೆಂದು ಭಾವಿಸಿದವರಿಗೆ ದೊರಕಿದ್ದು “ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವುದು ಹೇಗೆ ” ಎಂದು. ಈ ಪ್ರಶ್ನೆಗಳಿಗೆ “ದಿ ಲಾಸ್ಟ್ ಲೆಕ್ಚರ್” ಸಮರ್ಪಕ ಉತ್ತರ ನೀಡಿತು. ಅದು ಇಂದು ಜಗತ್ತಿನ ಲಕ್ಷಾಂತರ ಜನರ ಜೀವನದ ದಿಕ್ಕನ್ನೇ ಬದಲಿಸಿದೆ. ಜಗತ್ತಿನ ಪ್ರತಿಯೊಬ್ಬ ಪೋಷಕರಿಗೂ ಇದೊಂದು ಮಾರ್ಗದರ್ಶಿ ಹೊತ್ತಿಗೆ. ಆದರ್ಶ ಶಿಕ್ಷಕರಿಗೊಂದು ಪಠ್ಯ. ವಿದ್ಯಾರ್ಥಿಗಳಿಗೊಂದು ಅಮೂಲ್ಯ ಕೈಪಿಡಿ ಹಾಗೂ ಸಂಶೋಧಕರಿಗೊಂದು ದಾರಿದೀಪ. ಡಾ. Ryandy pash ಅಮೇರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದಲ್ಲಿ 1988 ರಿಂದ 1997 ರವರೆಗೆ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವತಃ ವಿಜ್ಞಾನಿಯಾದ ಇವರು ವರ್ಜಿನಿಯ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡಿದ್ದು, ಅನಂತರ ಅಡೋಬ್, ಗೂಗಲ್, ಇಲೆಕ್ಟ್ರಾನಿಕ್ಸ್ ಆರ್ಟ್ ಮತ್ತು ವಾಲ್ ಡಿಸ್ನಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಜಗತ್ತಿನ ಪ್ರಸಿದ್ಧ ಆಲಿಸ್ ಸಾಫ್ಟವೇರ್ ನ ಜನಕ. ಮಡದಿ ಜೈ ಮತ್ತು ಮೂವರು ಮಕ್ಕಳಾದ ಡೈಲನ್, ಲೋಗನ್ ಮತ್ತು ಚೋಲೆ ಯರೊಂದಿಗೆ  ಸಾರ್ಥಕ ಜೀವನ ನಡೆಸಿ ತಮ್ಮ 47 ನೇ ವಯಸ್ಸಿನಲ್ಲೇ (25-07-2008) ಪ್ಯಾಂಕ್ರಿಯಾಸಿಸ್ ಕ್ಯಾನ್ಸರ್ ನಿಂದ ನಿಧನರಾದರು. Ryandy ಅವರ ಅಂತಿಮ ಉಪನ್ಯಾಸದಲ್ಲಿ ಭಾಗವಹಿಸಿ ಈ ಪುಸ್ತಕವನ್ನು ಬರೆದು ಕೋಟ್ಯಂತರ ಜನರ ಕನಸುಗಳಿಗೆ ನೀರೆರೆದು ಹಸಿರು ಮೂಡಿಸಿದ ಕೀರ್ತಿ ಅಮೇರಿಕಾದ ಪ್ರತಿಷ್ಠಿತ ಪತ್ರಿಕೆಯ ವರದಿಗಾರ ಜೆಫ್ರಿ ಅವರಿಗೆ ಸಲ್ಲುತ್ತದೆ. ಇದನ್ನು ಕನ್ನಡಕ್ಕೆ ಎಸ್. ಉಮೇಶ್ ರವರು ಅನುವಾದಿಸಿದ್ದು ನಿಜಕ್ಕೂ ಶ್ಲಾಘನೀಯ. ಸಾಯುವುದು ಗ್ಯಾರಂಟಿ ಎನಿಸಿದ ಮೇಲೆ ತಾನು ಇಲ್ಲದ ಜಗತ್ತಿನಲ್ಲಿ ಬದುಕುವುದು ಹೇಗೆಂದು ಹೆಂಡತಿಗೆ ಹೇಳಿಕೊಟ್ಟು ಯಾರಿಗೆ ಯಾರೂ ಅನಿವಾರ್ಯವಲ್ಲವೆಂದು ಮನವರಿಕೆ ಮಾಡಿಕೊಡುವ ಪರಿ ಒಂದು ಕ್ಷಣ ಎಂಥವರನ್ನಾದರೂ ಭಾವುಕರನ್ನಾಗಿಸುತ್ತದೆ. Ryandy ಬದುಕಿನ ಕಷ್ಟಸುಖಗಳ ವಿಶ್ಲೇಷಣೆಯನ್ನು ಕುರಿತು”ಇಸ್ಪೀಟ್ ಆಟದಲ್ಲಿ ಯಾವ ಕಾರ್ಡ್ ನಮ್ಮ ಕೈ ಸೇರುತ್ತದೆ ಅನ್ನುವುದಕ್ಕಿಂತ ಬಂದ ಕಾರ್ಡ್ ಗಳಲ್ಲಿ ನಾವು ಹೇಗೆ ಆಡುತ್ತೇವೆ ಎನ್ನುವುದು ಮುಖ್ಯ” ಎನ್ನುತ್ತಾರೆ. ಅವನ ಇಡೀ ಬದುಕಿನಲ್ಲಿ ಪತ್ನಿ ಜೈ ಳ ಧೈರ್ಯ, ಶ್ರಮ, ಸಹಕಾರ, ಸಹಾಯ ಎಲ್ಲವನ್ನೂ ತನ್ನ ಕಣ್ಮುಂದೆ ತಂದುಕೊಂಡು ಅವಳ ದಿಟ್ಟತನವನ್ನು ಕೊಂಡಾಡುತ್ತಾ ಜೈ ಳನ್ನು ‘ಸದೃಢ ಗೋಡೆ’ (ದಿ ವಾಲ್) ಎಂಬ ರೂಪಕಕ್ಕೆ ಹೋಲಿಸಿದ್ದಾನೆ. ಸದಾ ಸಮಸ್ಯೆಗಳನ್ನೇ ಬಣ್ಣಿಸುತ್ತಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲಾರಿರಿ. ಅದು ಎಂದಿಗೂ ಕಾರ್ಯ ನಿರ್ವಹಿಸುವ ವೈಖರಿಯಾಗಲಾರದು. ನಮ್ಮೆಲ್ಲರಿಗೂ ಇರುವುದು ಅತ್ಯಂತ ಕಡಿಮೆ ಅವಧಿ ಮತ್ತು ಅಪರಿಮಿತ ಶಕ್ತಿ. ಸಮಯವನ್ನು ಸದ್ವಿನಿಯೋಗ ಪಡಿಸಿಕೊಳ್ಳಿ ಆಗ ಅಗಾಧವಾದುದನ್ನು ಸಾಧಿಸಬಹುದು ಎಂದು ಕರೆ ನೀಡಿದ್ದರೆ. ಇದರಿಂದ ಅವರು ಸಮಯಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರೆಂಬುದು ಅರಿವಾಗುತ್ತದೆ. ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಅದನ್ನು ಎದುರಿಸಲು ಅಗತ್ಯವಾಗಿ ಪೂರ್ವಸಿದ್ಧತೆ ಮಾಡಿಕೊಂಡಾಗ ಮಾತ್ರ ಆಶಾವಾದಿಯಾಗಿ ಬಾಳಲು ಸಾಧ್ಯವೆಂದು ಹೇಳಿ ಬದುಕಿಗೊಂದು ಹೊಸ ಅರ್ಥ ಕಲ್ಪಿಸಿದ್ದಾರೆ. ಇಂತಹ ಒಂದು ಪುಸ್ತಕ ಹಲವರ ಜೀವನದ ಪಥವನ್ನೇ ಬದಲಿಸುವಂತಹ ಸ್ಫೂರ್ತಿಯಾಗಬಲ್ಲದು. ಆದ್ದರಿಂದ ಪುಸ್ತಕ ಜೀವನದ ಅಮೂಲ್ಯ ಸಂಗಾತಿ ಎಂದರೆ ತಪ್ಪಾಗಲಾರದು. ತಡೆಗೋಡೆಗಳು ನಮ್ಮನ್ನು ಹೊರದಬ್ಬಲು ಅಲ್ಲ, ದಾಟಿ ಮುನ್ನುಗ್ಗಲು, ನಮಗೆ ಅವಕಾಶ ನೀಡುವುದಕ್ಕಾಗಿ ಇವೆ –  ryandy pash ***************************** ತೇಜಾವತಿ ಹೆಚ್. ಡಿ

ನಾನು ಓದಿದ ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ಮಬ್ಯಾನ್ ಮಾತು! ರುದ್ರಸ್ವಾಮಿ ಹರ್ತಿಕೋಟೆ ಮಬ್ಯಾನ್ ಮಾತು! ೧) ಧ್ಯಾನಕ್ಕೆ ಕುಳಿತವರನ್ನು ಹೆಚ್ಚು ಕಾಡುವುದು ಅವಳು ಮತ್ತು ಅವಳು ಮಾತ್ರ! ೨) ಅವಳು ಪತಿವ್ರತೆ ಎಂದು ಮಾತಾನಾಡುವವರು ಅವಳ ಬೆತ್ತಲೆ ಕನಸ ಕಾಣದೆ ಇರರು! ೩) ಅವನು ಎಷ್ಟು ರಸಿಕನೆಂಬುದು ಅವನ ಹೆಂಡತಿಗಿಂತ ಅವನ ಸೆಕ್ರೆಟರಿಗೆ ಗೊತ್ತು! ೪) ಕವಿ ಬರೆದದ್ದನ್ನು ಕವಿಯೇ ಅರ್ಥೈಸಿದರೆ ರಸಭಂಗವಾಗುತ್ತದೆ! ೫) ಇಲ್ಲಿ ಹೆಚ್ಚು ಪ್ರೀತಿಸುವವರು ಹುಚ್ಚರಾಗುತ್ತಾರೆ ಇಲ್ಲವೇ ಹುತಾತ್ಮರಾಗುತ್ತಾರೆ! ೬) ಗಂಡಿಗಿಂತ ಹೆಣ್ಣು ಮೊದಲ ರಾತ್ರಿ ಏನೂ ಗೊತ್ತಿಲ್ಲದಂತೆ ನಟಿಸುತ್ತಾಳೆ! ೭) ಅವ್ವನ ಹರಿದ ಕುಪ್ಪಸ ನೋಡಿ ನಗುತ್ತಿದ್ದವರ ಕಂಡು, ಅಪ್ಪನ ಅಂಗಿಯೊಳಗಿನ ತೂತುಬಿದ್ದ ಬನಿಯನ್ ಅಳುತ್ತಿತ್ತು! ==========

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಮೌನ ಮಂದಾರ ಕವಿ: ವಾಣಿ ಮಹೇಶ್ ಕವಯಿತ್ರಿ ವಾಣಿ ಮಹೇಶ್ ರವರ “ಮೌನಮಂದಾರ” ಪುಸ್ತಕ *ಎಪ್ಪತ್ತು ಕವನಗಳ ಮುಪ್ಪುಬರುವವರೆಗೂ ಓದಬೇಕು ಬೆಪ್ಪ* ಎನ್ನುವ *ಮೌನ ಮಂದಾರ*         ಮನದಲ್ಲಿ ಮತ್ತೇರಿ ಮಿಡಿದ ಭಾವನಾತ್ಮಕತೆ ಗೆ ಕೊನೆಯಿಲ್ಲ, ಎತ್ತೆತ್ತ ಸುತ್ತಿದರು ಅಂತ್ಯವಿಲ್ಲ, ಹೊತ್ತು ಮುಳುಗಿದರೂ ಪತ್ತೆ ಮಾಡುವ ಅವಕಾಶವನ್ನು ಕೊಡುವುದಿಲ್ಲ, ಅತ್ತುಅತ್ತು ಉತ್ತರಗಳು ಕಣ್ಣೀರ ಹಾಕದಿದ್ದರೆ ಮತ್ತೇರಿದ ನುಡಿಗಳು ಮೌನಿಯಾಗಿಸಿ ಸುತ್ತುವರಿಯುತ್ತವೆ. ನುಡಿಯದೇ ಭಾವನಾಕ್ಷರಗಳ ಪೋಣಿಸಿ ಗೀಚುತ್ತಿದ್ದರೆ, ಆ “ಮೌನ ಮಂದಾರ ಪುಷ್ಪ ವಾಗಿ ತನ್ನ ಸಕಲ ಶ್ರೇಷ್ಠ ಗುಣಗಳಿಂದ ಸೌರಭವನ್ನು ಸೂಸುತ್ತ ತನ್ನೆಡೆಗೆ ಸೆಳೆಯುತ್ತದೆ. ಅದರ ಸೌಂದರ್ಯ ಭಾವವು ಹಂದರವ ನಿರ್ಮಿಸಿ, ಒಂದೊಂದು ದಳಗಳು ಕವಿತೆಯಾಗಿ ಬಾಂದಳವನ್ನು ನೋಡುತ್ತಿದೆ. ಇಣುಕಿ ನಾನೋಡಿ ಒಮ್ಮೆ ಸ್ಪರ್ಶಿಸಿದೆ’. ಅದು “ಮೌನ ಮಂದಾರ”  ಪುಸ್ತಕವಾಗಿ ನನ್ನ ಕೈಸೇರಿತು, ಅದನ್ನು ಓದಿದೆ ಎನ್ನಲು ಹರ್ಷಿಸುವೆ.  ‘ಪುರುಷ ಸಮಾಜಕ್ಕೆ ಸಬಲೆ ಎಂದು ತಿಳಿಸುವ ಮತ್ತು ಮಹಿಳೆಯರಿಗೆ ಗೌರವಿಸಬೇಕೆಂಬ ಭಾವ ತುಂಬಿರುವ ಪುಸ್ತಕ ಮೌನ ಮಂದಾರ’ ಮೊದಲ ಪುಟದಲ್ಲಿ ವೀರಯೋಧನ ಕಥೆ ಹೇಳುವ ‘ಸಮರ ಸಾಮ್ರಾಟ’ ಎಂಬ ಕವಿತೆಯಲ್ಲಿ ಹೇಳುತ್ತಾರೆ; “ಒಂಟಿಯಾಗಿ ಬೆನ್ನಿಗಂಟಿದ ಸಿಡಿಮದ್ದು ಲೆಕ್ಕಿಸದೆ ಮನೋಬಲಕ್ಕೆ ಕಿವಿಗೊಟ್ಟು ವೀರಾಧಿವೀರನಂತೆ ಸದೆಬಡಿದ ಸಮರದಿ ದೇಹವೆಲ್ಲ ತೂತಾಗಿ ಕಾಲಿಲ್ಲದ ಕುಂಟನಾದರೂ ಭರತಮಾತೆಯ ಸೆರಗಿಗಂಟಿದ ನೆತ್ತರ ಒರೆಸಿ ಬಲಿಕೊಡಲು ತಂದ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದ” ಎಂಬ ಸಾಲು ವೀರಯೋಧನ ವೀರತ್ವ ದೇಶಪ್ರೇಮವನ್ನು ಎತ್ತಿಹಿಡಿಯುವ ಸಾಲುಗಳಾಗಿದ್ದು ಹೃದಯ ಸ್ಪರ್ಶಿಸುವಂತೆ ಲೇಖಕಚಿತ್ರಿಸಿದ್ದಾರೆ.  ಇನ್ನು ‘ನೆತ್ತರ ದಾಹ’ ಎಂಬ ಕವಿತೆಯಲ್ಲಿ ಅಮಾಯಕ ಬಲಿ ತೆಗೆದುಕೊಳ್ಳುತ್ತಿರುವ ಭಯೋತ್ಪಾದಕರಿಗೆ ಕಾಮಾಂಧರಿಗೆ ಪ್ರಶ್ನಿಸುತ್ತಾ ಗಾಂಧೀಜಿ ಮತ್ತು ಬುದ್ಧರ ಅಹಿಂಸಾ ಮಂತ್ರಗಳನ್ನು ನೆನೆಸುತ್ತಾ ಧರ್ಮಕ್ಕಾಗಿ ಹೋರಾಡದೆ ಮನುಷ್ಯತ್ವ ಧರ್ಮ ಗುಣಗಳಿಗೆ, ನ್ಯಾಯಕ್ಕೆ ಹೋರಾಡಿ ಎನ್ನುತ್ತಾ ಶಾಂತಿ ಮಂತ್ರವ ಪಾಲಿಸಿ ಎಂಬ ಸಂದೇಶವನ್ನು ನೀಡಿದ್ದಾರೆ    ಇನ್ನು ‘ದರ್ಪಣ’ ಎಂಬ ಕವಿತೆಯಲ್ಲಿ ಕನ್ನಡಿಯ ವಾಸ್ತವವನ್ನು ನೈಜತೆಯ ಗುಣಗಳನ್ನು ತೋರುತ್ತದೆ. ಅದೇ ರೀತಿ ನಾನಾ ಮುಖವಾಡಗಳನ್ನು ಧರಿಸಿ ವಿಷವನ್ನು ಅಂತರಂಗದಲ್ಲಿರಿಸಿರುವ ಮನೋವಿಕಾರಗಳಿಗೂ ಸಹ ದರ್ಪಣ ಬಿಡಬೇಕು ಎಂಬುದನ್ನು ಸುಪ್ರಿಯವಾಗಿ ವರ್ಣಿಸಿದ್ದಾರೆ.  ಸಾಹಿತ್ಯ ಕೃಷಿಯಲ್ಲಿರುವ ಲೇಖಕರ ‘ಸಬಲೆ’  ಎಂಬ ಕವನವನ್ನು ಗಮನಿಸಿದರೆ “ಒಂಟಿ ಜೀವ ಕಾಲಿ ಕೈಯಲ್ಲಿ ಹೊರಟೆ ಅರಿಯದ ದೂರದೂರಿನತ್ತ ದಿನವಿಡೀ ದುಡಿತ ಸಂಜೆಯಾಯಿತೆಂದರೆ ಜ್ಞಾನಾರ್ಜನೆಯ ತುಡಿತ ಅಂತೂ ಗಿಟ್ಟಿಸಿ.. ಬಿಟ್ಟೆ ಪದವಿಯ” ಈ ಕವಿತೆಯಲ್ಲಿ ಹೆಣ್ಣಿನ ಮನಸ್ಸು ಮೃದುವಾಗಿದ್ದರೂ ದಿಟ್ಟ ಹೆಜ್ಜೆ ಇಟ್ಟು ನಿಂತರೆ ಸಾಧನೆಯಲ್ಲಿ ಗುರಿಮುಟ್ಟುವಳು, ಒಂಟಿ ತಾನಾದರೂ ಧೃತಿಗೆಡದೆ ಜೀವನದಲ್ಲಿ ತಟ್ಟುತ್ತಾ ಇರಬಹುದಾದ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತು ಜ್ಞಾನಾರ್ಜನೆ ಪಡೆದು ತನ್ನ ಸಾಧನೆಯಲ್ಲಿನ ನೂರಾರು ಕಷ್ಟಗಳನ್ನು ಗೆದ್ದು ತನ್ನ ಬದುಕನ್ನು ಕಟ್ಟಿಕೊಂಡು ಬದುಕಬಲ್ಲಳು ಎಂಬ ಕಟು ಸತ್ಯವನ್ನು ಹೊರಗೆಳೆದಿದ್ದಾರೆ. ಇನ್ನು ‘ಗುಬ್ಬಿ’ ಎಂಬ ಶಿಶುಗೀತೆ ಯಲ್ಲಿ ಮಗುವಿನ ಹಿಂದುಮುಂದೊಬ್ಬರು ನಿಂತು ಜೀವನ ಪಾಠ ಕಲಿಸಿಕೊಡುವ ಅಪ್ಪ ಅಮ್ಮನ ಪಾತ್ರವನ್ನು ಪುಳಕ ಬರುವ ಕಾವ್ಯಾತ್ಮಕ ನೇರನುಡಿ ಗಳಿಂದ ಚಿತ್ರಿಸಿದ್ದಾರೆ ಶೋಚನೀಯ ಕಥೆ ಹೇಳುವ ‘ಕಾಮದಬ್ಬರ’, ‘ಶಂಖೆಯ ಅಟ್ಟಹಾಸ’, ‘ಜನನ ಮರಣ’ ಮುಂತಾದವು ಕಣ್ಣೀರು ತರಿಸುತ್ತವೆ. ‘ನಂಜಿನ ಮನೆ’ ಯಲ್ಲಿ ಬರುವ “ಮುಂಜಾವಿನ ಮಂಜಲ್ಲಿ ಯಿಂದ ಸುಮವೊಂದು ಬಾಡಿದೆ ಪುರುಷನೋರ್ವನ ಗರ್ವದ ಕಾಮ ಕೇಳಿಗೆ ಸಿಲುಕಿ ನಲುಗಿದೆ” ಇದು ಅರಳಿದ ಸುಮದಂತಿರುವ ಹೆಣ್ಗರುಳ ಬಳ್ಳಿಗೆ ಕೊಳ್ಳಿಹಿಡಿದು ಕಮರಿದಂತಾಗುವ ಸಾಲುಗಳು ಓದುಗರ ಮನಕಲಕುತ್ತದೆ.        ಇನ್ನು ‘ದೇವದಾಸಿ’ ಎಂಬ ಕವನದಲ್ಲಿ “ಊರಿಗೊಬ್ಬಳೇ ದೇವದಾಸಿ ಉರಿ ಮೊಗದಿ ಉಗಿದಟ್ಟಿದ ಪತಿವ್ರತೆಯರು ಸಹಿಸಿ ಸಾಕಾಗಿ ಬೇಕಾಗಿ ಬಂದ ಕಸುಬಲ್ಲವಿದೆಂದರೂ ಕೇಳುವರಾರು” ಕವಿತೆಯಲ್ಲಿ ಹಿಂದಿನ ಅನಿಷ್ಠ ಪದ್ದತಿಯಿಂದ ದೇವದಾಸಿ ಪಟ್ಟ ಕಟ್ಟಿ ಕಾಮಾಗ್ನಿ ಕೂಪಕ್ಕೆ ತಳ್ಳಿ ಹೆಣ್ಣಿನ ಜೀವನ ನರಕವಾಗಿಸಿ ಇದು ನನ್ನ ಕಸುಬಲ್ಲ ಎಂದರೂ ಕೇಳದೆ ಶೋಷಣೆಗೊಳಗಾಗುವ ಒಂದು ಹೆಣ್ಣಿನ ಕಥೆಯನ್ನು ಲೇಖಕರು ಕಣ್ಣೀರು ತರಿಸುವಂತೆ ಚಿತ್ರಿಸಿದ್ದಾರೆ.       ಸಾಹಿತ್ಯ ಕೃಷಿಗೆ ಕವಿಯ ಮನವೇ ಹೊಲವಾದರೆ ಭಾವಗಳ ನೇಗಿಲಿನಿಂದ ಹದ ಮಾಡಿ ಪದಗಳ ಸುಬೀಜ ಬಿತ್ತಿ ಮಾಧುರ್ಯತೆಯ ನೀರುಗೊಬ್ಬರ ನೀಡಿದಾಗ ಉತ್ತಮ ಫಲ ದೊರೆಯುವುದು ಖಚಿತ. ಈ ಹಿನ್ನೆಲೆಯಲ್ಲಿ ರಚಿತವಾದ ಒಂದೊಂದು ಕವನ ಓದುತ್ತ ಸಾಗಿದರೆ ಕರುಣೆ ಅನುಭವ, ಮಹಿಳಾ ಶೋಷಣೆ, ಮೌನ ಸಿಡಿದೇಳುವಕೆ ನೋವು, ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಮಹಿಳೆಗೆ ಪ್ರಾಧಾನ್ಯತೆ ಮತ್ತು ಗೌರವ ಭಾವಗಳ ವಿಚಾರ ವೈಖರಿ ಕಾಣುತ್ತದೆ  ಕವಿತೆಗಳ ಎಲ್ಲಾ ಪದಗಳಲ್ಲಿ ಒಂದೊಂದು ಅನುಭವದ ಪ್ರಯೋಗಮಾಡಿ ವಿಭಿನ್ನ ಮನಸ್ಸಿನಿಂದ ಮುಕ್ತವಾಗಿ ಮಾಧುರ್ಯ ತುಂಬಿ “ಮೌನಮಂದಾರ”ವೆಂಬ ಪುಸ್ತಕವನ್ನು ಹೊರತಂದಿದ್ದಾರೆ ಎಂಬುದು ನನ್ನ ಅಭಿಪ್ರಾಯ ******* ಚಂದ್ರು ಪಿ ಹಾಸನ್

ನಾನು ಓದಿದ ಪುಸ್ತಕ Read Post »

ಕಾವ್ಯಯಾನ

ಕಾವ್ಯಯಾನ

ನಿವೇಧನ ಬಿ ಅರುಣ್ ಕುಮಾರ್ ಮಧುರ ಭಾವಗಳ ಸಂಕ್ರಮಣ ಪ್ರೇಮಾಮೃತದ ಹೊಂಗಿರಣ ಬಂಧು ಬಾಂಧವರ ತೋರಣ ಸಪ್ತಪದಿ ಮಾಂಗಲ್ಯಧಾರಣ ಓಲಗ ಅಕ್ಷತೆಯ ಸಂಗಮ ಭಾವ ಭಾವಮೈದುನ ಬಾಂಧವ್ಯ ಕುಟುಂಬಗಳೆರಡರ ಕಲ್ಯಾಣ ಗಟ್ಟಿಮೇಳದ ಪರಿಣಯ ರತಿ ಪತಿ ದಾಂಪತ್ಯ ಸ್ಫೂರ್ತಿ ಮಂದ ಪ್ರಕಾಶ ಅರುಂಧತಿ ದೇಹವೆರಡು ಸೀತಾರಾಮ ದಾರಿಯೊಂದು ಅರ್ಧನಾರೀಶ್ವರ ಅನುರಾಗದ ಮಧು ಚಂದ್ರ ಮಿಥುನ ಹಕ್ಕಿಗಳ ಸಮ್ಮಿಲನ ಹಸಿರುಮಲೆಗೆ ಗರ್ಭಧಾರಣ ಶುಭ ಕಾಮನೆಯ ಹೂರಣ ಸರಸ ವಿರಸಗಳ ಆಲಿಂಗನ ಸಹಬಾಳ್ವೆಯಲಿ ಸಂತಾನ ರಂಗಿನ ರಂಗೋಲಿ ಅಂಗಳ ಮನ ಮನೆಯೇ ಮಂದಿರ. ಅವಳಿಲ್ಲದ ಕ್ಷಣ ಕಳಾಹೀನ ತುಡಿತ ಮಿಡಿತಗಳ ರಿಂಗಣ ಕೋಪ ತಾಪಕೆ ಗಂಡಸುತನ ತಾಳ್ಮೆ ಹೊಂದಿಕೆ ನಿವೇದನ. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬದುಕು ಎನ್. ಆರ್. ರೂಪಶ್ರೀ ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಪ್ರಕೃತಿ ಹೇಳಿದ ಪಾಠ ಗಣೇಶ್ ಭಟ್ ಕೊರೊನಾ ಮುಖಾಂತರ ಪ್ರಕೃತಿ ಹೇಳಿದ ಪಾಠ ವ್ಯಕ್ತಿ ಅಥವಾ ಸಮುದಾಯದ ಬದುಕಿನಲ್ಲಿ ನಡೆಯುವ ಯಾವ ಘಟನೆಯೂ ಆಕಸ್ಮಿಕವಲ್ಲ. ಪ್ರತಿಯೊಂದಕ್ಕೂ ಒಂದು ಕಾರಣವಿರುತ್ತದೆ; ಅದು ತಿಳಿಯದಾಗ ನಾವು ಆಕಸ್ಮಿಕ ಎಂದು ಹೇಳುತ್ತೇವೆ ಅಥವಾ ಹಾಗೆ ಭಾವಿಸುತ್ತೇವೆ. ಇಡೀ ಮಾನವ ಕುಲವನ್ನು ನಡುಗಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗೂ ಕೂಡಾ ಆಕಸ್ಮಿಕವಲ್ಲ. ಪ್ರಕೃತಿಯ ಮೇಲೆ ಮಾನವ ನಡೆಸಿದ, ನಡೆಸುತ್ತಿರುವ ದೌರ್ಜನ್ಯದ ಪ್ರತಿಕ್ರಿಯೆ ಅಷ್ಟೇ. ಕಳೆದ ಮೂರು ಶತಮಾನಗಳಿಂದ ಮಾನವ ನಿರ್ಮಿಸಿಕೊಂಡಿದ್ದ ಆರೋಗ್ಯ ಸೌಲಭ್ಯಗಳು, ಆಧುನಿಕ ಚಿಕಿತ್ಸಾ ವಿಧಾನಗಳು, ಕೂಡಿಹಾಕಿಕೊಂಡ ಸಂಪತ್ತುಗಳೆಲ್ಲವೂ ವೈರಾಣುವಿನ ಎದುರು ನಿಷ್ಪಲವಾದವು. ಯಾಕೆಂದರೆ , ಪ್ರಕೃತಿಯ ನಿಯಮದ ವಿರುದ್ಧವಾಗಿ ಮಾನವನ ಆಹಾರ ಪದ್ಧತಿ ಬೆಳೆದು ಬಂದಿತ್ತು. ಪಶು, ಪಕ್ಷಿ, ಪ್ರಾಣ ಗಳು ಇರುವುದೇ ತನ್ನ ಜಿವ್ಹಾ ಚಾಪಲ್ಯ ತಣ ಸುವುದಕ್ಕಾಗಿ ಎಂಬ ರೀತಿಯಲ್ಲಿ ಮಾನವರು ವರ್ತಿಸುತ್ತಿದ್ದಾರೆ. ಕೊರೊನಾ ಪೀಡಿತರ ಆಹಾರ ಪದ್ಧತಿಯನ್ನು ಗಮನಿಸಿದಾಗ ಸಸ್ಯಾಹಾರಿಗಳಿಗಿಂತ ಮಾಂಸಾಹಾರಿಗಳೇ ಹೆಚ್ಚಿನ ಪ್ರಮಾಣದಲ್ಲಿರುವುದು ಕಂಡು ಬರುತ್ತದೆ. ಧಾನ್ಯ, ಹಣ್ಣು, ತರಕಾರಿಗಳೇ ಮಾನವನ ಸಹಜ ಆಹಾರವಾಗುವ ರೀತಿಯಲ್ಲಿ ಜೀರ್ಣಾಂಗಗಳನ್ನು ಪ್ರಕೃತಿ ರೂಪಿಸಿದೆ. ಮಾಂಸಾಹಾರ ಸೇವನೆ ಪ್ರಕೃತಿ ವಿರೋಧಿಯಾಗಿರುವುದರಿಂದ ಅಂಥವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ, ಬಹು ಬೇಗ ರೋಗಗ್ರಸ್ತರಾಗುತ್ತಾರೆ. ಕೊರೊನಾ ವೈರಾಣುವಿನ ಕುರಿತು ಅನಗತ್ಯವಾಗಿ ಭಯ ಹುಟ್ಟಿಸಲಾಗುತ್ತಿದೆ. ಮನೆಯಿಂದ ಹೊರಗೆ ಬಂದರೆ ಕೊರೊನಾ ಭೂತ ಹೊತ್ತೊಯ್ದು ಸತ್ತೇ ಹೋಗುತ್ತೇವೆಂದು ಜನ ಭಯಭೀತರಾಗಿದ್ದಾರೆ. ಈ ವೈರಾಣುವಿನಿಂದ ಪೀಡಿತರಾಗಿ ಮರಣಹೊಂದಿದವರಲ್ಲಿ ಹೆಚ್ಚಿನವರು ಈಗಾಗಲೇ ಇತರೆ ರೋಗಗಳಿಂದ ಬಳಲುತ್ತಿರುವವರು ಎಂದು ಸಾಬೀತಾಗಿದೆ. ಭಾರತದಲ್ಲಿ ಸಂಭವಿಸಿದ ಕೊರೊನಾ ಸಾವುಗಳಲ್ಲಿ ಶೇಕಡಾ 85 ಜನರಿಗೆ ಗಂಭೀರ ಸ್ವರೂಪದ ಇತರೆ ಕಾಯಿಲೆಗಳಿದ್ದವೆಂದು ಸರ್ಕಾರವೇ ಹೇಳುತ್ತಿದೆ. ಮಧುಮೇಹ, ಕ್ಯಾನ್ಸರ್, ಕ್ಷಯ, ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಬಹುಬೇಗ ವೈರಾಣು ರೋಗಕ್ಕೆ ಬಲಿಯಾಗುತ್ತಾರೆಂಬುದು ಸಿದ್ಧವಾಗಿದೆ. ಪ್ರಕೃತಿ ವಿರೋಧಿ ಬದುಕಿನ ಜೀವನ ವಿಧಾನವೇ ಇಂತಹ ಕಾಯಿಲೆಗಳ ಮೂಲ ಕಾರಣವೆಂಬುದು ವೈದ್ಯ ವಿಜ್ಞಾನದ ಹೇಳಿಕೆ. ಕೊರೊನಾ ಪ್ರಸರಣ ತಡೆಯುತ್ತೇವೆಂಬ ಭ್ರಮೆಯಲ್ಲಿ ಹಲವು ದೇಶಗಳು ಲಾಕ್‍ಡೌನ್ ಘೋಷಿಸಿಕೊಂಡು, ಆರ್ಥಿಕ ಚಟುವಟಿಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿಕೊಂಡಿವೆ. ಇದರ ಪರಿಣಾವದಿಂದಾಗಿ ಕಲುಷಿತಗೊಂಡಿದ್ದ ಎಷ್ಟೋ ನದಿಗಳು ಶುದ್ಧವಾಗುತ್ತಿವೆ; ವಾಯುಮಾಲಿನ್ಯ ಕಡಿತಗೊಂಡಿದೆ, ಪರಿಸರ ಸ್ವಚ್ಛಗೊಳ್ಳುತ್ತಿದೆ, ಇದೇ ರೀತಿ ಲಾಕ್‍ಡೌನ್ ತೆರವುಗೊಂಡ ನಂತವೂ ಮುಂದುವರಿಯುತ್ತದೆಂದು ನಂಬಲು ಯಾವುದೇ ಆಧಾರಗಳಿಲ್ಲ. ಪ್ರಕೃತಿಯನ್ನು ದೋಚಿಯೇ ಮಾನವನ ಭೌತಿಕ ಸೌಲಭ್ಯಗಳನ್ನು ಬೆಳೆಸಿಕೊಳ್ಳಬೇಕೆಂಬ ತಪ್ಪುಗ್ರಹಿಕೆ ಹಾಗೂ ಸ್ವಾರ್ಥಕೇಂದ್ರಿತ ಚಿಂತನೆಯ ಆಧಾರದಲ್ಲಿ ರೂಪುಗೊಂಡಿರುವ ಬಂಡವಾಳವಾದಿ ಚಿಂತನೆಯಿಂದ ನಮ್ಮ ಆರ್ಥಿಕ ರೀತಿ- ನೀತಿಗಳು ರೂಪುಗೊಂಡಿವೆ. ದಶಕಗಳಿಂದಲೂ ಪರಿಸರಕ್ಕೆ ವಿಷ ಕಕ್ಕುತ್ತಿದ್ದ ಉದ್ಯಮಗಳು ಲಾಕ್‍ಡೌನ್ ತೆÉರವಿನ ನಂತರ ಕಾರ್ಯಾರಂಭ ಮಾಡಿ, ತಮ್ಮ ಮಾಲಿನ್ಯಕಾರಿ ಕ್ರಮವನ್ನು ಮುಂದುವರಿಸುತ್ತವೆ. ಇವುಗಳನ್ನು ತಡೆಯುವ, ಪರಿಸರ ಸ್ನೇಹಿ ಉದ್ಯಮನೀತಿಯನ್ನು ರೂಪಿಸಿಕೊಂಡಿರದ ಕಾರಣಕ್ಕಾಗಿ ಮುಂದೆ ಇನ್ನೊಂದು ದುರಂತಕ್ಕೆ ಆವ್ಹಾನ ನೀಡುವ ಸಿದ್ಧತೆ ನಡೆಸುತ್ತಿದ್ದೇವೆ. ಕಳೆದ 15 ವರ್ಷಗಳಿಂದೀಚೆಗೆ ಒಂದಾದ ನಂತರ ಒಂದರಂತೆ ವೈರಸ್‍ನ ಹೊಸ ಹೊಸ ರೂಪಗಳು ಮಾನವ ಸಮಾಜವನ್ನು ಕಾಡುತ್ತಿವೆ; ಆದರೂ ನಾವು ಇನ್ನೂ ಪಾಠ ಕಲಿತಿಲ್ಲ. ಚೀನಾ ದೇಶ ತೋಡಿದ ಲಾಕ್‍ಡೌನ್ ಎಂಬ ಖೆಡ್ಡಾದಲ್ಲಿ ಪಾಶ್ಚಾತ್ಯ ದೇಶಗಳು ಸುಲಭದಲ್ಲಿ ಬಿದ್ದವು. ಭಾರತ ತಾನಾಗಿಯೇ ಈ ಖೆಡ್ಡಾದಲ್ಲಿ ಹಾರಿ ಸಿಲುಕಿಕೊಂಡಿದೆ. ಅಂತರಾಷ್ಟ್ರೀಯ ಮನ್ನಣೆ ಗಳಿಸುವ ಉದ್ದೇಶದಿಂದ, ಯಾವ ಪೂರ್ವ ತಯಾರಿಯೂ ಇಲ್ಲದೆಯೇ ಏಕಾಏಕಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದಾಗಿ ಕೋಟಿಗಟ್ಟಲೇ ಜನರು ಅನಗತ್ಯವಾಗಿ ತೊಂದರೆಗೆ ಸಿಲುಕಿದರು. ವೈರಿ ಪಡೆಯ ಮೇಲೆ ಆಕ್ರಮಣ ಮಾಡುವ ಸರ್ಜಿಕಲ್ ಸ್ಟ್ರೈಕ್ ರೀತಿಯಲ್ಲಿ ಲಾಕ್‍ಡೌನ್ ಘೋಷಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಲಾಗಿದೆ. ಸಾಕಷ್ಟು ಪೂರ್ವ ತಯಾರಿ, ಪೂರ್ವ ಸೂಚನೆಗಳನ್ನು ನೀಡಿ ಲಾಕ್‍ಡೌನ್ ಜಾರಿಗೆ ತಂದಿದ್ದರೆ ಇಷ್ಟೊಂದು ಆವಾಂತರಗಳಾಗುತ್ತಿರಲಿಲ್ಲ. ಪೋಲೀಸ್ ಬಲವನ್ನು ನೆಚ್ಚಿಕೊಂಡು ಜನರನ್ನು ಬಲವಂತವಾಗಿ ಮನೆಗೆ ಸೀಮಿತಗೊಳಿಸಬೇಕಿರಲಿಲ್ಲ. ಸರ್ಕಾರದ ಬೆದರಿಕೆ , ರೋಗದ ಭಯ ಯಾವುದನ್ನೂ ಲೆಕ್ಕಿಸದೇ, ತಮ್ಮ ಊರುಗಳಿಗೆ ವಾಪಸು ಹೋಗಲು ಜನರು ಸಾಲುಗಟ್ಟಿದರು; ನೂರಾರು ಕಿಲೋ ಮೀಟರ್ ನಡೆದೇ ಸಾಗಿದರು. ಕೆಲಸವನ್ನು ಕಳೆದುಕೊಂಡು, ದುಡಿಮೆಯ ಅವಕಾಶವಿಲ್ಲದೇ, ಉಪವಾಸ ಸಾಯುವುದಕ್ಕಿಂತ, ತಮ್ಮ ಊರನ್ನು ಸೇರಬೇಕೆಂಬ ತವಕ, ರೋಗ ಪೀಡಿತರಾಗಿ ತಮ್ಮ ಊರಿನಲ್ಲಿ ಸತ್ತರೂ ಚಿಂತೆಯಿಲ್ಲವೆಂಬ ಅವರ ಆಕ್ರಂದನ ಅಧಿಕಾರದಲ್ಲಿದ್ದವರಿಗೆ ಅರ್ಥವೇ ಆಗಲಿಲ್ಲ. ಯಾಕೆಂದರೆ ಈ ರೀತಿಯಾಗಿ ನಡೆಯುವ ಕಾರ್ಮಿಕರ ಮರುವಲಸೆಯನ್ನು ಅವರು ನಿರೀಕ್ಷಿಸಿರಲಿಲ್ಲ. ದಿನದ ದುಡಿಮೆಯನ್ನು ಆಧರಿಸಿಯೇ ಬದುಕಬೇಕಾದ ಸ್ಥಿತಿಯಲ್ಲಿರುವ ಕಾರ್ಮಿಕರು, ಸ್ವ- ಉದ್ಯೋಗಿಗಳು, ಚಿಕ್ಕ ಪುಟ್ಟ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರು, ರೈತರುಗಳಿಗೆ ಆಗುವ ಕಷ್ಟವೂ ಸರ್ಕಾರ ನಡೆಸುವವರು ಗಂಭೀರವಾಗಿ ಪರಿಗಣ ಸಿಯೇ ಇಲ್ಲ. ಸರ್ಕಾರದಿಂದ ಒಂದಷ್ಟು ಕೊಡುಗೆಗಳನ್ನು ಕಾಲಕಾಲಕ್ಕೆ ಘೋಷಿಸಿ, ಇವರಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸಂತುಷ್ಟಗೊಳಿಸಲು ಸಾಧ್ಯವೆಂದು ರಾಜಕಾರಣ ಗಳಿಗೆ ತಿಳಿದಿದೆ. ಅತಿ ಶ್ರೀಮಂತ ವರ್ಗ ಮತ್ತು ಆಳುವ ಪಕ್ಷಕ್ಕೆ ದೊಡ್ಡ ಮೊತ್ತದ ದೇಣ ಗೆ ನೀಡುವವರ ಹಿತಾಸಕ್ತಿ ಕಾಯುವುದೇ ತಮ್ಮ ಗುರಿ ಎಂಬಂತೆ ಸರ್ಕಾರದ ನೀತಿಗಳು ರೂಪುಗೊಳ್ಳುತ್ತಿವೆ. ಬಡವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಉಚಿತ ಆಹಾರ ಪದಾರ್ಥ ನೀಡಿ ಸಂತುಷ್ಟಿಗೊಳಿಸುವ ಪ್ರಯತ್ನ ನಡೆದಿದೆ. ಅಕ್ಕಿ, ಬೇಳೆಯ ಹೊರತಾಗಿ ಇತರ ವೆಚ್ಚಗಳಿಗಾಗಿ ಅವರು ಏನು ಮಾಡಬೇಕೆಂಬ ಕುರಿತು ಸರ್ಕಾರ ನಡೆಸುವವರಿಗೆ ಯೋಚನೆ ಇದ್ದಂತಿಲ್ಲ. ಅತ್ತ ಬಿಪಿಎಲ್ ಕಾರ್ಡ್ ಹೊಂದಿರದ, ಇತ್ತ ದೊಡ್ಡ ಉಳಿತಾಯವನ್ನೂ ಹೊಂದಿರದ ಸ್ವ- ಉದ್ಯೋಗಿಗಳು, ಚಿಕ್ಕ ವ್ಯಾಪಾರಿಗಳು, ಸಣ್ಣ ಉದ್ದಿಮೆದಾರರ ಸಂಕಷ್ಟಗಳ ಕುರಿತು ಲಾಕ್‍ಡೌನ್ ಮಾಡಿ ಒಂದು ತಿಂಗಳಾಗುತ್ತಿದ್ದರೂ ಸರ್ಕಾರದ ಸ್ಪಂದನೆಯಿಲ್ಲ. ಬಂಡವಾಳವಾದದ ಮೂಲತತ್ವವೇ ಲಾಭ ಗಳಿಕೆಯನ್ನು ಹೆಚ್ಚಿಸುವುದು. ಭೂಮಿ, ನೈಸರ್ಗಿಕ ಸಂಪನ್ಮೂಲ, ಮಾನವ ಶಕ್ತಿಯನ್ನು ಬಳಸಿ ಉದ್ಯಮ ನಡೆಸುವಾಗ, ಒಳಸುರಿಗಳು ಆದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬೇಕು ಹಾಗೂ ಮಾರಾಟ ಮಾಡುವಾಗ ಅತಿ ಹೆಚ್ಚು ಲಾಭ ಸಿಗಬೇಕೆಂಬ ನೀತಿ ಅನುಸರಿಸಲಾಗುತ್ತಿದೆ. ಇದು ನಿಸರ್ಗ ಹಾಗೂ ಮಾನವರ ಶೋಷಣೆಗೆ ಕಾರಣವಾಗುತ್ತದೆ. ಕೇಂದ್ರೀಕೃತ ಉದ್ದಿಮೆಗಳಿಂದಾಗಿ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ಇದರಿಂದಾಗಿ ನಗರಗಳ ಅವ್ಯವಸ್ಥಿತ ಬೆಳವಣ ಗೆ, ಕೊಳೆಗೇರಿಗಳು ಹೆಚ್ಚುತ್ತವೆ. ಪೃಥ್ವಿಯ ಎಲ್ಲೆಡೆ ಪ್ರಕೃತಿ ಸಂಪನ್ಮೂಲಗಳನ್ನು ಹಂಚಿದೆ. ಅವನ್ನು ಗುರ್ತಿಸಿ ಬಳಸುವ ಬುದ್ದಿಮತ್ತೆಯನ್ನು ಮಾನವನಿಗೆ ನೀಡಿದೆ. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಆಥಿರ್üಕ ಚಟುವಟಿಕೆಗಳು ನಡೆದು ಜನರು ತಾವಿರುವ ಊರಿನಲ್ಲಿ ಉದ್ಯೋಗ ಪಡೆದು ಬದುಕು ಕಟ್ಟಿಕೊಳ್ಳಲು ಪ್ರಕೃತಿ ಅವಕಾಶ ಸೃಷ್ಟಿಸಿದೆ. ಆದರೆ ಮಾನವನ ದುರಾಸೆಯಿಂದಾಗಿ ಇದರ ವಿರುದ್ಧ ದಿಸೆಯಲ್ಲಿ ಸಮಾಜ ನಡೆಯುತ್ತಿದೆ. ಚಿಕ್ಕಪುಟ್ಟ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವದು ಅನಿವಾರ್ಯವಾಗುತ್ತಿದೆ. ಇಂತಹ ನಿಸರ್ಗ ವಿರೋಧಿ ವ್ಯವಸ್ಥೆಗೆ ಕಾರಣವಾದ ಬಂಡವಾಳವಾದವು ಪ್ರಕೃತಿ ವಿರೋಧಿ. ಇಡೀ ಜಗತ್ತು ಬಂಡವಾಳವಾದವನ್ನು ಅನುಸರಿಸುತ್ತಿರುವುದರಿಂದ ಹೊರ ಬರಲು ಪ್ರಕೃತಿ ಎಚ್ಚರಿಸುತ್ತಿದೆ. ಭಾರತದಲ್ಲಿ ಲಾಕ್‍ಡೌನ್ ಪ್ರಾರಂಭವಾದಾಗಿನಿಂದ ಮರುವಲಸೆಯ ಮಹಾಪರ್ವ ಪ್ರಾರಂಭವಾಗಿದೆ. ಇದು ಬಹು ಗಂಭೀರವಾದ ಸಮಸ್ಯೆಯೆಂಬುದನ್ನು ಆಳುವ ಪ್ರಭುಗಳು ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ. ಲಾಕ್‍ಡೌನ್‍ಗೂ ಮೊದಲೇ ಪ್ರಾರಂಭವಾದ ಆರ್ಥಿಕ ಹಿಂಜರಿತದಿಂದ ಅದಾಗಲೇ ಇದ್ದ ನಿರುದ್ಯೋಗ ಸಮಸ್ಯೆಯ ತೀವ್ರತೆ ಹೆಚ್ಚುತ್ತಿದೆ. ಅವೈಜ್ಞಾನಿಕ ಲಾಕ್‍ಡೌನ್ ಪರಿಣಾಮದಿಂದಾಗಿ ಸ್ಥಗಿತವಾಗಿರುವ ಉದ್ದಿಮೆ, ವ್ಯಾಪಾರ-ವಹಿವಾಟುಗಳು ಪ್ರಾರಂಭವಾಗಲು ತಿಂಗಳುಗಳೇ ಬೇಕು. ಪೂರ್ಣ ಪ್ರಮಾಣದಲ್ಲಿ ನಡೆಯಲು ಆರು ತಿಂಗಳಿನಲ್ಲೂ ಸಾಧ್ಯವಾಗದು. ಇದರಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗದೇ, ಇರುವ ಉದ್ಯೋಗಾವಕಾಗಳು ಕ್ಷೀಣ ಸುವ ಸಾಧ್ಯತೆಗಳಿವೆ. ರೈತರು ಬೆಳೆದ ಬೆಳೆಗಳು ಹೊಲದಲ್ಲೇ ನಷ್ಟವಾಗುತ್ತಿವೆ ಅಥವಾ ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿವೆ. ಹೈನುಗಾರರು, ಪಶು ಸಂಗೋಪನಾಕಾರರು, ಮೀನುಗಾರರ ಪರಿಸ್ಥಿತಿ ಕೂಡಾ ಆಶಾದಾಯಕವಾಗಿಲ್ಲ. ಹೀಗಿರುವಾಗ ಜನಸಾಮಾನ್ಯರ ಖರೀದಿ ಶಕ್ತಿ ಕುಂಠಿತವಾಗಿ ಇಡೀ ಅರ್ಥವ್ಯವಸ್ಥೆಯ ಹಿಂಜರಿತ ತೀವ್ರವಾಗುತ್ತದೆ. ಇವುಗಳ ಪರಿಣಾಮ ನಗರಗಳ ಉದ್ಯಮಗಳ ಹಿನ್ನೆಡೆ, ಉದ್ಯೋಗ ನಷ್ಟ ಹಾಗೂ ಕಾರ್ಮಿಕರ ಮರು ವಲಸೆಯಲ್ಲಿ ಹೆಚ್ಚಳವಾಗಲಿದೆ. ಈ ಮಹಾ ಮರುವಲಸೆಯ ಪರ್ವವನ್ನು ತಡೆಯುವ ಅಥವಾ ಅದನ್ನು ಪರಿಹರಿಸುವ ಯಾವ ಚಿಂತನೆ, ಕಾರ್ಯ ಯೋಜನೆಗಳು ಇಂದಿನ ಸರ್ಕಾರಗಳಿಗೆ ಇಲ್ಲ. ಇದರಿಂದಾಗಿ ಗ್ರಾಮಗಳಲ್ಲಿ ನಿರುದ್ಯೋಗ, ಸಾಮಾಜಿಕ ಸಂಘರ್ಷಗಳು ಪ್ರಾರಂಭವಾಗಲಿವೆ. ಮಾರ್ಚ್‍ನಲ್ಲಿ 21 ದಿನಗಳ ಲಾಕ್‍ಡೌನ್ ಘೋಷಿಸುವಾಗ ಪ್ರಧಾನಿಯವರು ದೇಶವನ್ನು ರಕ್ಷಿಸುವ ಸಲುವಾಗಿ ಈ ನಿರ್ಣಯ ಮಾಡಿರುವುದಾಗಿ ಹೇಳಿದ್ದರು. ಮನೆಯಲ್ಲಿ ಉಳಿಯದೇ ಹೊರಗೆ ಬಂದರೆ ಆರ್ಥಿಕವಾಗಿ ದೇಶ 21 ವರ್ಷಗಳಷ್ಟು ಹಿಂದೆ ಹೋಗುವುದಾಗಿ ಎಚ್ಚರಿಸಿದ್ದರು. ಕೇಂದ್ರದ ಶ್ರೀಮಂತರ ಪರ ಆರ್ಥಿಕ ನೀತಿ, ಅವೈಜ್ಞಾನಿಕ ರೀತಿಯಲ್ಲಿ ಅನುಷ್ಟಾನಗೊಳಿಸಿದ ನೋಟು ರದ್ದತಿ ಹಾಗೂ ಅಗತ್ಯವಲ್ಲದ ಲಾಕ್‍ಡೌನ್ ಹೇರಿಕೆಯಿಂದ ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿ ಹದಗೆಟ್ಟಿರುವುದು ಅವರಿಗೆ ಕಾಣುತ್ತಿಲ್ಲವೇ? ಹೆಚ್ಚಿನ ಭಾರತೀಯರು ದೇಶದ ಅರ್ಥವ್ಯವಸ್ಥೆಯಲ್ಲಿ ವಿಶ್ವಾಸವನ್ನೇ ಕಳೆದುಕೊಂಡಿರುವುದು ಅವರಿಗೆ ಗೋಚರಿಸುತ್ತಿಲ್ಲವೇ? ಬೆರಳೆಣ ಕೆಯ ಬಂಡವಾಳಶಾಹಿಗಳ ಅನುಕೂಲಕ್ಕಾಗಿ ಇಡೀ ದೇಶವನ್ನು ಸಂಕಷ್ಟಕ್ಕೆ ದೂಡಿದರೂ, ಬುದ್ದಿಯನ್ನು ಒತ್ತೆಯಿಟ್ಟಿರುವ ಮಾಧ್ಯಮದವರು ಹಾಗೂ ಬುದ್ದಿಜೀವಿಗಳೆನಿಸಿಕೊಂಡವರು ಜೈಕಾರ ಹಾಕುತ್ತಿದ್ದಾರೆ. ಯಾಕೆಂದರೆ ಇವರು ಯೋಚಿಸುವುದಕ್ಕೂ ಲಾಕ್‍ಡೌನ್ ವಿಧಿಸಿಕೊಂಡಿದ್ದಾರೆ. ಬಂಡವಾಳಶಾಹಿಗಳ ಹಂಗಿನಲ್ಲಿರುವ, ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ತಮ್ಮ ಬುದ್ಧಿಶಕ್ತಿಯನ್ನೇ ಮಾರಾಟ ಮಾಡಿಕೊಂಡಿರುವವರು ಮಾಧ್ಯಮಗಳಲ್ಲಿ ಹೊಗಳುಭಟರಾಗಿದ್ದಾರೆ. ಒಪ್ಪೊತ್ತಿನ ತುತ್ತಿಗಾಗಿ ಪರಿತಪಿಸುವವರ ಕಷ್ಟ ಇವರಿಗೆ ಅರ್ಥವೇ ಆಗುವುದಿಲ್ಲ. ಸರ್ಕಾರದ ಹಾಗೂ ಫೋಟೊ ಪ್ರಿಯ ದಾನಿಗಳ ಔದಾರ್ಯದಲ್ಲೇ ಜನರು ಸದಾ ಬದುಕುತ್ತಿರಬೇಕೆಂದು ಇವರು ಬಯಸುತ್ತಾರೆ. ಸಾಂಕ್ರಾಮಿಕ ರೋಗ ನಿರ್ವಹಣಾ ತಜ್ಞರ ಅಭಿಪ್ರಾಯದಂತೆ ಲಾಕ್‍ಡೌನ್‍ನಿಂದ ಕೊರೊನಾ ನಿರ್ಮೂಲನೆ ಸಾಧ್ಯವಿಲ್ಲ. ಇದು ತೆರವುಗೊಂಡು ಓಡಾಟ ಪ್ರಾರಂಭವಾದೊಡನೆ ಸೋಂಕು ತಗಲುವವರ ಪ್ರಮಾಣ ಒಮ್ಮೆಲೇ ಹೆಚ್ಚಾಗಲಿದೆ. ( ಆ ಸಂದರ್ಭದಲ್ಲಿ ಲಾಕ್‍ಡೌನ್ ಸಮರ್ಥಕರು ಪುನಃ ಕ್ರಿಯಾಶೀಲರಾಗುತ್ತಾರೆ) ಆದರೆ ಅದಕ್ಕಾಗಿ ಗಾಬರಿ ಪಡಬೇಕಾದ ಅಗತ್ಯವಿಲ್ಲವೆಂದು ಅವರು ಹೇಳುತ್ತಾರೆ. 5 ರಿಂದ 60 ವಯಸ್ಸಿನವರಿಗೆ ಕೊರೊನಾ ಸೋಂಕು ತಗಲುವುದರಿಂದ ಅವರಿಗೆ ಹೆಚ್ಚಿನ ತೊಂದರೆಯೇನೂ ಆಗುವುದಿಲ್ಲ. ಬದಲಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ. ಇಂದು ಪ್ರಚಾರ ಮಾಡುತ್ತಿರುವಷ್ಟು ಕೊರೊನಾ ಅಪಾಯಕಾರಿಯಲ್ಲವೆಂದು ವಾದಿಸುವವರ ಹೇಳಿಕೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗುತ್ತಿದೆ. ಶುದ್ಧ ಗಾಳಿಯ ಸೇವನೆ , ನಡಿಗೆ, ಧನಾತ್ಮಕ ಚಿಂತನೆಗಳು, ಮನಸ್ಸಿಗೆ ಉಲ್ಲಾಸ ನೀಡುವ ದೈಹಿಕ ಚಟುವಟಿಕೆಗಳಿಂದ ಉಸಿರಾಟ ಸಂಬಂಧಿತ ಕೊರೊನಾ ಹಾಗೂ ಇತರ ರೋಗಗಳ ತೀವ್ರತೆಯನ್ನು ಕಡಿಮೆ ಮಾಡಲು ಸಾಧ್ಯ ಎನ್ನುತ್ತಾರೆ ತಜ್ಞ ವೈದ್ಯರು. ಹದಗೆಡುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿ ಹಾಗೂ ಸರ್ಕಾರದ ವೈಫಲ್ಯಗಳನ್ನು ಕೊರೊನಾ ನೆಪದ ಲಾಕ್‍ಡೌನ್ ತಲೆಗೆ ಕಟ್ಟಲು ಕೇಂದ್ರ ಪ್ರಯತ್ನಿಸುತ್ತಿದೆ ಎಂಬ ಆಪಾದನೆಗೆ ಪುಷ್ಠಿ ನೀಡುವಂತಹ ಹಲವು ಘಟನೆಗಳು ನಡೆಯುತ್ತಿವೆ. ಉದಾಹರಣೆಗಾಗಿ ಪಕ್ಷಾಂತರ ಪರ್ವ ನಡೆಸಿ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಿರುವದು; ಲಾಕ್‍ಡೌನ್ ಸಂದರ್ಭದಲ್ಲೇ ವಿಡಿಯೋ ಸಂವಾದದ ಸಭೆ ನಡೆಸಿ ಶರಾವತಿ ಭೂಗರ್ಭ ವಿದ್ಯುತ್ ಯೋಜನೆಯ ಅಧ್ಯಯನಕ್ಕೆ ಸಮ್ಮತಿ ನೀಡಿರುವುದು; ಪ್ರಧಾನಮಂತ್ರಿ ಪರಿಹಾರ ನಿಧಿಯೆಂಬ ಖಾತೆಯಿರುವಾಗಲೂ ಪಿಎಂ ಕೇರಸ್ ಖಾತೆ ಪ್ರಾರಂಭ ಮಾಡಿರುವುದು; ವಿದೇಶಿ ನೇರ ಹೂಡಿಕೆಗೆ ಕೆಲವು ದೇಶಗಳಿಗೆ ಮಾತ್ರ ನಿರ್ಬಂಧ ವಿಧಿಸಿರುವುದು ಇತ್ಯಾದಿ. ಸಾಂಕ್ರಾಮಿಕ ಶ್ವಾಸಕೋಶದ ರೋಗವಾದ ಕ್ಷಯದಿಂದ ಭಾರತದಲ್ಲಿ ಪ್ರತಿದಿನ ಸರಾಸರಿ 1200 ಜನರು ಸಾಯುತ್ತಿದ್ದರೂ, ಅದರ ಕುರಿತು ನೀಡಬೇಕಾದ ಕಾಳಜಿಗಿಂತ ಎಷ್ಟೋ ಪಟ್ಟು ಹೆಚ್ಚಿನ ಮಹತ್ವವನ್ನು ಕೊರೊನಾಕ್ಕೆ ನೀಡುತ್ತಿರುವುದರ ಹಿನ್ನೆಲೆ ಏನು? ಹುಟ್ಟು– ಸಾವುಗಳನ್ನು ನಿರ್ಣಯಿಸುವುದು ಮಾನವನನ್ನು ಮೀರಿದ ಪ್ರಕೃತಿ ಶಕ್ತಿ ಎಂಬ ನಂಬಿಕೆಯನ್ನು ಹೂತು ಹಾಕಿ, ತಮ್ಮ ಸಾವನ್ನು ಮುಂದೂಡಲು ಆಡಳಿತ ನಡೆಸುವವರೇ ಸಮರ್ಥರು ಎಂದು ಬಿಂಬಿಸಲು ಯತ್ನಿಸುತ್ತಿರುವವರ ನಡೆ ಅಸಹ್ಯ ಹುಟ್ಟಿಸುತ್ತದೆ. ಆರ್ಥಿಕ, ಸಾಮಾಜಿಕ, ಬೌದ್ಧಿಕ

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಬದುಕು ಬೀಸುವ ಗಾಳಿ ಹಾರುವ ಮುಂಗುರುಳು ಮತ್ತೆ ನೀಡಬಹುದು ಹೊಸ ಸಂತೋಷ. ಬಾನ ಚುಕ್ಕಿ ಹೊಳೆಯುವ ಚಂದಿರ ಮತ್ತೆ ಬರಬಹುದು ಆನಂದ. ಹಕ್ಕಿಯ ಗಾನ ಮರಗಳ ಕಲರವ ಮತ್ತೆ ತರಬಹುದು ಚೇತನ. ತಿಳಿ ನೀರ ಅಲೆಗಳಲ್ಲಿ ತೇಲುತ್ತಾ ಸಾಗುವ ಗುಳ್ಳೆಗಳ ನಡುವೆ ಮತ್ತೊಮ್ಮೆ ಚಿಮ್ಮಬಹುದು ಚಿಲುಮೆ. ಇಂತಹ ಎಲ್ಲಾ ಆಶಾ ಭಾವನೆಗಳ ನಡುವೆ ಜೀವಿಸಲೇಬೇಕಾದ ಅನಿವಾರ್ಯತೆ. ಇದ್ಯಾವುದೂ ಆಗದಿದ್ದರೂ ಆಗುತ್ತದೆ ಎನ್ನುವ ನಂಬಿಕೆ ಬಹುಶ: ಇದೇ ಇರಬಹುದು ಬದುಕು. ******

ಕಾವ್ಯಯಾನ Read Post »

You cannot copy content of this page

Scroll to Top