ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಡಿಸಲಾಗದ ಒಗಟು

North America Has Lost Nearly 3 Billion Birds Since 1970 | Science ...

ಅನ್ನಪೂರ್ಣ.ಡೇರೇದ

ಹಿರಿಹಿರಿ ಹಿಗ್ಗಿ
ಕುಣಿದುˌ ಕುಪ್ಪಳಿಸಿ
ಕನಸುಗಳೊಡಗೂಡಿ ನಲಿವಾಗ

ನಸುಕ ಮುಸಕಲ್ಲಿ
ಕಾಂತನೊಡನೆ ರೆಕ್ಕೆ
ಬಡಿಯುತಲಿ ರೆಂಬೆ
ರೆಂಬೆ ಜಿಗಿದು ನಲಿಯುತಲಿದೆ

ಅದಾವುದೋ ಮಾರ್ಜಾಲ
ಬಲಿಯ ಬೀಸಿತಲಿ
ಒಂದೊಂದು ಕನಸು
ಬಿಸಿಲಿಗೆ ಕರಗಿದ ಇಬ್ಬನಿಯಾಗಿದೆ.

ಹೆಣ್ಣಬಾಳ ಕಣ್ಣೀರು
ಮಣ್ಣ ಮಸಣದೊಳು
ಸೇರಿ ˌಕಂಡ ಕನಸು
ಒಡಲ ಕಳಚಿತು

ಮೌಡ್ಯದ ನಡುವೆ
ಮಡುಗಟ್ಟಿದ ಅವಳ
ಬದುಕು ˌಜಾತಿ ಧರ್ಮದ
ಭೂತಗನ್ನಡಿಗೆ ಹೆದರಿ
ಮೂಲೆ ಗುಂಪಾಗಿದೆ.

*********

About The Author

Leave a Reply

You cannot copy content of this page

Scroll to Top