ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನತದೃಷ್ಟ

Peeping Through Window Stock Photos & Peeping Through Window Stock ...

ಕವಿತಾ ಸಾರಂಗಮಠ

ಪಂಜರದಿ ಹಕ್ಕಿಗಳ ಬಂಧಿಸಿದೆ
ಆನೆಗಳ ಗರ್ವ ಅಡಗಿಸಿ ಮದ್ದಾನೆಯಾದೆ
ಆನೆ ದಂತಗಳ ಕದ್ದೆ
ಹುಲಿ,ಸಿಂಹಗಳ ಬೇಟೆಯಾಡಿದೆ
ಓ ಮಾನವ ಗೃಹ ಬಂಧಿಯಾದೆ!

ಸ್ವಚ್ಛಂದ ಹಾರಾಡುವ ಪಕ್ಷಿಗಳ ಪಂಜರದಿ ಬಂಧಿಸಿದೆ
ಪಶು,ಕೀಟಗಳ ಭೇದವೆಣಿಸದೆ ಚಪ್ಪರಿಸಿದೆ
ಉಭಯ ಜೀವಿ ಸಂಕುಲದ ನಾಶಕೆ ಮುಂದಾದೆ
ಎಮ್ಮೆ,ಕಾಡು ಕೋಣ,ಚಿರತೆ,ಹುಲಿಗಳ ಚರ್ಮವನೆ ಹೊದ್ದೆ
ಓ ಮಾನವ ನೀನೇ ಅವುಗಳಾದೆ!

ಆತಂಕವಿಲ್ಲದೆ ಅಂತರಿಕ್ಷಕೆ ಹಾರಿದೆ
ಸೂರ್ಯ ಚಂದ್ರರ ಮೀರಿಸಲು ಹೋದೆ
ನಿಲುಕಿದ್ದರೆ ನೀಲನಭದೆ ವಾಸಿಸುತ್ತಿದ್ದೆ
ಹಣದ ದಾಹಕೆ ಮೌಲ್ಯಗಳ ಮಾರಿಕೊಂಡೆ
ಓ ಮಾನವ ಗೃಹ ಬಂಧಿಯಾದೆ

*********

About The Author

2 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top