ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಸ್ವಸ್ಥ ಅಭಿಪ್ರಾಯ

48x46 Beautiful World - Rose Red Signed Art Abstract Paintings ...

ನೂರುಲ್ಲಾ ತ್ಯಾಮಗೊಂಡ್ಲು

ವಟಗುಡುವ ಕಪ್ಪೆಗಳಂತಿರುವ
ಕೆಲ ಮೂರ್ಖ ಆಂಕರರು;
ನೋಟಿನಲಿ ಮೈಕ್ರೊ ಚಿಪ್ಪುಕಂಡುಕೊಂಡ
ವಿಜ್ಞಾನ ದೇವಿ ಪುರುಷರು !

-ಎಂದಿನಂತೆ ವಟಗುಡುವುದೇ ಅವರ
ಕೆಲಸವೆಂದು ನಾನೂ ಸುಮ್ಮನಿರಲಾರದೆ
ಕಪ್ಪಗೆ ಜಿನುಗುವ ಬಿಸಿಲು ಮಳೆಯ ಹಾಗೆ
ಒಂದೆರಡು ಕವಿತೆಯ ತುಣುಕುಗಳನ್ನು
ಹಾಳೆಯ ಮೇಲೆ ಹರಿಸುತ್ತೇನೆ

ನನಗೆ ಗೊತ್ತಿದೆ
ಮತ್ತೆ ಎಲ್ಲರಿಗೂ ಗೊತ್ತಿರುವ ವಿಷಯವೇ ;
ಈ ಶತಮಾನದ ಪೆಂಡಮಿಕ್ ರೋಗ !
‘ಕೊರೊನಾ’ ಚೈನಾದಿಂದ ವಕ್ಕರಿಸಿದ್ದೆಂದು
ಆದರೆ ,
ಅದು ನಮ್ಮ ದೇಶದ ಸರಹದ್ದುಗಳನ್ನು ದಾಟಿದ್ದು
ಹೇಗೆಂದು ಗುಪ್ತಾಚಾರದವರಿಗೆ ತಲೆ ಬಿಸಿಯ ವಿಷಯ
ಪಾಪ ಅವರೇನೊ ತಲೆಕೆಡಿಸಿಕೊಂಡಂತಿಲ್ಲ !
ಹಾಗೆ ತಲೆ ಕೆದರಿ ಕೊಂಡಿದ್ದರೆ
ಒಂದು ಕೋಮಿನವರಿಗೆ
ವರ್ಣ ಬೇಧದ ಕ್ವಾರಂಟೈನ್ ಗಳನ್ನು ರಚಿಸಲಿಕ್ಕೆ
ಅವಕಾಶ ಕೊಡುತ್ತಿರಲಿಲ್ಲ

ನನ್ನ ಬೃಹತ್ ಪ್ರಜಾಸತ್ತಾತ್ಮಕ ದೇಶದಲಿ
ಇಂಥ ಅಮಾನವೀಯ ಕೃತ್ಯಗಳನ್ನು ಖಂಡಿಸದ
ಆಶಾಢಭೂತಿ ನಾಯಿಗಳು
ಆಂಕರುಗಳ ನಡುವೆ ಫೋಸು ಕೊಟ್ಟು
ಚಪ್ಪಾಳೆ ಹೊಡೆಯುತ್ತಾರೆ
ಮನೆ ದೀಪ ಆರಿಸಿ
ಹೊರಗಿನ ಕತ್ತಲಿಗೆ ಮೇಣ ಉರಿಸಿ,
ಕರಗುವ ಮೇಣ ದಂತೆ
ಕಿಟಕಿಯಲೇ ಕರಗಿಹೋಗುತ್ತಾರೆ…

************************************

About The Author

2 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top