ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೆರೆಗಳು

Vector Banner Design With Connecting Dots And Lines And Network ...

ಎನ್.ಆರ್.ರೂಪಶ್ರೀ,

ಬದುಕಿನ ಗೆರೆಗಳು ಒಂದೊಂದಾಗಿ
ಮೂಡುತ್ತಲೇ ಹೋಗುತ್ತವೆ
ಅಳಿಸಲಾಗದ ಗೆರೆಗಳು
ಅಳಿಸಿದರೂ ಅಳಿಸಲಾಗದ ಗೆರೆಗಳು

ಗೆರೆಗಳು ಗೆರೆಗಳಾಗಿಯೇ ಇರಬೇಕಾದ್ದು
ಇರದೇ ಇರುವುದು
ಗೆರೆಗಳ ನಡುನಡುವೆ
ಚುಕ್ಕಿಚಿತ್ತಾರಗಳು

ಜೀವನದ ಗೆರೆಗಳಲ್ಲಿ
ಎಲ್ಲವೂ ಎಲ್ಲರದ್ದಾಗಿದ್ದರೂ
ಯಾರದ್ದು ಯಾವುದು
ಆಗಿರುವುದಿಲ್ಲ.

ಗೆರೆಗಳೇ ಹಾಗೆ
ಬದುಕಿನಲ್ಲಿ ಎಳೆಎಳೆಯಾಗಿ
ಬಂದು ಎಳೆಯುತ್ತವೆ

ಗೆರೆಗಳಿಲ್ಲದ ಬದುಕು
ಬದುಕು ಅಲ್ಲ
ಬದುಕಿನಲ್ಲಿ ಗೆರೆಗಳು
ಇರಬೇಕೆಂದೇನಿಲ್ಲ

ಬದುಕು ಬದುಕೇ
ಗೆರೆಗಳು ಗೆರೆಗಳೇ
ತಾನೇ.

******

About The Author

2 thoughts on “ಕಾವ್ಯಯಾನ”

    1. Ganapati hegde

      ಚೆನ್ನ……ಅಳಿಸಿದರೂ ಅಳಿಸಲಾಗದ ಗೆರೆಗಳು ….ನೆರಳುಗಳು ಎಂದು ಬಂದರೆ ಇನ್ನೂ ಎಫೆಕ್ಟಿವ್

Leave a Reply

You cannot copy content of this page

Scroll to Top