ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಯುಗಾದಿ ಕಾವ್ಯ

ಮರಳಿ ಬಂದಿದೆ ಯುಗಾದಿ :- ಹರೀಶ್ ಬಾಬು ಹಣ್ಣೆಲೆ ಉದುರಿ ಚಿಗುರೆಲೆ ಅರಳಿ ನಗೆ ಬೀರಿವ ಪುಷ್ಪವರಳಿ ನೂತನ ವರುಷ ಮರಳಿ ಎಲ್ಲರ ತನು ಮನಗಳೊಡನೆ ನಗೆಯಾ ಬೀರಿ ತಂದಿದೆ ಹರುಷ ಯುಗ ಯುಗಾದಿ ಮರಳಿ ಚೈತ್ರ ಮಾಸವ ತೆರಳಿ ಬೇವು ಬೆಲ್ಲ ತಿನ್ನುತ್ತಾ ಸಿಹಿ ಕಹಿಯಾ ಹೀರುತ್ತಾ ದ್ವೇಷ ಮತ್ಸಾರ ತೊಲಗಿಸುತ್ತಾ ಪ್ರೀತಿ ಪ್ರೇಮವ ಹಂಚುತ್ತಾ ನೂತನ ಯುಗದ ಆಗಮನದ ಸಂತೋಷ. ದ್ವೇಷ ಅಸೂಯೆ ಮರೆಸಿ ಎಲ್ಲರ ಮನದಲ್ಲಿ ಬಿತ್ತುತ್ತಿದೆ ನೂತನ ಶೈಲಿಯಾ ಭಾವನೆಗಳ ಕೂಡಿ ಬಾಳುವ ಭರವಸೆ ಬೆಳೆಸಿ ಸೋದರತ್ವದ ಜೀವನ ತಿಳಿಸಿ ತಂದಿದೆ ಮನದಲ್ಲಿ ನೂತನ ವರುಷ ಚಿಗುರೆಲೆ ಅರಳಿ ನಿಂತು ತಂಪಾದ ಗಾಳಿ ಸೋಬನೆ ಹಾಡಿ ಬಿಸಿಲ ತಾಪಕ್ಕೆ ತಂಪೆರೆದು ಹೂಗಳು ಗಮಗಮ ಸುವಾಸನೆ ಬೀರಿ ಬಯಲು ತುಂಬೆಲ್ಲಾ ಹಸಿರೇ ತಣಿಸಿ ನೋಡುಗರ ಮನಕ್ಕೆ ತಂದಿದೆ ಹರುಷ. ಬಣ್ಣ ಬಣ್ಣದ ಉಡುಪುಗಳ ತೊಟ್ಟು ರಂಗು ರಂಗಿನ ವಣ೯ಗಳ ಮನೆಗೆ ಬಳಿದು ತಳಿರು ತೋರಣಗಳಿಂದ ಬಾಗಿಲು ಸಿಂಗರಿಸಿ ಚಿತ್ರ ವಿಚಿತ್ರದ ರಂಗೋಲಿ ಅಜಾರಕ್ಕೆ  ಹಾಕಿ ಬೇವಿನೆಳೆ ಮನೆ ಮೂಲೆ ಮೂಲ್ಗೆ ಸುಚ್ಚಿ ಎಲ್ಲಿಲ್ಲದ ಹಬ್ಬದ ಸಡಗರದ ಸಂತೋಷ . ಹೋಳಿಗೆ ತಿಂಡಿ ರುಚಿಯ ಸವಿಯುತ್ತಾ ಬಗೆ ಬಗೆಯಾ ಭಾವನೆಗಳ ಅರಿಯುತ್ತಾ ದುಡ್ಡಾಟ ಕಿತ್ತಾಟ ತುಂಟಾಟ ಆಡುತ್ತಾ ಕಷ್ಟ  ಸುಖಗಳನ್ನು ವಿನಿಮಯಿಸುತ್ತಾ ಸುಃಖ ದುಃಖಗಳನ್ನು ದೇವರ ಬಳಿ ಕೇಳುತ್ತಾ ಇದುವೇ ನಮ್ಮೆಲ್ಲರ ಹಬ್ಬ  ದಿನಗಳ ಉಲ್ಲಾಸ ********

ಯುಗಾದಿ ಕಾವ್ಯ Read Post »

ಕಾವ್ಯಯಾನ

ಯುಗಾದಿ ಕಾವ್ಯ

ಯುಗಾದಿಗೆ ಸ್ವಾಗತ ರತ್ನಾ ನಾಗರಾಜ ಯುಗ ಯುಗ ಕಳೆದರು ಯುಗಾದಿ ಹುಟ್ಟುತ್ತಲೆ ಇರುತ್ತದೆ ನಶ್ವರವೆಂಬುವುದು ಅದು ಕಾಣದು ಚಿರಂಜೀವಿ ಯುಗಾದಿಗೆ ಸ್ವಾಗತ ಮನುಷ್ಯ ಹುಟ್ಟುತ್ತಾನೆ ಹುಟ್ಟಿ ಸಾಯುತ್ತಾನೆ ಯುಗಾದಿ ಅವನಿಗೊಂದಷ್ಟು ಗಾದಿಗಳನ್ನು ಕೊಟ್ಟು ಯುಗಾದಿಗೆ ಉತ್ಸಾಹದ ಸ್ವಾಗತ ಯುಗಾದಿ ಮರೆಯಾಗುತ್ತದೆ ಹಳೆಯದನ್ನು ನೆನಪಾಗಿಯಿಟ್ಟು ಹೊಸದತ್ತ ಪಯಣಿಸುತ್ತಲೆಯಿರುತ್ತದೆ ಗಡಿಯಾರದ ಮುಳ್ಳಿನಂತೆ ಅದಕ್ಕೆ ತಳಿರು ತೋರಣಗಳ ಸ್ವಾಗತ ಯುಗಾದಿ ಬೇವು ಬೆಲ್ಲದ ಮಿಶ್ರಣದ ಸುಖ ಬರಿ ಬೇವು ಬೇಡ, ಸದಾ ಸಿಹಿಯು ಬೇಡ ಒಂದರೊಳಗೊಂದು ಇದ್ದರೆ ಜೀವನ ಪಾವನ ಅದಕ್ಕೆ ಸಮಿಶ್ರಣ ಯುಗಾದಿಗೆ ಸ್ವಾಗತ ನವ ಚೈತನ್ಯ ನವ ಉಲ್ಲಾಸ ತರುವ ಯುಗಾದಿ ಹಳೆಯದನ್ನು ಮಂಕುತನವನ್ನು ಓಡಿಸುವ ಯುಗಾದಿಗೆ ಸ್ವಾಗತ ಯುಗಾದಿಗೆ ಶುಭ ಶಕುನ ನುಡಿಯುತ್ತಾರೆ ಹೊಸ ಉಡಿಗೆ ತೊಡಿಗೆ ಕಾಣಿಕೆಗಳು ಲಭಿಸುತ್ತದೆ ನೆಂಟರಿಷ್ಟರರು ಆಗಮಿಸುವ ಸಂಭ್ರಮ ತರುವ ಯುಗಾದಿಗೆ ಸ್ವಾಗತ ನವ ವಸಂತ ಪ್ರಕೃತಿಗೆ ಹೊಸ ಚಿಗುರು ಹೊಸ ಉಸಿರು ನೀಡುತ್ತಾನೆ, ಹಚ್ಚ ಹಸಿರು ತುಂಬುತ್ತಾನೆ ಸದಾ ಕಾಲ ಜೀವಿಗಳಿಗೆ ಜೀವ ನೀಡುವ ಯುಗಾದಿಗೆ ಸ್ವಾಗತ ಬೀರು ಬಿಸಲ ಬೆವರು ಹರಿದರು ವಿಹಾರ ವಿರಾಮ ತರುವ ಮದುವೆ ದಿಬ್ಬಣ ಹೊತ್ತು ಬರುವ ಹಳೆಯ ಲೆಕ್ಕಾಚಾರ ತುಲನೆ ಮಾಡಿ ಹೊಸ ವ್ಯವಹಾರಕ್ಕೆ ಮುನ್ನುಡಿಯಿಡುವ ಯುಗಾದಿಗೆ ಸ್ವಾಗತ ನೂತನ ಪಂಚಾಗ ವಷðವಿಡಿ ಭವಿಷ್ಯ ಪಲುಕಿ ವಷðತಡಕು ಭೋಜನ ಪ್ರಿಯ ಜಾತ್ರೆ ಹರಕೆ ನದಿ ಜಳಕ ಮೋಜು ಮಸ್ತಿ ಕುಸ್ತಿಯಾಟ ಆಡಿಸುವ ಯುಗಾದಿಗೆ ಸ್ವಾಗತ ********

ಯುಗಾದಿ ಕಾವ್ಯ Read Post »

ಕಾವ್ಯಯಾನ

ಯುಗಾದಿ ಕಾವ್ಯ

ಪರಿಭ್ರಮಣ ಸುಕನ್ಯ ಎ.ಆರ್. ಕಡಲಲೆಗಳಂತೆ ಬರುತಿಹುದು ಹೊಸವರುಷ ಬದುಕಿನ ನೋವು ನಲಿವಿನ ಸಂಘರ್ಷ ಕ್ಷಣ ಕ್ಷಣದಲ್ಲೂ ಹರುಷದ ನಿಮಿಷ ನಮ್ಮೆಲ್ಲರ ಬಾಳು ಬೆಳಗಲಿ ಈ ವರುಷ ಋತುಮಾನದ ಪರಿಭ್ರಮಣ ಚೈತ್ರಮಾಸದ ತೇರನೇರಿ ಹೊಂಗೆ ಮಾವು ಬೇವಿನ ಆಗಮನ ಹೊಸ ವರ್ಷದ ಸಂಭ್ರಮ ಒಳಿತು ಕೆಡುಕನು ಮರೆಮಾಚಿ ಮೊಗದಲ್ಲಿ ನೆಮ್ಮದಿಯ ನಗುವ ಮಳೆಹರಿಸಿ ಸಹಬಾಳ್ವೆಯಲ್ಲಿ ಶುಭವ ಹಾರೈಸಿ ನೆನಪಿನಂಗಳದಲ್ಲಿ ಬರುತಿಹುದು ಹೊಸವರುಷ ಹೊಂಗೆ.ತೆಂಗು.ಮಾವು.ಬಾಳೆ.ಬೇವುಗಳ ತಳಿರು ತೋರಣವ ಶೃಂಗಾರದಿ ಪ್ರಕೃತಿ ಮಾತೆಯು ಅಲಂಕರಿಸಿ ಸ್ವಾಗತಿಸುವಳು ಹೊಸ ವರುಷವ ರೋಗ ರುಜಿನಗಳನು ಮೀರಿ ಬಿಸಿಲು ತಾಪವ ಹೊಂಗೆಯ ನೆರಳಲಿ ತಂಪಾಗಿಸಿ ಸೂರ್ಯ ಚಂದ್ರರ ಕಣ್ಣಾಮುಚ್ಚಾಲೆಯಲಿ ಕಳೆದವು ಋತುಮಾನಗಳು ಆದರೂ ಸ್ವಾಗತಿಸುವೆವು ಪ್ರತಿ ವರ್ಷ ನವ ಯುಗಾದಿಯ ಆದಿಯ ಬೇರು.ಆನಾದಿಯ ಚಿಗುರು ಯುಗ ಯುಗಗಳ ಸಂಗಮ ಕಹಿ ಘಟನೆಗಳ ಮರೆತು ಸವಿ ಬದುಕಿನ ನವ ಚೇತನ ಈ ಯುಗಾದಿ ಆದಿ ಅಂತ್ಯದ ಸೂಚಕ ಯುಗಾದಿ ಹಬ್ಬದ ಪ್ರತೀಕ ಹೊಸ ವರ್ಷದ ಸೂಚನ ಫಲಕ ಅರುಣೋದಯದ ಹೊಸತನದ ಹೊಂಬೆಳಕ ಬಟ್ಟ ಬಯಲಲ್ಲಿ ಮೂಡಿತು ಪಡುವನದಿ ಅರ್ಧಚಂದ್ರನ ದರ್ಶನ ಜನರ ಹರ್ಷೋಡ್ಗರ ಮೊಳಗಿತು ಹುಣ್ಣಿಮೆ ಚಂದ್ರನ ಆಗಮನ *********

ಯುಗಾದಿ ಕಾವ್ಯ Read Post »

ಕಾವ್ಯಯಾನ

ಕಾವ್ಯಯಾನ

ಏನಿದ್ದರೇನು…? ಪ್ಯಾರಿಸುತ ಈ ದೇಶಕೆ ಏನಿದ್ದರೇನು ನೀನೇ ಇಲ್ಲವಲ್ಲ ಗಾಂಧಿ….? ಖಾಲಿಯಾದ ಕುರ್ಚಿ,ಗಾದಿ,ಖಾದಿ ಕನ್ನಡಕದ ಕಡ್ಡಿ ಎಲ್ಲವೂ ಬೆತ್ತಲೆಯಾಗಿ ಬೆರಗು ಕಂಡು ಸುಮ್ಮನಾದವು ಕೋರ್ಟು,ಕಛೇರಿ, ಶಾಲಾಕಾಲೇಜುಗಳಲ್ಲಿ ನಿನ್ನ ಭಾವಚಿತ್ರವೊಂದು ಮೊಳೆ ಹೊಡೆದ ಆಸರೆಗೆ ಗೋಡೆಯನೇರಿ ಕುಳಿತು ಅದೇ ನಗುವ ಬೀರಿದೆ ಮಾಲೆಯು ಸುಗಂಧ ಸೂಸಿದೆ ಇಷ್ಟೇ ಸಾಲದು ಇನ್ನು ಇದೆ ಗಮನದಲಿ ಕೇಳು..!! ನೀನಿರುವ ಹಾಳೆಯ ಚೂರೊಂದು ಸಾಕು ಅದರಿಂದಲೇ ಇಲ್ಲೆಲ್ಲವು ಬೆಲೆಯುಳ್ಳವಾಗಿವೆ…! ಆದರೆ…? ನಿನ್ನ ಸಿದ್ದಾಂತ ಹೊತ್ತಿಗೆಯಲಿ ಹೊತ್ತಿ ಕರಕಲಾಗಿದೆ ನೀತಿ ಕಲೆತ ಮಂಗಗಳು ಮರವನೇರಿ ಕುಳಿತು ನೀ ಬರುವ ದಾರಿಗೆ ದಿಟ್ಟಿಸಿವೆ ನಿನ್ನ ಬರುವಿಕೆಯ ಸೂಚನೆಗೆ…! ಗಾಢ ಕತ್ತಲು ಕವಿಯುವ ಮೊದಲೇ ಚಪ್ಪಲಿ ಹೊಲೆಯುವನ ಗಾಡಿ ತಳ್ಳುವವನ ಕಣವೆ ಕೂಲಿಯವನ ಇನ್ನಾರದೋ ಮನೆಯ ಚಿಮುಣಿಗೆ ಇಲ್ಲವೇ ….? ನಿನ್ನದೇ ನಿರ್ಮಿಸಿದ ಸ್ಮಾರಕದ ಬೆಳಕಿಗಾದರೂ ಬಂದು ನಿಲ್ಲು ಉಳಿದವರು, ಉಳ್ಳವರು ನಿನ್ನನ್ನು ಗುರುತಿಸಲು ಸೋಲಬಹುದು…! ಕೆಲವು ಕಡೆ ನಿನ್ನ ಅನುಪಸ್ಥಿತಿ ಅವಮಾನಸಿದೆ ಅದೇ ಘೋಷ ಅದೇ ವೇಷ ಮತ್ತದೇ ರೋಷ ಮತ್ತೊಂದಿಷ್ಟು ಉಪವಾಸಗಳ ಅವಶ್ಯಕತೆಯಲ್ಲಿ ನಿನ್ನ ಬೇಡಿಕೆ ಅಪಾರವಾಗಿದೆ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಇನಿಯನೆಂದರೆ… ನಿರ್ಮಲಾ ಆರ್. ಇನಿಯನೆಂದರೆ… ಇರುಳಲಿ ನಗುವ ಚಂದಿರನು ಬೆಳದಿಂಗಳಲಿ ನನ್ನೊಂದಿಗೆ ವಿಹರಿಸುವನು ತಾರೆಗಳ ನಡುವಲಿ ಇರುವನು ತಿಳಿ ಹಾಲಿನಂತಹ ಮನದವನು ಇನಿಯನೆಂದರೆ… ಆಗಸದಲಿ ಸದಾ ಮಿನುಗುವನು ದೂರದಿಂದಲೇ ನನ್ಮನದ ಧನಿಯ ಕೇಳುವನು ನನ್ನಂತರಾಳದ ಮಾತ ಅರಿಯುವನು ಪ್ರತಿ ಇರುಳಲಿ ನನಗಾಗಿ ಬರುವನು ಇನಿಯನೆಂದರೆ… ಕನಸ ಕಾಣುವ ಕಂಗಳಿಗೆ ತಂಪನೆರೆವನು ಕಂಡ ಕನಸಿಗೆ ಬಣ್ಣ ಹಚ್ಚುವನು ಕಣ್ಣ ಕಾಡಿಗೆಯ ಕದಿಯುವನು ಕಚಗುಳಿಯನಿಟ್ಟು ಕೆನ್ನೆಯ ರಂಗೇರಿಸುವನು ಇನಿಯನೆಂದರೆ… ಮನವೆಂಬ ಇಣುಕುವನು ತಿಳಿಯ ನೀರಲಿ ಚಹರೆಯ ಬಿಂಬ ಬಿಟ್ಟವನು ನಾ ಕಾಣುವ ಕನಸಲಿ ಪ್ರತಿದಿನ ಬರುವನು ಕನಸಲಿ ಕನಸಾಗೇ ಉಳಿದವನು. *****************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನ ಕವಿತೆ ಅಮೃತಾ ಮೆಹಂದಳೆ ನನ್ನ ಕವಿತೆ,ರಾಗ ತಾಳ ಭಾವವಿಲ್ಲದ ಮೂಕ ಗೀತೆವೀಣೆಗೆ ತ೦ತಿ ಮೀಟದಮುರಳಿಗೆ ಕುಹೂ ಹಾಡದ ಶೋಕಗೀತೆಆದರೊಮ್ಮೊಮ್ಮೆ ಹಿಡಿದಿಟ್ಟರೆ ನಿಲ್ಲುವುದುನಗಿಸಿದರೆ ನಕ್ಕು ಅಳಿಸಿದರೆ ಅಳುವುದುಏಕಾ೦ತಕೆ ಜೊತೆ ಹಾಡಿದರೆ ಭಾವಗೀತೆನನ್ನ ಭಾವದ೦ತೆ… ನನ್ನ ಕವಿತೆ,ಬರಿದಾದ ಬಿಳಿಯಾದ ಹಾಳೆಯ೦ತೆನಡುನಡುವೆ ಕಪ್ಪು ಚುಕ್ಕೆಯಾಗುವುದು ಚಿ೦ತೆಚೆಲ್ಲಿದರೆ ಕಣ್ಣುಕುಕ್ಕುವುದು ಬಣ್ಣಬರಿದು ಮನ ಬಿ೦ಬಿಸುವುದು ಬರೀ ಸೊನ್ನೆಹರಿದರೆ ಚೂರು ಮುಚ್ಚಿಟ್ಟರೆ ನೆನಪುಎಚ್ಚರದಿ ಬಿಡಿಸಿದರೆ ಸೆಳೆವ ಚಿತ್ರದ೦ತೆನನ್ನ ಚಿತ್ತದ೦ತೆ… ನನ್ನ ಕವಿತೆ,ಆಗಸದಿ ತೇಲುವ ಮೋಡದ೦ತೆಕೆಲವೊಮ್ಮೆ ಮೈದು೦ಬಿ ಸುರಿಯುವುದು ವರ್ಷದ೦ತೆಒಮ್ಮೆ ಬಿಳುಪು, ಇನ್ನೊಮ್ಮೆ ಕಪ್ಪುಬಣ್ಣ ಬಣ್ಣ ಹೊಳಪು, ತಾರೆಗಳ ನು೦ಗಿದ೦ತೆಮತ್ತೊಮ್ಮೆ ಕಪ್ಪುಕತ್ತಲೆ ಇದ್ದಕ್ಕಿದ್ದ೦ತೆನನ್ನ ಕನಸಿನ೦ತೆ… ನನ್ನ ಕವಿತೆ,ಮನದ ಕನ್ನಡಿಯ೦ತೆ,ದು:ಖದಲಿ ವಿರಹಗೀತೆಸ೦ತಸದಿ ನಲಿವ ಪ್ರೇಮಗೀತೆಇದಿ೦ದು ಹುಚ್ಚಿ, ನಾಳೆ ವಿರಾಗಿನಾಡಿದ್ದು ನಾಚುವ ಮದುಮಗಳುಆಮೇಲೆ ಪ್ರೌಢೆನೋವಿಗೆ ಜೊತೆಗಾತಿನಲಿವಿನಲ್ಲಿ ಸ೦ಗಾತಿನನ್ನ೦ತೆ… ********

ಕಾವ್ಯಯಾನ Read Post »

ಇತರೆ

ಯುಗಾದಿಯ ಸೂರ್ಯಸ್ನಾನ

ಯುಗಾದಿಯ ಸೂರ್ಯಸ್ನಾನ ಸ್ಮಿತಾ ರಾಘವೇಂದ್ರ ಯುಗದ ಆದಿಯೂ ಪ್ರಕೃತಿಯ ಪ್ರೀತಿಯೂ ಯುಗ ಉರುಳಿ ಯುಗ ಬರಲು ನವ ಯುಗಾದಿ ಬಾಡುವಲ್ಲೂ ಬಿಡದೇ ಚಿಗುರುವ ಈ ಪ್ರಕೃತಿಯ ಆದಿ. ಇಡೀ ಪ್ರಕೃತಿಯೇ ಹೊಸ ಚೈತನ್ಯವೊಂದಕ್ಕೆ ತರೆದು ಕೊಳ್ಳುವ ಕಾಲ ಮರಗಳೆಲ್ಲ ಚಿಗುರೆಲೆಯ ಹೊದ್ದು ಹೂ ಹಣ್ಣು ಗೊಂಚಲುಗಳಿಂದ ನಳ ನಳಿಸಿ ಮತ್ತೊಂದು ಸೃಷ್ಟಿಗೆ ಬೀಜಗಳ ಪಸರಿಸಿ ತೃಪ್ತವಾಗುವ ಕಾಲ. ಆಗೆಲ್ಲ ಯುಗಾದಿ ಬಂತೆದರೆ ಬೆಟ್ಟಗುಡ್ಡಗಳ ತಿರುಗುವದೇ ಒಂದು ಸಂಭ್ರಮ ಗೊಂಚಲು ಗೊಂಚಲಾಗಿ ಬಾಗಿ ನಿಂತ ಸಂಪಿಗೆ, ನೇರಳೆ, ಕೌಳಿ,ಬಿಕ್ಕೆ ಹಣ್ಣು, ಮುಳ್ಳೆಹಣ್ಣು,ಇನ್ನೂ ಹಲವುಜಾತಿಯ ಹಣ್ಣುಗಳ ಕಿತ್ತು ಮಡಿಲೊಳಗೆ ತುಂಬಿಕೊಂಡು ಮನಸೋ ಇಚ್ಚೆ ಸವಿಯುತ್ತಿದ್ದೆವು.ಹುಳಿ, ಸಿಹಿ, ಕಹಿ,ಅದೆಷ್ಟು ವಿಧದ ರುಚಿಗಳು. ದೇಹಕ್ಕೂ, ಮನಸಿಗೂ, ಆರೋಗ್ಯಕ್ಕೂ, ಖುಷಿ ನೀಡುತ್ತಿತ್ತು. ಅಯಾ ಕಾಲಕ್ಕೆ ಪ್ರಕೃತಿಯ ಮಡಿಲೊಳಗೆ ಸಿಗುವ ಹಣ್ಣನ್ನು ತಂದು ಸವಿಯದೇ ಹೋದರೆ ಅದೇನೋ ಕಳೆದುಕೊಂಡ ಭಾವ ಇಗಲೂ ಕಾಡುತ್ತದೆ. ಹೊರಗೆ ಹೋದರೆ ಬೆಟ್ಟದ ಹಣ್ಣುಗಳ ತಿಂದರೆ ಇನ್ಪೆಕ್ಷನ್ ಆಗುತ್ತದೆ ಎನ್ನುವ ಕಾಲ ಬರತೊಡಗಿತು. ಮಾನವ ಪ್ರಕೃತಿಯ ಜೊತೆಗಿನ ಸಂಬಂಧ ನಿಧಾನವಾಗಿ ತೊರೆದು ಆಧುನಿಕತೆಯೆಡೆಗೆ ತೆರೆದುಕೊಳ್ಳತೊಡಗಿದ. ಸಿಟಿಯಲ್ಲಿರುವ ಮಾಲ್‌ಗಳು ತುಂಬಿ ತುಳುಕಾಡುತೊಡಗಿದವು. ಎಲ್ಲೆಡೆ ರಶ್ಯೋ ರಶ್ಯು. ಹಬ್ಬದ ಆಫರ್ಸ್ ಗಳು ಎಲ್ಲರನ್ನೂ ತನ್ನತ್ತ ಸೆಳೆದು ಹಬ್ಬವೆಂದರೆ ಖರೀದಿ ಅನ್ನುವಂತಾಯಿತು. ಈಗಿನ ಯುವಕ ಯುವತಿಯರು ರಜೆ ಇದೆ ಅಂದರೆ ಸ್ನೇಹಿತರ ಜೊತೆ ಪಾರ್ಟಿ, ಕೂಟ ಅಂತ ಮೋಜುಮಸ್ತಿಯಲ್ಲಿ ತೊಡಗುತ್ತಾರೆ. ಮಕ್ಕಳಿಗೆಲ್ಲಿ ನಮ್ಮ ಪ್ರಕೃತಿಯ ಪರಿಚಯವಾಗಲು ಸಾಧ್ಯ. ಬೆಳಗಾಗೆದ್ದು ಬೇವಿನ ಮರ ಹುಡಿಕಿಕೊಂಡು ಹೋಗಿ ತೆಕ್ಕೆಯತುಂಬಾ ಸೊಪ್ಪು ಕಿತ್ತು ತರುತ್ತುದ್ದ ದಿನಗಳವು. ಅದನ್ನು ಬಚ್ಚಲುಮನೆಯ ನೀರಿನ ಹಂಡೆಗೆ ಹಾಕಿ ಚೆನ್ನಾಗಿ ಕುದಿಸುತ್ತುದ್ದರು ಅಪ್ಪ. ಅದರ ಘಮವೇ ಇಂದಿಗೂ ಒಂತರ ಅಪ್ಯಾಯಮಾನ,ಹಬ್ಬದ ದಿನ ಆರಂಭ ವಾಗುವ ಈ ಪ್ರಕ್ರಿಯೆ ಆಗಾಗ ನಡೆಯುತ್ತಲೇ ಇತ್ತು. ಅದರ ಸೊಪ್ಪುಗಳನ್ನು ಕುದಿಸಿ ಪ್ರತಿಯೊಬ್ಬರಿಗೂ ಒಂದೊಂದು ಲೋಟ ಕುಡಿಯಲು ನೀಡುತ್ತಿದ್ದಳು ಅಮ್ಮ. ಕಹಿ ಎಂದು ತಕರಾರು ತೆಗೆದರೆ ಮುಗಿತು, ಮೂಗು ಹಿಡಿದು ಕುಡಿಸುತ್ತಿದ್ದಳು.ಕಹಿಯ ಒಗರನ್ನು ನೀಗಿಸಿಕೊಳ್ಳಲು ಕೈಲೊಂದು ಹುಣಸೇ ಹಣ್ಣಿನ ಚೂರು ಹಿಡಿದು ಗಟ ಗಟನೇ ಕುಡಿದು ಗಬಕ್ಕನೇ ಹುಣಸೇಹಣ್ಣು ಬಾಯಿಗೆ ಹಾಕಿಕೊಳ್ಳುತ್ತಿದ್ದೆವು. ಪ್ರತೀ ರವಿವಾರ ಕಹಿ ಕುಡಿಯಲೇಬೇಕಾಗಿತ್ತು ಅಂತಹ ಆರೋಗ್ಯ ಪೂರ್ಣ ನಿಯಮಗಳೆಲ್ಲ ಇಂದು ಜಿಮ್,ಆಸ್ಪತ್ರೆ,ಸೇರಿಕೊಂಡಿವೆ. ಸಹಜವಾಗಿ ಎಟುಕುವ ಯಾವ ಸವಲತ್ತುಗಳೂ ಬೇಡ,ಅದಕ್ಕೆ ಹಣತೆತ್ತು ಆಹ್ವಾಹನೆ ಮಾಡಿದರೆನೇ ಖುಷಿ ಮತ್ತು ಅದು ಸತ್ಯ ಅನ್ನುವ ನಂಬಿಕೆ. ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಪಲ್ಲವಿಸುವ ಸಮಯ. ಈ ಋತುರಾಜನ ಆಗಮನದೊಂದಿಗೆ ಯುಗಾದಿ ಹಲವು ಆರೋಗ್ಯ ಸೂತ್ರಗಳನ್ನು ಹೊತ್ತು ತರುತ್ತದೆ. ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ ಯುಗಾದಿಯ ವೈಶಿಷ್ಟ್ಯದ ಉಲ್ಲೇಖವಿದೆ. ‘ಯುಗ’ ಎಂದರೆ- ನೂತನ ವರ್ಷ; ‘ಆದಿ’ ಎಂದರೆ- ಆರಂಭ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, ‘ಆನಂದಮಯ ಈ ಜಗ ಹೃದಯ’ ಎಂಬ ಕವಿ ವಾಣಿಯ ಸತ್ಯದ ದರ್ಶನವಾಗುತ್ತದೆ. ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ವಸಂತ ಋತುವೆಂದರೆ ಸಂಭ್ರಮದ ಹೊನಲು.ಹಣ್ಣು ಚಿಗುರೆಲೆಗಳ ತಿಂದು ತೃಪ್ತವಾಗಿ ವಿಹರಿಸುತ್ತವೆ. ಅದಕ್ಕಾಗಿಯೆ ಸರ್ವ ಋತುಗಳಲ್ಲಿ ವಸಂತ ಋತು ಶ್ರೇಷ್ಠ ಕೂಡ. ಉಸ್ ಉಸ್ ಎಂದು ಎ ಸಿ ಯೊಳಗೆ ಕೂತರೂ ಬೆವರಿಳಿಸಿ ಬಾಡುತ್ತಿರುವ ಮನುಷ್ಯ,ರಣ ರಣ ಸೂರ್ಯನ ಕಿರಣಕ್ಕೂ ಸೆಡ್ಡು ಹೊಡೆದು ಬದುಕುವ ಕಲೆಯ ತಣ್ಣಗೆ ಕಲಿಸುತ್ತಿರುತ್ತದೆ ಪ್ರಕೃತಿ. ಆದರಿಂದು ಪ್ರಕೃತಿಗೇ ಸೆಡ್ಡು ಹೊಡೆದು ಸಾಗುತ್ತಿದ್ದಾನೆ ಮನುಜ. ಅದರ ಪರಿಣಾಮವನ್ನೂ ಜೊತೆ ಜೊತೆಗೇ ಅನುಭವಿಸಿದರೂ ಕಿಂಚಿತ್ತೂ ಬದಲಾಗದ ಮಾನವ. ಹೌದು,ವಿಕಾರಿ ನಾಮದ ಯುಗಾದಿ ತನ್ನ ವಿಕಾರ ರೂಪವನ್ನು ಇಡೀ ಜಗತ್ತಿಗೇ ತೋರಿಸುತ್ತಿದೆ. ಇಂದು,ಮನುಷ್ಯನ ಮಿತಿಮೀರಿದ ಆಸೆಗಳು ಮನುಜಕುಲವನ್ನೇ ನಾಶಮಾಡುತ್ತಿವೆ. ಪ್ರತಿಯೊಂದನ್ನೂ ಸಮತೋಲನದಲ್ಲಿ ಇರಿಸಿಕೊಳ್ಳುವ ಕಲೆ ಮಾನವನಿಗಿಂತ ಪ್ರಕೃತಿಗೇ ಚೆನ್ನಾಗಿ ಗೊತ್ತಿದೆ. ಅದಕ್ಕಾಗಿಯೇ ಕಾಲ ಕಾಲಕ್ಕೆ ತನ್ನ ನಿಲುವನ್ನು ಚಾಚುತಪ್ಪದೇ ತೋರಿಸುತ್ತದೆ,ಪಾಲಿಸುತ್ತದೆ, ಯುಗಾದಿಕೂಡ ಅಂತಹದ್ದೊಂದು ಪ್ರಕೃತಿ ಪಾಲನೆ ಮತ್ತು ನಿಲುವಿನ ಸಂಕೇತವೇ ಹಿಂದೂ ಸಂಪ್ರದಾಯದಂತೆ ಒಂದು ಸಂವತ್ಸರ ಕಳೆದು ಇನ್ನೊಂದು ಸಂವತ್ಸರದ ಆರಂಭ. ಆರಂಬದಲ್ಲಿಯೇ ಪ್ರಕೃತಿ ಬೀಜೊತ್ಪತ್ತಿಯನ್ನು ಮಾಡಿ ಬರುವ ಮಳೆಗಾಲಕ್ಕೆ ಮೊಳಕೆಯೊಡೆಯಲು ತನ್ನ ಸೃಷ್ಟಿಯ ಸಮತೋಲನ ಕಾಯ್ದುಕೊಳ್ಳಲು ಸಿದ್ಧವಾಗುತ್ತದೆ. ಅಂತೆಯೇ ಬರಲಿರುವ ಬದುಕು ಹೇಗೂ ಇರಬಹುದು ಕಹಿಯಾಗಲಿ ಸಿಹಿಯಾಗಲೀ ಎಲ್ಲದಕ್ಕೂ ಸಿದ್ದರಾಗಿ ಮುನ್ನಡೆಯಬೇಕು ಎಂದು ಹಿರಿಯರು ಬೇವು ಬೆಲ್ಲವನ್ನು ತಿನ್ನುವ ಮೂಲಕ ಒಲವು, ನಲಿವು, ಸಹಬಾಳ್ವೆಯ,ದ್ಯೋತಕವೆಂದು ಯುಗಾದಿಯನ್ನು ಬರಮಾಡಿಕೊಳ್ಳುತ್ತಾರೆ. ಶತಾಯು:ವಜ್ರದೇಹಾಯ ಸರ್ವಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ|| ಎನ್ನುವಂತೆ– (ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.) ಆರೋಗ್ಯದ ದೃಷ್ಟಿಯಿಂದಲೂ ಬೇವು ದೇಹಕ್ಕೆ ಬಹಳ ಒಳ್ಳೆಯ ದಿವ್ಯ ಔಷಧ ನಮ್ಮೊಳಗಿನ ಕಲ್ಮಶಗಳನ್ನು ಹೊರದೂಡುತ್ತದೆ. ಅಲ್ಲದೇ ಬೇಸಿಗೆ ಕಾಲಕ್ಕೆ ರೋಗ ರುಜಿನಿಗಳು ಅಧಿಕ ಮತ್ತು ಬಹಳಬೇಗ ವ್ಯಾಪಿಸುತ್ತದೆ. ಬೇವಿನ ಎಲೆ, ಚಿಗುರು, ಹೂವು, ಕಾಯಿ, ಬೀಜ, ಎಣ್ಣೆ, ಕಾಂಡ, ತೊಗಟೆ, ಬೇವಿನ ಬೇರುಗಳೆಲ್ಲವೂ ಮದ್ದಿಗೊದಗುತ್ತವೆ. ಆದರೆ ಬಳಸಲು ವ್ಯವಧಾನ ಬೇಕು. ಕಾಯಿಲೆ ಎಷ್ಟೆ ಗಂಭೀರವಿರಲಿ, ಯಾವ ಚಿಕಿತ್ಸೆಗೂ ಗಾಂಧೀಜಿ ಒಪ್ಪುತ್ತಿರಲಿಲ್ಲವಂತೆ. ಬೇವಿನ ಎಲೆಯ ಕಷಾಯ ಮತ್ತು ಆಡಿನ ಹಾಲು ಕುಡಿದು,ಮೈಗೆ ಆಗಾಗ ಬೇವಿನ ಎಣ್ಣೆ ಬಳಿದುಕೊಂಡು ಮರದ ಹಲಗೆಗಳ ಮೇಲೆ ಮಲಗಿ ಸೂರ್ಯಸ್ನಾನ ಮಾಡುತ್ತಿದ್ದರಂತೆ. ನಾವಿಂದು ಶಾಸ್ತ್ರಕ್ಕೆ ಒಂದು ಎಲೆ ತಿಂದು ಹಬ್ಬದ ಆಚರಣೆಯಿಂದ ಬೀಗುತ್ತಿದ್ದೇವೆ. ಈ ಹಬ್ಬವನ್ನು ಭಾರತ ಪರ್ವದಲ್ಲಿ ಬೇರೆ-ಬೇರೆ ಹೆಸರಿನಿಂದ, ಸಾಮಾನ್ಯವಾಗಿ ಎಲ್ಲರೂ ಆಚರಿಸುವರು. ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ಧ ವಾದ ಯುಗಾದಿ ಹಬ್ಬ ಚ್ಯೆತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಟಿಯಲ್ಲಿ ವರ್ಷಾರಂಭದ ಪವಿತ್ರ ದಿನ ಕೂಡಾ. ಒಟ್ಟಾರೆ ಯುಗಾದಿಯು ಸಾಂಪ್ರದಾಯಿಕ ಆಚರಣೆಯೊಂದಿಗೆ , ಪ್ರಕೃತಿಯೊಂದಿಗಿನ ನಮ್ಮ ಅವಿನಾಭಾವ ಸಂಬಂಧದ ಪ್ರತೀಕವೆಂದರೆ ತಪ್ಪಾಗಲಾರದು. ಅದೆಷ್ಟು ರೋಗ ನಿರೋಧಕಗಳನ್ನು ನಮಗೆ ಪ್ರಕೃತಿ ಕೊಡುಗೆಯಾಗಿ ನೀಡಿದೆ.ನಾವದನ್ನು ಗಮನಿಸುತ್ತಲೇ ಇಲ್ಲ ಹಳೆಯ ಪದ್ದತಿಗಳೆಲ್ಲ ಜೊಳ್ಳು. ವಿಜ್ಙಾನವೇ ಹೆಚ್ಚೆಂದು ಅಹಂಕಾರದಿಂದ ಸಾಗುತ್ತಿದ್ದೇವೆ. ಆದರೆ ನೆನಪಿರಲಿ ಹಳೆಯಬೇರಿನ ಭದ್ರತೆಯೇ ಹೊಸ ಚಿಗುರಿಗೆ ನಾಂದಿ. ಇಂದು ಜಗತ್ತೇ ಎದುರಿಸುತ್ತಿರು ಕೊರೋನಾ ಎಂವ ವೈರಾಣುವಿನ ಆಟಾಟೋಪ ನಮ್ಮ ಹಿಂದೂ ಸಂಪ್ರದಾಯ ಮಡಿ ಯೆಂಬ ಸ್ವಚ್ಚತೆ.ಅಪ್ಪುಗೆ ಗಿಂತ ನಮಸ್ಕಾರದ ಗೌರವ. ಹಬ್ಬಗಳ ಶಿಸ್ತುಬದ್ಧ ಸಂಪ್ರದಾಯಗಳು, ಪ್ರತೀ ಘಟ್ಟವನ್ನು ನೆನಪಿಸುತ್ತಿರುವದೇ ಇದಕ್ಕೆ ಸಾಕ್ಷಿ ಆದರೆ ಕಳೆದ ಕಾಲ ಮತ್ತೆ ಬರಲಾರದು. ಇರುವ ಬರುವ ದಿನಗಳನ್ನು ಜಾಗರೂಕವಾಗಿ ಬದುಕುವದು ಬಹಳ ಮುಖ್ಯ ಪ್ರತಿಯೊಂದು ಹಬ್ಬ ಹರಿದಿನಗಳಿಗೂ ಅದರದೇ ಆದ ಸಂಪ್ರದಾಯ ಶಾಸ್ತ್ರ ಆಚರಣೆಗಳು ನಮ್ಮ ಅರೋಗ್ಯ ಸ್ವಚ್ಚತೆಯೊಂದಿಗೆ ಜೋಡಣೆಯಾಗಿದೆ ಆದರೆ ಕೇವಲ ಅದನ್ನು ಆಡಂಭರವಾಗಿಮಾತ್ರ ನಾವಿಂದು ನೋಡುತ್ತಿದ್ದೇವೆ. ಈಗ ಸಧ್ಯದ ಪರಿಸ್ಥಿತಿಯಲ್ಲಿ ಬಂದಿರುವ ಮಹಾ ಮಾರಿ ರೋಗದ ವಿಕಾರತೆಯು ತೊರೆದು ಹೊಸ ಶಾರ್ವರಿಯ, ಶಕ್ತಿ ಯುಗ ಎಲ್ಲರ ಕಾಯಾ ವಾಚಾ ಮನಸಾ ಆರಂಭವಾಗಲಿ. ********

ಯುಗಾದಿಯ ಸೂರ್ಯಸ್ನಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಚೈತ್ರಾ ಶಿವಯೋಗಿಮಠ ಕವಿ ಕೆ.ಎಸ್.ಎನ್ ಕ್ಷಮೆ ಕೋರುತ್ತಾ….. ಬರೆದ ಕವಿತೆಯ ಬಿಚ್ಚಿ, ತುಂಡರಿಸಿ ಕೊಯ್ವರು, ಬರೆದುದರೆಲ್ಲದರಲಿ ಬರಿ ತಪ್ಪ ಕಾಣ್ವರು ಯಾವುದೂ ಸರಿ ಇಲ್ಲ ಎಂದಿವರ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಭಾವ ಚಂದವಿರಲು, ಈ ಪದವು ಯಾಕೆ? ಪದಗಳೆಲ್ಲವುಕೆ ಸಮ್ಮತಿಯು ಇರಲು, ಭಾವ ತೀವ್ರತೆಯು ಸಾಕೆ? ಎಲ್ಲದಕೂ ಬರಿ ಕೊಂಕು ಎಲ್ಲದಕು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ!! ಓದೋಕೆ ಲಯವಿರೆ, ಛಂದೋಬದ್ಧ ಇಲ್ಲಂತೆ! ಪ್ರಾಸವಿಲ್ಲದಿರೆ ಓದಲು ತ್ರಾಸಂತೆ.. ಪ್ರಾಸವಿರೆ, ಪ್ರಾಸಕ್ಕೆ ತ್ರಾಸೆಂದು ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಅರ್ಥವಾಗದಿರೆ, ಅರೆ ಇದೆಂಥ ಕವಿತೆ? ಅರ್ಥವಾದರೆ, ಧ್ವನಿಯಿಲ್ಲ ಅದು ಬರಿ ವಾಚ್ಯವಂತೆ! ಎಲ್ಲದಕು ಇವರದು ಅರ್ಥವಿಲ್ಲದ ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! ಪತ್ರಿಕೆಗೆ ಕಳಿಸಿ ಪ್ರಕಟಿಸಿದರೆ, ಕೀರ್ತಿಯ ಹುಚ್ಚಂತೆ ಈಗೆಲ್ಲ ಬರೆಯುವವರ ಇವರು ಮೆಚ್ಚರಂತೆ! ಬರೆದುದೆಲ್ಲದಕು ಬರೀ ಟಿಪ್ಪಣಿ-ಟೀಕೆ ಇವರು ಮೆಚ್ಚುವ ಕವಿತೆ ಇಲ್ಲಿಲ್ಲ ಜೋಕೆ! **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಹುಟ್ಟುವುದಿಲ್ಲ ಸ್ಮಿತಾ ರಾಘವೇಂದ್ರ ಆತ್ಮವೆಂಬ ಅನೂಹ್ಯ ಭಾವಗರ್ಭಗುಡಿಯ ಹೊಕ್ಕು ಹಲವು ಕವಿತೆಗಳು ತಣ್ಣಗೆ ಹೊರ ನಡೆಯುತ್ತವೆ ಕವಿತೆಯ ಹಡೆದ ಮೌನದಂತೆ! ನಭೋಮಂಡಲವ ತಿರು ತಿರುಗಿ ವಿರಮಿಸಿ ಉಸುರಿದಾಗೊಂದು- ನಿಟ್ಟುಸಿರು: ಆತ್ಮಕ್ಕೆ ದಕ್ಕಿದ್ದು ಕಾಯಕ್ಕೆ ದಕ್ಕುವದಿಲ್ಲ! ಅಣು ರೇಣುವಿನಲಿ ಪಲ್ಲವಿಸಿ ತಲೆದೂಗಿ ರಿಂಗಣಿಸಿ ಒಳಗೊಳಗೇ ಭೋರ್ಗರೆದು ಮಂಜುಗಟ್ಟಿದ ಕಣ್ಣ ತೊರೆದು ಅರಿಯದೇ ಉದುರಿದ ಕವಿತೆಯ ಕರುಣೆ- ತೊರೆದ ನಿರಾಳ ಬದುಕಿನ ಕೊನೆಯ ಕವಿತೆಗೆ ಮಾತೂ ಇರುವುದಿಲ್ಲ ಮೂಕ ಮರ್ಮರವೊಂದರ ಅಂತರಾತ್ಮ: ಸೋತ ಕಣ್ಣುಗಳಿಂದ ಸರಿದ ಸುಂದರ ನೋಟ. ಸಾವಿನ ಆಲಿಂಗನ, ಆಲಿಂದ ದಾಟಿ ತಿರುಗಿಯೂ ನೋಡದೇ ನಡೆದ ಕರುಳ ಹಿಂಡಿದ ಕವಿತೆ, ಆತ್ಮ ಸಂಗಾತ ಬಿಂದುವೊಂದಕೆ ಬಂದು ಸೇರಿದ ಭಾವ- ಬೃಹದಾಕಾರ ಚದುರಿ- ವಿವಿಧ ರೂಪಕ ಸೇರಿ ಜಗದ ತುಂಬಾ ಪುಟ್ಟ ಪುಟ್ಟ ಕವಿತೆಯ ಧಾರಣ! ಹುಟ್ಟೂ ಇಲ್ಲದ ಸಾವೂ ಇಲ್ಲದ ನಿರಂತರ ಚಲನೆ ಜಗದ ಏಕೈಕ ಕವಿತೆ ಸಕಲವನೂ ಸಹಿಸುತ್ತದೆ! ಕವಿತೆ ಹುಟ್ಟುವುದಿಲ್ಲ ಸ್ವಯಂ ಹೆರುತ್ತದೆ!! *********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಮಾನವನ ಮಿದುಳಿಗೇ ತಗಲಿರುವ ವೈರಸ್ ಗಣೇಶಭಟ್, ಶಿರಸಿ ಮಾನವನ ಮಿದುಳಿಗೇ ತಗಲಿರುವ ವೈರಸ್………….. ಇಡೀ ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ವೈರಸ್ ಯಾವುದೆಂದು ಕೇಳಿದರೆ ಚಿಕ್ಕ ಮಕ್ಕಳೂ ಕೂಡಾ ಕೊರೊನಾ ಎಂದು ಹೇಳುವಷ್ಟು ಅದರ ಹೆಸರು ಜನಜನಿತವಾಗಿದೆ. ಕೊರೊನಾ ವೈರಾಣು ತಗಲದಂತೆ ಸುರಕ್ಷಾ ಕ್ರಮವಾಗಿ ಮಾಲ್‍ಗಳನ್ನು, ಸಿನಿಮಾ, ನಾಟಕಗಳನ್ನು ಬಂದ್ ಮಾಡಲಾಗಿದೆ. ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಯದಿಂದಾಗಿ ಜನರ ಓಡಾಟ ಕಡಿಮೆಯಾಗಿದೆ. ಸಾರಿಗೆ ವ್ಯವಸ್ಥೆಯ ಬಳಕೆದಾರರ ಸಂಖ್ಯೆ ಕುಗ್ಗುತ್ತಿದೆ. ಮನೆಯಿಂದ ಹೊರ ಬರಲು ಜನರು ಹಿಂದೇಟು ಹಾಕುತ್ತಿರುವುದರಿಂದ ಅಂಗಡಿ, ಹೋಟೆಲ್‍ಗಳ ವ್ಯಾಪಾರ, ವ್ಯವಹಾರ ಕುಂಠಿತವಾಗಿದೆ. ಕೆಲವು ಕೃಷಿ ಉತ್ಪನ್ನಗಳ ಮಾರುಕಟ್ಟೆಗಳಲ್ಲಿ ವ್ಯವಹಾರ ಸ್ಥಗಿತಗೊಳಿಸಲಾಗಿದೆ. ಶಾಲಾ- ಕಾಲೇಜುಗಳಿಗೆ ರಜಾ ನೀಡಲಾಗಿದೆ. ಒಟ್ಟಾರೆಯಾಗಿ ಜನಜೀವನ ಸ್ತಬ್ಧಗೊಳ್ಳುತ್ತಿದೆ. ಇದಕ್ಕೆಲ್ಲಾ ಕೊರೊನಾ ವೈರಸ್ ಕುರಿತಾದ ಅತಿ ಎನ್ನುವಷ್ಟು ಭಯವೇ ಕಾರಣ. ಕೊರೊನಾ ನೆಪದಲ್ಲಿ ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಅಲ್ಲೋಲ- ಕಲ್ಲೋಲ ಏರ್ಪಟ್ಟಿದೆ. ವ್ಯಾಪಾರ, ವ್ಯವಹಾರ, ಉದ್ದಿಮೆಗಳು ಹಿನ್ನೆಡೆ ಅನುಭವಿಸುತ್ತಿವೆ; ಜಾಗತಿಕ ಆರ್ಥಿಕ ಹಿಂಜರಿತದ ಭೀತಿ ಕಾಡ ತೊಡಗಿದೆ. ಕೇವಲ ಮೂರು- ನಾಲ್ಕು ತಿಂಗಳುಗಳಲ್ಲಿ ಇಡೀ ಜಗತ್ತಿನ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುವಷ್ಟು ಕೊರೊನಾ ವೈರಸ್ ಬಲಿಷ್ಠವಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲವೆಂದೇ ಹೇಳಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ಹಿಂಜರಿತ ಹಾಗೂ ಏರುಪೇರಿಕೆ ಕೊರೊನಾಕ್ಕಿಂತ ಎಷ್ಟೋ ಪಟ್ಟು ಬಲಿಷ್ಠ ಹಾಗೂ ಅಪಾಯಕಾರಿಯಾದ ವೈರಸ್ ಕಾರಣವಾಗಿದೆ. ಈ ಅನಿಷ್ಠವನ್ನು ಕಂಡೂ ಕಾಣದಂತೆ , ಆರ್ಥಿಕ ತಜ್ಞರು ವರ್ತಿಸುತ್ತಿದ್ದಾರೆ; ರಾಜಕಾರಣಿಗಳು ತಮ್ಮ ಹಾಗೂ ತಮ್ಮ ಪಕ್ಷದ ಲಾಭಕ್ಕಾಗಿ ಈ ವೈರಸ್‍ನ್ನು ಬಳಸಲು ಪ್ರಯತ್ನಿಸುತ್ತಿದ್ದಾರೆ. ಮಾನವನ ಮಿದುಳಿಗೇ ಅಂಟಿರುವ ಇಂತಹ ಅತಿ ಅಪಾಯಕಾರಿ ವೈರಸ್‍ನ ಹೆಸರೇ ಸಂಪತ್ತು ಸಂಗ್ರಹಣಾ ಮನೋಭಾವ. ಸಂಪತ್ತನ್ನು ಗಳಿಸುವುದು ಎಲ್ಲರಿಗೂ ಅವಶ್ಯಕ. ಆದರೆ ಸಂಪತ್ತಿನ ಗಳಿಕೆ ಹಾಗೂ ಸಂಗ್ರಹಣೆಯನ್ನೇ ಜೀವನದ ಗುರಿಯಾಗಿಸಿಕೊಂಡ ಕೆಲವರು ನಡೆಸುವ ವ್ಯವಹಾರಗಳಿಂದ , ಆರ್ಥಿಕ ರೀತಿ- ನೀತಿಗಳಿಂದಾಗಿ ಇಡೀ ಸಮಾಜ ಕಷ್ಟ- ನಷ್ಟ ಅನುಭವಿಸಬೇಕಾಗುತ್ತದೆ. ಜಾಗತಿಕ ಅರ್ಥವ್ಯವಸ್ಥೆಯ ಇಂದಿನ ದುಸ್ಥಿತಿಗೆ ಇದೇ ವೈರಸ್ ಪ್ರಮುಖ ಕಾರಣವಾಗಿದೆ. ಶೇರು ಮಾರುಕಟ್ಟೆಯಲ್ಲಿ ಆಗುತ್ತಿರುವ ಏರು-ಪೇರುಗಳಿಗೆ ಕೊರೊನಾವನ್ನು ಕಾರಣವೆಂದು ಹೇಳಲಾಗುತ್ತಿದೆ. ವಾಸ್ತವ ಮಾತ್ರ ಇದಕ್ಕೆ ತೀರಾ ವ್ಯತಿರಿಕ್ತವಾಗಿದೆ. ಶೇರು ಮಾರುಕಟ್ಟೆಯೆಂದರೆ ಸರಕಾರದಿಂದ ಮಾನ್ಯತೆ ಪಡೆದ ಜೂಜುಕಟ್ಟೆ; ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಇದು ಪರವಾನಿಗೆ ಪಡೆದ ಓಸಿ ಅಡ್ಡೆ. ಯಾವ ಕಂಪನಿಯ ಶೇರಿನ ಬೆಲೆ ಮುಂದಿನ ವಾರ ಹೆಚ್ಚಾದೀತು, ಯಾವುದರ ಬೆಲೆ ಇಳಿದೀತು ಮುಂತಾಗಿ ಊಹಿಸಿ, ಶೇರುಗಳ ಖರೀದಿ, ವಿಕ್ರಿ ನಡೆಯುತ್ತದೆ. ಶೇರು ಮಾರಾಟದ ಪ್ರಾರಂಭದ ಹಂತದಲ್ಲಿ ಮಾತ್ರ ಕಂಪನಿಗಳಿಗೆ ಬಂಡವಾಳ ದೊರೆಯುತ್ತದೆಯೇ ಹೊರತು, ಮುಂದಿನ ಹಂತದ ಶೇರು ಮಾರಾಟ ಅಥವಾ ಕೈ ಬದಲಾವಣೆಯಿಂದ ಆ ಕಂಪನಿಗೆ ಯಾವುದೇ ಬಂಡವಾಳ ಸಿಗುವುದಿಲ್ಲ. ಊಹಾ- ಪೋಹದ ದಂಧೆಯಲ್ಲಿ ಕೆಲವು ಶೇರುಗಳ ಬೆಲೆ ಅತಾರ್ಕಿಕ ಹೆಚ್ಚಳವನ್ನು ಅಥವಾ ಇಳಿಕೆಯನ್ನು ಕಾಣುತ್ತದೆ. ಈ ಏರಿಳಿತವನ್ನು ಉದ್ದೇಶಪೂರ್ವಕವಾಗಿ ನಿರ್ದೇಶಿಸುವ ಕಾಣದ ಕೈಗಳು ತಮ್ಮ ಲಾಭ ಗಳಿಕೆಯ ಉದ್ದೇಶವನ್ನು ಪೂರ್ತಿಗೊಳಿಸಿಕೊಳ್ಳುತ್ತಿರುತ್ತವೆ. ಆರ್ಥಿಕ ತಜ್ಞರು ಹೇಳುವಂತೆ ಶೇರು ಮಾರುಕಟ್ಟೆಯ ಊಹಾ-ಪೋಹದ ಗುಳ್ಳೆ ಅತಿಯಾಗಿ ಉಬ್ಬಿದೆ. ಯಾವುದೇ ಕ್ಷಣದಲ್ಲಿ ಈ ಗುಳ್ಳೆ ಒಡೆಯುವ ಸಾಧ್ಯತೆಯಿದೆಯೆಂದು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಶೇರು ಮಾರುಕಟ್ಟೆಯ ಕುಸಿತದಿಂದ ಸಂಪತ್ತಿನ ನಷ್ಟವಾಗುತ್ತಿರುವುದು ಜೂಜಾಟದಲ್ಲಿ ತೊಡಗಿಕೊಂಡವರಿಗೆ ಮಾತ್ರ. ಕಂಪನಿಗಳಿಗೆ ಆಗುತ್ತಿರುವ ನಷ್ಟವೂ ಕಾಲ್ಪನಿಕ ಮೌಲ್ಯದಲ್ಲಿಯೇ ಹೊರತು ನೈಜ ಸಂಪತ್ತಿನಲ್ಲಿ ಅಲ್ಲ. ಕೊರೊನಾ ನೆಪದಲ್ಲಿ ಶೇರು ಮಾರುಕಟ್ಟೆಯ ಗುಳ್ಳೆ ಒಡೆಯುತ್ತಿರುವುದರಿಂದ ಜನಸಾಮಾನ್ಯರಿಗೆ ಯಾವ ನಷ್ಟವೂ ಇಲ್ಲ. ನ್ಯೂಯಾರ್ಕ್‍ನಿಂದ ಮುಂಬೈ ಶೇರು ಪೇಟೆಯವರೆಗಿನ ಪ್ರಮುಖ ಕೇಂದ್ರಗಳಲ್ಲಿ ಶೇರಿನ ಮೌಲ್ಯಗಳು ಕುಸಿಯುತ್ತಿವೆ; ಆದರೆ ಕೊರೊನಾ ವೈರಸ್‍ನ ಹರಡುವಿಕೆಯ ಕೇಂದ್ರವಾದ ಚೀನಾದ ಶೇರು ಮಾರುಕಟ್ಟೆ ಮಾತ್ರ ಏರಿಕೆಯ ದಾರಿಯಲ್ಲಿದೆ. ಇದಕ್ಕೆ ಮೂಲ ಕಾರಣ ಅಮೇರಿಕಾ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ. ಜಗತ್ತಿನ ಸಂಪನ್ಮೂಲಗಳ ಮೇಲೆ ತನ್ನ ಹತೋಟಿ ಹೊಂದುವ ಸಲುವಾಗಿ ಅಮೇರಿಕವು ಯುದ್ಧವೂ ಸೇರಿದಂತೆ ಹಲವು ವಿಧಾನಗಳನ್ನು ಬಳಸುತ್ತದೆ. ಅಮೇರಿಕಾದ ಮಾರುಕಟ್ಟೆಯ ಮೇಲಿನ ತನ್ನ ನಿಯಂತ್ರಣಗಳನ್ನು ಬಿಗಿಗೊಳಿಸಲು ಚೀನಾ ಪ್ರಯತ್ನಿಸುತ್ತಿದೆ. ಡಾಲರ್ ಮತ್ತು ಅಮೇರಿಕಾದ ಟ್ರೆಸರಿ ಬಾಂಡ್‍ಗಳಲ್ಲಿ ಹಣ ತೊಡಗಿಸಿರುವ ಜಪಾನ್‍ಗೆ ಅಮೇರಿಕಾದ ಅರ್ಥವ್ಯವಸ್ಥೆ ಬೆಳೆಯುವುದು ಅನಿವಾರ್ಯ. ಆರ್ಥಿಕ ಮುತ್ಸದ್ಧಿತನ ಹೊಂದಿಲ್ಲದ ರಾಜಕಾರಣಿಗಳನ್ನು ಹೊಂದಿರುವ ಭಾರತ ಮತ್ತು ಅಂತಹ ಕೆಲವು ದೇಶಗಳು ಅನಗತ್ಯವಾಗಿ ಅಮೇರಿಕಾದ ಪಲ್ಲಕ್ಕಿ ಹೊರುತ್ತಿವೆ. ಕಾಡುತ್ತಿರುವ ಆರ್ಥಿಕ ಹಿಂಜರಿತದಿಂದ ಪಾರಾಗಲು ಶಸ್ತ್ರಾಸ್ತ್ರಗಳ ಮಾರಾಟ ಮಾಡುವುದು ಅಮೇರಿಕಾಕ್ಕೆ ಅನಿವಾರ್ಯ. ಯಾಕೆಂದರೆ , ಶಸ್ತ್ರಾಸ್ತ್ರ ಮತ್ತು ವಿಮಾನ ತಯಾರಿಕೆಯ ಹೊರತಾಗಿ ಬೇರೆಲ್ಲಾ ವಸ್ತುಗಳ ಉತ್ಪಾದನಾ ಚಟುವಟಿಕೆ ಲಾಭದಾಯಕವಲ್ಲದ ಕಾರಣ ಅಲ್ಲಿ ಸ್ಥಗಿತಗೊಂಡಿದೆ. ಉಪ್ಪಿನಿಂದ ಉಕ್ಕು ತಯಾರಿಕಾ ಕ್ಷೇತ್ರದವರೆಗೂ ತನ್ನ ಕಂಪನಿಯೇ ಹಿಡಿತ ಹೊಂದಿರಬೇಕೆಂಬ ಉದ್ದೇಶ ಕೇವಲ ಭಾರತ ಮೂಲದ ಕಂಪನಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದು ಜಗದ್ವ್ಯಾಪಿಯಾಗಿದೆ. ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕೆಂಬ ದಾಹಕ್ಕೆ ಬಲಿಯಾದವರಿಗೆ ಇತರರ ಕಷ್ಟ- ನಷ್ಟಗಳನ್ನು ಗಮನಿಸುವ ವ್ಯವಧಾನವೇ ಇರುವುದಿಲ್ಲ. ಆಡಳಿತ ನಡೆಸುವವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಚುನಾವಣಾ ನಿಧಿಯನ್ನು ನೀಡಿ, ತಮಗೆ ಬೇಕಾದಂತೆ ಕಾಯ್ದೆ ಕಾನೂನುಗಳನ್ನು ರೂಪಿಸಿಕೊಳ್ಳುತ್ತಾರೆ. ಸಂಪತ್ತು ಗಳಿಕೆಯ ವ್ಯಾಮೋಹ ಹೆಚ್ಚಿನ ಜನರಿಗೆ ಇರುತ್ತದಾದರೂ ಆ ದಾರಿಯ ಓಟದಲ್ಲಿ ಕೆಲವರು ಮಾತ್ರ ಇತರರನ್ನು ಹಿಂದಿಕ್ಕಿ ಮುಂದೆ ಬರುತ್ತಾರೆ. ಇದರ ಪರಿಣಾಮದಿಂದಾಗಿ ಜಗತ್ತಿನ ಅತಿ ಶ್ರೀಮಂತ ಶೇಕಡಾ ಒಂದರಷ್ಟು ಜನರು ಜಾಗತಿಕ ಸಂಪತ್ತಿನ ಅರ್ಧದಷ್ಟರ ಒಡೆತನ ಹೊಂದಿದ್ದಾರೆ. ಇದರ ಇನ್ನೊಂದು ಮುಖವೆಂದರೆ ಜಗತ್ತಿನ 10% ಜನರು ಸಂಪತ್ತಿನ 85% ರ ಒಡೆತನ ಹೊಂದಿದ್ದಾರೆ. ಅಂದರೆ ಜಗತ್ತಿನ 90% ಜನರ ಕೈಯಲ್ಲಿರುವುದು ಉಳಿದ 15% ಸಂಪತ್ತು ಮಾತ್ರ. ಸಂಪತ್ತಿನ ವಿತರಣೆಯಲ್ಲಿನ ಅಸಮಾನತೆಯಿಂದ ತೊಂದರೆ ಏನೆಂದು ಪ್ರಶ್ನೆ ಬರುವುದು ಸಹಜ. ವ್ಯಕ್ತಿಯ ಕೈಯಲ್ಲಿ ಸಂಗ್ರಹವಾಗುವ ಸಂಪತ್ತಿನ ಬಳಕೆಯ ರೀತಿ, ನೀತಿ ಹಾಗೂ ಉದ್ದೇಶಗಳು ಅದರ ಪ್ರಮಾಣದ ಮೇಲೆ ಅವಲಂಬಿತವಾಗುತ್ತದೆ. ಒಂದು ಸರಳ ಉದಾಹರಣೆಯಿಂದ ಈ ವಿದ್ಯಮಾನವನ್ನು ವಿವರಿಸಬಹುದು. ಒಬ್ಬ ವ್ಯಕ್ತಿಯ, ಕೈಯಲ್ಲಿರುವ ಬಂಡವಾಳವು ಸಾವಿರ ಅಥವಾ ಹತ್ತು ಸಾವಿರ ರೂಪಾಯಿಗಳಿದ್ದಾಗ, ತನ್ನ ಜೀವನ ನಿರ್ವಹಣೆಗಾಗಿ ಕಡಿಮೆ ಪ್ರತಿಫಲವಿರುವ ಉದ್ಯಮ ಅಥವಾ ವ್ಯವಹಾರವನ್ನು ಆ ವ್ಯಕ್ತಿ ಕೈಗೊಳ್ಳುತ್ತಾನೆ. ತೊಡಗಿಸಿದ ಬಂಡವಾಳದ ಮೇಲೆ 5 ಅಥವಾ 10 ಶೇಕಡಾ ಲಾಭ ಬಂದರೂ ಆತ ತೃಪ್ತಿ ಪಡುತ್ತಾನೆ. ಆದರೆ ಅದೇ ಬಂಡವಾಳದ ಪ್ರಮಾಣ ಏರುತ್ತಾ ಹೋಗಿ ಕೋಟಿಗಟ್ಟಲೇ ಆದಾಗ, ಸಣ್ಣ ಪ್ರಮಾಣದ ಲಾಭವುಳ್ಳ ವ್ಯವಹಾರದಲ್ಲಿ ಅಂತಹ ಆಸಕ್ತಿ ಇರುವುದಿಲ್ಲ. ಬದಲಿಗೆ ಅತಿ ಹೆಚ್ಚು ಲಾಭ ಬರುವ ಉದ್ಯೋಗದ ಆಯ್ಕೆಯನ್ನು ಮಾಡುತ್ತಾನೆ. ಈ ಪ್ರವೃತ್ತಿಯಿಂದಾಗಿ ಸಂಪನ್ಮೂಲಗಳನ್ನು ಲಾಭ ಗಳಿಕೆ ಹೆಚ್ಚಿರುವ ಉದ್ಧೇಶಕ್ಕೆ ಬಳಸಲಾಗುತ್ತದೆ. ಅಂದರೆ ಸಂಪನ್ಮೂಲಗಳ ದುರುಪಯೋಗವಾಗುತ್ತದೆ. ಜನರಿಗೆ ಅಗತ್ಯವಾದ ಉದ್ಧೇಶದ ಬಳಕೆ ಹಿನ್ನೆಲೆಗೆ ಸರಿಯುತ್ತದೆ. ಉದಾಹರಣೆಗಾಗಿ ಸೀಮಿತವಾಗಿರುವ ಸಿಹಿನೀರು ಕುಡಿಯಲು ಅಥವಾ ಕೃಷಿಗೆ ಬಳಕೆಯಾಗುವ ಬದಲಿಗೆ ತಂಪು ಪಾನೀಯ ಅಥವಾ ಹೆಂಡದ ಉತ್ಪಾದನೆಗೆ ಬಳಸಲ್ಪಡುತ್ತದೆ. ಉತ್ಪಾದಿತ ವಸ್ತುವಿಗೆ ಬೇಡಿಕೆ ಸೃಷ್ಟಿಸುವ ಸಲುವಾಗಿ ಅಪಾಯಕಾರಿ ವಿಧಾನಗಳನ್ನು ಹುಟ್ಟು ಹಾಕಲಾಗುತ್ತದೆ. ಸಾಮಾನ್ಯವಾಗಿ ಊಹಾ- ಪೋಹದ ದಂದೆಯಲ್ಲಿಯೇ ಅತಿ ಹೆಚ್ಚು ಲಾಭ ಗಳಿಕೆಯಾಗುತ್ತದೆ. ಅದರಿಂದಾಗಿ ಕೂಡಿಟ್ಟ ಸಂಪತ್ತನ್ನು ಶೇರು ಮಾರುಕಟ್ಟೆಯಲ್ಲಿ ಅಥವಾ ಅಕ್ರಮ ದಾಸ್ತಾನು ದಂಧೆಯಲ್ಲಿ ತೊಡಗಿಸುತ್ತಾರೆ. ಇಂತಹ ಅವಕಾಶಗಳು ದೊರೆಯದಿದ್ದಾಗ ಸಂಪತ್ತನ್ನು ಬಳಸದೇ ಹಾಗೆಯೇ ಕೂಡಿಡಲಾಗುತ್ತದೆ. ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಕ್ರೋಢೀಕೃತಗೊಂಡಾಗ ಹಲವರ ಕೈಯಲ್ಲಿ ಹಣ ಚಲಾವಣೆಯಾಗುವದಕ್ಕೆ ತಡೆ ಉಂಟಾಗುತ್ತದೆ ಮತ್ತು ಅವರ ಖರೀದಿ ಶಕ್ತಿ ಕುಂಠಿತವಾಗುತ್ತದೆ. ಹೊಸದಾಗಿ ಸೃಷ್ಟಿಯಾಗುವ ಸಂಪತ್ತು ಉಳ್ಳವರ ಕೈಗೇ ಪುನಃ ಸೇರುತ್ತದೆ ಹಾಗೂ ವ್ಯಕ್ತಿಗತ ಆದಾಯದಲ್ಲಿ ಕೂಡಾ ಅಸಮಾನತೆ ಉಂಟಾಗುತ್ತದೆ. ದೊಡ್ಡ ಕಂಪನಿಗಳು ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸುವುದರಿಂದಾಗಿ, ಸಣ್ಣ ಪುಟ್ಟ ಉದ್ಯಮಗಳು ಸ್ಪರ್ಧಿಸಲಾಗದೇ ಸೋಲುತ್ತವೆ. ಪ್ರತಿ ಸ್ಪರ್ಧಿಗಳನ್ನು ಮಣಿಸುವುದಕ್ಕಾಗಿ ಬೆಲೆ ಇಳಿಕೆಯ ಸಮರವನ್ನೇ ಸಾರುವ ಉಳ್ಳವರು, ಎದುರಾಳಿ ಸೋತ ನಂತರ ಬೆಲೆ ಏರಿಸಿ ಲಾಭ ದೋಚುತ್ತಾರೆ. ಭಾರತದ ಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಘಟನೆಗಳು ಇದಕ್ಕೆ ತಾಜಾ ಸಾಕ್ಷಿ. ಸಂಪತ್ತು ಸೃಷ್ಟಿಸುವವರು ಹಾಗೂ ಉಳ್ಳವರು ತೆರಿಗೆ ಪಾವತಿಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆಂದು ಹೇಳುವುದು ಬರೀ ಮಿಥ್ಯೆ. ಅಂತಹ ಉದ್ಯಮ ದೈತ್ಯರು ಪಡೆಯುವ ತೆರಿಗೆ ವಿನಾಯಿತಿಗಳು ಹಾಗೂ ಸರ್ಕಾರ ನೀಡುವ ಮೂಲ ಸೌಕರ್ಯಗಳು ಅವರು ನೀಡುವ ತೆರಿಗೆಯ ಎಷ್ಟೋ ಪಟ್ಟು ಹೆಚ್ಚಿಗೆ ಇರುತ್ತದೆ. ದೇಶದ ಸಂಪತ್ತು ಸೀಮಿತ ವ್ಯಕ್ತಿಗಳ ಕೈಯಲ್ಲಿ ಶೇಖರವಾಗುವುದರ ಪರಿಣಾಮ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಆಗುತ್ತಿರುವುದನ್ನು ನಮ್ಮ ದೇಶದಲ್ಲಿ ಕಾಣುತ್ತಿದ್ದೇವೆ. ಸಂಪತ್ತು ಸೃಷ್ಟಿಸುವವರು ಹಾಗೂ ಹೂಡಿಕೆದಾರರೇ ದೇಶೋದ್ಧಾರಕರು ಎಂಬ ಭ್ರಮೆಯಿಂದಾಗಿ ಬ್ಯಾಂಕ್‍ಗಳು ಅವರಿಗೆ ಮಿತಿಮೀರಿ ಸಾಲ ನೀಡುತ್ತವೆ. ಹೊಟ್ಟೆ,ಬಟ್ಟೆ ಕಟ್ಟಿ ಜನಸಾಮಾನ್ಯರು ಉಳಿಸಿದ ಹಣವನ್ನು ಸಾಲ ರೂಪದಲ್ಲಿ ಪಡೆದು ಶ್ರೀಮಂತ ಉದ್ಯಮಿಗಳು ತಮ್ಮ ವೈಯಕ್ತಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ. ಅವರು ಪಡೆದ ಸಾಲಗಳು ರೈಟ್ ಆಪ್ ಹೆಸರಿನಲ್ಲಿ ಮನ್ನಾ ಆಗುತ್ತವೆ. ಅಂತಹ ಬ್ಯಾಂಕ್‍ಗಳ ರಕ್ಷಣೆಗೆ ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಗಳಿಸಿದ ಲಾಭವನ್ನು ಬಳಸಲಾಗುತ್ತದೆ ಯಸ್ ಬ್ಯಾಂಕ್ ಹಗರಣ ಇತ್ತೀಚಿನ ಉದಾಹರಣೆ. ಬೇರೆ ಬ್ಯಾಂಕ್‍ಗಳಲ್ಲಿ ಸುಸ್ತಿದಾರರಾಗಿ ಪಡೆದ ಸಾಲವನ್ನು ಹಿಂದಿರುಗಿಸಿರದ ಹತ್ತು ಕಂಪನಿಗಳಿಗೆ ನೀಡಿದ ಮೂವತ್ತಾರು ಸಾವಿರ ಕೋಟಿ ರೂಪಾಯಿ ಸಾಲ ವಸೂಲಿಯಾಗದೇ ಯಸ್ ಬ್ಯಾಂಕ್ ಅಪಾಯಕ್ಕೆ ಸಿಲುಕಿದ್ದರಿಂದ , ಅದರ ರಕ್ಷಣೆಗಾಗಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್‍ನ್ನು ಮುಂದೆ ಮಾಡಿರುವುದನ್ನು ಕಾಣುತ್ತಿದ್ದೇನೆ. ಬ್ಯಾಂಕ್‍ನಿಂದ ಚಿಕ್ಕ ಮೊತ್ತದ ಸಾಲ ಪಡೆಯಲು ಸಾಮಾನ್ಯ ವ್ಯಕ್ತಿ ನೀಡಬೇಕಾದ ಭದ್ರತೆಯನ್ನು ಸಾವಿರಾರು ಕೋಟಿ ರೂಪಾಯಿ ಸಾಲ ಪಡೆಯುವ ವ್ಯಕ್ತಿ ನೀಡಬೇಕಾಗಿಲ್ಲ; ಅವನಿಂದ ಪಡೆಯುವುದೂ ಇಲ್ಲ. ಸಾವಿರ ರೂಪಾಯಿಗಳಲ್ಲಿ ಸಾಲ ಪಡೆಯುವಾಗ ಇತರ ಬ್ಯಾಂಕ್‍ಗಳಿಂದ ಬೇಬಾಕಿ ಪತ್ರ ತರುವುದು ಕಡ್ಡಾಯ. ಆದರೆ ಸಾವಿರಾರು ಕೋಟಿ ರೂಪಾಯಿ ಸಾಲಕ್ಕೆ ಇದು ಅನ್ವಯಿಸುವುದಿಲ್ಲ. ಯಸ್ ಬ್ಯಾಂಕ್‍ನ ಪ್ರಮುಖ ಸುಸ್ತಿದಾರ ಸಾಲಗಾರರಾದ ಅಂಬಾನಿ, ಐಎಲ್‍ಎಫ್‍ಎಸ್ ಮುಂತಾದವರು ಇತÀರ ಬ್ಯಾಂಕ್‍ಗಳಲ್ಲಿ ಈಗಾಗಲೇ ಸುಸ್ತಿದಾರರಾಗಿದ್ದುದು ಬಹಿರಂಗವಾಗಿದ್ದರೂ ಅವರಿಗೆ ಹೊಸ ಸಾಲ ಸಿಗುತ್ತದೆ. ಸಂಪತ್ತಿನ ಕೇಂದ್ರೀಕರಣವನ್ನು ತಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಜಗತ್ತಿನ ಹಲವು ರಾಷ್ಟ್ರಗಳು ಕೈಗೊಳ್ಳಲಿಲ್ಲ. ಭಾರತದ ಅತಿ ಶ್ರೀಮಂತರಾದ 1% ಜನರು ಅಂದರೆ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನರ ಕೈಯಲ್ಲಿ 70% ಜನರ ಅಂದರೆ 90 ಕೋಟಿ ಜನರ ಕೈಯಲ್ಲಿರುವ ಸಂಪತ್ತಿನ ನಾಲ್ಕು ಪಟ್ಟು ಸಂಪತ್ತು ಶೇಖರವಾಗಿದೆ. ಈ ಪ್ರಮಾಣ ಏರುತ್ತಲೇ ಇದೆ. ಭಾರತದ ಮುಕ್ಕಾಲು ಪಾಲು ಸಂಪತ್ತು ಕೇವಲ ಹದಿಮೂರು ಕೋಟಿ ಜನರ ಕೈಯಲ್ಲಿಯೇ ಇದೆ. ಅತಿ ಶ್ರೀಮಂತ 63 ಭಾರತೀಯರ ಸಂಪತ್ತು ಸುಮಾರು 80 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ. ಜಗತ್ತಿನ 26 ಅತಿ ಶ್ರೀಮಂತರ ಸಂಪತ್ತು ಜಗತ್ತಿನ ಅರ್ಧದಷ್ಟು ಜನರ ಅಂದರೆ ಸುಮಾರು 380 ಕೋಟಿ ಜನರ ಸಂಪತ್ತಿಗೆ ಸಮವಾಗಿದೆ. ಸಂಪತ್ತು ವಿತರಣೆಯ ಪ್ರಮಾಣ ಈಗಾಗಲೇ ಅಪಾಯಕಾರಿ ಹಂತ ತಲ್ಪಿದ್ದು,, ಅದರ ಪರಿಣಾಮದಿಂದಾಗಿ ಆರ್ಥಿಕ ಹಿಂಜರಿತ, ಸಾಮಾಜಿಕ ಸಂಘರ್ಷ, ಅಶಾಂತಿ ಕಟ್ಟಿಟ್ಟ ಬುತ್ತಿ ಎಂಬುದು ಅರ್ಥಶಾಸ್ತ್ರಜ್ಞರ ಅಭಿಮತ. ಸಂಪತ್ತು ಗಳಿಕೆಯ ವ್ಯಾಮೋಹ ಇಡೀ ಸಮಾಜವನ್ನು ಸಾಂಸರ್ಗಿಕ ರೋಗದ ರೀತಿಯಲ್ಲಿ ಆವರಿಸುತ್ತಿದೆ. ಈ

ಪ್ರಸ್ತುತ Read Post »

You cannot copy content of this page

Scroll to Top