ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮಾಂತ್ರಿಕಳೆಂದು.. ವಿಜಯಶ್ರೀ ಹಾಲಾಡಿ ಮೊದಮೊದಲ ಮಳೆಹನಿಗೆಅವಳು ಕರಗಲಿಲ್ಲಹನಿಯೇ ಕರಗಿತುಮಳೆಧಾರೆಯೇನು …ಕಡಲನ್ನೇ ನುಂಗಿನೊಣೆಯುವ ತಾಕತ್ತಿನವಳು ! ಬೇಡವೆಂದು ದೂಡಿದ್ದಾಳೆಅರಸಿ ಬಂದದ್ದೆಲ್ಲವನ್ನುಕೊನೆಗೆ ಜಗವೆಂಬ ಜಗವನ್ನೂ ..ಕಾವ್ಯವನ್ನು ಮಾತ್ರಹುಡುಕಿ ಹೋಗಿದ್ದಾಳೆಹುಡುಕುತ್ತಲೇ ತಿರುಗಿದ್ದಾಳೆ ಅಲೆಮಾರಿಗೇನು ..ನಿರಾಳ ಬೀದಿಗಳೇಆಲಯಗಳೇತೊರೆಯೇ ಹಳ್ಳಗಳೇ …ಕಡಿದು ಪರ್ವತದಿಣ್ಣೆ ಕೊರಕಲುಗಳನಡುವೆ ಯಾತ್ರೆ ಹೊರಟುಬೇಡವೆಂದು ಕೈಬಿಟ್ಟುಸಂತೆಮಾಳದಲ್ಲಿಸಂಜೆ ಮಾಡಿಕೊಂಡುಇರುಳು ಚಂದ್ರನ ಕೆಳಗೆಕವಿತೆ ಬರೆಯುತ್ತಿದ್ದಳಂತೆಬೆಳಗಿನವರೆಗೂಲಾಂದ್ರ ಹಚ್ಚಿಟ್ಟುಗುಡಾರದಲ್ಲಿ ಗುಡಿ-ಗುಡಿಯ ಸೇದುತ್ತಕೂದಲು ಬಿರಿಹೊಯ್ದುಕನಸು ಚೆಲ್ಲಿತೆಂದುಆಯ್ದು ಕೂತಿದ್ದಳಂತೆ ಊರ ಜನ ಮಾಂತ್ರಿಕ-ಳೆಂದು ಅಡ್ಡಬೀಳಲುಅಂಗಲಾಚಲು ಶುರು-ವಿಟ್ಟುಕೊಂಡಾಗಓ ಅದೇ ಬೆಟ್ಟದಕೆಳಗೆ ನದಿಯ ಗುಂಟನಡೆದುಹೋದಳಂತೆಮತ್ತಿನ್ಯಾರೂಕಾಣಲಿಲ್ಲವಂತೆ ! ****** ಚಿತ್ರಕೃಪೆ:ವಿಜಯಶ್ರೀ ಹಾಲಾಡಿ

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮೂಲ:ವೇನ್ ಕೌಮೌಲಿ ವೆಸ್ಟ್ ಲೇಕ್(ಹವಾಯಿ ಕವಿ) ಕನ್ನಡಕ್ಕೆ: ಕಮಲಾಕರ ಕಡವೆ ಸಿರಿವಂತ ಮಹಿಳೆ ಬಸ್ಸಿನ ಮೇಲೆಮಾತು ಮಾತು ಮಾತುಕೊನೆಯೇ ಇಲ್ಲ ನಾನೊಂದು ಕಮ್ಯುನಿಸ್ಟ ಸಿಗರೆಟ್ಟು ಹಚ್ಚಿಭಯಾನಕ ಹೊಗೆ ಉಗುಳಿದೆಹಾ ! ನೀರು ಕುಡಿಯಿತು ಒಂದು ಆಕಳುಹಾಲಾಗಿ ಮರುನೀಡಿನೀರು ಕುಡಿಯಿತು ಒಂದು ಹಾವುಹಾಲಾಹಲವ ಮರುನೀಡಿ ಬಿಳಿ ಚಿಟ್ಟೆ ಅಟ್ಟಿ ಓಡುವಬೆಕ್ಕಿಗೆ ಲೆಕ್ಕಕ್ಕಿಲ್ಲಕಾಲಡಿಗಾದ ಹೂಗಳು ಮುಂಜಾನೆ ಮೌನ ಹಿತ ಕೊಡುತ್ತಿತ್ತುಅಷ್ಟರಲ್ಲಿ ಹೊರಗಡೆ ಯಾರೋಕಿರುಚತೊಡಗಿದರುದೇವರೇ ! ದೇವರೇ ! ದೇವರೇ ! ಎಷ್ಟು ವಿಭಿನ್ನ ವಿಚಾರಗಳುನನಗೆ ಮತ್ತು ಬೆಕ್ಕಿಗೆಹಕ್ಕಿಮರಿಯೊಂದ ನೋಡುತ್ತ ಅರಳಿದ್ದ ಗುಲಾಬಿ ನೋಡುತ್ತ ನೋಡುತ್ತನಾನು ಕಾಲಿಟ್ಟೆಸಗಣಿಯ ಮೇಲೆ ಶಾಲೆಯಲ್ಲಿ ಎರಡನೆಯ ದಿನನಾನು ಅಂದು ಕೊಳ್ಳುತ್ತೇನೆ –ಪುಸ್ತಕಗಳನ್ನಲ್ಲಮೋಡಗಳನ್ನು ನೋಡ ಬಯಸುತ್ತೇನೆ ಈ ಅಕ್ಷರ, ಈ ಅಂಕಿ, ನೂರು ನೂರು !!ಆಹಹ, ಎಂಥ ನೆಮ್ಮದಿಒಂದು ಮರವ ನೋಡುವುದು ನನ್ನ ಕವನಗಳು ಅರ್ಥಹೀನವೆಂದುಹೀಯಾಳಿಸಿದರು ಅವರುನಾನು ನಕ್ಕೆನಷ್ಟೆ,ಎಲ್ಲರಿಗೂ ಗೋಚರಿಸುವುದಿಲ್ಲಬಣ್ಣಗಳ ನಡುವೆ ರಕ್ತದ ಗೆರೆಗಳು ಚಳಿ ಕೊರೆಯುವ ಈ ಗುಡ್ಡದನೆತ್ತಿಯಲ್ಲಿಪುಟ್ಟ ಹಕ್ಕಿಯೇ ಏನು ಮಾಡುತ್ತಿರುವೆ ಏಕಾಕಿ ಕವಿಯಾದವ ಕವನ ಖರೀದಿಸಲಾರಹಾಗೆ ಖರೀದಿಸಿದರೆ ಕವಿಯಾದಾನು ಹೇಗೆ? *******

ಅನುವಾದ ಸಂಗಾತಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..! ಕೆ.ಶಿವುಲಕ್ಕಣ್ಣವರ ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..! ನಾನು ಬೈಲೂರ ಬಸವಲಿಂಗಯ್ಯ ಹಿರೇಮಠ ಅವರ ಪುಸ್ತಕವಾದ ‘ನೂರು ಜಾನಪದ ಹಾಡುಗಳು’ ಬಗೆಗೆ ವಿಮರ್ಶಾತ್ಮಕ ಲೇಖನವನ್ನು ಬರೆದೆನು. ಆಗ ಸಾಕಷ್ಟು ಪ್ರಶಂಸೆಗಳು ಬಂದವು. ಅಲ್ಲದೇ ಸಾಕಷ್ಟು ಜನರು ಅವರ ಆ ಪುಸ್ತಕವನ್ನು ಕೇಳಿದರು. ನಾನು ಅವರ ಅಂದರೆ ಬೈಲೂರ ಬಸವಲಿಂಗಯ್ಯ ಹಿರೇಮಠರ ಫೋನ್ ನಂಬರ್ ಕೊಟ್ಟು ಸುಮ್ಮನಾದೆನು. ಅದರೆ ಬಹಳಷ್ಟು ಜನರು ಬೈಲೂರ ಬಸವಲಿಂಗಯ್ಯ ಹಿರೇಮಠರ ವೈಯಕ್ತಿಕ ಮಾಹಿತಿಯನ್ನು ಕೇಳಿದರು. ನಾನು ಸಾಧ್ಯವಾದಷ್ಟು ಮತ್ತು ನನಗೆ ಗೊತ್ತಿದ್ದಷ್ಟು ಮಾಹಿತಿಯನ್ನೂ ಫೋನ್ ನಲ್ಲಿಯೇ ಹೇಳಿದೆನು. ಕೆಲವರಂತೂ ಅವರ ಕುರಿತಾಗಿ ಒಂದು ವೈಯಕ್ತಿಕ ಬದುಕಿನ ಬಗೆಗೆ ಅಂದರೆ ಅವರ ‘ಜಾನಪದ ಬದುಕಿನ ಮಜಲ’ನ್ನೇ ಒಂದು ಲೇಖನ ಮಾಡಿರೆಂದರು. ಹಾಗಾಗಿ ಆ ಅವರ ವೈಯಕ್ತಿಕ ಬದುಕಿನ ಬಗೆಗೆ ಕೇಳಿದರಿಗಾಗಿ ಏಕೆ ಒಂದು ಲೇಖನ ಬರೆಯಬಾರದೆಂದು ಈ‌ ಬೈಲೂರ ಬಸವಲಿಂಗಯ್ಯ ಹಿರೇಮಠ ಜಾನಪದ ಬದುಕಿನ ಬಗೆಗೆ ಬರೆಯಬೇಕಾಯಿತು… ಅದು ಹೀಗಿದೆ– ಬೈಲೂರ ಬಸವಲಿಂಗಯ್ಯ ಹಿರೇಮಠರು ಅತ್ಯಂತ ಗ್ರಾಮೀಣ ಸೊಗಡಿನ ಜಾನಪದ ಪ್ರತಿಭೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬೈಲೂರಿನವರು ಇವರು… ಇವರು ಚಿಕ್ಕಂದಿನಿಂದಲೇ ಜಾನಪದ ಸಂಗೀತ ಹಾಗೂ ಬಯಲಾಟಗಳೊಂದಿಗೆ ಹಾಡುತ್ತ, ಆಡುತ್ತ ಬೆಳೆದವರು. ಮುಂದೆ ಇವರು ಜಾನಪದದಲ್ಲಿ ಎಂ.ಎ.ಪದವಿ ಪಡೆವರು. ೧೯೮೩ರಲ್ಲಯೇ ನೀನಾಸಂ ‘ಜನ ಸ್ಪಂದನ’ ಶಿಬಿರದ ಮೂಲಕ ಹವ್ಯಾಸಿ ರಂಗಭೂಮಿಗೆ ಕಾಲಿಟ್ಟವರು. ಇವರು ತಿರುಗಾಟದಲ್ಲಿ ನಟರಾಗಿ, ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಕೆಲ ಮಾಡಿದವರು. ಬಿ.ವಿ.ಕಾರಂತರೊಂದಿಗೆ ‘ರಂಗ ಸಂಗೀತ’ ಕುರಿತಂತೆ ಅಭ್ಯಾಸ ಮಾಡಿದವರು… ಧಾರವಾಡದಲ್ಲೊಂದು ‘ಜಾನಪದ ಸಂಶೋಧನಾ ಕೇಂದ್ರ’ವನ್ನು ಹುಟ್ಟು ಹಾಕಿ ತನ್ಮೂಲಕ ದಂಪತಿಗಳ ಇಬ್ಬರೂ ೩೦ ವರ್ಷಗಳಿಂದ ಜಾನಪದ ರಂಗಭೂಮಿ, ಗ್ರಾಮೀಣ ವೃತ್ತಿ ರಂಗಭೂಮಿ, ಹಾಗೂ ಆದುನಿಕ ರಂಗಭೂಮಿಯಲ್ಲೂ ತಮ್ಮನ್ನು ತಾವು ತೊಡಗಿಕೊಂಡವರು. ಇವರ ರಚನೆಯ ಪರಿಷ್ಕೃತ ರಂಗರೂಪ ‘ಶ್ರೀ ಕೃಷ್ಣ ಪಾರಿಜಾತ’ ಸಾವಿರ ಪ್ರಯೋಗದತ್ತ ದಾಪುಗಾಲು ಹಾಕುತ್ತಿದೆ… ಇವರು ನಟರಾಗಿ, ಹಾಡುಗಾರರಾಗಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಸುಮಾರು ನೂರಕ್ಕೂ ಹೆಚ್ಚು ನಾಟಕಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಿ.ವಿ.ಕಾರಂತರ ಆಸೆಯದಂತೆ ‘ರಂಗ ಸಂಗೀತ’ ಎನ್ನುವುದು ಭಾಷೆಯಾಗಬೇಕು ಎಂಬುದನ್ನು ಮನಗಂಡು ಇವರು ಆ ತೆರದಲ್ಲಿ ಸಂಗೀತ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ. ಜಾನಪದ ಬಯಲಾಟಗಳು, ಹಾಡುಗಳು ಅದರ ವಾದ್ಯಗಳ ಅಬ್ಬರದಲ್ಲಿ ಸ್ಪಷ್ಟತೆ ಕಳೆದುಕೊಂಡ ಈ ಸಂದರ್ಭದಲ್ಲಿ ಅಲ್ಲಿಯ ಮಟ್ಟಗಳ ಕುರಿತು ಅಧ್ಯಯನ ಮಾಡಿ ಪುಸ್ತಕಗಳನ್ನು ಹೊರತಂದಿದ್ದಾರೆ ಬೈಲೂರು ಬಸವಲಿಂಗಯ್ಯ ಹಿರೇಮಠ ಅವರು. ಹಿಂದೂಸ್ತಾನಿ ಸಂಗೀತದಲ್ಲೂ ಪದವಿ ಪಡೆದ ಇವರು ರಂಗ ಸಂಗೀತ, ದಾಸವಾಣಿ, ಶರಣವಾಣಿ, ತತ್ವಪದ ಹಾಗೂ ಬಯಲಾಟ ಪದಗಳ‌ ಕುರಿತಂತೆ ಕರ್ನಾಟಕವಲ್ಲದೇ ಹೊರ ರಾಜ್ಯ ಹಾಗೂ ಹೊರದೇಶಗಳಾದ ಅಮೆರಿಕಾ, ‌ಲಂಡನ್, ಬೆಹರಿನ್, ಸಿಂಗಪುರ ಮುಂತಾದೆಡೆ ಕಾರ್ಯಕ್ರಮ ನಡೆಸಿದ್ದಾರೆ. ನೂರಾರು ರಂಗಪದಗಳು ಒಳಗೊಂಡಂತೆ ೨೦ ಕ್ಕೂ ಹೆಚ್ಚು ಧ್ವನಿ ಸುರುಳಿಗಳನ್ನು ಹೊರ ತಂದಿದ್ದಾರೆ. ಈಗ ಮೂಲ ಪತ್ತಾರ ಮಾಸ್ತರರ ಪದ್ಯರೂಪದ‌ ‘ಸಂಗ್ಯಾ ಬಾಳ್ಯಾ’ನಿಗೊಂದು ‘ರಂಗ ರೂಪ’ ನೀಡಿ ಸಂಗೀತದ ಹೊಸ ಸಾಧ್ಯತೆಗಳತ್ತ ನೋಟಬೀರಿದ್ದಾರೆ. ಇವರ ಈ ಜಾನಪದ ಹೊಸ ಸಾಧ್ಯತೆಗಾಗಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ‌ ಶರೀಫ ಹಾಗೂ ಜಾನಪದ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ… ಇವಿಷ್ಟು ಬೈಲೂರ ಬಸವಲಿಂಗಯ್ಯ ಹಿರೇಮಠ ಅವರ ಬಗೆಗೆ ಹೇಳಿ ಮಾತು ಮುಗಿಸುತ್ತೇನೆ..!

ಸ್ವಾತ್ಮಗತ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ ಮೂಗಪ್ಪ ಗಾಳೇರ ನೀನು ಬಿಟ್ಟು ಹೋದ ಮೇಲೆ ಬಿಕ್ಕಿಬಿಕ್ಕಿ ಅಳಬೇಕೆನಿಸಿದಾಗ…….. ನಾನು ಅಳದೆ ಮುಗುಳುನಕ್ಕು ಸುಮ್ಮನಾಗಿ ಬಿಡುತ್ತಿದ್ದೆ; ಯಾಕೆ ಗೊತ್ತಾ ……? ನೀನು ಬಿಟ್ಟು ಹೋದ ನೆನಪುಗಳು ನನ್ನ ಹೃದಯದ ಅಂಗಳದಲ್ಲಿ ಅರಳಿದ ಹೂಗಳಾಗಿಯೇ ಉಳಿದಿವೆ ಹಾಗಾಗಿ ನಾನು ಅತ್ತರೆ…… ಆ ಕಣ್ಣೀರಿನ ಬಿಸಿ ತಾಕಿದಡೆ ಹೂವುಗಳು ಬಾಡಬಹುದೆಂಬ ಭಯ ವಷ್ಟೇ ನನ್ನ ನಸುನಗೆ ಕಾರಣ…….! ನೀನು ಹೋದ ಮೇಲೆ ಒಂಟಿ ಜೀವನ ಗತಿಯೆಂದು ಖಾಲಿಯಾದ ಬಾಟಲಿ ಹಿಡಿದು ಯಾರು ಇಲ್ಲದ ಬೀದಿಯಲ್ಲಿ ಸುತ್ತುತ್ತೇನೆ ಎಂದುಕೊಂಡಿದ್ದೆ……! ಊ.. ಊಂ… ಹಾಗಾಗಲಿಲ್ಲ ಇಲ್ಲಿ ಒಂಟಿಯಾಗಿ ನೀಲಿ ನಭದಲ್ಲಿ ತೇಲುತ್ತಿದ್ದ ಚಂದಿರ ನನ್ನ ಜೊತೆಯಾದ ಆಗೊಮ್ಮೆ-ಈಗೊಮ್ಮೆ ಪಳಪಳನೆ ಹೊಳೆದು ಮರೆಯಾಗುವ ನಕ್ಷತ್ರಗಳು ನಿನ್ನ ನೆನಪುಗಳು ಬಂದಾಗಲೆಲ್ಲ ಮೋಹಿಸಿ ಮರೆಯಾಗುವ ಔಷಧಿಯಾಗಿ ಬಿಟ್ಟಿವೆ………! ಜೊತೆಯಲ್ಲಿ ಇಟ್ಟ ನಮ್ಮಿಬ್ಬರ ಹೆಜ್ಜೆಗಳು ನನ್ನ ಹೃದಯದ ಕೋಣೆಯನ್ನು ಚಿದ್ರ ಚಿದ್ರ ಮಾಡಬಹುದೆಂದು ಕೊಂಡಿದ್ದೆ ಅದು ಸಾಧ್ಯವಾಗಲಿಲ್ಲ ಯಾಕೆಂದರೆ……? ಆ ಹೆಜ್ಜೆಗಳ ಹುಡುಕಾಟದಲ್ಲಿದ್ದ ನಾನು ಕಡಲ ದಂಡೆಯ ಮರಳಿನ ಮೇಲೆ ಬರೆದ ಕವಿತೆಯ ಸಾಲುಗಳು ನಿನ್ನ ಹೆಜ್ಜೆಗಳ ಸಾಲ ಮರುಪಾವತಿಸುತಿವೆ…… ಇನ್ನೆಲ್ಲಿ ಹೆಜ್ಜೆಗಳ ಚಿದ್ರ ಚಿದ್ರ ನಾದ….‌‌.. ನೀನು ಅಂದುಕೊಂಡಂತೆ ಇಲ್ಲಿ ಯಾವ ಬದಲಾವಣೆಗಳು ಆಗಿಲ್ಲ ಆಗಿರುವುದು ಒಂದೇ ಅದು ನನ್ನ ಕವಿತೆಯ ಸಾಲು ಪ್ರೀತಿಯ ಸಾಲಗಾರನಾಗಿ ಬಿಟ್ಟಿದೆ……….! ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೀವರಾಮ ಅಶ್ವಥ್ ವಾರಕ್ಕೆ ಮೂರುದಿನ ಮಡಿಯಾಗಿ , ಮಂಡಿನೋವು ತೀರಲೆಂದು ಕೋರಿಕೊಂಡಳು ಮಂಡಿಯೂರಿ ಪರಿಪರಿ ಬೇಡಿಕೊಂಡಳು ಕಡೆಗೆ ಅಮ್ಮ ತೀರಿಕೊಂಡಳು! ಬೇಡುವ ಆರ್ತನಾದ ಕೇಳಿ ನಿಂತ ಹುಡುಗ, ಬಿಕ್ಕಳಿಸೆ ಅಮ್ಮನ ತಪಸ್ಸಿಗೆ ಭಂಗವೆಂದು ಬಿಸಿಯುಸಿರು ಬಾಯೊಳಗೇ ಬಿಗಿಹಿಡಿದಿದ್ದು ದೂರದೂರಲಿ ಬಿಕ್ಕಳಿಸಿದ, ಅವಳಿಲ್ಲವೆಂದು. ಫಲಿಸಿಬಿಟ್ಟಿತೇ ಅಮ್ಮನ ಸುದೀರ್ಘ ಪ್ರಾರ್ಥನೆ? ಅಮ್ಮನೂ ಇಲ್ಲದ ಮೇಲೆ ಮಂಡಿನೋವೂ ಇಲ್ಲ. ಹಾಗೆಂದುಕೊಂಡು ಹುಡುಗ ಸುಮ್ಮನಾಗಲಿಲ್ಲ ನೋವು ತೀರಿಸುವ ಯೋಚನೆಯ ಬಿಡಲಿಲ್ಲ ಹುಡುಗನ ಇನ್ನಿಲ್ಲದೆ ಬಾಧಿಸಿ ಅಮ್ಮನ ನೋವು, ಅವಳ ಪ್ರಾರ್ಥನೆಯ ನೆನಪೆಲ್ಲವ ಬಿಗಿಹಿಡಿದ ಆಳ ಅಧ್ಯಯನ ಮಾಡಿಕೊಂಡು ತಜ್ಞನಾದ ನೋವು ನಿವಾರಿಸುವ ನಾರಾಯಣ ತಾನಾದ! ಪ್ರಾರ್ಥನೆಯ ಹರಿವಿನ ಬಗ್ಗೆ ಅವನಿಗೆ ಕುತೂಹಲ, ಕೋರಿಕೆಯ ಕಂಠವ ಆಲಿಸುವ ಕಿವಿಗಳಿರಬೇಕೆಂದು ಬೇಡುವುದಕೆ ಬೆಲೆ ಮಾನವೀಯತೆ ಒಂದೇಯೆಂದು ಬಂಡೆಗೂ ಜೀವವೆರೆಯಲು ಜೀವರಾಮನೇ ಬೇಕೆಂದು. ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೂಖವೇದನೆ ಪ್ಯಾರಿಸುತ ಮತ್ತದೇ ಮಾತು ನನ್ನನ್ನು ಮೂಗನೆಂದೇನಿಸಿದೆ ನಿನ್ನ ಕಾಲಗೆಜ್ಜೆ ಮೌನ ತಾಳಿರುವಾಗ ಪಿಸುಮಾತಿನ ಧ್ವನಿಯು ನನ್ನೆದೆಯ ಇಣುಕದಿರುವಾಗ ಗಾಳಿಯೊಳಗೆ ಪ್ರೀತಿಗಂಧವಿಲ್ಲ ಮಾತಿನ ನಡುವೆ ಪ್ರೇಮ ಸೆಳೆತವಿಲ್ಲ ಕಣ್ಣೋಟದಲ್ಲಿ ಹರಿತಮೋಹವಿಲ್ಲ ಹೂವಿನ ಸುತ್ತ ಮಕರಂಧ ಹೀರುವ ದುಂಬಿಯಂತೆ ಅಲೆಯುತ್ತಿವನನ್ನು ಮತ್ತದೇ ಮಾತು ಮೂಗನಾಗಿಸಿದೆ ಅದೆಲ್ಲವೂ ಇಲ್ಲದ ಮೇಲೆ ಮೂಗನಾಗದೆ ಮಾತಿನಿಂದ ಹೇಗೆ ಸೆಳೆಯಲಿ ನೀ ಉಟ್ಟ ಸೀರೆ ಸೆರಗಿನ ಅಂಚಿನಲ್ಲಿದ್ದ ನನ್ನೆಲ್ಲ ಕನಸುಗಳ ಚಿತ್ತಾರಗಳು ಅವಿತುಕೊಂಡಿವೆ ಮುಸ್ಸಂಜೆಯಲಿ ಮಿಂಚುಹುಳುವಿನಂತೆ ಮಿಂಚುತಿದ್ದ ನಿನ್ನ ಚಲುವೆಲ್ಲ ಸಪ್ಪೆಯಾಗಿದೆ ಈ ಪುಟ್ಟ ಹೃದಯದೊಳಗಿದ್ದ ನಿನ್ನ ಮಧುರದನಿಯ ಹರ್ಷೋಘಾರವೂ ನನ್ನಂತೆ ನಿಶ್ಚಲವಾಗಿದೆ ಇಂದು ಅದೆಲ್ಲವೂ ಸಹಜ ದೂರದಿಂದ ಅಣಿಕಿಸುವಂತೆ ಮಾರ್ಪಟ್ಟಿವೆ ಅಥವಾ… ಮಾರ್ಪಡುವಂತೆ ನೀ ಪ್ರೇರಿಪಿಸಿದೆ…! **********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯ ಯಾನ

ಆದೇ ಅಪ್ಪನಂತೆ ಏಕೆ? ಜಿ.ಲೋಕೇಶ್ ನನ್ನಪ್ಪಂಥನಾಗಲು ನನಗಿಷ್ಟೂ ಇಷ್ಟವಿರಲಿಲ್ಲ ಮೌನವಾಗಿರಲು ಬಯಸುತ್ತಿದ್ದ ನನಗೆ ಹೇಳಿದ್ದೆ ಹೇಳುತ್ತಿದ್ದ ಅವನ ಮಾತುಗಳು ಸದಾ ಅವೇ ಅಕ್ಷತೆಯ ಮಂತ್ರಗಳು ಶಾಲೆಯಲ್ಲಿ ಮಗುವೊಂದು ಮರೆಯದೇ ಹೇಳುತ್ತಿದ್ದ ರಾಷ್ಟ್ರಗೀತೆಯಂತೆ ಗುಡಿಯ ಕಲ್ಲು ವಿಗ್ರಹ ಕಿವಿಯಿದ್ದರೂ ಕೇಳಿಸಿಕೊಳ್ಳದಂತೆ ನಾನು ನಿಲ್ಲುತ್ತಿದ್ದೆ ತಡೆದು ವಾಕರಿಕೆ, ಬೇಸರಿಕೆ. ಯಾವತ್ತೂ ಪ್ರತಿಕ್ರಯಿಸದೇ ನನ್ನೊಳಗೆ ಸತ್ತೇ ಹೋಗುತ್ತಿದ್ದ ಪ್ರತಿ ಹೇಳಿಕೆ ಇದ್ದಕ್ಕಿದ್ದಂತೆ ಒಂದು ದಿನ ನನ್ನಪ್ಪ ಮಾತುಗಳನ್ನು ಅನಾಥವಾಗಿಸಿ ಹೊರಟುಬಿಟ್ಟ! ಎಂಥಾ ಆಶ್ಚರ್ಯ! ನಾನೀಗ ಸಲುಹುತ್ತಿದ್ದೇನೆ ಅವನದೇ ಮಾತುಗಳನ್ನು ಯಥಾ ಪ್ರಕಾರ! ಅಪ್ಪನಂತಾಗಲು ಒಂದಿಷ್ಟು ಇಷ್ಟವಿಲ್ಲದವನಾಗಿ ಬದುಕಿದ ಮೇಲು ನನ್ನ ಮಕ್ಕಳಿಗೆ ಥೇಟ್ ಅಪ್ಪನಂತೆ ಆಗಿ! **********************************

ಕಾವ್ಯ ಯಾನ Read Post »

ಕಾವ್ಯಯಾನ

ಕಾವ್ಯಯಾನ

ಯಾರು ಯಾರಿಗೆ ರೇಖಾ.ವಿ.ಕಂಪ್ಲಿ ಹೂಳುವ ಭೂಮಿಯನು ಹಾಳು ಮಾಡಿತಾ ಮನೆ ಮಠ ಮಸೀದಿ ಮಂದಿರ ಮಹಾಲ್ಗಳನು ಕಟ್ಟಿದರು….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಜಾಗತೀಕರಣದ ಜಾಗಟೆ ಮೊಳಗಿಸಿ ಜಾಗೃತಿ ಹೆಸರಲಿ ಜನಜೀನವದ ರಸವೀರಿದರು…….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಬಿರುಸು ಮಾತುಗಳ ಹುರುಪು ಹಚ್ಚುತ್ತಾ ತಮ್ಮ ತಮ್ಮ ಬೆಳೆ ಬೆಯಿಸಿಕೊಂಡರು……. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ರಂಗುರಂಗಿನ ಮಾತಿನಲಿ ಸೆಳೆಯುತ ಚಪಲದ ಉಪಟಳವ ತೀರಿಸಿಕೊಂಡರು…….. ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. ಹಣದ ಆಸೆಗೆ ಹೆಣದ ಮೇಲೆಯೂ ಹೆಗ್ಗಿಲ್ಲದೆ ಅತ್ಯಾಚಾರ ಎಸಗಿದರು………… ಯಾರು ಅವರು ಯಾರು? ಯಾರಿಗೆ ಯಾರು ಅಲ್ಲದ ಮಾನವರು…….. **********

ಕಾವ್ಯಯಾನ Read Post »

You cannot copy content of this page

Scroll to Top