ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜರೂರು ಬಂದೊದಗಿದೆ

Modern Art Oil Paintings With Yellow, Red Color. Contemporary Art ...

ಗೌರಿ.ಚಂದ್ರಕೇಸರಿ

ದೇವ ಮಾನವರೆಲ್ಲ ಏನಾದರು?
ತಪದಲ್ಲಿರುವರಾ ಇಲ್ಲಾ
ಮೌನ ವ್ರತದಲ್ಲಿರುವರಾ?
ಇಲ್ಲಾ ನಿದ್ರೆಯಲ್ಲಿ ಕಳೆದು ಹೋದರಾ?
ಸೂರ್ಯ ಚಂದ್ರರುದಿಸುವುದು
ತಮ್ಮಿಂದ ಎಂದವರು
ಸ್ಪರ್ಷ ಮಾತ್ರದಿಂದಲೇ ಕಾಯಿಲೆಗಳ
ಮಾಯ ಮಾಡುವೆ ಎಂದವರು
ಅಂಗೈ ನೋಡಿ ತಾಳೆ ಹಾಕುವವರು
ಪೂಜೆಗೈದು ಪಾಪವ ತೊಳೆಯುವವರು ಏನಾದರು?
ಕೂಗು ಕೇಳುತ್ತಿಲ್ಲವೆ
ಹಾಹಾಕಾರ ಕಾಣುತ್ತಿಲ್ಲವೆ?
ಭೂ ಮಂಡಲವನ್ನೇ ಆವರಿಸಿದೆ ಅನಿಷ್ಠ ಎಲ್ಲೆಲ್ಲೂ
ಹಿಡಿ ಅನ್ನಕ್ಕಾಗಿ ಚಾಚಿವೆ ಕೈಗಳು
ಕುಣಿಕೆ ಹಿಡಿದು ಕಾದಿದೆ ಸಾವು
ಬನ್ನಿ ನಿಮ್ಮ ಜರೂರು ಈಗ ಬಂದೊದಗಿದೆ
ಹೊತ್ತಿರುವ ಬೆಂಕಿಗೆ ನಿಮ್ಮ ಪ್ರಭಾವಳಿಯ
ತಂಪನೆರೆಯಿರಿ
ವಿಶ್ವದ ವಿಷವನೆಲ್ಲ ಹೀರಿ ಬಿಡಲಿ
ನಿಮ್ಮ ಮಂತ್ರ ದಂಡ

******

About The Author

1 thought on “ಕಾವ್ಯಯಾನ”

  1. ಲಕ್ಷ್ಮೀ ನಾಡಗೌಡ

    ಢಾಂಬಿಕರು… ಈಗ ಹೊರಗೆ ಬರೋಕೂ ಹೆದರಿಕೆ ಅವರಿಗೆ … ಸಾಂದರ್ಭಿಕ ಕವನ… ಚೆನ್ನಾಗಿದೆ ಗೌರಿ

Leave a Reply

You cannot copy content of this page

Scroll to Top