ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

Image result for images of indian woman mangalyam

ಮಾಲತಿ ಹೆಗಡೆ

ಗಜಲ್

ಅವನ ಕಣ್ಣಲ್ಲಿ ‌ನನ್ನ ಬಿಂಬ ಕಂಡಾಗ ಮೂಡಿತ್ತು ಪ್ರೀತಿ
ಮನಸೆಳೆವ ಮಾತಿಗೆ ಮರುಳಾದಾಗ ಮೂಡಿತ್ತು ಪ್ರೀತಿ

ಪ್ರತಿದಿನವೂ ಕನಸಲ್ಲೂ ನನಸಲ್ಲೂ ಕಾಡಿದ್ದೇನೂ ಸುಳ್ಳಲ್ಲ
ಕಾಯಾ ವಾಚಾ ಮನಸಾ ನಿನ್ನವನೆಂದಾಗ ಮೂಡಿತ್ತು ಪ್ರೀತಿ

ನಮ್ಮಿಚ್ಛೆಯಂತೆ ಮದುವೆಯಾಗುವುದು ಏನು ಹುಡುಗಾಟವೇ?
ನಾನೆಲ್ಲ ನೋಡಿಕೊಳುವೆ ಭಯಬೇಡವೆಂದಾಗ ಮೂಡಿತ್ತು ಪ್ರೀತಿ

ದೇವರು ಗುರುಹಿರಿಯರು ಅಗ್ನಿ ಸಾಕ್ಷಿಯಾಗಿ ಕಟ್ಟಿದ ಮಾಂಗಲ್ಯ
ಉರುಳಾಗದಂತೆ ಬಲು ಕಾಳಜಿ ಮಾಡಿದಾಗ ಮೂಡಿತ್ತು ಪ್ರೀತಿ

ಈ ‘ಮಾಲಿ”ಗೆ ಒಲಿದವನೊಂದಿಗೆ ಬದುಕುವ ಸುಯೋಗ
ಸುಖ ದುಃಖದಲಿ ಜೊತೆಗೂಡಿದಾಗ ಮೂಡಿತ್ತು ಪ್ರೀತಿ

*********

About The Author

Leave a Reply

You cannot copy content of this page

Scroll to Top