ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
Group Of Children Taking Photo Together

ವ್ಯತ್ಯಾಸವೇನಿತ್ತು?

ನಿನ್ನ ಮಸೀದಿಗೆ ನಾನು ಹೋಗಿದ್ದೆ
ನನ್ನ ಮಂದಿರಕ್ಕೆ ನೀನೂ ಬಂದಿದ್ದೆ

ನನ್ನ ಯುಗಾದಿಗೆ ನೀನು
ನಿನ್ನ ಮೊಹಲ್ಲಾದ ಹುಡುಗಿಯರಿಗೆ ಬೇವು ಬೆಲ್ಲ ಹಂಚಿದ್ದೆ

ನಿನ್ನ ರಂಜಾನಿಗೆ ನಾನು
ನನ್ನ ಗಲ್ಲಿಯ ಹುಡುಗರಿಗೆ ಖರ್ಜೂರ ಹಂಚಿದ್ದೆ

Image result for photos of eid ka chand

ನಾನು ಯುಗಾದಿಯ ಮುಗಿಸಿ ಚಂದ್ರನನ್ನು ನೋಡುತ್ತಿದ್ದೆ
ನೀನು ಚಂದ್ರನನ್ನು ನೋಡಿ ರಂಜಾನ್ ಮಾಡುತ್ತಿದ್ದೆ..

ವ್ಯತ್ಯಾಸವೇನಿತ್ತೆ ಅಂದು
ನಮ್ಮ ನಡುವೆ!

*****

ಕು.ಸ.ಮದುಸೂದನರಂಗೇನಹಳ್ಳಿ

About The Author

Leave a Reply

You cannot copy content of this page

Scroll to Top