“ಯಾರೂ ಅನಿವಾರ್ಯರಲ್ಲ ಇಲ್ಲಿ” ವೈ ಎಂ ಯಾಕೊಳ್ಳಿ
ಕಾವ್ಯ ಸಂಗಾತಿ “ಯಾರೂ ಅನಿವಾರ್ಯರಲ್ಲ ಇಲ್ಲಿ” ವೈ ಎಂ ಯಾಕೊಳ್ಳಿ ಈ ಲೋಕ ತನ್ನಷ್ಟಕ್ಕೆ ತಾನೇ ಓಡುತ್ತದೆಯಾರೂ ಅನಿವಾರ್ಯರಲ್ಲ ಯಾರೋ ನಮ್ಮನ್ನಗಲಿ ಹೋದಾಗನಾವು ಇನ್ನು ಬದುಕಲಾರೆವೇನೊ ಎನ್ನುತ್ತೇವೆಆದರೂ ಕೆಲವೆ ದಿನಗಳಲ್ಲಿ ಮತ್ತೆ ಕಾಲಎಂದಿನಂತೆ ಓಡತೊಡಗುತ್ತದೆ ಅಂದೊಮ್ಮೆ ಆ ಕ್ಷಣ ಅವರು ಅಗಲಿದಾಗಇನ್ನು ಬದುಕುವುದೆ ಅಸಾಧ್ಯ ವೆಂದುಕೊಂಡಿದ್ದವರು, ಅದೆ ಹಗಲು ಅದೇ ರಾತ್ರಿಅದೇ ಬದುಕನ್ನು ಯಥಾವತ್ತಾಗಿಅನುಭವಿಸತೊಡಗುತ್ತಾರೆವ್ಯತ್ಯಾಸ ಇಷ್ಟೇ ಅವರಷ್ಟೇ ಹೋಗಿರುತ್ತಾರೆನಾವೆಲ್ಲರೂ ಇಲ್ಲೇ ಇರುತ್ತೇವೆ. ಚಂದ್ರ ಸೂರ್ಯರೂ ಇಲ್ಲವಾದಾಗಪರ್ಯಾಯ ವ್ಯವಸ್ಥೆಯನ್ನು ಬಳಸಿಕೊಂಡಈ ಲೋಕಕ್ಕೆ ಎಲ್ಲವನು ಮರೆಯುವದು ಗೊತ್ತುಬಹುಶಃ ತಾವು ಅನಿವಾರ್ಯಎಂದು ತಿಳಿದದ್ದು ಅಗಲಿ ಹೋದವರಷ್ಟೇ. ಇದು ನಾವು ಹೋದಾಗಲೂ ಅಷ್ಟೇ!ಇನ್ಯಾರೋ ಹೋದಾಗಲೂ ಅಷ್ಟೇ!!ಜಗತ್ತಿನಲ್ಲಿ ಬೇಕಾದವರು ಒಂದಿಷ್ಟು ದಿನಕಣ್ಣೀರು ಹಾಕಿ ಮತ್ತೆ ಮರೆಯುತ್ತಾರೆ.ಇನ್ನೊಂದು ರಾತ್ರಿ ಕೊಡವಿಕೊಂಡು ಎದ್ದುಹಗಲಾಗಿರುತ್ತದೆ. ವೈ.ಎಂ.ಯಾಕೊಳ್ಳಿ
“ಯಾರೂ ಅನಿವಾರ್ಯರಲ್ಲ ಇಲ್ಲಿ” ವೈ ಎಂ ಯಾಕೊಳ್ಳಿ Read Post »









