ಕಾವ್ಯಯಾನ
ಕ್ವಾರಂಟೈನ್ ದಿನಗಳಿವು ಶಾಲಿನಿ ಆರ್. ಅಮ್ಮನ ಆ ಮೂರು ದಿನ ಕಾಗೆ ಮುಟ್ಟಿದೆ ಮುಟ್ಟ ಬೇಡ ಎಂದು ದೂರ ಕುಳಿತ ಮುಟ್ಟಿನ ಆ ದಿನ, ಇಂದು ನಾನೆ ಯಾರನ್ನು ಮುಟ್ಟಿಸಿಕೊಳದೆ ದೂರದಿ ನಿಂತು ದಿನ ದೂಡುತಿರು ಕ್ವಾರಂಟೈನ್ ದಿನ, ತರಕಾರಿ ಕೊಳ್ಳುವಾಗ ಮಾರುವವನಿಗಿಂತ ಮಾರು ದೂರ ನಿಂತು ಕೊಳ್ಳುವ ಕ್ವಾರಂಟೈನ್ ದಿನ, ದಿನಸಿ ಸಾಮಾನಿನ ಖರೀದಿಗೂ ಬಂದಿದೆ ಕೊಡುವ ಕೊಳ್ಳುವವನ ಮಧ್ಯೆ ಲಕ್ಣ್ಮಣರೇಖೆಯ ಕ್ವಾರಂಟೈನ್ ದಿನ ಪ್ರತಿಯೊಬ್ಬರ ಮಧ್ಯೆದಲ್ಲೂ ಸಿಲುಕಿ ನಲುಗುತಿದೆ ಮುಗಿಯಲಾರದೆ ನರಳುತಿದೆ ಕ್ವಾರಂಟೈನ್ ದಿನ, ಹತ್ತಿರದವರನ್ನು ದೂರವಿರಿಸಿ ದೂರ ಇರುವವರನ್ನು ದೂರವೇ ಬಯಸಿ ಮರೆಯಿತಿರುವ ಕ್ವಾರಂಟೈನ್ ದಿನ., ಕಸ ಗುಡಿಸುವಾಗ ನೆಲ ಒರೆಸುವಾಗ ಪಾತ್ರೆಗಳ ತೋಳೆಯುವಾಗೆಲ್ಲ ಕೆಲಸದವಳ ನೆನಪು ಇದು ಕ್ವಾರಂಟೈನ್ ದಿನ ಎಲ್ಲರ ಮನೆಯ ತಾರಸಿಯ ಮೇಲೆ ನಕ್ಕು ನಲಿಯುತಿದೆ ಮುಟ್ಟಿಯು ಮುಟ್ಟಲಾರದಂತಹ ಕ್ವಾರಂಟೈನ್ ದಿನ, ಮುಟ್ಟಿದ ಪ್ರತಿ ತಪ್ಪಿಗೂ ಪದೇ ಪದೇ ಸ್ಯಾನಿಟೈಜರ್ ಉಪಯೋಗಿಸಿ ಮತ್ತೆ ಮತ್ತೆ ಕೈ ತೊಳೆವ ಕ್ವಾರಂಟೈನ್ ದಿನ ಮುಗಿಯದ ಮಕ್ಕಳ ಕಲರವ ಮುಳುಗಿದೆ ಮನೆಯು ಇವರ ಆಫೀಸಿನ ತರಹ ಅಡುಗೆ ಮನೆಗೆ ಬಿಡುವಿಲ್ಲವಂತೆ ಇದು ಕ್ವಾರಂಟೈನ್ ದಿನ, ಇದ್ದ ಅಲ್ಪ ಸ್ವಲ್ಪ ನನ್ನ ಗಳಿಗೆಗಳು ಇಲ್ಲವಾದ ದಿನ ಮಳೆಹನಿಗೆ ಕೈಒಡ್ಡದ ಹಸಿರ ಹವೆಗೆ ಮೈತಾಗದ ಇದು ಕ್ವಾರಂಟೈನ್ ದಿನ… ಆದರೂ ನನ್ನ ನಾ ಅರಿವ ನನ್ನವರೆಲ್ಲ ಹಗಲಿರುಳು ಒಂದಾಗಿ , ಒಂದೇ ಸೂರಿನಡಿಯಲಿ ನಕ್ಕು ನಲಿದು, ತುತ್ತು ಉಣಿಸಿ ಮೆರೆಯುತಿರುವ ಅಭಿಮಾನದ ಕ್ವಾರಂಟೈನ್ ದಿನ… ********** ಕಸ ಗುಡಿಸುವಾಗ ನೆಲ ಒರೆಸುವಾಗ ಪಾತ್ರೆಗಳ ತೋಳೆಯುವಾಗೆಲ್ಲ ಕೆಲಸದವಳ ನೆನಪು ಇದು ಕ್ವಾರಂಟೈನ್ ದಿನ ಎಲ್ಲರ ಮನೆಯ ತಾರಸಿಯ ಮೇಲೆ ನಕ್ಕು ನಲಿಯುತಿದೆ ಮುಟ್ಟಿಯು ಮುಟ್ಟಲಾರದಂತಹ ಕ್ವಾರಂಟೈನ್ ದಿನ, ಮುಟ್ಟಿದ ಪ್ರತಿ ತಪ್ಪಿಗೂ ಪದೇ ಪದೇ ಸ್ಯಾನಿಟೈಜರ್ ಉಪಯೋಗಿಸಿ ಮತ್ತೆ ಮತ್ತೆ ಕೈ ತೊಳೆವ ಕ್ವಾರಂಟೈನ್ ದಿನ ಮುಗಿಯದ ಮಕ್ಕಳ ಕಲರವ ಮುಳುಗಿದೆ ಮನೆಯು ಇವರ ಆಫೀಸಿನ ತರಹ ಅಡುಗೆ ಮನೆಗೆ ಬಿಡುವಿಲ್ಲವಂತೆ ಇದು ಕ್ವಾರಂಟೈನ್ ದಿನ, ಇದ್ದ ಅಲ್ಪ ಸ್ವಲ್ಪ ನನ್ನ ಗಳಿಗೆಗಳು ಇಲ್ಲವಾದ ದಿನ ಮಳೆಹನಿಗೆ ಕೈಒಡ್ಡದ ಹಸಿರ ಹವೆಗೆ ಮೈತಾಗದ ಇದು ಕ್ವಾರಂಟೈನ್ ದಿನ… ಆದರೂ ನನ್ನ ನಾ ಅರಿವ ನನ್ನವರೆಲ್ಲ ಹಗಲಿರುಳು ಒಂದಾಗಿ , ಒಂದೇ ಸೂರಿನಡಿಯಲಿ ನಕ್ಕು ನಲಿದು, ತುತ್ತು ಉಣಿಸಿ ಮೆರೆಯುತಿರುವ ಅಭಿಮಾನದ ಕ್ವಾರಂಟೈನ್ ದಿನ…









