ಹೃದಯಂಗಮ
ಕವಿತೆ ಹೃದಯಂಗಮ ಸ್ಮಿತಾ ಭಟ್ ನೀನಿರುವುದೇ ಬಡಿದುಕೊಳ್ಳಲುಅನ್ನುವಾಗಲೆಲ್ಲಒಮ್ಮೆ ಸ್ತಬ್ಧವಾಗಿಬಿಡುಎನ್ನುವ ಪಿಸುಮಾತೊಂದ ಹೇಳಬೇಕೆನಿಸುತ್ತದೆ! ‘ಹೃದಯದ ಮಾತು ಕೇಳಬೇಡಬುದ್ಧಿಯ ಮಾತು ಕೇಳು’ಎನ್ನುವ ಫಿಲಾಸಫಿಗಳಎದೆಗಾತುಕೊಳ್ಳುವ ಕಿವಿಗಳಿಗೆ ಇಯರ್ ಪೋನ್ ಜೋತು ಬಿದ್ದುಲಬ್ ಡಬ್ಒಂಟಿಬಡಿತ! ಅಡಿಯಿಂದ ಮುಡಿಯವರೆಗೂಪಾರುಪತ್ಯದ ಅಧಿಕಾರ ಹೊತ್ತರೂನಿರಂತರ ಚಲನೆಯಲ್ಲಿ ನಿಲ್ಲುವ ಅಧಿಕಾರವಿಲ್ಲ! ಚೂರೇ ಚೂರು ದಣಿವಿಗೆ ಕೊಸರಿಕೊಂಡರೂಭುಗಿಲೇಳುವ ಭಯದ ಹನಿ. ಇರ್ರಿ, ಹೃದಯ ಬಡಿತ ಶುರುವಾಗಲಿ ಈಗೇನೂ ಹೇಳುವದಿಲ್ಲ –ಎದೆಯ ಮೇಲೆ ಕೈ ಇಟ್ಟು ಸ್ಕ್ಯಾನಿಂಗ್ ಕೋಣೆಯಿಂದ ಹೊರ ಬರುವ ಜೀವಮನದೊಳಗಿನ ಪ್ರತೀ ಭಾವಕ್ಕೂ ಸ್ಪಂದಿಸಿ –ಲಬ್ ಡಬ್ ಮತ್ತಷ್ಟು ತೀವ್ರ. ಹಿಡಿಯಷ್ಟು ಪುಟ್ಟ ಕೋಣೆಯೊಳಗೆಹಿಡಿಯಲಾರದಷ್ಟು ನೋವು ನಲಿವು ಭಾವ ಜೀವಗಳುಹೃದಯದಿಂದ ಹೊರಟು ಮತ್ತೆ ಹೃದಯಕ್ಕೇಸೇರುವ ತದಾತ್ಮ್ಯಪ್ರೇಮ ಪ್ರವಹಿಸುವ ಪ್ರತೀ ದಾರಿಯಲಿ ಜೀವಕಳೆನದಿಯೊಂದು ಹರಿದು ಸಾಗರದೊಳು ಲೀನವಾಗ ಬಯಸಿದಾಗಲೇಎದೆಯ ಕವಾಟವೊಂದು ಮುಚ್ಚಿಕೊಳ್ಳುವುದು!! **************************









