ದೀಪಾವಳಿ
ಕಾವ್ಯ ಸಂಗಾತಿ ದೀಪಾವಳಿ ಬಾಪು ಗ. ಖಾಡೆ ತಳಿರು-ತೋರಣದ ಚಿತ್ತಾರ ಬಾಗಿಲುರಂಗವಲ್ಲಿಯ ಸಿಂಗಾರ ಬಯಲುಸಡಗರ ಸಂಭ್ರಮ ಸುಳಿಸುಳಿದಾಡಲುಮನೆ-ಮನೆಯಲ್ಲಿ ದೀಪೋತ್ಸವ ಹೂ ಬಾಣ ಪಟಾಕಿ ಸುರು-ಸುರು ಬತ್ತಿಆಕಾಶ ಬುಟ್ಟಿಯ ಮಿನುಗುವ ಜ್ಯೋತಿಸಾಲು ದೀಪಗಳ ಹೊಣ್ಣಿನ ಕಾಂತಿಮನೆ-ಮನೆಯಲ್ಲಿ ದೀಪೋತ್ಸವ ನಗುಮೊಗದಿಂದಲಿ ನಾರಿಯರೆಲ್ಲರೂಬಂಧು-ಬಳಗಕೆ ಆರತಿ ಬೆಳಗಿಸವಿ ಸವಿ ಮಾತಲಿ ಸಿಹಿಯನು ಹಂಚಲುಮನೆ-ಮನೆಯಲ್ಲಿ ದೀಪೋತ್ಸವ ಮಹಾಲಕುಮಿಗೆ ಮಂಗಳದಾರುತಿಅಂಗಡಿಯಲ್ಲಿ ಹೊಸ ಲೆಕ್ಕದ ಪುಸ್ತಕಶುಭ ಕಾರ್ಯಕ್ಕೆ ಬಲಿಪಾಡ್ಯಮಿಮನೆ ಮನೆಯಲ್ಲಿ ದೀಪೋತ್ಸವ ಕಾರ್ತಿಕ ಮಾಸದ ಮಾಗಿಯ ಚಳಿಗೆಸಗ್ಗವೇ ಇಳಿದಿದೆ ನಮ್ಮೀ ಧರೆಗೆಚಿಣ್ಣರ ಕಣ್ಣಲ್ಲಿ ಬೆಳ್ಳಿಯ ಮಿಂಚುಮನೆ-ಮನೆಯಲ್ಲಿ ದೀಪೋತ್ಸವ









