ಪ್ರಮೋದ ಜೋಶಿಯವರ ಕವಿತೆ”ಸಾವಿನ ಕ್ಷಣಹೊತ್ತು ಮುನ್ನ”
ಸಾಯುವ ಮುನ್ನ ನೆನಪಾಗುತಿದೆ
ಬಂಧು ಬಳಗದವರ ನೆನಪೆಲ್ಲಾ
ಎಷ್ಟೋ ದಿನದಂತೆ ಅನಿಸುತಿದೆ
ಅವರೊಂದಿಗೆ ಮಾತಾಡಿ
ನೆನಪಾಗುತಿದೆ ತಂದೆ ತಾಯಿ
ತಾಯಿ ಮಡಿಲಿನೊಳ ಹುಡುಗಾಟತನ
ಗೊತ್ತಾಗಲಿಲ್ಲ ಸಂಸಾರದ ಜವಾಬ್ದಾರಿಯಲಿ
ಹೋದ ವಯಸ್ಸು ಮುವತ್ತರಿಂದ ಎಪ್ಪತ್ತು
ಆವರಿಸುತಿದೆ ಈಗ ನನಗೆ
ನಮ್ಮವರನು ಎಂದೂ ಕಾಣದ ಭೀತಿ
ಬಂದ ಕೊನೇ ಕ್ಷಣಕೆ
ಕಣ್ಗಳೂ ಒದ್ದೆಯಾಗುತಿದೆ ಈಗ
ಪ್ರಮೋದ ಜೋಶಿ
ಪ್ರಮೋದ ಜೋಶಿಯವರ ಕವಿತೆ”ಸಾವಿನ ಕ್ಷಣಹೊತ್ತು ಮುನ್ನ” Read Post »









