ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕವಿತೆ ಕಾರ್ನರ್

ಕವಿತೆ ಕಾರ್ನರ್

ಯುದ್ದವೆಂದರೆ ಕು.ಸ.ಮಧುಸೂದನ ಯುದ್ದವೆಂದರೆ ಕೋವಿ ಫಿರಂಗಿಗಳು ಮದ್ದು ಗುಂಡುಗಳು ಸೋಲು ಗೆಲುವುಗಳು ಮಾತ್ರವಲ್ಲ ಯುದ್ದವೆಂದರೆ ಅಂಗೈನ ಮದರಂಗಿ ಆರುವ ಮೊದಲೇ ಹಣೆಕುಂಕುಮ ಅಳಿಸಿಕೊಳ್ಳುವ ಹೆಣ್ಣಗಳು ಅಪ್ಪನ ತಬ್ಬುವ ಮೊದಲೇ ತಬ್ಬಲಿಯಾಗುವ ಹಸುಗೂಸುಗಳು ಮಗನ ಮನಿಯಾರ್ಡರಿಗಾಗಿ ಕಾತು ಕೂತ ಮುದಿಜೀವಗಳು. ಮತ್ತೂ ಯುದ್ದವೆಂದರೆ ಇರುವುದೆಲ್ಲವ ನಾಶ ಮಾಡಹೊರಟು ತಾವೂ ನಾಶವಾಗುವ ಹಳೆಯ ಆಟ ಮನುಕುಲದ ಖಳರ ಚಟ! *********

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಬಾ ಮಗುವೆ ಬಾ! ಕು.ಸ.ಮಧುಸೂದನ ನಾನೇನೂ ಅಲ್ಲ ಮೊನ್ನೆ ಮೂರುವರ್ಷದ ಮಗುವೊಂದು ನೀನ್ಯಾರೆಂದು ಕೇಳಿದಾಗ ಹೇಳಲಾಗದೆ ಏನನ್ನೂ ತಡವರಿಸಿದಾಗ ಮೊದಲಬಾರಿ ಯೋಚಿಸಿದೆ ನಾನ್ಯಾರುಮತ್ತುನಾನೇನು? ಯಾವ ದಾರಿಯೂ ನನ್ನದಾಗಲಿಲ್ಲಅಥವಾ ನನ್ನದಾಗಿ ಮಾಡಿಕೊಳ್ಳಲಾಗಲಿಲ್ಲ. ಸೋತಿದ್ದೇನೊ ಗೊತ್ತಾಯಿತಾದರುಆಟ ಆಡಿದ್ದೆನಾ ಇಲ್ಲ ಆಡಿದಂತೆ ನಟಿಸಿದ್ದೆನಾ ಗೊತ್ತಿಲ್ಲ. ಎಲ್ಲರೂ ಇತಿಹಾಸದ ಭಾಗವಾಗಲು ಸಾದ್ಯವಿಲ್ಲವಾದರುಅದರದೊಂದು ಅದ್ಯಾಯದ ಅಂಚಿನಲ್ಲಿಯಾದರು ಏನಾದರು ಆಗಿರುತ್ತಾರೆ. ಕನಸುಗಳು ನನಗೂ ಇದ್ದವುಸಾಕಾರಗೊಳಿಸಿಕೊಳ್ಳುವ ಅನೇಕ ಅಡ್ಡ ದಾರಿಗಳೂ ನನಗೆ ಗೊತ್ತಿದ್ದವು ಆದರಾ ಎಲ್ಲ ದಾರಿಗಳು ನನ್ನ ಆತ್ಮಸಾಕ್ಷಿಯ ವಿರುದ್ದವಾಗಿದ್ದವು. ಆತ್ಮದ ಮಾತಿಗಿಂತ ಸುಖವೇ ಮುಖ್ಯಎಂದು ನಾನಂದುಕೊಂಡಿದ್ದರೆ ಇವತ್ತು ಮದ್ಯದಂಗಡಿಯ ಹೊಸಿಲಲಿಇಳಿಸಂಜೆಗಳ ನೀಳ ರಾತ್ರಿಗಳ ಕಳೆಯ ಬೇಕಿರಲಿಲ್ಲ. ದೇವರೆಂದೂ ನನಗೆ ಸಹಾಯ ಮಾಡುವನೆಂದು ನಾನೆಂದೂ ನಂಬಲಿಲ್ಲನಂಬಿದ್ದರೂ ಪಾಪ ಅವನಿಗೆಷ್ಟು ಜನ ಗ್ರಾಹಕರೋ ಸಮಯವಾದರೂ ಹೇಗೆ ಸಿಕ್ಕೀತು ನನ್ನಂತ ಪಾಪಿಯ ಬಗ್ಗೆ ಯೋಚಿಸಲು. ನನ್ನ ಸುತ್ತ ತೀರಾ ದೇವರಂತ ಮನುಷ್ಯರಾರು ಇರಲಿಲ್ಲ.ನನ್ನ ಸರಿದಾರಿಯಲ್ಲಿ ನಡೆಸಲು. ನಾನು ಶಾಲೆಗೆ ಹೋಗಿದ್ದು ಒಂದಷ್ಟು ಅಕ್ಷರಗಳನ್ನು ಕಲಿಯಲು ಮಾತ್ರ ಅವರು ನೀತಿಪಾಠ ಹೇಳಲು ಶುರು ಮಾಡಿದೊಡನೆ ನಾನು ನಿದ್ದಗೆ ಜಾರುತ್ತಿದ್ದೆ.ಅನೀತಿಯಲ್ಲೇ ಮುಳುಗಿದವರು ನೀತಿಯ ಬಗ್ಗೆಮಾತಾಡುವುದು ತಪ್ಪೆಂದು ಅವರಿಗೂ ಗೊತ್ತಿತ್ತು. ಹಾಗಂತ ನಾನು ಕಡುಪಾಪಿಯೇನು ಆಗಿರಲಿಲ್ಲ. ಹಸಿದು ಬಂದವರಿಗೆ ನನ್ನ ತಟ್ಟೆಯಲಿದ್ದ ಅನ್ನದಲ್ಲೆ ಒಂದಿಷ್ಟು ತೆಗೆದು ನೀಡಿದ್ದೇನೆ. ಬಾರವಾದ ಮೂಟೆ ಹೊತ್ತು ಹೋಗುತ್ತಿದ್ದ ವಯಸ್ಸಾದ ಹಮಾಲಿಯೊಬ್ಬನಿಗೆ ಅವನ ಬಾರ ಹೊತ್ತು ಸಹಾಯ ಮಾಡಿದ್ದೇನೆ ಹಾಗೆಯೇ ಅಕ್ಕಪಕ್ಕದವರಿಗೆ ಕಿರಿಕಿರಿಯಾಗದಂತೆ ರಾತ್ರಿಗಳಲ್ಲಿ ಕಂಠಮಟ್ಟ ಕುಡಿದರೂ ಗದ್ದಲಮಾಡದೆ ತೆಪ್ಪಗೆಮಲಗಿ ಉಪಕಾರವನ್ನೂ ಮಾಡಿದ್ದೇನೆ! ಇವತ್ತಿಗೂ ನನಗೆ ಅಯ್ಯೋ ಅನಿಸುವುದುಕಾನ್ವೆಂಟಿಗೆ ಹೋಗುವ ಆ ಎಳೆಯ ಕಂದಮ್ಮಗಳನ್ನು ಕಂಡಾಗ ತಮ್ಮ ಪೂರ್ವೀಕರೆಲ್ಲ ಸೇರಿ ಮಾಡಿದಷ್ಟೂ ಪಾಪಗಳ ಮೂಟೆಯನ್ನು ಬೆನ್ನಿನ ಚೀಲಕ್ಕೇರಿಸಿಕೊಂಡು ನಡುಬಾಗಿಸಿ ನಡೆಯುವ ಮಕ್ಕಳನ್ನುನೋಡಿದಾಗೆಲ್ಲ ಗಾಣದ ಎತ್ತುಗಳು ನೆನಪಾಗಿ ಕಣ್ಣಲ್ಲಿ ನೀರು ಸುರಿಸುತ್ತೇನೆ. ತಮಗೆ ವಯಸ್ಸಾದ ಮೇಲೆ ಅನ್ನ ಹಾಕಲೆಂದುಅವರ ಬಾಲ್ಯವನ್ನು ಕಿತ್ತುಕೊಂಡುಶಾಲೆಯೆಂಬ ನರಕಕ್ಕೆ ಕಳಿಸುವ ಅಪ್ಪಅಮ್ಮಂದಿರನ್ನು ಹಿಡಿದುಒದೆಯಬೇಕೆಂದು ಸಾವಿರ ಸಾರಿ ಅನಿಸಿದರೂಸುಮ್ಮನಾಗಿದ್ದೇನೆ! ಬಾ ಮಗುವೆ ಇಲ್ಲಿ ಬಾನಿನ್ನ ಹೆಗಲ ಮೇಲಿನ ಬ್ಯಾಗನ್ನು ಇಲ್ಲಿ ಇಳಿಸಿ ಇಡು ಬಾ ನನ್ನ ಜೊತೆ ಊರಂಚಿನ ಕಾಡಿಗೆ ಹೋಗೋಣ. ಅಲ್ಲಿ ನಿನ್ನಂತೆಯೇ ಮುದ್ದಾಗಿರುವ ಚಿಟ್ಟೆಗಳಿವೆಹೂ ಹುಡುಕಿ ಹಾರುವ ಅವನ್ನು ಹಿಡಿಯೋಣ ಪಕ್ಕದಲ್ಲಿ ಹರಿಯುವ ನದಿಯ ದಂಡೆಯಲ್ಲಿ ಕೂತುಮರಿಮೀನುಗಳಿಗೆ ಗಾಳ ಹಾಕಿ ಕಾಯೋಣ. ಮದ್ಯಾಹ್ನ ಹೊಟ್ಟೆ ಹಸಿದಾಗ ಅಲ್ಲೇ ಸಿಗುವಕಾಡಿನ ಹಣ್ಣುಗಳ ಕಚ್ಚಿ ತಿನ್ನೋಣ ಒಂದು ಹೇಳುತ್ತೇನೆ ಕೇಳು ಮಗುನಿಸರ್ಗ ಕಲಿಸುವುದಕ್ಕಿಂತ ಹೆಚ್ಚಾದ ಪಾಠವನ್ನುಯಾವ ಶಾಲೆಗಳು ಯಾವ ಶಿಕ್ಷಕರುಗಳೂ ಕಲಿಸಲಾರರು. ನಾಗರೀಕತೆಯ ಮುಖವಾಡ ಹೊತ್ತ ಜಗತ್ತಿನಲ್ಲಿಯಾರೂಕಲಿಸದೆ ಕಲಿಯಬಹುದಾದದ್ದುವಂಚನೆ ದ್ರೋಹಗಳು ಮಾತ್ರ ಬಾ ಮಗುವೆ ಬಂದುಬಿಡು ನಾನು ಸಾಯುವುದರೊಳಗಾಗಿ ನಿನಗೆಮೀನು ಹಿಡಿಯುವುದ ನದಿಯೊಳಗ ಈಜುವುದಬೆಣಚುಕಲ್ಲು ಗೀಚಿ ಬೆಂಕಿ ಹೊತ್ತಿಸಿ ಮೀನು ಬೇಯಿಸುವುದಕಲಿಸುವೆ. ಬಾ ಮಗುವೆ ನಾನು ನಿನ್ನ ಅಪ್ಪನಾಗಲಾರದ ಅಪ್ಪ!……..

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ ಕು.ಸ.ಮದುಸೂದನ ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ನಕ್ಷತ್ರದಂತವಳನ್ನು ಪ್ರೀತಿಸಿದ ಕವಿಯ ಕಥೆ! ಬರೆಸಿಕೊಳ್ಳಲು ಕವಿತೆ ಒಪ್ಪದಿದ್ದಾಗ ಗದ್ಯದತ್ತ ಮುಖ ಮಾಡಲು ಮನಸು ಒಲ್ಲೆಂದಾಗಲೆಲ್ಲ ಅವನು ಮಾಡುತ್ತಿದ್ದುದು ಒಂದೇ ಕೆಲಸ ಅವಳಿಗೆ ಪ್ರೆಮಪತ್ರಗಳನ್ನು ಬರೆಯುತ್ತಿದ್ದು. ಅವನೇನು ಆ ಪತ್ರಗಳನ್ನು ಪ್ರಿಯೆ ಎಂದೊ ಇಲ್ಲಾ ಅವಳ ಹೆಸರಿನಿದಲೋ ಶುರು ಮಾಡುತ್ತಿರಲಿಲ್ಲ ಪ್ರತಿ ಪತ್ರವೂ ಹಿಂದಿನ ಪತ್ರದ ಮುಂದುವರಿಕೆಯಂತಿರುತ್ತಿತ್ತು ಅಲ್ಲಿಯೂ ಅವನೇನು ಅವಳನ್ನು ಚಿನ್ನ ರನ್ನ ಎಂದು ಮುದ್ದಿಸುತ್ತಿರಲಿಲ್ಲ. ಕಳೆದ ರಾತ್ರಿಯ ತನ್ನ ಒಂಟಿತನದ ಬಗ್ಗೆ, ಈಗೀಗ ಹೆಚ್ಚುಹಣವಿಲ್ಲದ್ದರಿಂದ ತಾನು ತರುತ್ತಿರುವ ಅಗ್ಗದ ಮದ್ಯದಬಗ್ಗೆ ಅದೂ ಕಲಬೆರಕೆಯಾಗುತ್ತಿರುವ ಬಗ್ಗೆ ಈಗ ತಾನಿರುವ ಮನೆಯ ಕೋಣೆಗಳಿಗೆ ತಿಳಿಗುಲಾಬಿಯ ಬಣ್ಣ ಬಳಿಸಿ ನವೀಕರಣಗೊಳಿಸುತ್ತಿರುವ ಬಗ್ಗೆ ಅಂಗಳದ ತುಂಬೆಲ್ಲ ಗುಲಾಬಿಹೂಗಳ ಹೊಸ ಹೂಕುಂಡಗಳ ತಂದಿಡುವ ತನ್ನ ಯೋಜನೆಗಳ ಬಗ್ಗೆ ಅದಕ್ಕಾಗಿಯೇ ತಾನು ಸ್ವಲ್ಪಸ್ವಲ್ಪ ಹಣ ಉಳಿಸುತ್ತಿರುವ ಬಗ್ಗೆ ಈ ದಾವಂತದಲ್ಲಿ ಎಷ್ಟು ಕುಡಿದರೂ ಏರದ ನಿಶೆಯ ಬಗ್ಗೆ ತಾನು ಬರೆಯಲಿಚ್ಚಿಸಿದ್ದ ಅವಳ ಮೇಲಿನ ಅದೊಂದು ಅದ್ಬುತ ಪ್ರೇಮಕಾವ್ಯದ ಬಗ್ಗೆ ಪ್ರತಿಬಾರಿ ಅದನ್ನು ಪ್ರಾರಂಭಿಸಲು ಹೊರಟಾಗಲು ತನ್ನದೇ ಸಾವಿನ ಚರಮಗೀತೆಯ ಸಾಲುಗಳು ಮೂಡಿ ತಾನು ಗಲಿಬಿಲಿಗೊಳ್ಳುವುದರ ಬಗ್ಗೆ ಮತ್ತು ಮುಂದೊಂದು ದಿನ ಅಜರಾಮರವಾಗಿರಬಹುದಾದ ಪ್ರೇಮ ಕಾವ್ಯವ ಬರೆದು ಅವಳಿಗರ್ಪಿಸುವ ತನ್ನ ಕನಸಿನ ಬಗ್ಗೆ ಬರೆಯುತ್ತ ಹೋಗುತ್ತಿದ್ದ. ಹೀಗೆ ಎಷ್ಟೋ ವರುಷಗಳ ಕಾಲ ಅವನು ಬರೆಯುತ್ತಲೇ ಹೋದ ಪತ್ರಗಳ ಲಕೋಟೆಯೊಳಗಿಟ್ಟು ಅಂಚೆಗೂ ಹಾಕದೆ ತನ್ನ ಕೋಣೆಯ ಕಪಾಟಿನಲ್ಲಿ ಜೋಡಿಸಿಡುತ್ತಲೇ ಹೋದ. ಅದೊಂದು ದಿನ ಅವನು ಸತ್ತಾಗ ಅಂತ್ಯಕ್ರಿಯೆ ಮಾಡಲು ಅವನ ಬಂದುಗಳು ಯಾರೂ ಇಲ್ಲವೆಂದಾದಾಗ ಸದ್ಯ ಅವನನ್ನು ಸುಡಲು ಸೌದೆಗೆ ಹಣವನ್ನು ಸರಕಾರ ಖರ್ಚು ಮಾಡಬೇಕಿಲ್ಲವಲ್ಲ ಎಂದುಕೊಂಡ ನಗರಸಭೆಯ ಅಧಿಕಾರಿಗಳು ಸಮಾದಾನದ ನಿಟ್ಟುಸಿರು ಬಿಟ್ಟರು ಈಗಲೂ ಅವನ ಪಕ್ಕದ ಊರಿನ ಅಂಚೇ ಕಚೇರಿಗೆ ಪ್ರತಿನಿತ್ಯ ಬಂದು ನಿಲ್ಲುವ ಅವಳು ನನಗೇನಾದರು ಕಾಗದವಿದೆಯೇ? ಎಂದು ಅಂಚೆಯವನನ್ನು ಕೇಳಿ ನಿರಾಸೆಯಿಂದ ತಲೆತಗ್ಗಿಸಿ ಹೋಗುತ್ತಾಳೆ. ******** ..

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಮೂರ್ಖರು ಕು.ಸ.ಮಧುಸೂದನ ಮೂರ್ಖರುಕೋವಿಯಿಂದ ಕ್ರಾಂತಿ ಮಾಡುತ್ತೇವೆಂದು ಹೊರಟಮೂರ್ಖ ನಕ್ಸಲರು! ಧರ್ಮದಆಧಾರದ ಮೇಲೆದೇಶ ಕಟ್ಟುತ್ತೇವೆಂದು ಹೊರಟಮೂರ್ಖಮತಾಂಧರು! ಜಾತ್ಯಾತೀತಅಂತ ಹೇಳುತ್ತಾ ಜನಗಳ ಒಡೆಯುತ್ತಿರುವ ಹುಸಿಕ್ರಾಂತಿಕಾರಿಗಳು! ಇವರುಗಳ ನಡುವೆಇದ್ಯಾವ ಶಬ್ದಗಳನ್ನೂ ಕೇಳಿರದಬಡವರುತಣ್ಣಗೆಹೊಲಗದ್ದೆಗಳಲ್ಲಿಕಾರ್ಖಾನೆಗಳಲ್ಲಿಕೆಲಸ ಮಾಡುತ್ತಾದೇಶ ಕಟ್ಟುತ್ತಿದ್ದಾರೆ ಭಾಷಣಗಳ ಬೀಕರತೆಯಿಂದ ದೂರವುಳಿದು! *********

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ದುರಿತ ಕಾಲದ ದನಿ

ರಣ ಹಸಿವಿನಿಂದ! ಮೊನ್ನೆ ಇವರೂ ಹಲವು ಯುದ್ದಗಳ ಗೆದ್ದಿದ್ದರುಗೆದ್ದ ರಾಜ್ಯದ ಹೆಣ್ನುಗಳ ಬೇಟೆಯಾಡಿದ್ದರುಇದೀಗ ಸಾಂತ್ವಾನ ಕೇಂದ್ರಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಊರೂರುಗಳಿಗೆ ಬೆಂಕಿ ಹಚ್ಚಿದ್ದರುಉರಿದ ಮನೆಗಳಲ್ಲಿ ಹೆಂಗಸರು ಮಕ್ಕಳೆನ್ನದೆ ತಲೆ ತರೆದಿದ್ದರುಇದೀಗ ಆನಾಥಾಶ್ರಮಗಳ ತೆರೆದು ಕೂತಿದ್ದಾರೆ! ಮೊನ್ನೆ ಇವರೂ ಕೋವಿ ಖಡ್ಘಗಳ ಹಿಡಿದಿದ್ದರುಇದೀಗ ಧರ್ಮಗ್ರಂಥಗಳ ಪಾರಾಯಣ ಮಾಡುತ್ತಿದ್ದಾರೆ! ಮೊನ್ನೆಮೊನ್ನೆಯವರೆಗೂ ನಡೆದ ಅಕಾರಣ ಯುದ್ದಗಳಿಗೀಗಸಕಾರಣಗಳ ಪಟ್ಟಿ ಮಾಡುತ್ತ ಕೂತಿದ್ದಾರೆ ತರಿದ ತಲೆಗಳಭೋಗಿಸಿದ ಯೋನಿಗಳಕಚ್ಚಿದ ಮೊಲೆಗಳಕಲಸಿಹಾಕಿದ ಭ್ರೂಣಗಳನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿ ಮನುಷ್ಯನಿಗೂಇರಬಹುದಾದ ಮೃಗದ ಮುಖವಾಡವಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತನೋಡು ಬರೆಯುವಾಗಲೂ ಇದನುಕೆಕ್ಕರಿಸಿ ನೋಡುತಿದೆ ಮೃಗವೊಂದುರಣಹಸಿವಿನಿಂದ!****************

ದುರಿತ ಕಾಲದ ದನಿ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಆತ್ಮದ ಮಾತುಗಳು ಈಗ ಹಗಲನ್ನುಇರುಳನ್ನೂ ಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆ ತುಂಗೆಯ ಮರಳುರಾಶಿಯಲ್ಲಿ ಮೂಡಿದನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ ಕಾಲುಗಳುಹೂತುಹೋದದ್ದು ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿಕಳೆದುಕೊಂಡಿದ್ದೆ ನಿನ್ನನೂ ಕವಿತೆಯ ಪ್ರತಿಸಾಲನ್ನೂ ನೀನು ಆಕ್ರಮಿಸುವಾಗಪ್ರತಿ ಶಬುದವನ್ನೂ ಜತನದಿಂದ ಕಂಠಪಾಠ ಮಾಡಿಟ್ಟುಕೊಂಡಿದ್ದೆ ನಿನ್ನೆದುರು ಹಾಡಲುಆಗುಂಬೆಯ ಸೂರ್ಯಾಸ್ತದಲ್ಲಿ ಮುಳುಗಿದ್ದವನು ಮುಸುಕಿದ ಕತ್ತಲ ಕಂಡುತಿರುಗಿ ನೋಡುವಷ್ಟರಲ್ಲಿ ನೀನಾಗಲೇ ವಿದಾಯ ಹೇಳಿಯಾಗಿತ್ತು ಯಾಕೆ ಹೋದೆ ಎಲ್ಲಿ ಹೋದೆ ಯಾರಿರುವರು ಜೊತೆಗೆಕೇಳಬಾರದ ಕೇಳಲಾರದ ಪ್ರಶ್ನೆಗಳಿಗೆ ಉತ್ತರಕ್ಕಾಗಿಅಲೆಯುತ್ತಿದ್ದೇನೆ ಈಗ ತುಂಗೆಯಿಂದ ದೂರಬಯಲು ಸೀಮೆಯ ಕುರುಚಲು ಬಯಲುಗಳಲ್ಲಿ ಆತ್ಮದ ಮಾತಾಡಬೇಡವೆಂದು ಹೇಳಿದ ನಿನ್ನ ಮಾತುಗಳಷ್ಟೇರಿಂಗಣಿಸುತ್ತವೆ ನನ್ನ ಕಿವಿಗಳೊಳಗೆ! ******************************

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಮುಂದಾಗಲಿಲ್ಲ ಇಷ್ಟು ವರುಷ ಎದೆಯೊಳಗಡಗಿಸಿಟ್ಟ ಮಾತುಗಳ ಮೂಟೆಗಳ ಬಾರವನ್ನಿಳಿಸಿ ಹಗುರಾಗಲೆಂದೇ ಆ ಬೇಟಿಯನ್ನು ನಿಕ್ಕಿ ಮಾಡಿದ್ದರು ಅಪರಿಚಿತ ಊರಿನ ಜನಸಂದಣಿಯಿರದ ಜಾಗ ಹುಡುಕಿ ಕೂತರು. ಮಾತು ಶುರು ಮಾಡುವುದಾದರೂ ಯಾರೆಂಬುದು ಅರ್ಥವಾಗದೆ ಕುಳಿತೇ ಇದ್ದರೂ ದ್ಯಾನಸ್ಥ ಪ್ರತಿಮೆಗಳಂತೆ ಬೆಳಿಗ್ಗೆ ಬಂದು ಕೂತವರು ಮೊದಲ ಮಾತಾಡುವ ಹೊತ್ತಿಗೆಮದ್ಯಾಹ್ನವಾಗಿತ್ತು ‘ಹೇಳು’ ಕೇಳಿದವನಿಗೇನೆ ಅನುಮಾನವಿತ್ತು ತನ್ನ ದ್ವನಿಯವಳ ಕಿವಿ ತಲುಪಿದ್ದರ ಬಗ್ಗೆ ಅಷ್ಟುಮೆಲುವಾಗಿ ಮಾತಾಡಿದ್ದ ಏನಿದೆ ಹೇಳಲು ಎಲ್ಲ ಮಾಮೂಲು ಇವತ್ತು ಒಂದು ದಿನ ಬಿಡುವು ಮಾಡಿಕೊಂಡು ಬರುವಷ್ಟರಲ್ಲಿ ಸಾಕುಸಾಕಾಯ್ತು ಎಲ್ಲಿಗೆ ಹೋಗುತ್ತಿದ್ದೀ ಏನು ಕೆಲಸ ಎಷ್ಟು ಹೊತ್ತಿಗೆ ತಿರುಗಿ ಬರುತ್ತೀ ಪ್ರಶ್ನೆಗಳ ರಾಶಿಯನೆದುರಿಸಿ ಉತ್ತರಿಸಿ ಬರುವುದಿದೆಯಲ್ಲ ಇದರಷ್ಟು ಯಾತನಾದಾಯಕ ಮತ್ತೊಂದಿಲ್ಲ ನಿನ್ನಂತೆ ಗಂಡಸಾಗಿದ್ದರೆ ಈ ಸಮಸ್ಯೆ ಇರುತ್ತಿರಲಿಲ್ಲ ಒಂದು ಕ್ಷಣ ನಕ್ಕ! ಬಾಯಿಬಿಟ್ಟು ಕೇಳುವ ಪ್ರಶ್ನೆಗಳಿಗುತ್ತರ ಹುಡುಕಿ ಹೇಳುವುದು ಸುಲಭ ಮೌನದೊಳಗೆ ಎಕ್ಸರೆ ಕಣ್ಣುಗಳ ಮೂಲಕ ಅನುಮಾನದ ಹಲವು ಹುತ್ತ ಕಟ್ಟುವವರಿಗೇನು ಮಾಡುವುದು. ನನಗೀಗ ಥಯರಾಯ್ಡ್ ಶುರುವಾಗಿದೆಯಂತೆ ಅದಕ್ಕೆ ಹೀಗೆ ದಪ್ಪವಾಗುತ್ತಿದ್ದೇನಂತೆ ಸಾಯೋತನಕ ಮಾತ್ರೆನುಂಗುವ ರ‍್ಮ ನಲವತ್ತಕ್ಕೇ ಹೀಗಾದರೆ ಎಪ್ಪತ್ತಕ್ಕೇನು ಕಾದಿದೆಯೊ ಅದೇನು ಮಹಾ ಬಿಡು ನನಗೂ ಈಗ ಶುಗರ್ ಶುರುವಾಗಿದೆ ಅನ್ನ ತಿನ್ನುವಂತಿಲ್ಲ ಡಯೆಟ್ ಹೇಳಿದ್ದಾರೆ ನಿತ್ಯ ಮಾತ್ರೆ ಸೇವನೆ ಅನಿವಾರ್ಯ ನಿನಗಿಂತ ಮೂರು ವರ್ಷ ದೊಡ್ಡವನು ಇದಕ್ಕಿಂತ ಹೆಚ್ಚೇನು ಆಗದಿದ್ದರೆ ಸಾಕೆಂದು ದೇವರನ್ನು ಪ್ರಾರ್ಥಿಸೋಣ ಅವಳ ಥೈರಾಯಿಡಿಗೆ ಇವನು ಇವನ ಶುಗರಿಗೆ ಅವಳೂ ಸಲಹೆ ಸೂಚನೆ ಸಾಂತ್ವಾನ ಹೇಳುವಷ್ಟರಲ್ಲಿ ಸಂಜೆಯಾಗಿತ್ತು ಹೊರಡೋಣವಾ ಲೇಟಾಯ್ತು ಕೇಳಿದವಳಿಗೆ ಗೋಣು ಆಡಿಸಿ ಬಸ್ಸು ಹತ್ತಿಸಿ ತಾನೂ ತನ್ನ ಬಸ್ಸು ಹತ್ತಿ ಕೂತ ಹೇಳಬೇಕಾದ್ದೆಲ್ಲ ಎದೆಯೊಳಗುಳಿದು ಹೊತ್ತು ತಂದಿದ್ದ ಮೂಟೆಗಳೊಂದಿಗೆ ಮನೆಗೆ ಮರಳಿದರು. ಮತ್ತೆ ಬೇಟಿ ಮಾಡಲು ಇಬ್ಬರೂ ಮುಂದಾಗಲಿಲ್ಲ.

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಮತ್ತೆಂದೂ ಬರೆಯಲಾರೆ

ನಾನಿನ್ನು ಕಾಯಲಾರೆಮುರಿದ ಮೌನದೊಳಗೆ ತೇಲಿಬರುವನಿನ್ನ ಮಾತಿನೊಂದು ಹೆಣಕ್ಕಾಗಿನಾನಿನ್ನು ಕಾಯಲಾರೆಕುಸಿದುಬಿದ್ದ ನಂಬಿಕೆಯೊಂದುಮತ್ತೊಮ್ಮೆ ಚಿಗುರುವ ಚಣಕ್ಕಾಗಿನಾನಿನ್ನು ಕಾಯಲಾರೆ ಎಂದೂ ಅರಳಲಾರೆನೆಂದು ಮುನಿಸಿಕೊಂಡಹೂವು ಬಿರಿಯುವಾ ಕ್ಷಣಕ್ಕಾಗಿನಾನಿನ್ನು ಕಾಯಲಾರೆಸ್ವರ್ಗದ ನಿರೀಕ್ಷೆಯಲಿನಿತ್ಯ ನರಕದ ಬಾಗಿಲು ಕಾಯುವಯಾತನಾದಾಯಕ ಬದುಕಿನಂಗಳದಲ್ಲಿನಾನಿನ್ನು ಕಾಯಲಾರೆಹೊರದಾರಿಗಳೇ ಇರದೀ ನರಕದೆಡೆಗೆನಡೆದು ಬರುವೆಂಬ ನಂಬಿಕೆಯಲ್ಲಿ ನಾನಿನ್ನು ಬರೆಯಲಾರೆಬರೆದದ್ದೆಲ್ಲ ವ್ಯರ್ಥಪ್ರಲಾಪವಾಗಿಲೋಕನಿಂದಿತನಾದವನ ಕಂಡುನಗುವ ಜನರ ಬಾಯಿಗೆ ಅನ್ನವಾಗಿನರಳುವ ಕುನ್ನಿಯಾಗಿ! ಕಾಯಲಾರೆಬೇಡಲಾರೆಮರುಗಲಾರೆಮತ್ತೆಂದೂಬರೆಯಲಾರೆ.

ಮತ್ತೆಂದೂ ಬರೆಯಲಾರೆ Read Post »

ಕವಿತೆ ಕಾರ್ನರ್

ಕವಿತೆ ಕಾರ್ನರ್

ಆತ್ಮಸಾಕ್ಷಿ ನನ್ನ ಮುಂದೆ ನಡೆಎಂದು ನಾನು ಕೇಳುವುದಿಲ್ಲ ನನ್ನ ಹಿಂದೆ ಬಾಎಂದು ನಾನು ಹೇಳುವುದಿಲ್ಲ ನನ್ನ ಎಡಕ್ಕೆ ಇಲ್ಲಾ ಬಲಕ್ಕೆಬಾಎಂದು ನಾನು ಭೇಡುವುದಿಲ್ಲ! ನಾ ನಕ್ಕಾಗನನ್ನೊಡನೆ ನಗು ನಾ ಅತ್ತಾಗನನ್ನೊಡನೆ ಅಳು ನಾ ನಡೆವಾಗ ನನ್ನ ನೆರಳಾಗಿರುನಾ ನುಡಿವಾಗ ನನ್ನ ಕೊರಳಾಗಿರುಎಂದೂ ಕೇಳುವುದಿಲ್ಲ! ಹೇಗೆ ನಾನುನಡೆಯುತ್ತೇನೆಯೊನನ್ನ ಆತ್ಮಸಾಕ್ಷಿಯ ಹಾಗೆ! ನೀನೂ ನಡೆನಿನ್ನ ಆತ್ಮಸಾಕ್ಷಿಯ ಹಾಗೆಅಂತಲಾದರೂನಾನು ಯಾಕೆ ಹೇಳಲಿ?

ಕವಿತೆ ಕಾರ್ನರ್ Read Post »

ಕವಿತೆ ಕಾರ್ನರ್

ಯಾತನೆಯ ದಿನಗಳು

ಇವು ಯಾತನೆಯ ದಿನಗಳುರಾಜಕೀಯ ಪರಿಬಾಷೆಯಲ್ಲಿ ಬಣ್ಣಿಸಲಾಗದಂತಹ,ಕವಿತೆಗಳನ್ನಾಗಿಸಲೂ ಸಾದ್ಯವಿರದಂತಹ-ಕತೆಗಳನ್ನಾಗಿಸಲೂ ಸಂಯಮವಿರದಂತಹ ಕಾಲ! ಅದೆಲ್ಲೊ ಆಧಾರ್ ಲಿಂಕ್ ಇರದೆಹಸಿವಿನಿಂದ ಹೆಣ್ಣು ಮಗುವೊಂದು ಸಾಯುತ್ತದೆಅದೆಲ್ಲೋ ಹೆಣ್ಣೊಬ್ಬಳನ್ನುಅತ್ಯಾಚಾರ ಮಾಡಿ ಯೋನಿಗೆ ಸಲಾಕೆ ತೂರಿಸಿ ಕೊಲ್ಲುತ್ತಾರೆಅದೆಲ್ಲೋ ತುಂಬು ಬಸುರಿಯ ಗರ್ಭಸೀಳಿಹುಟ್ಟಬೇಕಿರುವ ಮಗುವ ಕೊಲ್ಲುತ್ತಾರೆ ಹಸಿದವಳೊಬ್ಬಳು ತುಂಡು ರೊಟ್ಟಿಕದ್ದಿದ್ದಕ್ಕೆ ಬೆತ್ತಲು ಮಾಡಿಮೆರವಣಿಗೆಮಾಡುತ್ತಾರೆಅದೆಲ್ಲೊ ಸತ್ತ ದನದ ಚರ್ಮಸುಲಿದ ತಪ್ಪಿಗೆ ದಲಿತ ಯುವಕರನ್ನುಥಳಿಸಲಾಗುತ್ತದೆಅದೆಲ್ಲೋ ಅವರುಗಳನ್ನೆದುರಿಸಿಮಾತಾಡಿದವರನ್ನು ಹತ್ಯೆಗಯ್ಯಲಾಗುತ್ತದೆ ಇವೆಲ್ಲವನ್ನೂ ಅದೆಲ್ಲೋಅಂತಂದುಕೊಂಡುಮೌನಕ್ಕೆ ಮುಗಿಬಿದ್ದ ನನ್ನಷಂಡತನಕ್ಕೆ ಸಾಕ್ಷಿಯಾಗಿಹೊಟ್ಟೆತುಂಬ ಉಂಡು ತೇಗುತ್ತೇನೆ ಗೆಳೆಯರೊಂದಿಗೆ ಹೊಸದೊಂದುವಾದವಿವಾದಕ್ಕಾಗಿ ಹೊಸಆಯುಧಗಳನ್ನು ಅನ್ವೇಷಿಸಲುಮುಂದಾಗುತ್ತೇನೆ,ಸವಕಲಾದ ಅವೇ ಹಳೆಯ ಶಬುದಗಳಮತ್ತೆ ಮಸೆದು ಮಚ್ಚಾಗಿಸಿಹಲ್ಲು ಕಚ್ಚುತ್ತೇನೆದಿನದಂತ್ಯಕ್ಕೆ ಮಾತಿನಮಲ್ಲಯುದ್ದದಲ್ಲಿ ಗೆದ್ದಸಂಭ್ರಮದಲ್ಲಿಪಲ್ಲಂಗದಲ್ಲಿ ಪವಡಿಸುತ್ತೇನೆ ನಾನು ಬದುಕಿರುವುದಕ್ಕೆ ಸಾಕ್ಷಿಯಾಗಿ ಆಗೀಗಕನ್ನಡಿಯೊಳಗೆ ಇಣುಕಿನನ್ನ ಚಹರೆಯ ಇರುವಿಕೆಯ ಬಗ್ಗೆಖಾತರಿ ಪಡಿಸಿಕೊಳ್ಳುತ್ತೇನೆಇದೀಗ ಯಾತನೆಯ ಕಾಲಬರೆದ ಕವಿತೆ ಕತೆಗಳ ಸುಟ್ಟು ಹಾಕಿಅದೇ ಬೆಂಕಿಯಲ್ಲಿಒಳಿತೊಂದನ್ನು ಅರಸುವ ಕಾಲ

ಯಾತನೆಯ ದಿನಗಳು Read Post »

You cannot copy content of this page

Scroll to Top