ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಮಂಗ್ಲೇಶ್ ಡಬರಾಲ್ ಹಿಂದಿ ಕವಿ ಕನ್ನಡಕ್ಕೆ:ಕಮಲಾಕರ ಕಡವೆ “ನಮ್ಮ ಹೆದರಿಸುವಾತ” ನಮ್ಮನ್ನು ಹೆದರಿಸುವವಹೇಳುತ್ತಾನೆ ಹೆದರುವಂತದ್ದು ಏನೂ ಇಲ್ಲನಾನು ಯಾರನ್ನೂ ಹೆದರಿಸುತ್ತಿಲ್ಲನಮ್ಮನ್ನು ಹೆದರಿಸುವವಗಾಳಿಯಲ್ಲಿ ಸೆಟೆದ ತನ್ನ ಬೆರಳು ತಿವಿದು ಹೇಳುತ್ತಾನೆಯಾರಿಗೂ ಹೆದರುವ ಅಗತ್ಯವಿಲ್ಲಅವನು ತನ್ನ ಮುಷ್ಟಿ ಬಿಗಿದು ಗಾಳಿಯಲ್ಲಿ ಬೀಸುತ್ತಾನೆಮತ್ತು ಹೇಳುತ್ತಾನೆ ನೀವು ಹೆದರುತ್ತಿಲ್ಲ ತಾನೇ.ನಮ್ಮನ್ನು ಹೆದರಿಸುವವಕನ್ನಡಕದ ಹಿಂದಿನಿಂದತನ್ನ ತಣ್ಣಗಿನ ಕ್ರೂರ ಕಣ್ಣಿಂದ ನಮ್ಮೆಡೆ ದುರುಗುಟ್ಟುತ್ತಾನೆನೋಡುತ್ತಾನೆ ಯಾರು ಯಾರು ಹೆದರಿದ್ದಾರೆಯಾವಾಗ ಜನರು ಹೆದರ ತೊಡಗುತ್ತಾರೋ ಅವನು ಹಿಗ್ಗಲು ತೊಡಗುತ್ತಾನೆಮುಗುಳ್ನಗುತ್ತ ಹೇಳುತ್ತಾನೆ ಹೆದರುವ ಪ್ರಸಂಗವೇನೂ ಇಲ್ಲನಮ್ಮನ್ನು ಹೆದರಿಸುವವತಾನೇ ಹೆದರಿಕೊಳ್ಳುತ್ತಾನೆಯಾರೂ ಹೆದರುತ್ತಿಲ್ಲವೆಂದು ಅವನಿಗೆ ಕಂಡಂತೆ ====

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮಹಮೂದ್ ದಾರ್ವೀಶ್ ಪ್ಯಾಲೆಸ್ತಿನ್ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಈಗ, ನೀನು ಎಚ್ಚರಗೊಂಡಂತೆ…” ಈಗ, ನೀನು ಎಚ್ಚರಗೊಂಡಂತೆ, ಹಂಸದ ಅಂತಿಮ ನೃತ್ಯವ ನೆನಪಿಸಿಕೊ.ಕನಸಲ್ಲಿ ದೇವಕನ್ಯೆಯರೊಡನೆ ನೃತ್ಯ ಮಾಡಿದೆಯೇನು?ಗುಲಾಬಿಯ ನಿರಂತರ ಬೆಳಕಿಂದ ದಹಿಸಿದ ಚಿಟ್ಟೆ ನಿನ್ನನ್ನು ಬೆಳಗಿತೇನು?ನಿನ್ನೆದುರು ಸ್ಪಷ್ಟ ರೂಪದಲ್ಲಿ ಅವತರಿಸಿದ ಫೀನಿಕ್ಸ ಹೆಸರ ಹಿಡಿದು ನಿನ್ನ ಕರೆಯಿತೇನು?ನಿನ್ನ ಪ್ರಿಯತಮೆಯ ಬೆರಳುಗಳ ಮೂಲಕ ಬೆಳಗಾಗುವುದ ಕಂಡೆಯೇನು?ನಿನ್ನ ಕೈಯಿಂದ ಕನಸನ್ನು ಮುಟ್ಟಿದೆಯಾ ಅಥವಾನಿನ್ನದೇ ಅನುಪಸ್ಥಿತಿ ಥಟ್ಟನೆ ಅರಿವಿಗೆ ಬಂದುಅದರ ಪಾಡಿಗೆ ಕನಸುತಿರಲು ಬಿಟ್ಟೆಯಾ?ಕನಸುಗಾರರು ಕನಸುಗಳ ತೊರೆಯುವುದಿಲ್ಲಕನಸಿನೊಳಗಿನ ತಮ್ಮ ಜೀವನವನ್ನು ಅವರು ಧಗಧಗನೆ ಮುಂದುವರಿಸುವರುನಿನ್ನ ಕನಸನ್ನು ಒಂದು ಜಾಗದಲ್ಲಿ ಹೇಗೆ ಬಾಳಿದೆ ಹೇಳು,ನೀನು ಯಾರೆಂದು ನಾನು ಹೇಳುವೆ. ಈಗ ನೀನು ಎಚ್ಚರಗೊಂಡಂತೆನಿನ್ನ ಕನಸಿಗೆ ನೀನೇನಾದರೂ ಅಪಚಾರ ಮಾಡಿದ್ದರೆ, ನೆನಪಿಸಿಕೊ.ಮಾಡಿದ್ದು ಹೌದಾದರೆ ಹಂಸದ ಅಂತಿಮ ನೃತ್ಯವ ನೆನಪಿಸಿಕೊ. ********************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಬಶೀರ್ ಬದ್ರ್ ಉರ್ದು ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲು” ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲುಮರುಕ ಬಾರದೇ ನಿನಗೆ ಕೇರಿಗಳ ಸುಟ್ಟುಹಾಕಲು ಈ ಹೆಂಡದಂಗಡಿಯಲ್ಲಿ ಬಟ್ಟಲುಗಳು ಮುರಿಯುತ್ತವೆಋತುಗಳು ಬರುತಿರಲು ಋತುಗಳು ಹೋಗುತಿರಲು ಮಿಡಿವ ಎಲ್ಲ ಕಲ್ಲುಗಳಿಗೂ ಜನ ಹೃದಯ ಎಂದಿದ್ದಾರೆಆಯುಷ್ಯವೇ ಕಳೆದು ಹೋಗುತ್ತದೆ ಎದೆಯ ಹೃದಯವಾಗಿಸಲು ಪಾರಿವಾಳದ ಕಷ್ಟ ಏನೆಂದರೆ ಕೇಳಲಾಗದು ಅದುಯಾರೋ ಅದರ ಗೂಡಲ್ಲಿ ಹಾವನಿಟ್ಟಿರಲು ಬೇರೆ ಹುಡುಗಿ ಬಾಳಿನಲ್ಲಿ ಬರುವುದೇನೋ ನಿಜಎಷ್ಟು ಕಾಲ ಬೇಕಾಗುವದು ಅವಳ ಮರೆತುಬಿಡಲು ********* लोग टूट जाते हैं एक घर बनाने मेंतुम तरस नहीं खाते बस्तियाँ जलाने में और जाम टूटेंगे इस शराब-ख़ाने मेंमौसमों के आने में मौसमों के जाने में हर धड़कते पत्थर को लोग दिल समझते हैंउम्रें बीत जाती हैं दिल को दिल बनाने में फ़ाख़्ता की मजबूरी ये भी कह नहीं सकतीकौन साँप रखता है उस के आशियाने में दूसरी कोई लड़की ज़िंदगी में आएगीकितनी देर लगती है उस को भूल जाने में

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

 ವಾಷಿಂಗ್ಟನ್ ಕುಕುರ್ಟೋ ಅರ್ಜೆಂಟೀನಾದ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ ಶತಮಾನ ಇರೋವಾಗ್ಲೇಅವನು ತೋಳುಗಳ ಮೇಲೆ ಟ್ಯಾಟೂ ಹಾಕಿಸಿ ಕೊಂಡಿದ್ದಯಾರೂ ಟ್ಯಾಟೂ ಹಾಕಿಸ್ಕೊಳ್ಳೋ ಇರ್ತಾ ಇರದ ಕಾಲದಲ್ಲಿ.ಇಂದು, ಕ್ರಿಸ್ಮಸ್ ನ ಒಂದು ದಿನದ ಮೊದಲುನಾನು ಅವನಿಗೆ ಫೋನು ಮಾಡಿದ್ದೆ, ಹ್ಯಾಪಿ ಹೋಲಿಡೇಸ್ ಹೇಳಲು.ಅವನು ಫೋನು ಉತ್ತರಿಸಿದಾಗ ಪೂರಾ ಕುಡಿದಿದ್ದನನ್ನ ದನಿ ಕೇಳಿ ಅವನಿಗೆ ಖುಷಿ ಆಗಿತ್ತುಆದರೂ ಅವನು ಅದೇನೋ ಹಿಮದ ಕುರಿತು ಮಾತಾಡಿದ್ದ“ಹಿಮದಲ್ಲಿ ಸಿಮ್ಯುಲೇಷನ್ ಮಾಡಿದಂಗೆ ನೀನು ಕಣೋ”ನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದಅವನು ಅವಳಿಗೆ ವಾಪಸಾಗಿದ್ದ“ನಿನ್ನ ಮಕ್ಳು ಎಷ್ಟು ಚಂದ ಇದಾರೋ, ಅಣ್ಣ”ಅಪ್ಪ ನನ್ನ ಅಣ್ಣ ಅಂತ ಕರೆಯೋದು“ಅಪ್ಪಾ, ನಾಳೆ ಕ್ರಿಸ್ಮಸ್”.“ಚೆ ಟ್ಯಾಟೂ ಯಾಕಪ್ಪಾ ಹಾಕಿಸಕೊಂಡೆ ಅಂತ ಬೇಸರ ಆಗ್ತಾ ಇದೆ.ನನಗೆ ಎಲ್ಲದರ ಬಗ್ಗೂ ಬೇಸರಾನೇ, ಚೆ ಕುರಿತೂ”.ಅವನ ಚೆ! ನಮ್ಮ ಬಾಲ್ಯದ ಹೀರೊ ಚೆ!“ನನ್ನ ತೋಳಿನ ಮೇಲೆ ಚೆಗೆನನಗಿಂತಾ ಹೆಚ್ಚು ವಯಸ್ಸಾಗಿ ಬಿಟ್ಟಿದೆ” ನನಗಂದ ಅವನುನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದನನ್ನಪ್ಪ ಅವನ ತೋಳಿನ ಮೇಲೆ ಒರಗಿದ“ಮರೀ ಬೇಡಪ್ಪ ನನ್ನ, ಅಣ್ಣ” ಹೇಳಿದ ಅಪ್ಪ.ಎಂದಿಗೂ ಇಲ್ಲ. ನಾನೆಂದೆ. ಮತ್ತು ಫೋನು ಕೆಳಗಿಟ್ಟೆ. ********

ಅನುವಾದ ಸಂಗಾತಿ Read Post »

ಅನುವಾದ

ಹಳೆಯ ವರ್ಷಕ್ಕೊಂದುವಿದಾಯ

2019ಮುಗಿಯುತ್ತಿದೆ… ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಳೆಯ ವರ್ಷಕ್ಕೊಂದು ವಿದಾಯ ಹೇಳಬೇಕಾಗಿದೆ ಖ್ಯಾತ ಕವಿ ಗುಲ್ಜಾರರ ಕವಿತೆ ಹೇಳಿರುವ ವಿದಾಯದ ಸಾಲುಗಳು ನಿಮಗಾಗಿ ಮೆಲ್ಲ ಮೆಲ್ಲನೆ ನಡೆ ಜೀವನವೆ ತೀರಿಸಬೇಕಾದ ಋಣವಿನ್ನು ಉಳಿದಿದೆ ! ಇನ್ನಷ್ಟು ನೋವುಗಳ  ನಿವಾರಿಸಬೇಕಿದೆ, ನಿಭಾಯಿಸುವ ಕರ್ತವ್ಯ ಇನ್ನಷ್ಟಿದೆ.  ಹೊರಳಿ ನಡೆಯುವ ನಿನ್ನ ವೇಗಕೆ, ಕೆಲವು ಕೈ ಜಾರಿದವು ಕೆಲವು ಮುನಿದವು  ಮುನಿದವರ ಮನವೊಲಿಸಬೇಕಿದೆ, ಅಳುವವರ ಮತ್ತೆ ನಗಿಸಬೇಕಿದೆ. ಮನದ ಬಯಕೆಗಳದೆಷ್ಟೋ ಅಪೂರ್ಣವಾಗಿವೆ, ಕೆಲ ಅಗತ್ಯ ಕರ್ಮಗಳ ಮುಗಿಸಬೇಕಿದೆ.  ಈಡೇರಿಸಲಾಗದ ಎದೆಯ ಬಯಕೆಗಳ  ಅಲ್ಲೇ ಸಮಾಧಿ ಮಾಡಬೇಕಿದೆ. ಅರಳಿ ಮುರಿದವು ಕೆಲ ಸಂಬಂಧಗಳು, ಕೊಂಡಿ ಬೆಸೆದರೂ ಕೈ ತಪ್ಪಿದವು ಕೆಲವು. ಕಡಿದುಕೊಂಡ ಸಂಬಂಧಗಳು ಉಳಿಸಿಹೋದ ಗಾಯಗಳ  ಮಾಗಿಸಬೇಕಿದೆ. ನಡೆ ಮುಂದೆ ನೀನು,ಬರುವೆ ನಾ ಹಿಂದೆ ಹಿಂದೆ. ಬದುಕಲಾಗುವುದೇ ನಾ ನಿನ್ನನಗಲಿ? ಈ ಉಸಿರ ಮೇಲೆ ಹಕ್ಕಿದೆ ಯಾರಿಗೆ, ಅದ ಮನವರಿಕೆ ಮಾಡಿಸುವುದಿನ್ನೂ ಬಾಕಿ ಇದೆ. ಮೆಲ್ಲ ಮೆಲ್ಲನೆ ನಡೆ ಜೀವನವೆ ತೀರಿಸಬೇಕಾದ ಋಣವಿನ್ನು ಉಳಿದಿದೆ! ಕವಿತೆ ಕನ್ನಡಕ್ಕೆ ಅನುವಾದಿಸಿದವರು-ಅವ್ಯಕ್ತ

ಹಳೆಯ ವರ್ಷಕ್ಕೊಂದುವಿದಾಯ Read Post »

ಅನುವಾದ

ಅನುವಾದ ಸಂಗಾತಿ

ನಿಕ್ಕಿ ಗಿಯೊವಿನ್ನಿ ಅಮೇರಿಕಾದ ಕವಿಯಿತ್ರಿ ಕನ್ನಡಕ್ಕೆ: ಕಮಲಾಕರ ಕಡವೆ “ನೀನೂ ಸಹ ಬಂದೆ” ನಾನು ಬಂದೆ ಸರ್ವರ ಸಮ್ಮುಖ ಸ್ನೇಹಿತರ ಅರಸಿನಾನು ಬಂದೆ ಸರ್ವರ ಸಮ್ಮುಖ ಒಲವ ಅರಸಿನಾನು ಬಂದೆ ಸರ್ವರ ಸಮ್ಮುಖ ಸಹಾನುಭೂತಿಗಾಗಿ ನಿನ್ನ ಕಂಡುಕೊಂಡೆನಾನು ಬಂದೆ ಸರ್ವರ ಸಮ್ಮುಖ ಅಳಲುನಾನು ಬಂದೆ ಸರ್ವರ ಸಮ್ಮುಖ ನಗಲು ನೀನು ನನ್ನ ಕಣ್ಣೊರೆಸಿದೆನೀನು ನನ್ನ ಸಂತೋಷವ ಹಂಚಿಕೊಂಡೆನಾನು ಸರ್ವರ ಸಮ್ಮುಖ ತೊರೆದು ನಿನ್ನ ಅರಸಿ ಹೊರಟೆ ನಾನು ಸರ್ವರ ಸಮ್ಮುಖ ತೊರೆದು ಹೋದೆ ನನ್ನನೇ ಅರಸಿನಾನು ಸದಾಕಾಲಕ್ಕೆ ಸರ್ವರ ಸಮ್ಮುಖ ತೊರೆದೆನೀನೂ ಸಹ ಜೊತೆಯಾದೆ. ========= ಆಂಗ್ಲ ಮೂಲ: You Came , Too” I came to the crowd seeking friendsI came to the crowd seeking loveI came to the crowd for understanding I found youI came to the crowd to weepI came to the crowd to laugh You dried my tearsYou shared my happinessI went from the crowd seeking you I went from the crowd seeking meI went from the crowd foreverYou came, too ============

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಓಂಪ್ರಕಾಶ್ ವಾಲ್ಮೀಕಿ ಉತ್ತರಭಾರತದ ದಲಿತ ಕಾವ್ಯ ಕನ್ನಡಕ್ಕೆ-ಕಮಲಾಕರ ಕಡವೆ ಠಾಕೂರನ ಬಾವಿ ಒಲೆ ಮಣ್ಣಿಂದುಮಣ್ಣು ಕೊಳದ್ದುಕೊಳ ಠಾಕೂರಂದು ಹಸಿವು ರೋಟೀದುರೋಟಿ ರಾಗಿಯದುರಾಗಿ ಗದ್ದೇದುಗದ್ದೆ ಠಾಕೂರಂದು ಎತ್ತು ಠಾಕೂರಂದುನೇಗಿಲು ಠಾಕೂರಂದುನೇಗಿಲ ಮೇಲಿನ ಕೈ ನಮ್ದುಫಸಲು ಠಾಕೂರಂದು ಬಾವಿ ಠಾಕೂರಂದುನೀರು ಠಾಕೂರಂದುಗದ್ದೆ-ಕಣಜ ಠಾಕೂರಂದುರಸ್ತೆಬೀದಿ ಠಾಕೂರಂದುಮತ್ತೆ ನಮ್ದೇನುಂಟು?ಹಳ್ಳಿ?ಪೇಟೆ?ದೇಶ? ********************************* ಮೂಲಕವಿತೆ ठाकुर का कुआँ / ओमप्रकाश वाल्मीकि चूल्‍हा मिट्टी कामिट्टी तालाब कीतालाब ठाकुर का । भूख रोटी कीरोटी बाजरे कीबाजरा खेत काखेत ठाकुर का । बैल ठाकुर काहल ठाकुर काहल की मूठ पर हथेली अपनीफ़सल ठाकुर की । कुआँ ठाकुर कापानी ठाकुर काखेत-खलिहान ठाकुर केगली-मुहल्‍ले ठाकुर केफिर अपना क्‍या ?गाँव ?शहर ?देश ?

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ಜಾವಿದ್ ಆಖ್ತರ್.. ಅನುವಾದ ಸಂಗೀತ ಶ್ರೀಕಾಂತ ಯಾವಗಲೆಲ್ಲ ನೋವಿನ ಮೋಡ ಹರಡುತ್ತದೆಯೊ, ಯಾವಗಲೆಲ್ಲ ಬೇಸರದ, ನೆರಳು ಹರಡುತ್ತದೆಯೋ, ಯಾವಗಲೆಲ್ಲಾ ಕಣ್ಣಿಂದ ಹನಿ ರೆಪ್ಪೆಯ ಬಳಿ ಬರುತ್ತದೆಯೋ, ಯಾವಗಲೆಲ್ಲಾ ಏಕಾಂತದಿಂದ ಹೃದಯ ಹೆದರುತ್ತದೆಯೋ, ಆಗೆಲ್ಲ ನಾನು ನನ್ನ ಹೃದಯವನ್ನು ಸಂತೈಸಿದ್ದೆನೆ ಏ ಹೃದಯವೇ ನೀನೆಕೆ ಹೀಗೆ ಆಳುತ್ತಿದ್ದಿಯಾ ಜಗತ್ತಿನಲ್ಲಿ ಎಲ್ಲರಿಗೂ ಹೀಗೆ ಆಗುತ್ತದೆ. =======

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ಅರುಣ್ ಕೊಲ್ಜಾಟ್ಕರ್ ಮಹಾರಾಷ್ಟ್ರದ ದ್ವಿಭಾಷಾ ಕವಿ ಅನುವಾದ:ಕಮಲಾಕರ ಕಡವೆ ಮುದುಕಿ ಮುದುಕಿಅಂಗಿ ಅಂಚನು ಹಿಡಿದುಬೆನ್ನು ಬೀಳುತ್ತಾಳೆ. ಅವಳು ಬೇಡುತ್ತಾಳೆ ಎಂಟಾಣೆಕುದುರೆ ಲಾಳದ ಮಂದಿರ ನಿಮಗೆತೋರಿಸುವಳಂತೆ ನೀವದನ್ನು ಅದಾಗಲೇ ನೋಡಿದ್ದೀರಿಅಂದರೂ ಕುಂಟುತ್ತ ಬರ್ತಾಳೆ ಹಿಂದೆಬಿಗಿಯಾಗಿ ಹಿಡಿದು ಅಂಗಿ ಅಂಚನು ನಿಮಗೆ ಹೋಗಗೊಡುವುದಿಲ್ಲ ಅವಳುಗೊತ್ತಲ್ಲ, ಮುದುಕಿಯರ ಪರಿಹತ್ತಿ ಹೂವಂತೆ ಅಂಟಿಕೊಳ್ಳುವರು ತಿರುಗಿ ಎದುರಿಸುವಿರಿ ನೀವುಅವಳನ್ನು, ಈ ಆಟ ಮುಗಿಸುವಖಡಾಖಂಡಿತ ನಿಲುವಲ್ಲಿ ಅವಳಾಗ ಅನ್ನುತ್ತಾಳೆ: “ಇನ್ನೇನುಮಾಡಿಯಾಳು ಮುದುಕಿಯೊಂಟಿಇಂಥ ದರಿದ್ರ ಕಲ್ಲುಗುಡ್ಡಗಳಲ್ಲಿ?” ನೀವು ನೋಡುತ್ತೀರಿ. ನಿರಾಳ ಆಕಾಶಅವಳ ಗುಂಡು ಕೊರೆದ ತೂತಿನಂತಹಕಣ್ಣುಗಳ ಮೂಲಕ. ನೀವು ನೋಡುತ್ತಲಿರುವಂತೇಅವಳ ಕಣ್ಣುಗಳ ಸುತ್ತ ಸುರುವಾಗುವಸುಕ್ಕುಗಳು ಪಸರುತ್ತವೆ ಚರ್ಮದಾಚೆಗೂ ಗುಡ್ಡಗಳು ಬಿರುಕು ಬಿಟ್ಟುಮಂದಿರಗಳು ಬಿರುಕು ಬಿಟ್ಟುಆಕಾಶ ಕಳಚಿ ಬೀಳುತ್ತದೆ ಗ್ಲಾಸು ಬಿದ್ದು ಚೂರಾಗುವ ಗೌಜಲ್ಲಿಏಕಾಕಿ ನಿಂತಒಡೆಯಲಾಗದ ಮುದಿ ಜೀವ ಹಾಗೂ ನೀವಾಗಿರುತ್ತೀರಿಅವಳ ಕೈಯಲ್ಲಿನಚಿಲ್ಲರೆ ನಾಣ್ಯ. ======== ಆಂಗ್ಲಮೂಲ: An Old Woman An old woman grabshold of your sleeveand tags along. She wants a fifty paise coin.She says she will take youto the horseshoe shrine. You’ve seen it already.She hobbles along anywayand tightens her grip on your shirt. She won’t let you go.You know how old women are.They stick to you like a burr. You turn around and face herwith an air of finality.You want to end the farce. When you hear her say,‘What else can an old woman doon hills as wretched as these?’ You look right at the sky.Clear through the bullet holesshe has for her eyes. And as you look onthe cracks that begin around her eyesspread beyond her skin. And the hills crack.And the temples crack.And the sky falls with a plateglass clatteraround the shatter proof cronewho stands alone. And you are reducedto so much small changein her hand. =======

ಅನುವಾದ ಸಂಗಾತಿ Read Post »

You cannot copy content of this page

Scroll to Top