ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾರ್ಟೂನ್ ಕೋಲ್ಮಿಂಚು

ಡಾ.ಎನ್.ಸುಧೀಂದ್ರ ಪರಿಚಯ: ಕನ್ನಡ  ಸ್ನಾತಕೋತ್ತರ ಪದವಿ. .”ಕನ್ನಡ ರೇಡಿಯೋ ನಾಟಕಗಳು” ವಿಷಯದಲ್ಲಿ ಕುವೆಂಪುವಿ,ವಿ ಯಿಂದ ಡಾಕ್ಟರೇಟ್. ಆಕಾಶವಾಣಿಯಲ್ಲಿ ಕಾರ್ಯಕ್ರಮ ಅಧಿಕಾರಿ ಯಾಗಿ ಸೇವೆ. ಈಗ ವಿಶ್ರಾಂತ ಸ್ಪಂದನಟೀವಿಚಾನಲ್ ಶಿವಮೊಗ್ಗ ,ಇದರಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ  ಸೇವೆ. ಮಲೆನಾಡು ಮೀಡಿಯ ವೆಬ್ ಪೋರ್ಟಲ್ ಸಂಪಾದಕರಾಗಿ ಸೇವೆ

ಕಾರ್ಟೂನ್ ಕೋಲ್ಮಿಂಚು Read Post »

ಕಾವ್ಯಯಾನ

ಕಾವ್ಯಯಾನ

ಕಾಡುಹರಟೆ ಮತ್ತು ಕವಿಗೋಷ್ಠಿ. ವಿಜಯಶ್ರೀ ಹಾಲಾಡಿ ವಾರವಿಡೀ ಕಾಡುಮುನಿಯ ಹಕ್ಕಿಗಳು ಮರಿಗಳಿಗೆಂದು ಗೂಡುನೇಯುತ್ತಿದ್ದವು ಕಟ್ಟಿರುವೆಗಳು ಹುಲ್ಲಿನ -ಬೀಜಕ್ಕಾಗಿ ಜಗಳಾಡಿದವು ಗೋಡೆಗಳನ್ನು ಕಾಲುದಾರಿ ಮಾಡಿಕೊಂಡ ಅಳಿಲು ಮುಂಗುಸಿ ಮತ್ತದರ ಮಗು ಪಕ್ಕದ ಖಾಲಿ ಸೈಟಿನಲ್ಲಿ ವಿಹರಿಸುತ್ತಿದ್ದವು.. ಹುಲ್ಲುಗಾವಲಲ್ಲಿ ಕಿವಿಗಳು ಕಂಡದ್ದಷ್ಟೇ ಬೆಚ್ಚನೆಯ ಪಾದವನ್ನು ಎದೆಯೊಳಗೆ ಊರಿ ಮೊಲವೊಂದು ನಾಗಾಲೋಟ ಹೂಡಿತು ಹಿಂದಿನ ಮನೆಯ ಕಿಟಕಿ ಗಾಜನ್ನು ಮರಕುಟಿಕವೊಂದು ಬಡಿದದ್ದೇ ಬಡಿದದ್ದು ಅದರ ತಲೆಯೊಳಗೆ ಮೆದುಳು ಕದಡಲೇ ಇಲ್ಲವಲ್ಲ ಎಂದು ಅಚ್ಚರಿಪಡುತ್ತ ಕಾಲಹರಣಮಾಡಿದೆ.. ನನ್ನ ರಜಾದಿನಗಳು ಹೀಗೇ ಕವಿತೆ ಹುಟ್ಟಿಸುತ್ತ ಶುದ್ಧ ಕಾಡುಹರಟೆಯಾಗಿ ಸದ್ದಲ್ಲದ ಸದ್ದಿನ ಹನಿಗಳಾಗಿ ಖಾಲಿಯಾದವು ಗೆಳತೀ ಹೇಳು ನಿನ್ನ ಕವಿಗೋಷ್ಟಿಯಲ್ಲಿ ಇಂತವೆಲ್ಲ ಇದ್ದುವೇ!? ==============

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮೌನ ಮಾರಾಟಕ್ಕಿದೆ ತನುನಯ ಮೌನದ ಜೊತೆ ಮಾತು ಬಿಡುವ ಮನಸಾಗಿದೆ ಮೌನವೂ ಸಮ್ಮತಿಸಿ ಟೂ ಬಿಟ್ಟು ನಡೆದಿದೆ ಹಾಳು ಮಳೆಯ ಜೊತೆ ಕಾಡು ಹರಟೆ ಜೋರಾಗಿದೆ ನಿಲ್ಲುತ್ತಿಲ್ಲ ಮಾತಿನ ಮಳೆ ಮುಗಿಸುವ ಮನಸಿಲ್ಲದೆ ಮಳೆಗೂ ಮನಸಿಗೂ ಮಾತಿಲ್ಲದ ಜೊತೆಗಾರರಿಲ್ಲದೆ ಮಳೆಯೂ ಕೂಡ ಮೌನವನು ಮಾರಿಬಿಡು ಎನ್ನುತಿದೆ ಮಾತು ಮುಗಿಯುತ್ತಿಲ್ಲ  ಮೌನವಿಂದು ಮಾರಾಟಕ್ಕಿದೆ ಮಾತಿನ ಸಂತೆಯಲಿ ಕೊಳ್ಳುವವರಿಲ್ಲದೆ ಮೌನ ಮರುಗುತ್ತಿದೆ ಕೊಳ್ಳುವೆಯ ಮೌನವನು ನಿನ್ನ ಮಾತು ಮರೆತು ಬರೆಯುವೆನು ಕವಿತೆಯ ನಿನ್ನೊಲವ ಅರಿತು… =====================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವ್ಯತ್ಯಾಸ ಪ್ರಮೀಳಾ ಎಸ್.ಪಿ. ಎದೆಯ ಮೇಲೊಮ್ಮೆ ಕಿವಿಯಿಡು ನಿನ್ನೆಸರೇ ನನ್ನುಸಿರಲಿ ಎಂದಿದ್ದವ ಗೊರಕೆ ಸದ್ದುಸಹಿಸಲಾರೆ ದೂರ ಮಲಗುವೆಯಾ ಎನ್ನುತ್ತಿದ್ದಾನೆ ಬೈಕ್ ಮೇಲೆ ನಿನ್ನಬಾಡಿ ಲೈಟ್ ವೈಟ್,ಹಾರೀಯೆ ಎಂದಿದ್ದವ ಕಾರಿಗೂ ಮುಂಬಾರ ಹಿಂದೆ ಕೂರುವೆಯಾ ಎನ್ನುತ್ತಿದ್ದಾನೆ. ನಿನ್ನ ಮುಡಿಗೆ ಮಲ್ಲಿಗೆ ತಂದಿರುವೆ ಮುಡಿಯಲೇ ಬೇಕು ಎಂದಿದ್ದವ ಮಾರೀಗ ರೂಪಾಯಿ ನೂರು ಖಾಲಿ ಜಡೆಯೆ ಚೆನ್ನ ಎನ್ನುತ್ತಿದ್ದಾನೆ ಮಸಾಲೆ ದೋಸೆ ನಿನ್ನಿಷ್ಟ ತಿನ್ನು ನೀ ಎಷ್ಟಾದರೂ ಎಂದಿದ್ದವ ಅನ್ನ ಸಕ್ಕರೆ ಬೇಡ ಸಿರಿಧಾನ್ಯ ತಿನ್ನಲಾರೆಯಾ ಎನ್ನುತ್ತಿದ್ದಾನೆ. ಸೀರೆಯಲಿ ನೀ ಸುಂದರಿ ಕಡು ನೀಲಿ ನಿನಗಂದ ಎಂದಿದ್ದವ ಕಪ್ಪನೆ ಮೈ ಬಣ್ಣದವಳಿಗೆ ಅದ್ಯಾವ ಸೀರೆಯಾದರೇನು ಎನ್ನುತ್ತಿದ್ದಾನೆ ನಿನ್ನ ಮಾತೆ ಎನೆಗೆ ಕೇಳಿದಷ್ಟು ಇಂಪು, ಮನವೆಲ್ಲ ತಂಪು ಎಂದಿದ್ದವ ನಾಯಿ ಬೊಗಳಿದ ಸದ್ದು ಮಾತು ನಿಲ್ಲಿಸುವೆಯಾ ಎನ್ನುತ್ತಿದ್ದಾನೆ. ಕೇಳುವುದಾದರೂ ಯಾರಿಗೆ ನಾನು,ಪ್ರಶ್ನೆಗಳನು….? ಇರುವುದಾದರೂ ಯಾರು ಉತ್ತರಿಸಲು? ಬರೆಯಲೇನಿದೆ ಬಿಳಿ ಹಾಳೆಯ ಮೇಲೆ…. ಕಡಿಮೆಯಾಗಿದ್ದು ಪ್ರೀತಿಯೇ ಯಾರಿಗೆ ಕೇಳಲಿ? ಹೇಳಲಿ? =======

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾ ಮನುಷ್ಯಾ ಅದೀನಿ ಚಂರಾನನ ದು:ಖ ಆದಾಗ ಅತ್ತೇನಿ ಸಂತೋಷ ಆದಾಗ ನಕ್ಕೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ಮನಸ್ನ್ಯಾಗೊಂದು, ಮಾತ್ನ್ಯಾಗೊಂದು, ಕೆಲಸ್ದಾಗೊಂದು ಮಾಡಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ…. ಮುಖವಾಡ ಇಟ್ಕೊಂಡ್ ನೋಡಿಲ್ಲ ಮುಖವಾಡ ಹಾಕ್ಕೊಂಡ್ ಆಡಿಲ್ಲ ಯಾಕಂದ್ರ ನಾ ಮನುಷ್ಯಾ ಅದೀನಿ….. ಇದ್ರ ಕೊಟ್ಟೀನಿ,ಇಲ್ಲಾಂದ್ರ ಬಿಟ್ಟೀನಿ ಮುಂದ್ ಹೊಗಳಿಲ್ಲ,ಹಿಂದ್ ಬೈದಿಲ್ಲ ಯಾಕಂದ್ರ ನಾ ಮನಷ್ಯಾ ಅದೀನಿ….. ಕಷ್ಟ ಅಂದ್ರ ಕರಗೀನಿ,ಇಷ್ಟ ಅಂದ್ರ ಹಿಗ್ಗೀನಿ ಏನೂ ಇಲ್ಲಾಂದ್ರ ಸುಮ್ಮನದೀನಿ ಯಾಕಂದ್ರ ನಾ ಮನಷ್ಯಾ ಅದೀನಿ…… ಬದಕಾಕ ರೊಕ್ಕ ಬೇಕ,ರೊಕ್ಕಕ ಬದಕಿಲ್ಲ ಇದ್ದಾಗ ಉಂಡೇನಿ,ಇಲ್ಲದಾಗ ನೊಂದೇನಿ ಯಾಕಂದ್ರ ನಾ ಮನಷ್ಯಾ ಅದೀನಿ….. ===========================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ದೀಪಾಜಿ ಮನದಬಾಗಿಲ ಕದಲಿಸಿದರೆ ಏನರ್ಥ ಸಾಕಿ, ಒಳನುಸುಳುವ ಇಚ್ಛೆ ಇಲ್ಲದವರು ಬಯಲ ದಾಟಿ ಬರಬಾರದಿತ್ತು.. ಅಂಗಾತ ಮಲಗಿದ ರಸ್ತೆ ದಾಟಿ ಬಾಗಿಲ ವರೆಗೂ ಬಂದು ಕದತಟ್ಟದೆ ಹಿಂತಿರುಗುತ್ತೇನೆಂದರೆ ಏನರ್ಥ ಸಾಕಿ.. ಮೊಗ ನೋಡಿ ಮಾತನಾಡಲಾಗದವರು ಕಾರ್ಮೋಡದ ಮಧ್ಯದ ಕೊಲ್ಮಿಂಚಿನಂತ ಮಾತು ಆರಂಭಿಸಲು ಬರಬಾರದಿತ್ತು..ಬಿದಿಗೆ ಚಂದಿರನಂತೆ ಬಂದು ನಿಂತು ಕಾಯ್ದು,ಕದ ತೆರೆಯುವಾಗ ಬೆನ್ನುಮಾಡಿ ಹೊರಟರೆ ಏನರ್ಥ ಸಾಕಿ.. ಬೆರಳಿಗೆ ಬೆರಳ ಕಸಿಮಾಡಿದಾಗ ಹುಸಿ ಮುನಿಸಮಾಡಿ ಕೊಸರಾಡಲು ಬರಬಾರದಿತ್ತು.. ಮರುಳ ಮಾಡಿ ಕರುಳ ಹಿಂಡಿ,ಮಂಡಿ ಹಚ್ಚಿ ಕುಳಿತು ಬೆರಳ‌ ತಾಗಿಸಿ ನಕ್ಕರೆ ಏನರ್ಥ ಸಾಕಿ.. ಪ್ರೇಮರಾಗ ನುಡಿಸಲಾಗದವರು ಕನಸೊಳಗೂ ಲಗ್ಗೆ ಇಟ್ಟು ಒಳನುಗ್ಗಲು ಬರಬಾರದಿತ್ತು.. ಕಣ್ಣಕಪ್ಪು ತೀಡುವ ನೆಪ ತೋರಿ ದೃಷ್ಟಿಗೆ ದೃಷ್ಟಿ ಸೇರಿಸಿ ಮನದ ವೇದನೆ ಕಲಕಿದರೆ ಏನರ್ಥ ಸಾಕಿ.. ಕತ್ತಲೆಯ ಮೋಹಿದುವವರು ದೀಪದ ಬೆಳಕ ಹುಡುಕಲು ಬರಬಾರದಿತ್ತು‌.ಎದೆಯ ತುಂಬ ಅನುರಾಗದ ಅಲೆಗಳ ತುಂಬಿಕೊಂಡು ವಿರಹದುರಿಯಲಿ ಬೆಂದರೆ ಏನರ್ಥ ಸಾಕಿ.. =================================================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜಾಗವೊಂದು ಬೇಕಾಗಿದೆ! ಪ್ರಮೀಳಾ ಎಸ್.ಪಿ. ಬೇಕಿದೆ ನನಗೊಂದು ಜಾಗ ಮನೆ ಮಂದಿರ ಕಟ್ಟಲಲ್ಲ! ಮಸೀದಿ ಚರ್ಚು ಕಟ್ಟಿ ವಿವಾದ ಹುಟ್ಟು ಹಾಕಲಲ್ಲ! ಬ್ಯಾಂಕು ಬಂಕು ಮಾಲ್ ಹಾಲ್ ನಿರ್ಮಿಸಲಲ್ಲ! ಒಂದಿಷ್ಟು ಕುಳಿತು ಅಳಲು ಏಕಾಂತ ಸಿಗುವ ಜಾಗ! ಮನೆಯಲ್ಲಿ ಮಕ್ಕಳು ನೋಡಿಯಾರು ಬೀದಿಯಲಿ ಜನ ನಕ್ಕಾರು! ಗುಡಿಯ ಪೂಜಾರಿದುರುಗುಟ್ಟಿಯಾನುಕಚೇರಿಯಲ್ಲಿ ನಗೆಗೆಆಹಾರವಾದೇನು! ಅದಕೆಯಾರೂ ನೋಡದ, ಯಾರಿಗೂಕಾಣದ ಏಕಾಂತದ ಜಾಗವೊಂದು ಬೇಕಿದೆಕಣ್ಣೀರ ಕಟ್ಟೆ ಒಡೆಯಲು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಧುಕುಮಾರ್ ಸಿ.ಹೆಚ್. ನೂತನ ಪ್ರಜ್ಞಾ ದೀಪಿಕೆ ನಿರ್ಗಮಿಸು ಸಾಕ್ಷಿಪ್ರಜ್ಞೆಯೆ, ಅಂತರಂಗದ ದನಿಯೆದುರು ಮಂಡಿಯೂರಿ ನಿಲ್ಲಬೇಡ: ಯಾರದೋ ಬಹಿರಂಗ ತಲ್ಲಣಕೆ ಮನ ತೆರೆಯಬೇಡ ತಪ್ಪು-ಒಪ್ಪುಗಳ ಕಂತೆಯನು ಅಡ್ಡಗೋಡೆಯ ಮೇಲಿಟ್ಟು ಸುಮ್ಮನೆ- ತಣ್ಣಗೆ ಪಲಾಯನ ಮಾಡು ಪ್ರತಿಕ್ರಿಯೆ – ಸ್ಪಂದನದ ಗೊಡವೆ ನಿನಗೇತಕೆ? ಭೂತದ ಬೆನ್ನು ಹತ್ತಿ; ವರ್ತಮಾನವ ಕಟ್ಟಿಡು ಸತ್ಯದರ್ಶನಕೆ ಗಾಂಧಾರಿ- ಧೃತರಾಷ್ಡçರ ಸಾಲಲ್ಲಿ ನಿಲ್ಲು ನಮ್ಮವ ನಮ್ಮವರೆಂಬ ದಾರಿಯಲಿ ಸದ್ದುಮಾಡದೆ ನುಸುಳಿ ನುಸುಳಿ ಮುಂದೆ ಸಾಗು. ಅನುಭವ ಮಂಟಪದ ಮಹಾನುಡಿಗಳನು ಅನ್ಯರಿಗೆ ಅನ್ವಯಿಸಿ ಗುಣಿಸಿಬಿಡು ಅಹಮಹಮಿಕೆಯ ಆಪ್ಯಾಯನದೊಡನೆ ಲೋಕದೆದುರು ಸರ್ವಗುಣ ಸಂಪನ್ನತೆಯ ಪೋಷಾಕು ಧರಿಸಿ ಯಾರ ಜಪ್ತಿಗೂ ಸಿಗದ ನಗೆಯ ನವಿಲನ್ನೆÃರಿ ಆ ಭಾವ ಈ ಭಾವ ಎಲ್ಲ ಭಾವಗಳ ಹಿಮ್ಮೆಟ್ಟಿಸಿ ಸುಮ್ಮನೆ- ತಣ್ಣಗೆ ಪಲಾಯನ ಮಾಡು ಸುಮ್ಮನೆ- ತಣ್ಣಗೆ ಪಲಾಯನ ಮಾಡು ======================= ಪರಿಚಯ: ಕನ್ನಡಭಾಷಾ ಶಿಕ್ಷಕರು-ಬರಹಗಾರರು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿ ಕೆ.ಬಿ.ಸಿದ್ದಯ್ಯನವರ ನೆನಪಿನಲ್ಲಿ ಕೊನೆಯ ಅ.. ಆ.. ಮಂಟಪ ಡಾ.ಆನಂದ ಕುಮಾರ್ ಮೈಸೂರು ಹಿಂದೆ ಮುಂದೆ ಒಂದಾಕ್ಷರದ ಬದಲಿಕೆ ಒಂದಾಕ್ಷರ ಸೇರೊ ಆಳಿಸೋ ಹಾಗಿಲ್ಲವೆಂದು ಪ್ರಕಟಿಸೋಕೊ ತಾಕೀತು ಮಾಡೋ ಹಾಗೆ ಅ.. ಆ.. ಮಂಟಪದ ಮಾರ್ಗದ ಸ್ವೀಕಾರಕ್ಕೆ ಕಾಲನ ಒಪ್ಪಿಸಿದ ತಂಟೆಕೋರ ಮುದ್ದು ಮಾದಪ್ಪನ ಕುಡಿಯೇ ಕೆಲಹೊತ್ತು ಇನಿಯ ಮೋಹ ಪಾಶ ಕಳಚಿ ಸಿದ್ದಾರ್ಥ ರೂಪ ಧರಿಸಿಯೂ ಪತಿ ಧರ್ಮ ಪಾಲಕನಾಗಿಯೂ ಆಲ್ಲಮ.. ಅಲ್ಲ..ಹೌದು ಅಪ್ಪ ಭಾವ ಬಂಧನ ಕಳಚದಾ ಕಹಿ ಸಿಹಿ ಊಣ್ಣೋ ವ್ಯಾಮೋಹ ವ್ಯಾಕುಲತೆ ಇಲ್ಲದಾಗಿ ಸಂಸಾರ ಸಾಗರ ಈಜಿ ತಾವರೆ ಪುಷ್ಪಧಾರಿ ಆದಿಜಾಂಭವನಾದೆ ಅಡ್ಡಿ ಅತಂಕ ಆಗಾಧಗಳೊಳಗಿಂದ ಎದ್ದು ಮರೆವಿನಂದು ಪೂಜಿಸುವಿಕೆಗೆ ನಿನ್ನ ಕೈನ ಸುರೆ ಮದ್ದು ನೀಡೆಂದು ಬೇಡಿ ಪಡೆದಿಹ ಐಭೋಗ ಸಂತನಂತೆ ಸಂಗಡಿಗನಾಗಿ ಎಲ್ಲರೊಂದಿಗೆ ಹಂಚಿಕೊಂಡು ಸೇವಿಸಿದ್ದ ಮಾತಂಗಿ ಮಗನೇ ನಾಡ ಮಣ್ಣಲ್ಲಿ ಮಣ್ಣಾದವರ ಕತೆಯ ಕರಳು ಕಿವಚುವಂತೆ ಹಾಡು ಕಟ್ಟಿದ್ದ ಮೋಡಿಗಾರ ಅಲ ಆಕಾಶೆ ಮರದ ನಡು ಮಧ್ಯೆ ಮಲಗಿದ್ದ ಬಾಧ್ಯತೆಗೆ ಕಟ್ಟು ಬಿದ್ದಯೊ ಮಾನ್ಯತೆಗಾಗಿ ಚರಮರಾಗವನ್ನು ಗುನುಗಿ ಹೋಗಿ ಬಿಟ್ಟಯಾ ಗುರುವೇ. ============================. ಪರಿಚಯ: ಕಳೆದ ಇಪ್ಪತ್ತೇಳು ವರುಷದಿಂದ ದಲಿತ ಚಳುವಳಿ ಹಾಗೂ ಅಲೆಮಾರಿ & ಅರೆ ಅಲೆಮಾರಿ ಮತ್ತು ಕೊಳಚೆ ನಿವಾಸಿಗಳ ಹಕ್ಕುಗಳ ಪರ ಕೆ ಕೆ ಎನ್ ಎಸ್ ಸಹಿತ ಅನೇಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತ ಹಾಗೂ ಜಾತಿ ಸಮನ್ವಯಕ್ಕಾಗಿ ಸಾಮರಸ್ಯ ವೇದಿಕೆಯಲ್ಲಿ ಪಾಲ್ಗೊಂಡಿದ್ದಾರೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಮಿಳಾ ಎಸ್.ಪಿ. ಹಬ್ಬ ದೀಪಾವಳಿಯ ಸಡಗರಕ್ಕೆ ಮಗಳು ಮನೆಗೆ ಬಂದಂತೆ ಮೇಕೆಯೂ ಸಂತೆಗೆ ಬಂದಿತು. ಯಾರದ್ದೋ ಮನೆ ಸೇರಿ ರಾತ್ರಿ ಇಡೀ ಮಾವಿನ ಎಲೆ ತಿಂದು ನಗುತ್ತಿತ್ತು. ತುಂಬಿದ ಮೊಲೆಗಳು ಜೋತು ಬಿದ್ದಿದ್ದ ಕಂಡು ಆಡಿನ ಹಾಲು ಶ್ರೇಷ್ಟ ವಂತೆ ಎಂದೇ ನನ್ನೆದೆಯೊಳಗೆ. ಮಾವಿನ ಎಲೆ ಮೆಲುಕಿ ಮಲಗಿದ್ದ ಮೇಕೆ ಬೆಳಗಿನ ಜಾವಕ್ಕೆ ಹಾಲು ಕಕ್ಕಿತ್ತು. ಒಂದಾಡು ಮೂರು ಪಾಲಾಗಿ ನೇತಾಡುತ್ತಿದ್ದ ನೋಡಿ ಮನ ಹೋಳಾಗಿತ್ತು. ಮಹಾವೀರ ನ ನಾಡಲ್ಲಿ ಅಣ್ಣ ನ ವಚನ ನೆನೆದು.. ಮಗಳ ಊಟ ಮುಗಿಯಿತು. ಆಕಳಿಕೆ ಬಂತೆಂದು ನೆಪದಲ್ಲಿ ಕಣ್ಣ ನೀರು ಹೊರ ಹರಿಯಿತು.. ========== ಪರಿಚಯ: ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ವೃತ್ತಿಯಲ್ಲಿ ಶಿಕ್ಷಕಿ,ನೋವುಗಳ ನಡುವೆಯೂ ಖುಶಿಯಾಗಿರುವ ಬಯಸುವ ವ್ಯಕ್ತಿತ್ವ

ಕಾವ್ಯಯಾನ Read Post »

You cannot copy content of this page

Scroll to Top