ನಿನ್ನ ಮೌನಕೆ ಮಾತ…
ನಿನ್ನ ಮೌನಕೆ ಮಾತ….…… ಜಯಕವಿ ಡಾ.ಜಯಪ್ಪ ಹೊನ್ನಾಳಿ ನಿನ್ನ ಮೌನಕೆ ಮಾತ ತೊಡಿಸಬಲ್ಲೆನು ನಾನು ನೀ ಹೇಳದಿರೆ ಮುಗುಳು ತುಟಿಯ ತೆರೆದು..! ಹೂಗನಸುಗಳ ಬರೆದು ನಿನ್ನ ಕಣ್ಣಲೆ ಒರೆದು ಚೈತ್ರ ಚಿಗಿದಿದೆ ತಾನು; ಚಿಗರೆ ನೆರೆದು..! ಕಡಿದ ಬುಡದಲೆ ನೆನಪು ಹೊಂಬಾಳೆಯಾಗುತಿವೆ ಕತ್ತರಿಸಿದೆಡೆಯೆ; ತತ್ತರಿಸುತೆದ್ದು..! ವಿಧಿಯು ಮರೆತಿದೆ ಜಿದ್ದು ನೋವು ಸೇರಿದೆ ಗುದ್ದು ಆನಂದ ಬಾಷ್ಪಕಿದೆ ಬೆರಗ ಮುದ್ದು..! ಹೊಸ ಹಾದಿ ಹಾರೈಸಿ ಹೊಸ ಬೆಳಕು ಕೋರೈಸಿ ಹೊಸ ಜೀವ ಭಾವದಲಿ ಯುಗಳ ವಾಣಿ..! ಬೀಸಿದೆಲರಲೆ ಯಾನ ತಾರೆಗಳೆ ಬಹುಮಾನ ಕಡಲೊಡಲಿನಲಿ ಒಲವ ಚಂದ್ರ ದೋಣಿ..! ************







