ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಜುಲ್ ಕಾಫಿ಼ಯಾ ಗಜ಼ಲ್ ಎ.ಹೇಮಗಂಗಾ ನೀ ಒಪ್ಪಿಗೆಯ ನಗೆ ಬೀರುವವರೆಗೂ ಮನದ ಕಳವಳಕೆ ಕೊನೆಯಿಲ್ಲ ನೀ ಅಪ್ಪುಗೆಯ ಬಿಸಿ ನೀಡುವವರೆಗೂ ಹೃದಯದ ತಳಮಳಕೆ ಕೊನೆಯಿಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಮಳೆ ಸುರಿದು ಇಂದ್ರಚಾಪ ಮೂಡಿತೇಕೆ ? ನೀ ಬರಡು ಬಾಳಿಗೆ ಹಸಿರಾಗುವವರೆಗೂ ಅಂತರಂಗದ ಹೊಯ್ದಾಟಕೆ ಕೊನೆಯಿಲ್ಲ ಗೋರಿ ಸೇರಿದ ಕನಸುಗಳು ಬಿಡದೇ ಬೇತಾಳನಂತೆ ಹೆಗಲೇರಿವೆ ನೀ ಹೊಸ ಬಯಕೆಗಳ ಬಿತ್ತುವವರೆಗೂ ಅಂತರಾಳದ ನರಳಾಟಕೆ ಕೊನೆಯಿಲ್ಲ ಅಗಲಿಕೆಯ ನೋವೇ ದಾವಾನಲವಾಗಿ ಉಸಿರು ಬಿಸುಸುಯ್ಯುತಿದೆ ನೀ ಸಿಹಿಚುಂಬನದಿ ಕಸುವು ತುಂಬುವವರೆಗೂ ಜೀವದ ತಲ್ಲಣಕೆ ಕೊನೆಯಿಲ್ಲ ಪ್ರೀತಿತೊರೆಯ ಬತ್ತಿಸದೇ ಕಾಪಿಡುವೆಯೆಂಬ ಭರವಸೆ ಈಗೆಲ್ಲಿ ? ನೀ ಮೊಗೆಮೊಗೆದು ಉಣಿಸುವವರೆಗೂ ತೀರದ ದಾಹಕೆ ಕೊನೆಯಿಲ್ಲ ನಂಜಾದ ನೆನಪುಗಳು ಮಸಣದ ಹಾದಿಯತ್ತ ಕೊಂಡೊಯ್ಯುತಿವೆ ನೀ ನನ್ನವನಾಗುವವರೆಗೂ ಆಂತರ್ಯದ ತುಡಿತಕೆ ಕೊನೆಯಿಲ್ಲ *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೃದಯ ಕೇಳದು ವೀಣಾ ರಮೇಶ್ ತಿಳಿಯದೆ ಕಳೆದು ಹೋಗಿದೆ ಹೃದಯ ಮನಸ್ಸಿಗೂ ಸಿಗದು ಕೇಳದು ಕರೆಯ, ಪ್ರೀತಿ, ಹೃದಯಕ್ಕೂ ಅಂಟಿದೆ ಅದೇನು ನಂಟಿದೆ ಗೊತ್ತಿಲ್ಲ ಗೆಳತಿ ಮನಸ್ಸಿಗೂ ಭಾವನೆ ಗಳಿಗೂ ಕದನ ನಡೀತಿದೆ ಸದ್ದಿಲದೆ, ಮುನಿಸು ಬಿಡಲು ಭಾವನೆಗಳ ತಕರಾರು ನೀನು ಒಳಗೆ ಕರೆಯುತ್ತಿಲ್ಲ ಹಿಂತಿರುಗಲು ಮನಸು ಒಪ್ಪುತ್ತಿಲ್ಲ ಒಮ್ಮೆ ನನ್ನ ಹೆಸರು ಕರೆದು ಬಿಡು ನೀನು ಮರತೇ ಬಿಡುವೆ ನಿನ್ನ ನೆನಪುಗಳಿಂದ ಕಟ್ಟಿಹಾಕಿದ ನನ್ನ ನೋವುಗಳನು ನೀನಿಲ್ಲದಿರುವಾಗಲೆ ಭಾವನೆಗಳು ಕರಗುತ್ತಿವೆ, ಕಡಲಿಗೆ ಚುಂಬಿಸುವ ಅಲೆಗಳಲಿ ನೆನಪಾಗುತ್ತಿವೆ ಯಾಕೋ ಮುತ್ತಿಕ್ಕದ ನಿನ್ನ ನೆನಪುಗಳು ಸುಮ್ಮನಿವೆ. ನೀನಿಲ್ಲದಿರುವಾಗಲೆ ಪೆನ್ನು ಹಾಳೆಗಳು ಮುಷ್ಕರ ಹೂಡಿವೆ ನಿಶ್ಚಲ ಕಡಲಿನಲೂ ಬೋರ್ಗೆರೆವ ನಿನ್ನ ನೆನಪುಗಳು, ಅಪ್ಪಳಿಸುವ ಭಾವನೆಗಳು ನೀನಿಲ್ಲದಿರುವಾಗಲೆ ಬರಿ ಕವಿತೆಗೆ ಸಾಲಾದೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ!!! ಸರೋಜಾ ಶ್ರೀಕಾಂತ್ ಅಮಾತಿ ಇಬ್ಬನಿಯ ಹನಿಯೊಂದು ಲಜ್ಜೆ ಬಿಟ್ಟು ಗೆಜ್ಜೆನಾದದ ಹೆಜ್ಜೆ ಹೇಗಿಡಲೆಂತಂತೆ!? ಹರಸುತ ಮೋಡಗಳೆಲ್ಲ ಮತ್ತೇ ತುಸು ಕತ್ತಲವ ಹೊತ್ತು ತಂದು ಹಾರೈಸಿದವಂತೆ! ಹಬ್ಬಿದ ಮಬ್ಬನ್ನೇ ನೆವ ಮಾಡಿಕೊಂಡಿಬ್ಬನಿ ಗರಿಕೆಯ ತಬ್ಬಿಕ್ಕೊಂಡಿತಂತೆ! ಅರಸಿ ಬಂದ ಸವಿಗಾಳಿಯು ಸರಸವ ನೋಡಿ ಸುಮ್ಮನೆ ದೂರ ಸರಿಯಿತಂತೆ! ಸ್ಪರ್ಶದುಸಿರು ಹರ್ಷದರಸಿಗೆ ಹೊಸದಿರಿಸ ನೆಪದಿ ಹನಿಹನಿ ನೀರನೇ ಪೋಣಿಸಿ ಸೀರೆಯಾಗಿಸಿತಂತೆ! ನಾಚಿ ಇಬ್ಬನಿ ಮುತ್ತಿಗೆ ಹಾಕಿದೆ ಮುತ್ತೀನಿಂದಲೇ…. ಬಾಚಿ ಅಪ್ಪಿದ ಮುಂಜಾನೆ ಮಂಜಿಗೂ ಮತ್ತೇರುತ್ತಿದೆಯಂತೆ….!!! ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಗುಳಿಯಿಲ್ಲದ ಕದ ಶಶಿಕಲಾ ವೀ ಹುಡೇದ ಬೀಸುವ ಆಷಾಢ ಗಾಳಿ ಬೀದಿಬೀದಿಯಲಿ ಗಂಡು ನಾಯಿಗಳ ದಂಡ ನಡುವೆ ಒಂದೇ ಒಂದು ಹೆಣ್ಣುನಾಯಿ ಅವಕ್ಕೆ ನಾಚಿಕೆಯಿಲ್ಲ ಎಂದಿರಾ? ಇತ್ತಿತ್ತಲಾಗಿ ನಾಚುವ ಸರದಿ ನಿಮ್ಮದೇ ಯಾಕೆಂದರೆ ಅವುಗಳನೂ ಮೀರಿಸಿದ್ದೀರಿ ನೀವು? ಗದ್ದೆ ಕೆಸರು ಬಯಲು ಹೊಲ ಮನೆ ಗುಡಿಸಲು ಕೊನೆಗೆ ಬಸ್ಸು ರೈಲು ಹೊಟೇಲು ಲಿಫ್ಟು ಹಾಳು ಗೋದಾಮುಗಳು ಎಲ್ಲುಂಟು ಎಲ್ಲಿಲ್ಲ? ಅಪ್ಪನ ಕೂಸಿಗೆ ಮಗಳೇ ತಾಯಿ ಅಣ್ಣ ತಮ್ಮ ಗೆಳೆಯ ಹಳೆಯ ಮಾವ ಭಾವ ಮುದೀಯ ಸರೀಕ ಸಹೋದ್ಯೋಗಿ ಸನ್ಯಾಸಿ ಬಿಕನಾಸಿ ಬಾಸು ಶಿಕ್ಷಕ ಯಾರುಂಟು ಯಾರಲ್ಲ ಇಂವನ ಬಿಟ್ಟು ಇಂವ ಯಾರು? ಎಲ್ಲರೂ ತಾಯ್ಗಂಡರೇ ಮತ್ತೆ ನಾವು ರಾಖಿ ಕಟ್ಟಿದ ಕೈಗಳೆಲ್ಲಿ ಸೋದರರೆ? ಹಿಂದೊಬ್ಬ ತೊಡೆ ಬಗಿದು ನೆತ್ತರೆಣ್ಣೆಯ ಮಾಡಿ ಎಲುಬ ಬಾಚಣಿಕೆಯಲಿ ಕರುಳ ಬಾಚಿದನಂತೆ ಮುಯ್ಯಿಗಾಗಿ ಇದ್ದರೂ ಇದ್ದಾನು ಈಗಿಲ್ಲವಲ್ಲ! ಬಿಕ್ಕುತಿದೆ ದ್ರೌಪದಿಯ ಆತ್ಮ ಕಿಸಿದ ಕೂಪದಲಿ ಕಳೆದು ಹೋಗುವ ಅಣ್ಣಗಳಿರಾ ಯಾವ ಸುಖ ಪಡೆದಿರಿ ನೀವು ಗೆದ್ದೆವೆಂಬ ಭ್ರಮೆಯಲಿ ಗಹಗಹಿಸಿ ನಗಬೇಡಿ ನಿಲ್ಲಿ ಇಲ್ಲಿ ಸೋತಿದ್ದು ನೀವು ಮಾತ್ರವಲ್ಲ ಮನುಷ್ಯತ್ವ ಕೂಡ ಬೆತ್ತಲೆ ಮೈಯ ಮೇಲೆ ಹರಿವ ಸಾವಿರ ಹಲ್ಲಿಗಳೆ ಹೇಸಿಗೆಯ ನೆಕ್ಕಿ ಬಂದ ನಾಲಿಗೆಗಳೆ ಹುತ್ತದೊಳು ಹಾವಿಲ್ಲದಿರಬಹುದು ವಿಷವಂತೂ ಇದ್ದೇ ಇದೆ ಈಗೀಗ ನಮ್ಮ ಕನಸುಗಳಲಿ ಬರೀ ಪಾಣಿಪೀಠದ ಮೇಲೆ ನಿಗುರಿ ಕುಣಿವ ಲಿಂಗಗಳೇ ಎಷ್ಟಂತ ಕುಣಿದಾವು ಮತ್ತೆ ಮಸೆದ ಉಳಿ ಕೆಂಪು ಹನಿಗಳಿಗಾಗಿ ಕಾದಿದೆ ಹೇಳಿ ಮತ್ತೆ ಈಗ ನಮ್ಮ ಕನಸಿಗೆ ಬೆಚ್ಚುವ ಮನುಷ್ಯತ್ವ ನಿಮ್ಮಲ್ಲಿದೆಯೆ? *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಶೆಯನರಿಸಿ ಶಾಲಿನಿ ಆರ್. ನಿಶೆಯರಸಿ ನೇಸರ ಹೊಂಟ್ಯಾನ ನಿಶೆಯರಸಿ ಬಂದಾಳಾ ಸಂತೆಯೊಳಗೆ ಸದ್ದಿಲ್ಲದಂತೆ            ಬದುಕ ಅಡವಿಯಿದು            ಬೆತ್ತಲಾಗಿಹುದಿಲ್ಲಿಮನದ            ಭಾವಗಳು ಗುಟ್ಟುರಟ್ಟಾಗಿ            ಹರಿದಿಹುದಿಲ್ಲಿ ಈ ಹೊತ್ತು ಸರಸ ವಿರಸಗಳ ಸಮ ರಸ ಸಮ್ಮಿಳಿತದ ಭಾವ ಆ ಸುಖದ ನೋವ ಅನುಭವಿಸಿ ಅರಗಿಸಿ ಕನವರಿಸಿ ಮಾನಿನಿ ಸರಸಿ             ಅಂಚಿಲ್ಲದ ಸೆರಗಿಲ್ಲದ             ಸವಿನೆನಪ ಪಾಚಿಯ ಹೊದ್ದು             ಅಂಟಿಯು ಅಂಟದಿಹ ಬಾಳ             ಗದ್ದುಗೆಯಲಿ ನೆಮ್ಮದಿಯ  ನಿದಿರೆಗೆ ಮರುಳಾಗಿ ಮಲಗಿಹಳಿಲ್ಲಿ ಸುಖನಾಶಿನಿ… ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬದುಕಿನ ಬಣ್ಣದಲ್ಲಿ ಅನಾಥ ಪ್ರೀತಿ ವೀಣಾ ರಮೇಶ್ ಪ್ರೀತಿ ಸಿಗದ ಒಂದಷ್ಟು ಮನಸುಗಳು ನಮ್ಮ ನಡುವೆ ಇವೆ ನೀವೇನು ಮಾಡಬೇಕಿಲ್ಲ ವಾತ್ಸಲ್ಯದ ಪ್ರೀತಿಗೆ ಬಣ್ಣ ತುಂಬಿದರೆ ಸಾಕು. ಆ ಮನಸ್ಸಿನೊಳಗೆ ಕನಸು ಕಟ್ಟಿದ ಬಣ್ಣ ಸುಂದರ ಬದುಕಿನ ಬಣ್ಣ ಯಾವ ಕಲ್ಮಶವು ಇಲ್ಲದ ತಿಳಿನೀರಿನ ಬಣ್ಣ. ಪ್ರೀತಿ ಸಿಗದ ,ಹೃದಯ ಭಾರವಾಗಿದೆ ,ಬಿಟ್ಟರೆ ಮನಸು ಹೂವಿನಷ್ಟು ಹಗುರ,ನೀವೇ ಎತ್ತಿ ನೋಡಿ ಅಷ್ಟೇನು ಭಾರವಿಲ್ಲ,ಎದೆಯೊಳಗೆ ನೋವು ತುಂಬಿದ ಭಾರ ವಷ್ಟೇ. | ಆ ಮನಸುಗಳಿಗೆ ನೀವೇ ರಂಗು ತುಂಬಿ ಬದುಕಿಗೊಂದು ಸುಂದರ ಬಣ್ಣ ಕೊಟ್ಟು ನೋಡಿ ನಿಸ್ವಾರ್ಥ ಪ್ರೀತಿ ತುಂಬಿ, ಮನದಲಿ ಕಲ್ಪನೆಗಳಿಗೆ ಬಣ್ಣ ನೀಡಿ,ಸಾಂತ್ವನ ನೀಡಿ,ನಿಮ್ಮಿಂದ ಅಂತಕರಣ,ಮಮತೆ ತುಂಬಿಸಿಕೊಂಡು ಬದುಕಿಗೆ ಬಣ್ಣ ಕಟ್ಟಿಕೊಳ್ಳಲಿ ಬಿಡಿ. ರಂಗು ರಂಗಿನ ಮನಸಿಗೆ ಬಣ್ಣ ಕಟ್ಟಿಕೊಡಿ ಬದುಕೊಂದು ಬಿಚ್ಚಿ ಕೊಡಿ ಇನ್ನೆಲ್ಲೂ ಸಿಗದು ಬಿಡಿ ಬದುಕಿಗೊಂದು ಆಧಾರವಾಗಿಬಿಡಿ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮುಖ ಪುಸ್ತಕ ಗೌರಿ.ಚಂದ್ರಕೇಸರಿ ಮುಖ ಪುಸ್ತಕ ತೆರೆದರೆ ನಿತ್ಯ ಹತ್ತಾರು ರಿಕ್ವೆಸ್ಟುಗಳು ಕನ್ಫರ್ಮ್ ಮಾಡುವ ಎಂದರೆ ಮನಸು ಬುದ್ಧಿ ಹೇಳುತ್ತದೆ ಸ್ನೇಹದ ಅರಿಕೆ ಇಟ್ಟವರ ಕಥೆ ಹೇಳುತ್ತವೆ ಅವರ ಪೋಸ್ಟು ಲೈಕು, ಕಮೆಂಟುಗಳು ಅವೇ ಹಳಸಲು ಜೋಕುಗಳು ಫಾರ್ವರ್ಡ್ ಮೆಸೇಜುಗಳು ಯಾರೋ ಹೆಣೆದ ವಿಶ್ಶುಗಳು ಬೇಡವೆಂದರೂ ಬೆರಳು ತಾಗಿ ಬಿಡುತ್ತವೆ ಪುಟ್ಟ ನೀಲಿಯ ಬಾಕ್ಸಿಗೆ ಅಷ್ಟರಲ್ಲಿ ಬಂದು ಬೀಳುತ್ತದೆ ಒಂದು ‘ಹಾಯ್’ ನನ್ನ ಮೆಸೆಂಜರಿಗೆ ಇದು ಬೇಕಿತ್ತಾ ಎಂದು ಕೇಳುತ್ತದೆ ಮನಸು ಮೊಬೈಲ್ ಬೆಳಕು ಬೀರಿದಾಗಲೆಲ್ಲ ಗುಡ್ ಮಾರ್ನಿಂಗ್, ಗುಡ್ ನೈಟುಗಳು ಟೀ,ಕಾಫಿ,ಊಟ ಆಯಿತಾ? ಎಂಬ ಕಿರಿ ಕಿರಿಗಳು ಮನಸು ರೋಸಿ ಹೋಗುತ್ತದೆ ಮೆಸೆಂಜರಿನ ಕುತ್ತಿಗೆಯನ್ನು ಒತ್ತಿ ಹಿಡಿಯುತ್ತೇನೆ ಆಗ ಅರೆ ಸ್ಕ್ರೀನ್ ಮೇಲೆೆ ಕಸದ ಬುಟ್ಟಿ ಎಳೆದೊಯ್ದು ಅಲ್ಲಿ ನೂಕಿ ಬಿಡುತ್ತೇನೆ ಹಸಿದು ರಚ್ಚೆ ಹಿಡಿದ ಮೊಬೈಲ್ ಬಾಯಿಗೆ ಚಾರ್ಜರ್ ಸಿಕ್ಕಿಸಿ ಬಾಲ್ಕನಿಗೆ ಬಂದರೆ ಆಕಾಶದಲ್ಲಿ ರುಜು ಹಾಕುತ್ತ ಹೊರಟ ಬಾನಾಡಿಗಳು ಕುಪ್ಪಳಿಸುತ್ತಿರುವ ಅಳಿಲುಗಳು ಮಧು ಹೀರುತ್ತಿರುವ ದುಂಬಿಗಳು ಗಾಳಿಯಲ್ಲಿ ಗುಳ್ಳೆಗಳನ್ನು ಬಿಡುತ್ತ ನಿಂತ ಪುಟ್ಟಿ ಮನಸು ಆಗ ಮಗುವಾಗಿ ಬಿಡುತ್ತದೆ. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಿಮ್ಮ ಸ್ಥಿತೀನೂ ಇದೇನಾ ಗಾಯತ್ರಿ ಆರ್. ಟ್ರಿಣ್….ಟ್ರಿಣ್….ಟ್ರಿಣ್… ರಿಂಗಣಿಸಿತು ಮನೆಯ ದೂರವಾಣಿ ಅತ್ತಲಿಂದ ಬಂತೊಂದು ಧನಿ ಕರ್ಕಶವಾಗಿ ಈ ಯುಗಾದಿಗೆ ರಜೆ ಇಲ್ಲ ನಾವು ಬರಲ್ಲ ಕಾಯಬೇಡಿ ನಮಗಾಗಿ ವಾರದಿಂದ ಮಗ, ಸೊಸೆ, ಮೊಮ್ಮಕ್ಕಳು ಬರುವರೆಂದು ಮಾಡಿದ ಸಿಹಿ ತಿಂಡಿಗಳೆಲ್ಲಾ ಅವಳ ನೋಡಿ ನಗುತ್ತಿತ್ತು ವ್ಯಂಗ್ಯವಾಗಿ. ಅಹ..ಹಾ ಅಹ…ಹಾ ಅಹ…ಹಾ. ಮನೆಯ ಮೂಲೆಯ ಪಲ್ಲಂಗದಲ್ಲಿ ಪವಡಿಸಿದ್ದ ಪತಿರಾಯ ಮಡದಿಯ ಹುಸಿನಗುವಿಂದ ಎಲ್ಲವನ್ನೂ ಅರಿತೆಂದ ನಿನ್ನ ಮನೆಕಾಯ ನನ್ನನ್ನೂ ಬಿಡದೆ, ನಿನಗೂ ಆಗದೆ, ಸಿಹಿ ಕರಿವಾಗ ನೋಡಿಲ್ಲಿ ಆದ ‌ಸುಟ್ಟಗಾಯ ಹಚ್ಚುತ್ತಲೇ ಮುಲಾಮು ಹೇಳಿದಳು ಬೇಗ ಆಗುವುದು ಗುಣ ನಿಮ್ಮ ಗಾಯ ಇಟ್ಟಿರುವಿರೇ… ನಿಮ್ಮಬಳಿ ಕಾಣದ ನನ ಗಾಯಕ್ಕೆ ಔಷಧಿಯ ಉತ್ತರವಿಲ್ಲ!! ಇಬ್ಬರ ಕಣ್ಣುಗಳ ನಡುವೆ ಮೌನ ಮೆಲ್ಲ ಮೆಲ್ಲನೆ ಹಾಕಿತ್ತು ಕೇ…ಕೇ ಹಿಹಿಹೀ…ಹಿಹಿಹೀ…ಹಿಹಿಹೀ. ಜಾಗತೀಕರಣವೇನೋ ಮಾಡಿತು ವಿಶ್ವವನ್ನೇ ಒಂದು ಕುಟುಂಬವನ್ನಾಗಿ ಬಡ ರಾಷ್ಟ್ರಗಳು ಸಾಗಿದವು ಅಭಿವೃದ್ಧಿಯತ್ತ ದಾಪುಗಾಲಾಕಿ ಆದರೇನು? ಮಾನವ ಸಂಬಂಧಗಳು ಹೊರಳಾಡುತಿದೆ ಡೋಲಾಯಮಾನವಾಗಿ ಹೀಗೆಂದು ಚಿಂತಿಸುತ್ತಿರುವಾಗಲೇ ಆಕೆಗೆ ಬಂತೊಂದು ತಂತಿ! ನಾಳೆ ನಾವು ಬರುವೆವು ಅದನೋದಿದ ಆಕೆಯ ಕಾಲು ಕುಣಿಯಿತು ಪಾಡು ತಾ ಗಾನ ಆ…ಆ…ಆ.ಅಹಾಹ… ಲಗುಬಗೆಯಿಂದ ಎಡವಿ ಎಡವದಂತೆ, ಬಿದ್ದು ಬೀಳದಂತೆ ಓ…ಡುತಾ ಅಡುಗೆ ಕೋಣೆಗೆ ಕೈ ಹಾಕಿ ತಿಂಡಿ ಡಬ್ಬಿಗೆ ಕೇಳಿದಳು ಈಗೇನಂತಿ? ಮತ್ತದೇ ಮನೆಯ ಮೂಲೆಯಿಂದ ಬಂತೊಂದು ಸಶರೀರ ವಾಣಿ ಬೀಗಬೇಡ ಮಾರಾಯ್ತಿ… ಇದಕ್ಕೆಲ್ಲಾ ಕಾರಣ ಕರೋನ ಮೀಟಿದ ಕೃತಕ ತಂತಿ! ಕೃತಕವೋ… ನೈಸರ್ಗಿಕವೋ .. ಅಂತೂ ನಿಜ ನುಡಿದಿತ್ತು ಮುಂಜಾನೆಯ ಹಾಲಕ್ಕಿ. ಕೆಡುಕಿನಲೂ ಕರೋನ ಕರುಣಿಸಿತೇ ಕ..ರು..ಣಾ ..? ತೆರಳು ಬಾರದೂರಿಗೆ ಕರೋನ ಎಂದೆದ್ದ ಅವಳ ಕೈ ಅವಳಿಗರಿವಿಲ್ಲದೇ ಗುಡಿಯ ದೇವಿಗೆ ಸಲಿಸಿತು ನಮನ ಹಾಡುತಾ ‌ಸವಿಗಾನ ಆ..ಹ.ಹಾ..ಹಾ..ಹಾ..ಹಾ **************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮ ನಡುವಿನ ಅಂತ ವೀಣಾ ರಮೇಶ್ ಎಲ್ಲಾ ದಿನಗಳೂ ಖಾಲಿ ಇದ್ದರೂ ಮನಸಿನ ದಾರಿಯಲಿ ನೀ ನಿರದಿದ್ದರೂ ಮುಳ್ಳುಗಳೇನಿಲ್ಲ ಚುಚ್ಚಲು ಕಲ್ಲುಗಳಿಲ್ಲ ಎಡವಲು ಬರವಿರದಿದ್ದರೂ ನಿನ್ನ ನೆನಪಿಗೆ ಬೇಸರವೆನಿಸಿದೆ ಮನಸಿಗೆ ಗೆಳತೀ ಎಲ್ಲೆಲ್ಲೂ ನೀ ಸಿಗದೆ … ಯಾಕೆ ಸಮಾನಾಂತರ ರೇಖೆಗಳಾಗಿದ್ದೇವೆ ನಡುವೆ ಎಷ್ಟೊಂದು ಅಂತರದ ಅರಿವು, ಇರಲಿ ಸಮಾನ ಅಂತರ ಕಾಯ್ದುಕೊಂಡಿದ್ದೇವೆ, ಮಾತು, ಮೌನಗಳಲೂ ಬಿಗಿಅಂತರವೇ ಗೆಳತೀ….. ಮನಸಿನಲಿ ಭಾವನೆಗಳ ಕುಟ್ಟಿ ಪುಡಿ ಮಾಡಿರುವೆ ಆದರೆ ಮೊಳಕೆಯೊಡೆದ, ಹೃದಯ ತಟ್ಟುವ , ಉಸಿರು ಕಟ್ಟುವ, ನಿನ್ನದೆ ನೆನಪುಗಳು, ನೀಡುಸುಯ್ದ ಬಿಸಿಉಸಿರು ನಿನ್ನ ಸೋಕಿರಬಹುದು ನಿನ್ನುಸಿರ ತಣ್ಣನೆ ಗಾಳಿ ತುರ್ತು ವಿರಾಮದ ಪರದೆಯ ಬೇಲಿ ಹಾಕಿದೆ ನನಗೂ ಗೊತ್ತಿದೆ ಗೆಳತೀ …. ದಿಗಂತದ ಊರಿನಲಿ ಯಾವ ಬೇಲಿಯ ತಡೆಯಿಲ್ಲದ ರವಿ ಕೆಂಪಿಟ್ಟು, ಬರುವಾಗ, ಏನೋ ತಳಮಳ ನನ್ನೊಳಗೆ…. ನಿನ್ನ ಸಿಹಿ ನಗು ಕಣ್ತುಂಬಿ ಕೊಳ್ಳುವ ತವಕ…… ತುಟಿ ಇಟ್ಟು ಮೆತ್ತಿದ, ಕೆಂಪು ಕೆನ್ನೆಯ ಗುಳಿಯೊಳಗೆ ಅವಿತು ಕುಳಿತು, ನಿನ್ನ ನೋಡುವ ಅವಸರ ಗೆಳತೀ…. ದಿನವೂ ಖಾಲಿ,ಅಂತರದ ಖಯಾಲಿ………. ಅದೇನು ಶಂಕೆ,ಪ್ರೀತಿಗೂ ಅಂತರಂಗದಲ್ಲಿ ಸೊಂಕೆ ಹಾಗಿದ್ದರೆ .. ನಿನ್ನ ಭಾವನೆಗಳನ್ನು ಅಪ್ಪಿ ಕೊಳ್ಳುವುದಾದರು ಹೇಗೆ….. ನೀ ನಲ್ಲಿ ಕಿಟಕಿಯಲ್ಲಿ ನಾನಿಲ್ಲಿ ಹೃದಯದ ಕದ ತೆರೆದು ನಿನ್ನ ಕಾಯುವುದು ನಿರಂತರವೇ ಗೆಳತೀ.. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಗುವ ತೊಡಿಸಲೆಂದು ಶಾಲಿನಿ ಆರ್. ತಾಳ್ಮೆ ಕಳಕೋತಿದಿನಿ ದಿನದಿಂದ ದಿನಕ್ಕೆ, ಮರೆತೆನೆಂದರು ನೆನಪ ನೋವ ಎಳೆಯ ನೂಲುತಿದೆ ಗೆಳೆಯ, ಬೇಡ ಎನಗಿದು ಬೇಸರದ ಹೊದಿಕೆ ಸ್ವಚ್ಛಂದ ಹಕ್ಕಿಯಿದು ನಭದ ನೀಲಿಯಲಿ ಹಾರುವ ಬಯಕೆ, ಒಲವ ಮಳೆಯಿದು ನನಗಾಗಿ ಕಾಯುತಿದೆ, ಬಣ್ಣದ ಕುಂಚಗಳು ತುಂಟನಗೆ ಬೀರುತಿದೆ, ಅಂಕುಡೊಂಕಿನ ನವಿಲು, ಬಿಂಕ ತೋರಿಅಣಕಿಸುತಿದೆ, ಮನದ ಸಾರಂಗ ಮನಸಾರೆ ತಪಿಸುತಿದೆ, ಕಳೆದ ನೆನ್ನೆಗಳು ನಾಳೆಗಳ ಹುಡುಕುವಂತೆ ಬಾಗಿದ ಬೆನ್ನಿಗಿದು ನೋವಿನ ಕುಣಿಕೆ, ನಾ ಒಲ್ಲೆ ಗೆಳೆಯ ನಾಳೆಯ ಸೂರ್ಯನಿಗೆ ಸುಪಾರಿ ಕೊಟ್ಟು ಬಾರೋ, ನನ್ನೆದೆಯ ನೋವುಗಳ ಕೊಲ್ಲಲ್ಲೆಂದು,ನಗೆಯ ನಗವ ತೊಡಿಸಲೆಂದು… *******

ಕಾವ್ಯಯಾನ Read Post »

You cannot copy content of this page

Scroll to Top