ಕಾವ್ಯಯಾನ
ವರ್ಕ್ ಫ್ರಂ ಹೋಂ ಸುಜಾತಾಗುಪ್ತ ವರ್ಕ್ ಫ್ರಂ ಹೋಂ ವರ್ಕ್ ಫ್ರಂ ಹೋಂ ಕೇಳಲು ಖುಷಿಯಾಯಿತು ಕರೋನ ಬಿಸಿಯಲು ಮನ ತಂಪಾಯ್ತು ಪತಿರಾಯನ ಸಾಂಗತ್ಯಕೆ ವಾರಾಂತ್ಯವೇ ಬೇಕಿಲ್ಲ ಅಹಾ..ಎನಿಸಿತು ಆ ಕ್ಷಣ. ಮನೆಯಲ್ಲೇ ಇದ್ದರೂ ಕಂಪ್ಯೂಟರ್ ಸಂಗ ಉಷೆ ಸಂಧ್ಯೆಯ ಸ್ವಾಗತಿಸೋತನಕ ತಪ್ಪದ ಬವಣೆ.. ಆಯ್ತು ಮನೆಯೇ ಕಛೇರಿ.. ಕರೋನ ಬೆನ್ನಲೆ ಬಂತು ಮಕ್ಕಳಿಗೆ ಬೇಸಿಗೆ ರಜೆ ಶಾಲೆಯು ಸ್ವೇಚ್ಛೆಯ ನೀಡಿತ್ತು ಕರೋನ ಅದ ನುಂಗಿತ್ತು ರಜೆಯ ಮಜದ ಮೂಡಲ್ಲಿದ್ದ ಮಕ್ಕಳಿಗೆ ಗೃಹ ಬಂಧನ… ಅದೆಂಥ ವಿಪರ್ಯಾಸ.. ಮೌನದೆ ಕೂರಲು ಗೊಂಬೆಗಳಲ್ಲ ಸ್ವಾಮಿ.. ಅವರು ಚಿನ್ನದಂತ ಚಿಣ್ಣರು ಆಡಿ ಕುಣಿದು ಕಿರುಚಾಡಿದರೆ ಪತಿರಾಯರಿಗೆ ಕಿರಿಕಿರಿ ಬಾಯ್ಮುಚ್ಚಿ ಕೂರಲು ಪುಟಾಣಿಗಳಿಗೆ ಕಸಿವಿಸಿ ಎಲ್ಲಿಯದು ಈ ಪರಿತಾಪ.. ಗಂಟೆಗೊಮ್ಮೆ ಬಿಸಿ ಕಾಫಿ- ಚಹ ಇಲ್ಲದಿರೆ ಪತಿಗೆ ತಲೆ ಬಿಸಿಯಂತೆ ಮಾಡು ತೊಳೆ ಮಾಡು ತೊಳೆ ನಂಗೆ ಮೈಯೆಲ್ಲಾ ಬಿಸಿ ಬಿಸಿ .. ಬೇಸರ ಕಳೆಯೆ ಅಪ್ಪಮಕ್ಕಳಿಗೆ ಕುರುಕುಲು ತಿಂಡಿ ಬೇಕಂತೆ ರೇಷನ್ನೇ ಮುಗಿದಿರೆ ನಾ ತರಲಿ ಎಲ್ಲಿಂದ ನೀವು ಹೇಳಿ ಸ್ವಾಮಿ.. ವರ್ಕ್ ಫ್ರಾಂ ಹೋಂ ಲಿ ನಾ ಅಡುಗೆ ಮನೆಯಲ್ಲಿ ಬಂಧಿ ಅಪ್ಪ ಮಕ್ಕಳನಡುವೆ ಬಡವಾದೆ ಟಿ.ವಿ ಬಂದ್ ಆಯ್ತು ಮೊಬೈಲ್ ಪೂರ್ತಿ ಕಟ್ ಆಯ್ತು ಗೆಳತಿಯರ ಸಂಗ ಮರೆತೋಯ್ತು ವರ್ಕ್ ಫ್ರಂ ಹೋಂಸಾಕಾಯ್ತು.. ಶ್ರೀ ರಘುರಾಮ ನಿನಗೆ ಶರಣು ಮಹಾಮಾರಿಯ ಸಂಹರಿಸು ಜಗಕೆ ಆರೋಗ್ಯ ನೀಡು ಪತಿಯ ಕಛೇರಿಗೆ ಕಳುಹಿಸು ಮಕ್ಕಳ ಶಾಲೆಗೆ ಕಳುಹಿಸು ನಂಗೆ ನೆಮ್ಮದಿ ನೀಡೋ ಕರುಣಾಮಯಿ ಶ್ರೀ ರಾಮ.. **********









