ಕಾವ್ಯಯಾನ
ನಿನ್ನ ಹುಡುಕಾಟದಲ್ಲಿ ನಾಗರಾಜ ಹರಪನಹಳ್ಳಿ ಉರಿ ಉರಿ ಬಿಸಿಲು ಎಲ್ಲಿ ಹುಡುಕಲಿ ಪ್ರೇಮವ ತಕ್ಷಣ ಕಂಡದ್ದು ನಿನ್ನ ಮೊಗದ ಮುಗುಳ್ನೆಗೆ ಆಸೆಯ ಬೆನ್ನು ಹತ್ತಿದೆ ಓಡಿದೆ ಓಡಿದೆ ದಣಿವರಿಯದೆ ಓಡಿದೆ ಕೊನೆಗೆ ಸಿಕ್ಕದ್ದು ದುಃಖ ಇನ್ನೆನು ಮುಗಿಯಿತು ಅನ್ನುವಾಗ ಕಂಡದ್ದು ನಿನ್ನ ಮುಖದ ಮಂದಹಾಸ ಮೋಕ್ಷವನ್ನೇನು ಹುಡುಕಿ ಹೊರಡಲಿಲ್ಲ ನಾನು ಪ್ರೀತಿಯ ಹುಡುಕಿ ಹೊರಟಿದ್ದು ನಿಜ , ಆದರೆ ನೀ ಹೇಳಿದ ಬಯಲಿನಂತಹ ಪ್ರೀತಿ ಈ ಹುಲುಮಾನವರಿಗೆ ಅರ್ಥವಾದೀತು ಹೇಗೆ ಗೌತಮ ಸಾವಿಲ್ಲದ ಮನೆಯ ಸಾಸಿವೆ ತರಲು ಸೋತದ್ದು ನಿಜ ನನ್ನ ತಾಯಿ ಆದರೆ ; ನಿನ್ನ ಒಗಟಿನ ಮಾತು ನಿಶಬ್ದ ಮೌನ ಅರ್ಥವಾದೀತು ಹೇಗೆ ಬುದ್ಧದೇವ ಮುಪ್ಪು , ಯೌವ್ವವ ; ಹಸಿವು ನಿನಗೆ ಅರ್ಥವಾದಂತೆ ಈ ಜಗದ ಕೇವಲ ಮನುಷ್ಯರಿಗೆ ಅರ್ಥವಾಗದವು ಕಾರಣ ಅವರು ಬದುಕಿನ ಅಶ್ವಾಶತೆಯ ಅರಿಯದ ಮರೆವಿನ ಮಹಾಪುರುಷರು ಬುದ್ಧ ನಾನಿನ್ನು ಬರುತ್ತೇನೆ ಸಾಕಾಗಿದೆ ಈ ಜಗದ ಜಂಜಡ ನನಗೆ ಏಕಾಂತದ ಅರ್ಥ ಹುಡುಕಬೇಕಿದೆ ಜನರ ಗೊಂದಲಗಳ ಅರಿಯುತ್ತಲೇ… *********









