ರುಬಾಯಿ
ಶಾಲಿನಿ ಆರ್. ೧. ಮುಂಗಾರಿನ ಮಳೆಹನಿ ಇಳೆಗೆ ಇಳಿದ ದನಿ ನನ್ನ ರಮಿಸುವ ಪ್ರೀತಿ, ಒಡಲ ಸೋಕಿ ಜೇನ್ಹನಿ… ೨. ಮಳೆ ಬಂತು ನಾಡಿಗೆ ತೆನೆ ತಂತು ಬೀಡಿಗೆ ಅಚ್ಚ ಪಚ್ಚ ಪಯರು, ಹೊನ್ನೂತ್ತಿ ಸೊಬಗಿಗೆ… ೩. ಮಳೆಯಿದು ಮಮತೆ ಸೆರಗು ಭುವಿಯಲೆಲ್ಲ ಹಾಸಿ ಬೆರಗು ಧಾತ್ರಿ ತಂದಿತು ಒಸೆದು ಪ್ರೀತಿ, ಮೊಗೆದು ತುಂಬಿ ಸಿರಿ ಸೊಬಗು… ೪. ಮುಂಗಾರು ಮಳೆ ತಂದ ಒಲವ ಭಾವ ಒಡಮೂಡಿದೆ ಇಳೆಯಲೆಲ್ಲ ಜೀವ ಸುತ್ತಮುತ್ತ ಹಸಿರ ಹೊನಲ ಗಾಳಿ, ಮೂಡಿತಲ್ಲಿ ನಾಳಿನ ನಂಬಿಕೆ ದೈವ… ೫. ಮುಂಗಾರಿನ ಕರಿಮುಗಿಲ ಕಾನನ ಸುರಿಯುತಿದೆ ಜೀವಹನಿ ತಾನನ ಚೆಂದದೊಡಲ ಇಳೆಗದು ಸಂಭ್ರಮ ಬಾಳಿನಂದದಲಿ ಉಸಿರ ನರ್ತನ… ***********








