ಖಾದಿ ಮತ್ತು ಕಾವಿ
ಎಮ್. ಟಿ. ನಾಯ್ಕ. ಜನ ಸೇವಕನೆಂದಿತು ಖಾದಿ ಧರ್ಮ ರಕ್ಷಕನೆಂದಿತು ಕಾವಿ ಇಂಚಿಂಚಾಗಿ ಮಾನವ ಕುಲವ ನುಂಗಿ, ನೀರು ಕುಡಿಯುತ್ತಿರುವ ಗೋಮುಖ ವ್ಯಾಘ್ರಗಳು ವಿಷಯ ಲಂಪಟತೆಗೆ ಇನ್ನೊಂದು ಹೆಸರು ಖಾದಿ ಮತ್ತು ಕಾವಿ ಇವುಗಳ ಹೆಸರೆತ್ತಿದರೆ ಸಾಕು ಬೀದಿ ನಾಯಿಗಳೂ ಕೂಡ ಮೂಗು ಮುಚ್ಚುತ್ತವೆ ಹಸಿ ಹಾದರದ ಕತೆಗೆ ನಸು ನಾಚುತ್ತವೆ! ಹೊನ್ನು ಹೆಣ್ಣು ಮಣ್ಣಿನ ವಾಸನೆ ಗರ್ಭಗುಡಿಯೊಳಗೆ……! ಎಷ್ಟೆಲ್ಲಾ ಸತ್ಯಗಳು ಕತ್ತಲೆಯ ಗರ್ಭದೊಳು ….. !? ಖಾದಿಯದೋ……ರಾಜಕುಲ ಕಾವಿಯದೋ ……ದೇವಕುಲ ಇಬ್ಬರಿಗೂ ಬೇಕಂತೆ ಝಡ್ ಪ್ಲಸ್ ರಕ್ಷಣೆ ಇಬ್ಬರದೂ ಒಂದೇ ಮುಖ ಸದಾ ನಗುಮುಖ ಆದರೆ .. ಅನಾವರಣಗೊಳ್ಳುವುದೊಮ್ಮೊಮ್ಮೆ ಇವರ ಬಹುಮುಖ! *************








