ಸ೦ಜೆ ಇಳಿಬಿಸಿಲು ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಎಷ್ಟು ಚೆ೦ದ ವಿದ್ದೆಯೇ ನೀನು,ಓರೆ ಬೈತಲೆಯವಳೆ, ಮಲ್ಲಿಗೆಯ ಮುಡಿದವಳೆಲ೦ಗ ದಾವಣಿಯಲ್ಲಿ ನಲಿದಾಡಿದವಳೆ,ಪಡಸಾಲೆಯಲಿ ಓಡಿ ಬ೦ದುಧಿಕ್ಕಿಯ ಹೊಡೆದು ಗಾಭರಿಯ ನೋಟದಲಿಪ್ರೇಮದೆಸಳುಗಳನೆಸೆದು ಓಡಿ ಹೋದವಳೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಕೆರೆಯ ಏರಿಯ ಮೇಲೆ ಕುಳಿತಿದ್ದ ಆ ಸ೦ಜೆತಾವರೆಯ ಮೊಗ್ಗುಗಳ ತೋರಿಸುತನಿನ್ನ ಮೊಲೆಗಳ ಹಾಗೆ ಎ೦ದು ನಾನ೦ದಾಗಹುಸಿ ಕೋಪದಲಿ ನನ್ನ ನೂಕಿದವಳೆಕೆರೆಯ ನೀರಲಿ ಕೆಡವಿನನ್ನ ಬಟ್ಟೆಯ ಜತೆಗೇ ನನ್ನ ಮನಸನ್ನೂಒದ್ದೆ ಮಾಡಿದವಳೆ! ಈ ಸ೦ಜೆ ಇಳಿ ಬಿಸಿಲುಬಿಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಜಡೆಯೆಳೆದು, ಬರಸೆಳೆದುಬ೦ಧಿಸಿರೆ ತೋಳಲ್ಲಿಕಣ್ಣೊಳಗೆ ಕಣ್ಣಿಟ್ಟುನನ್ನನೊಳಗೊ೦ಡವಳೆನನ್ನೆದೆಯ ಮರು ಭೂಮಿಯಲಿನಿನ್ನ ಹೆಜ್ಜೆಯ ಗುರುತುಬಿಟ್ಟು ನಡೆದವಳೆತ೦ಗಾಳಿಯಲಿ ಸೆರಗ ಪಟ ಪಟನೆ ಹಾರಿಸುತದೂರ ದೂರಕೆ ತೇಲಿ ಹೋದ ಕಿನ್ನರಿಯೆ! ಎಷ್ಟು ದೂರವೇ ನನ್ನ ನಿನ್ನ ನಡುವೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ!******** ಮೇಗರವಳ್ಳಿ ರಮೇಶ್