ಕಾವ್ಯಯಾನ
ಕವಿತೆ. ದೀಪಾ ಗೋನಾಳ ಏಷ್ಟವಸರಅದೆಷ್ಟು ಗಡಿಬಿಡಿಎಷ್ಟೇ ಬೇಗ ಎದ್ದರೂತಿಂಡಿತಿನ್ನಲೂ ಆಗುವುದೆ ಇಲ್ಲಅನುಗಾಲ ಒಳ ಹೊರಗೆ ಗುಡಿಸಿಹಸನ ಮಾಡುವುದರಲ್ಲೆಅರ್ಧಾಯುಷ್ಯ ,,,ತಿಂದರೊ ಇಲ್ಲವೊ..!?ಕಟ್ಟಿಕೊಟ್ಟ ಡಬ್ಬಿ ಇಟ್ಟುಕೊಂಡರೊ ಇಲ್ಲವೊ..!?ತೊಳೆದ ಬಾಟಲಿಗೆ ನೀರು ತುಂಬಿದ್ದೆ ಒಯ್ದರೊ ಇಲ್ಲವೊ..!?ಹಾಲಿನ ಪಾತ್ರೆಗೆ ಮುಚ್ಚಿದೆನೊ ಇಲ್ಲವೊ..!?ಮೊಸರು ಫ್ರಿಜ್ಜಿಗೆ ದಬ್ಬಿದೆನೊ ಇಲ್ಲವೊ..!?ಬದುಕೆಲ್ಲ ಉದ್ಘರಾದ ಹಾರ..ದಾರಿಯ ತುಂಬ ಹೋಯ್ದಾಟಮನಸ್ಸಿನ ಮಾತು ಕಿವಿಗೆ ಕೇಳುವಷ್ಟು ದೀರ್ಘ ಆಲೋಚನೆ ಒಳಗೊಳಗೆ..ಜೋಲಿ ಹೊಡಿಯುವ ಬಸ್ಸಿನಲ್ಲಿ ಎದುರಿಗೆ ನನ್ನಂತೆ ಅವಸರಕ್ಕೆಎದ್ದೋಡಿ ಬಂದವಳು ಹೇಳುತ್ತಾಳೆ,ಕುಂಕುಮ ಹಚ್ಚೆ ಇಲ್ಲ!!ಓಹ್! ಹೌದು ಕನ್ನಡಿ ಮುಂದೆ ನಿಲ್ಲಲೇ ಇಲ್ಲ, ನನ್ನ ನಾನು ನೋಡಿಕೊಂಡುಆಗುವುದಾದರೂ ಏನಿದೆಸೀಟು ಸಿಕ್ಕಮೇಲೆ ಬ್ಯಾಗಿನ ತುಂಬ ತಡಕಾಡಿ ಒಂದು ಬಿಂದಿಹಣೆಗೇರಿಸಬೇಕುಕಿಟಕಿ ಗಾಜಿನಲ್ಲೊಮ್ಮೆ ಮಸುಕುಮೊಗ ನೋಡಿಕೊಳ್ಳಬೇಕುಮತ್ತಿಳಿದು ಓಡಬೇಕುಮೊಳೆಹೊಡೆದ ಚಪ್ಪಲಿಗೆ ನೋವಾಗದಂತೆ ಪೂರ್ತಿ ಪಾದ ನೆಲಕ್ಕೂರದೆ ಹಕ್ಕಿಯಂತೆ ಹಾರಿಹಾರಿಕಛೇರಿ ಮೆಟ್ಟಿಲೇರಬೇಕು ಬಂದ ಕೂಡಲೆ ಮತ್ತೊಮ್ಮೆ ಸೊಂಟದ ಮೇಲಿನ ಸೀರೆ ಸರಿ ಮಾಡಿಕೊಂಡೆ ಕೂಡಬೇಕುಒಂದಿನಿತು ಮಗ್ಗಲು ಕುಳಿತವರಮತಿಭಂಗವಾಗದಂತೆ ಹೊಟ್ಟೆ ಚುರ್ ಎಂದದ್ದುನನಗೆ ಕೇಳಿಸಿಯೆ ಇಲ್ಲವೆಂಬಷ್ಟುಗಂಭೀರವಾಗಿ ಕುಳಿತಾಗಲೆಅವಳು ಎದ್ದು ಬಂದುನಾನು ಇಂದು ತಿಂಡಿ ತಿನ್ನಲಿಲ್ಲಡಬ್ಬಿಗೆ ಹಾಕಿಕೊಂಡು ಬಂದಿದ್ದೇನೆಬಾ ಎಂದು ಕೈ ಹಿಡಿದು ಜಗ್ಗಿ ಜಭರ್ದಸ್ತಿಲೆ ಹೊಟ್ಟೆಗೆ ಹಾಕುತ್ತಾಳೆ ಎರಡು ಹಿಡಿ ಎರಡು ಜಡೆ ಎಂದೂ ಕೂಡುವುದಿಲ್ಲ !ಹೆಣ್ಣಿಗೆ ಹೆಣ್ಣೆ ಶತ್ರು.. ಎಂಬುವರಮಾತು ಇಲ್ಲಿ ಶುದ್ಧ ಸುಳ್ಳುದುಡಿಮೆಗೆ ಟೊಂಕ ಕಟ್ಟುವ ಹೆಂಗಳೆಯರ ಹಸಿವುಹೆಂಗರುಳಿಗಿಲ್ಲಿ ಚೆಂದ ಅರ್ಥವಾಗುತ್ತದೆ..ನಮ್ಮ ಟೊಂಕದ ಮೇಲಿನ ಸೀರೆಜಾರಿದ್ದನ್ನಷ್ಟೆ ನೋಡುವಮೀಸೆಗಳಿಗೆ ಇದು ಅರ್ಥವಾಗದು.. ***********









