ಅನುವಾದ ಸಂಗಾತಿ
ಗುಟ್ಟು ಮೂಲ: ಶರತ್ ಚಂದ್ರ ಬರ್ (ಬೋಡೊ) ಕನ್ನಡಕ್ಕೆ: ನಾಗರಾಜ ಹರಪನಹಳ್ಳಿ ಯಾವ ಕಣ್ಣೀರಿನಲ್ಲಿಹೃದಯ ಮಿಡಿತದ ಸಂದೇಶವಿಲ್ಲವೋ ಯಾವ ಕಣ್ಣೀರಿನಲ್ಲಿಪವಿತ್ರವಾದ ಸತ್ಯವಿಲ್ಲವೋಯಾವ ಕಣ್ಣೀರಿನಲ್ಲಿಒಡೆದ ಹೃದಯದ ಸದ್ದು ಇಲ್ಲವೋಆ ಕಣ್ಣೀರು ಅಪ್ಪಟ ಕಣ್ಣೀರಲ್ಲ ಯಾವ ನಗುವಿನಲ್ಲಿ ಮೌಲ್ಯದ ಬೆಳಗು ಇಲ್ಲವೋಯಾವ ನಗುಕಲ್ಮಶದ ಪರದೆಯಲ್ಲಿ ಅಡಗಿದೆಯೋಅಂತಹ ನಗು ಸಂತಸದ ನಗುವಲ್ಲ ಯಾವ ಪ್ರೀತಿ ತನ್ನಷ್ಟಕ್ಕೆ ತಾನು ಅರಳುವುದಿಲ್ಲವೋಯಾವ ಪ್ರೀತಿಯಲ್ಲಿ ಬೆಸುಗೆಯ ಗುಣವಿಲ್ಲವೋಅಂತಹ ಪ್ರೀತಿಆದರಣೀಯ ಪ್ರೀತಿಯಲ್ಲ ಯಾವ ಕಾಣಿಕೆಯಲ್ಲಿಮರಳಿ ಪಡೆವ ವ್ಯಾಮೋಹವಿದೆಯೋಯಾವ ಕಾಣಿಕೆಯಲ್ಲಿಪ್ರಶಂಸೆಯನ್ನು ಪಡೆವ ಅಪೇಕ್ಷೆಯಿದೆಯೋಅಂತಹ ಕಾಣಿಕೆ ಕಾಣಿಕೆಯಲ್ಲ………………….. ನಾಗರಾಜ್ ಹರಪನಹಳ್ಳಿ









