ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅಪ್ಪ ಬಿದಲೋಟಿ ರಂಗನಾಥ್ ವಾತ್ಸಲ್ಯದ ಕೆನೆಕಟ್ಟಿಅಪ್ಪನ ಕರಳು ಅರಳಿಕಿರುಬೆರಳಿಡಿದು ನಡೆದ ಸ್ಪರ್ಶದ ಸುಖಮೀಸೆ ಬಲಿತರೂ ಕಾಡುವ ನೆನಪು ಊರ ಜಾತ್ರೆಯಲಿಕನ್ನಡಕದೊಳಗಿನ ಕಣ್ಣು ಬರೆದ ಕವನಮೌನದ ಮೆದು ಭಾಷೆಯಲಿಹೃದಯ ತಟ್ಟಿ ಅವ್ವನ ನಿರರ್ಗಳ ಉಸಿರು ದುಡ್ಡಿಲ್ಲದ ಅಪ್ಪನ ಜೇಬಿನಲಿನೋವಿನ ಜೇಡರ ಬಲೆ ಕಟ್ಟಿದರೂಬಿಡಿಸುತ್ತಾನೆ ಎಳೆ ಎಳೆಯಾಗಿಕಾಲದ ನೆರಳ ಮೇಲೆ ಕುಳಿತು ಅಪ್ಪನ ಹೇಗಲ ಮೇಲೆಎರಡೂ ಕಾಲುಗಳು ಇಳಿಬಿಟ್ಟುಜಗದ ಬೆಳಕನು ಕಣ್ಣುಗಳಲ್ಲಿ ತುಂಬಿಕೊಂಡುನಡೆಯುವಾಗಿನ ದಾರಿಯ ಬದಿಯಲಿಗರಿಕೆ ಚಿಗುರುವ ಪರಿಗೆಸೂರ್ಯನಿಗೂ ಹೊಟ್ಟೆಕಿಚ್ಚು ಗುಡಿಸಲ ಕವೆಗೆ ನೇತಾಕಿದ್ದತಮಟೆಯ ಸದ್ದಿನಲಿಕತ್ತಲೆಯ ಬೆನ್ನು ಮುರಿವ ಗತ್ತುಬೀಡಿ ಹೊಗೆಯು ಬರೆಯುವ ಚಿತ್ರ ಮಗನೆಂದು ಬೀಗುವ ಎದೆಯಲಿಎಷ್ಟೊಂದು ದಾರಿದೀಪದ ಬೆಳಕುಜೀವನದುದ್ದಕ್ಕೂ ಕಾವಲುಗಾರನಾಗಿಬೆನ್ನಿಗೆ ಬಿದ್ದವನುದೇವರಿಗಿಂತಲೂ ಮಿಗಿಲು *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನಪ್ಪ ಎ ಎಸ್. ಮಕಾನದಾರ ಜೀವನದುದ್ದಕ್ಕೂ ತನ್ನ ಗುಡಸಲಿನಚಿಮಣಿಗೆ ಎಣ್ಣಿ ಹಾಕದೆ ಹಲವು ಮೆರವಣಿಗೆ ಗಳಲ್ಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲುಕೈಯಲ್ಲಿ ಪ್ರಜ್ವಲಿಸುವ ಹಿಲಾಲುಮೆರವಣಿಗೆ ಅಡ್ಡ ಪಲ್ಲಕ್ಕಿಶವ ಸಂಸ್ಕಾರಕ್ಕೂ ಹೆಗಲು ಕೊಟ್ಟ ನನ್ನಪ್ಪ ಕಣ್ಣಲ್ಲಿ ಸೂರ್ಯ ತುಂಬಿ ಕೊಂಡುಎದೆಯ ಮೇಲೆ ಬುದ್ಧನನ್ನುಮಲಗಿಸಿ ಜೋಗುಳ ಹಾಡುವವ ನನ್ನಪ್ಪಲೆಕ್ಕವಿರದ ನಕ್ಷತ್ರಗಳು ತನ್ನ ಜೋಪಡಿಯಲ್ಲಿ ಇಣುಕಿದರೂಬಡತನವೆಂಬ ಬೇತಾಳನ ಗೆಳೆತನ ಬಿಡದ ನನ್ನಪ್ಪ ಮೆರವಣಿಗೆಯಲಿ ಹಿಲಾಲು ಹಿಡಿದುಹಿಡಿಕಾಳು ತಂದಾನುಜೋಪಡಿಯಿಂದ ಪಣತಿ ಬೆಳಗಿಸಿಯಾನು ಅಂದುಕೊಂಡು ಶಬರಿವೃತ ಹಿಡಿದಿದ್ದಳು ನನ್ನವ್ವ ಮೆರವಣಿಗೆಯಲಿ ತೂರುವಚುರುಮರಿ ಕೋಳಿ ಮರಿಗಳಂತೆ ಆರಿಸುವ ಮಕ್ಕಳುಧರ್ಮದ ಅಮಲಿನಲ್ಲಜೈಕಾರ ಹಾಕುತ ರಕ್ತ ಹರಿಸಿದವರೆಷ್ಟೋರಕ್ತದ ರಂಗೋಲಿ ಚಿತ್ತಾರವ ಕಂಡುಖುಷಿ ಪಟ್ಟವರೆಷ್ಟೋ? ಎಣಿಕೆಗೆ ಸಿಗುತ್ತಿಲ್ಲ ! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಲವೂ ಯುದ್ಧದ ಹಾಗೆ ನಂದಿನಿ ವಿಶ್ವನಾಥ ಹೆದ್ದುರ್ಗ ಒಲವೂ ಯುದ್ಧದ ಹಾಗೆಸಿದ್ದ ಸಿದ್ಧಾಂತವಿಲ್ಲ ಮೀರದೆ ಮೀಸಲುಚಹರೆ ಪಹರೆ ಅರಿತುನಿಖರ‌ ನಿಕಷದ ನಿಮಿತ್ತಕೊಡಬೇಕು ನಿರ್ವಾತ ಮೊಳೆಯುವ ಬೆಳೆಯುವಅರಳುವ ಹೊರಳುವಉರುಳುವ ಮರಳುವಆಕಾಶದ ಅವಕಾಶ. ತೆಗೆದ ಕದವೇ ಹದ.ಹೋಗಗೊಡಬೇಕು..ನಂಬುಗೆಗೆ ಕಳೆದ ಛಾವಿಯಗೊಡವೆ ಮರೆಯಬೇಕು ಸರಳರೇಖೆ ಹೃದಯವಾಗಲುಕಾಯಬೇಕು,ಬೇಯಬೇಕುಗಾಯಗಳ ಮಾಯಿಸಬೇಕು.ಅರಳಿದರೆ ಬಿಳಿ..ಮಳೆಬಿಲ್ಲು ಸಿದ್ದ ಸಿದ್ದಾಂತವಿಲ್ಲಗೆದ್ದರದು ಗೆಲುವಲ್ಲ ಒಡೆದ ಹೃದಯ ಛಿದ್ರ ಬದುಕು.ಹೊಲೆದು ಮಡಿಸಿಟ್ಟ ಕನಸುಕಾಲ ನುಂಗಿ ಕಣ್ಮರೆಯಾದ ಬಣ್ಣಯುದ್ಧ ಮುಗಿದ ಊರು ************8 __

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅಂತಃಸಾಕ್ಷಿ ವೀಣಾ ರಮೇಶ್ ನನ್ನ ಪ್ರತಿಹೆಜ್ಜೆಯಲ್ಲೂ ನೀಹೆಜ್ಜೆ ಹಾಕು ಎಂದು ನಾನುಕೇಳುವುದಿಲ್ಲ ನನ್ನ ಪ್ರತಿಮಾತಿಗೂಕಿವಿಯಾಗಿರು ಎಂದುನಾನು ಹೇಳುವುದಿಲ್ಲ ನನ್ನ ನುಡಿಗೆ ದನಿಯಾಗಿರುನನ್ನ ಉಸಿರಿಗೆಎದೆಯ ಬಡಿತದ ಸದ್ದಾಗಿರು ಎಂದು ಕೇಳುವುದಿಲ್ಲ ತಂಪಾಗಿ,ನನ್ನ ಬೆನ್ನ ಹಿಂದೆನೆರಳಾಗಿ, ಕಾವಲಾಗಿರುಎಂದು ನಾನು ಕೇಳುವುದಿಲ್ಲ ನನ್ನ ಆತ್ಮಸಾಂಗತ್ಯಕ್ಕೆನಿನ್ನ ಅಂತರಾತ್ಮನೀಡುವ ಸಂವೇದನೆಗೆಸುಪ್ತಮನಸ್ಸಾಗಿರೂ ಎಂದೂಬೇಡುವುದಿಲ್ಲ ಆದರೆ ನಾನು,ನೀನು,ನಾವಿಬ್ಬರೂಒಂದೇ ಅನ್ನುವ ಅಂತಃಸಾಕ್ಷಿನಿನ್ನ ಅಂತರಂಗ ಹೇಳಿದರೆಸಾಕು,ನಾನೇನೂ ಕೇಳುವುದಿಲ್ಲ ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ವೈದ್ಯರ ಚುಟುಕುಗಳು ಡಾ ಅರುಣಾ ಯಡಿಯಾಳ್ 1. ಅದೇನು ವೈದ್ಯರ ಫೀಸು ಈ ಪಾಟಿ ದುಬಾರಿ!ಹಣ ಮಾಡುತ್ತಾರೆ ರೋಗಿಯ ರಕ್ತ ಹೀರಿ ಹೀರಿ!”“ ಅಲ್ರೀ,ನಮ್ಮ ಜೀವನುದ್ದಕ್ಕೂ ಇರುವುದು ಬವಣೆಯೇ!ರಕ್ತ ಹೀರಿ ಬದುಕ ಸಾಗಿಸಲು ನಾವೇನು ತಿಗಣೆಯೇ??!?” 2. ಡಾಕ್ಟರನ ಕಾರು ಡಾಕ್ಟರಿನಂತೆಯೇ ಇದ್ದರೆ ಒಳ್ಳೇದು!ಆರಕ್ಕೆ ಏರಬಾರದು;ಮೂರಕ್ಕೆ ಇಳೀಬಾರದು!ಭಾರೀ ಶೋಕಿಯಾದರೆ ಕಾಯುತ್ತದೆ ಜನರ ಕಣ್ಣು..ತೀರಾ ಕಳಪೆಯಾದರೆ ತಿನ್ನಬೇಕಾದೀತು ತಿರಸ್ಕಾರದ ಹಣ್ಣು 3. ಐಷಾರಾಮಿ ಕಾರು ,ಜೀವನ ಬೇಕೇ??ಹಾಗಾದರೆ ವೈದ್ಯರೊಂದಾಗದಿರಿ ಜೋಕೆ!!ಈ ವೃತ್ತಿಯಲ್ಲೂ ಗಳಿಸಬಹುದು ಹೇರಳ ಹಣ…ಎದುರಿಸಬೇಕಾದೀತು ಸಮಾಜದ ಉರಿಗಣ್ಣು;ಗೊಣಗೊಣ!! 4. ರೋಗ ,ರೋಗಿಯ ಶ್ರುಶ್ರೂಷೆಗೆ ಬೇಕು ವ್ಯದ್ಯಕೀಯ ಚಾಕರಿ ..ಆದಾಗ್ಯೂ ಸೇವೆಗೆಯ್ಯುವವರ ಜೇಬಿಗೇ ಕತ್ತರಿ !“ ಇದು ನ್ಯಾಯವೇ ?ಧರ್ಮವೇ ?” ಎಂದು ಹಲುಬದಿರಿ..ಅಸಮತೆ , ಅನ್ಯಾಯ ಜಗದ ರೀತಿಯೆಂದರಿತು ತೆಪ್ಪಗಿರಿ! 5. ನಾವೆಲ್ಲಾ ಹೇಳಲು ತಯಾರು “ ವೈದ್ಯೊ ನಾರಾಯಣ ಹರಿ …ಆದ್ರೂ ಡಾಕ್ಟ್ರು ಫೀಸ್ ಕೇಳುವುದು ಹೇಗೆ ಸರಿ ???”ಯಮನೆಂದ ನಕ್ಕು -“ಹೌದೌದು ,ಆರೋಗ್ಯಕ್ಕಿಂತ ಮುಖ್ಯ ಕಾಸು …ಅಲ್ಲಿರುವುದು ಸುಮ್ಮನೆ ..ಇಲ್ಲಿದೆ ನಿಮ್ಮನೆ ..ಬಂದುಬಿಡಿ..ಬೇಡ ಪಾಸು! ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೋಗಿಗಳು ನಟರಾಜು ಎಸ್. ಎಂ. ಪಿತೃಪಕ್ಷದಿ ತಾತನ ಎಡೆಗೆಂದುಬಾಳೆ ಎಲೆಯ ಮೇಲೆ ಇಟ್ಟಿದ್ದಮುದ್ದೆ ಗೊಜ್ಜು ಅನ್ನ ಪಾಯಸದಪಕ್ಕ ಬಿಳಿ ಪಂಚೆ ಬಣ್ಣದ ಚೌಕಹುಳಿ ಹುಳಿಯಾದ ಬಿಳಿಯ ಯೆಂಡ ಬಾಡುಗ್ಲಾಸಿನ ಮೇಲೆ ಹಚ್ಚಿಟ್ಟ ಬೀಡಿ ಸಿಗರೇಟುತಟ್ಟೆಯಲಿ ದ್ರಾಕ್ಷಿ ಬಾಳೆಯ ಜೊತೆಒಂದೆರಡು ಕಿತ್ತಳೆ ಸೇಬುಇವೆಲ್ಲದರ ಮಧ್ಯೆ ಅವಿತು ಕುಳಿತಿರುವಅರಿಸಿನ ಕುಂಕುಮ ವಿಭೂತಿ ಬಳಿದಕಂಚಿನ ದೇವರ ಜೊತೆ ಪುಟ್ಟ ತ್ರಿಶೂಲಗೋಡೆಯ ಹಲಗೆಯ ಮೇಲೆಜೋಡಿಸಿಟ್ಟ ಚಾಮುಂಡಿ ಶಿವ ಪಾರ್ವತಿಡೊಳ್ಳು ಹೊಟ್ಟೆ ಗಣೇಶನ ಚಿತ್ರಪಟಎಲ್ಲವೂ ಅಲಂಕೃತ ಕಟ್ಟಿದ ಕಾಕಡಕನಕಾಂಬರ ಚೆಂಡೂವುಗಳಿಂದ ನಾಟಿ ಹೆಂಚಿನ ಒಳಗೆ ಕೆಂಡದಲಿಘಮ ಘಮಿಸೋ ಸಾಂಬ್ರಾಣಿಅಕ್ಕಿ ತುಂಬಿದ ಲೋಟದಲ್ಲಿ ಉರಿಯುತ್ತಿರೋಸೈಕಲ್ ಗುರುತಿನ ಅಗರಬತ್ತಿಬಾಯಿಗೆ ಟವೆಲ್ ಕಟ್ಟಿ ನಿಂತ ಜೋಗಯ್ಯನಸುತ್ತ ಮುತ್ತ ನೆರೆದ ಮನೆ ಮಂದಿನೀರ್ ಚಿಮುಕಿಸಿ ಗಂಧದ ಕಡ್ಡಿಯ ಘಮ ಸೋಕಿಸಿವೀಳ್ಯದೆಲೆಯ ತುದಿ ತೊಟ್ಟು ಕಿತ್ತುಬಾಳೆಹಣ್ಣಿನ ತುದಿ ಮುರಿದುಒಡೆದ ತೆಂಗಿನ ಕಾಯಿಯ ಎಳನೀರುತೀರ್ಥಕ್ಕೆಂದು ಲೋಟದಿ ಭರ್ತಿಉರಿಯುವ ಕಡ್ಡಿ ಕರ್ಪೂರದ ಬೆಳಕಿಗೆಹೊಳೆಯುತ್ತಿರುವ ದೇವರ ವಿಗ್ರಹಜೋಗಯ್ಯನ ಗಂಟೆಯ ಸದ್ದಿನ ಜೊತೆಅವನ ಮಗನ ಜಿಂಕೆ ಕೊಂಬಿನ ನಾದಕೆಮನಸೋತು ಕಣ್ಮುಚ್ಚಿ ಕೈ ಮುಗಿದ ಭಕ್ತ ವೃಂದ ಮಂಗಳಾರತಿ ತಟ್ಟೆಗೆ ಟಣ್ ಎಂದುಬೀಳುತ್ತಿದ್ದ ನಾಲ್ಕಾಣೆ ಎಂಟಾಣೆ ಜಾಗದಲ್ಲೀಗರೂಪಾಯಿ ಒಂದು ಎರಡು ಐದರ ಸದ್ದುಮುಖಕ್ಕೆ ಬಿದ್ದ ತೀರ್ಥಕ್ಕೆ ಬೆಚ್ಚಿಅಳುವ ಕಂದನ ದನಿಗೆ ಮನೆಯವರ ನಗುಜೋಗಯ್ಯ ಹಾಕುವ ತೀರ್ಥಕ್ಕೆ ಕೈ ಒಡ್ಡಿನಿಂತವರ ಬಲಗೈಗೆ ಬಿದ್ದ ತೀರ್ಥಅರ್ಧ ಹೊಟ್ಟೆಗೆ ಉಳಿದರ್ಧ ತಲೆಗೆದೇವರಿಗೆ ಕಡ್ಡಿ ಹಚ್ಚಿ ಕೈ ಮುಗಿದುಉರಿವ ಕರ್ಪೂರದ ತಟ್ಟೆ ಬೆಳಗಿಅಡ್ಡ ಬಿದ್ದ ಭಕ್ತರ ಹಣೆಗೆ ಜೋಗಯ್ಯನಬೆರಳುಗಳಿಂದ ವಿಭೂತಿಯ ಮೂರು ಪಟ್ಟುಹಿರಿಯರು ಬಂದು ಎಡೆ ಮುಟ್ಟಲಿ ಎಂದಾಗಮನೆಯವರೆಲ್ಲಾ ಮನೆಯಿಂದ ಹೊರ ಬಂದುಬಾಗಿಲು ಮುಚ್ಚಿ ಒಂದೈದು ನಿಮಿಷ ಮೌನನಂತರ ಮನೆ ಹೊಕ್ಕು ನೆಂಟರಿಷ್ಟರ ಜೊತೆಮನೆ ಮಂದಿಗೆ ಪಿತೃಪಕ್ಷದ ಮೃಷ್ಟಾನ್ನ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮುಗಿಯದ ಮಾತು ಅಕ್ಷತಾ ಕೃಷ್ಣಮೂರ್ತಿ ಮನದ ಪ್ರಶ್ನೆಗಳಿಗೆ ಉತ್ತರವಿಲ್ಲಕೇಳಿದರೆ ಸಿಟ್ಟುಜಮದಗ್ನಿಯಂಥವರುಮೌನದಲಿ ಉತ್ತರವಿದೆ ಎನಿಸಿದರೂಆಲಿಸಲು ನಿಶಕ್ತಿಯಿದೆಹೇಳಿದರೆ ಸಲೀಸುಗೊತ್ತಿದ್ದರೂಗೊತ್ತಿಲ್ಲದಂತಿರುವುದೇ ಒಲವಿಗೆಶ್ರೇಯಸ್ಸು ಆದರೂಹೊಟ್ಟೆಕಿಚ್ವು ಎಂದನವ ಯಾಕಾಗಿ ಯಾರಿಗಾಗಿಸ್ವಂತದ್ದು ಆಗಿದ್ದರೆಒಪ್ಪುತ್ತಿದ್ದೆನೆನೋರವಿ ಕಿರಣಕೆಪಾಲುದಾರರೆ ಹೆಚ್ಚಿರುವಾಗಈಗ ಹುಟ್ಟಿದ ನಾನುನೀ ನನ್ನವನೆನಲು ಒಪ್ಪಿತವೇನು?ಅಷ್ಟಕ್ಕೂ ಅವನೊಲವುಅರಿವಿಗೂ ದಕ್ಕದಿರುವಾಗಗೆಲ್ಲುವೆನೆಂಬ ಉಮೇದುತಕ್ಕಡಿಯಲ್ಲಿ ಲೆಕ್ಕ ಹಾಕುತಿದೆಒಲವು ಅಂಟಿಸಿಕೊಳ್ಳುವುದಲ್ಲ. ಅವನೇಕೆ ಒಂದು ನಮೂನಿನೇರ ಇದ್ದಾನೆ ನುಡಿಯುತ್ತಾನೆಎದುರಿಗಿರುವುದು ಪ್ರೀತಿಸುವಮನಸು ಮರೆಯುತ್ತಾನೆಹೇಳಿಯೇ ಬಿಡುತ್ತಾನೆಎಲೆ ಉದುರುವ ಕಾರಣವನಾ ನೀರೆರೆಯುತ್ತೇನೆನಂಬಿ ನನ್ನ ವಸಂತತಪ್ಪದೆ ಬರುವ ಎಲ್ಲತಪ್ಪುಗಳ ಮೀರಿಎಂದೆ ಅಂವ ಆಡಿದ ಮಾತುಮರೆತು ಮತ್ತೆಹೇಳಿಯೇ ಬಿಡುತ್ತಾನೆನೆಟ್ಟ ಮರ ಮುರಿಯಲು ಬಿಡೆ ಎಂದು ಈಗ ಅನಿಸುತ್ತದೆ ಇಬ್ಬರ ದಾರಿ ಒಂದೆನಡೆಯುತ್ತೇವೆ ಓಡುತ್ತೇವೆಒಮ್ಮೊಮ್ಮೆ ಕುಂಟುತ್ತೇವೆಇದ್ದಕ್ಕಿದ್ದಲ್ಲೇ ದಾರಿ ಎರಡಾಗುತ್ತದೆಮಾತಾಡುತ್ತೇವೆ ದೊಡ್ಡದಾಗಿಕೂಗುತ್ತೇವೆ ಕಿರುಚುತ್ತೇವೆಅರೇ! ತಪ್ಪು ತಿಳಿಯಬೇಡಿಎರಡಾದ ದಾರಿ ಒಂದಾಗುವರೆಗೆಕೂ..ಅಂದಿದ್ದುಕೇಳಬೇಕಲ್ಲಮತ್ತೇ ಎಲ್ಲೊ ಒಂದು ಕಡೆದಾರಿ ಸೇರುತ್ತದೆಒಂದಾದ ದಾರಿಯಲ್ಲಿಸೇರುತ್ತೇವೆ ಸಾಗುತ್ತೇವೆಕೊನೆ ನಿಲ್ದಾಣಪರಿಚಯವಾಗುವವರೆಗೆ. ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕುದ್ದು ಕುದ್ದು……..ಆವಿಯಾಗದೇ…… ವಿಭಾ ಪುರೋಹಿತ್ ಮೂಕ ಪ್ರಾಣಿಗಳಂತೆಸಂವೇದನೆಗಳ ಬಯಸಿಭೂಮಿಯಂತೆ ಸಹಿಸಿನದಿಯಂತೆ ಮಲಿನವಾದರೂಸುಮ್ಮನಾಗಿಪ್ರಕೃತಿಯಂತೆ ಹಿಂಸೆಯನ್ನುತಡೆದುಕೊಳ್ಳುತ್ತದೆಭಾಷೆ ಅನನ್ಯ,ಅರ್ಥ ಅನೂಹ್ಯಅವನ ಆವರಿಸಿದಾಗಮನೆಯೆಲ್ಲಾ ದಿಗಿಲುಖುಷಿಪಡಿಸಲಿಕ್ಕೆ ಯತ್ನಿಸುತ್ತಾರೆಆಗ ಮಹಾಬೆಲೆ ! ಅವಳ ಮುತ್ತಿಕೊಂಡಾಗಮನೆಯ ಕಾಡುವುದಿಲ್ಲಯಾರಿಗೂ ಗೊತ್ತಾಗುವುದಿಲ್ಲ‘ಮಿತಭಾಷಿ’ಎಂದು ಹೊಗಳುತ್ತಾರೆನಮ್ಮವಳಿಗೆ ಮಾತನಾಡಲುಬರುವುದಿಲ್ಲ ನಗರದವರ ಹಾಗೆ…..ಚೂಟಿಯಲ್ಲ,ಚತುರೆಯಲ್ಲ‘ಅಲ್ಪಮತಿ’ ಯ ಬಿರುದು ಕೊಟ್ಟುಅಭಿಮತದ ಆಯ್ಕೆ ಯನ್ನೇಕಿತ್ತುಕೊಳ್ಳುತ್ತಾರೆವಿಪರ್ಯಾಸ ವ್ಯಾಖ್ಯಾನ !ಕೂಡಿಟ್ಟು ಕೂಡಿಟ್ಟು ಕುದ್ದು ಕುದ್ದುಆವಿಯಾಗಿ ಹೊರಬರದೇಮತ್ತೆ ಬಸಿದು ಬಿಂದು ಬಿಂದುಗಳಾಗಿಹೊಸಜನ್ಮ ಪಡೆಯುತ್ತವೆನಿರೀಕ್ಷೆಯಂತೆ ಕಾಳಿಯಾಗಲಿಲ್ಲಸಿಡಿಮದ್ದಾಗಿ ಸಿಡಿಯಲೂಯಿಲ್ಲಯಾವ ಕಿಂಪುರುಷ ಕಿನ್ನರಿಯ ಮಾಯೆಯೂ ಅಲ್ಲಅವಳೊಳಗಿನ ತ್ರಾಣ,ಸಹನ, ಮೌನ

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಗಝಲ್ ಸ್ಮಿತಾ ಭಟ್ ಗೂಡಿನಲ್ಲಿ ಕನಸುಗಳು ಆಗಮನಕ್ಕಾಗಿ ಕಾಯುತ್ತಿವೆಗಡಿಯಲ್ಲಿ ಬದುಕುಗಳು ಶಾಂತಿಗಾಗಿ ಕಾಯುತ್ತಿವೆ. ಕುದಿಯುವ ಜ್ವಾಲಾಗ್ನಿ ಸಿಡಿದೇಳುವುದು ಸತ್ಯಮೌನದಲಿ ಜೀವಗಳು ಪ್ರೀತಿಗಾಗಿ ಕಾಯುತ್ತಿವೆ ಗಡಿ ಗೆರೆಗಳು ನೆಮ್ಮದಿಯ ನೀಡಿದ್ದುಂಟೇ ಎಲ್ಲಾದರೂಬಲಿದಾನದ ದೀವಿಗೆಗಳು ಬೆಳಕಿಗಾಗಿ ಕಾಯುತ್ತಿವೆ ಕೋಟೆ ಕಟ್ಟಿ ಆಳಿದವರೆಲ್ಲ ಉಳಿದಿರುವರೇ ಎಲ್ಲಾದರೂಹೆಪ್ಪುಗಟ್ಟಿದ ದ್ವೇಷಗಳು ಸೋಲಿಗಾಗಿ ಕಾಯುತ್ತಿವೆ. ಅಸ್ತ್ರ,ಶಸ್ತ್ರಗಳೇ ಮಾತಿಗಿಳಿಯುತ್ತಿವೆ ಜಗದೊಳಗೆಅಮಾಯಕರ ಉಸಿರು ನಂಬಿಕೆಗಾಗಿ ಕಾಯುತ್ತಿವೆ. ಯದಾ ಯದಾಹಿ ಧರ್ಮಸ್ಯ ಅನ್ನುತ್ತೀಯಲ್ಲೋ “ಮಾಧವ”ಬುವಿಯೊಡಲ ನೋವುಗಳು ನಿನ್ನ ನ್ಯಾಯಕ್ಕಾಗಿ ಕಾಯುತ್ತಿವೆ *********

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಕಾವ್ಯಯಾನ

ಜುಲ್ ಕಾಫಿ಼ಯ ಗಜ಼ಲ್ ಎ.ಹೇಮಗಂಗಾ ಜೀವಸಂಕುಲದ ಉಳಿವಿಗೆಂದು ಜಪವಾಗಬೇಕು ಹಸಿರ ಉಳಿವುಅಸಮತೋಲನದ ಅಳಿವಿಗೆಂದು ತಪವಾಗಬೇಕು ಹಸಿರ ಉಳಿವು ಮಲಿನಗೊಂಡಿವೆ ಮನುಜ ಸ್ವಾರ್ಥಕೆ ಬಾನು, ಬುವಿ , ವಾಯು, ಜಲವೆಲ್ಲಾಪ್ರಕೃತಿದೇವಿ ಮುನಿಯದಿರಲೆಂದು ಧ್ಯೇಯವಾಗಬೇಕು ಹಸಿರ ಉಳಿವು಼ ಬತ್ತುತ್ತಲೇ ಇದೆ ಅಂತರ್ಜಲ ಒತ್ತೊತ್ತಾದ ಕಾಡುಗಳ ಸತತ ಹನನದಿಇರುವ ಅಲ್ಪವ ವೃದ್ಧಿಸಲೆಂದು ಧ್ಯಾನವಾಗಬೇಕು ಹಸಿರ ಉಳಿವು ಅರಿಯದಂತೆ ಕಾಯವ ನಲುಗಿಸಿ ಬಲಿಪಡೆದಿವೆ ಸೋಂಕು , ವಿಷಗಳುಎಲ್ಲರುಸಿರ ಉಳಿಸಲೆಂದು ಕಾಯಕವಾಗಬೇಕು ಹಸಿರ ಉಳಿವು ಕಾಲ ಮಿಂಚಿ ಹೋಗುವ ಮುನ್ನ ಕಾಪಿಡಬೇಕು ಪರಿಸರ ಜತನದಿಬದುಕು ಹಸನಾಗಲೆಂದು ಗುರಿಯಾಗಬೇಕು ಹಸಿರ ಉಳಿವು ಜಾಗೃತಳಾಗು ಹೇಮ ವಿನಾಶದ ಕೂಪ ಬಾಯ್ತೆರೆದಿದೆ ಮುಂದೆಸಾವ ದೂರ ಇಡಲೆಂದು ಸಾಧನೆಯಾಗಬೇಕು ಹಸಿರ ಉಳಿವು

ಕಾವ್ಯಯಾನ Read Post »

You cannot copy content of this page

Scroll to Top