ಕಾವ್ಯಯಾನ
ನೀ ಬದಲಾದರೆ ನಾಗರಾಜ್ ಹರಪನಹಳ್ಳಿ ಆಕೆ ಎದುರಾದಾಗ ಹೀಗೆಒಂದು ಪ್ರಶ್ನೆ ಎಸೆದಳುನೀ ಬದಲಾದರೆ…. ನಾ ಸ್ವಲ್ಪ ಹೊತ್ತು ಮಾತಾಡಲಿಲ್ಲ ಆಕೆ ಒತ್ತಾಯಿಸಿದಳುತುಟಿಗೆ ಮುತ್ತಿಟ್ಟು ಮತ್ತೆ ಕೇಳಿದಳುನೀ ಬದಲಾದರೆ ?? ದೀರ್ಘ ನಿಟ್ಟುಸಿರು ಬಿಟ್ಟೆಹಾಗೂ ಹೇಳಿದೆ ;ಕನ್ನಡಿಯ ಎದುರು ನಿಂತು ಪ್ರಶ್ನಿಸಿಕೊ ಎಂದೆ ಮತ್ತೆ ಅವಳೆಡೆಗೆ ಹೊರಳಿಕತ್ತು ಬಳಸಿ ,ಹೆರಳಿನ ಹಿಂಬಾಗಕೆ ಮುತ್ತಿಟ್ಟು ಹೇಳಿದೆ;ಸೂರ್ಯನ ಗಮನಿಸುಆಕಾಶ ಗಮನಿಸುಬಯಲ ಓದುವುದ ಕಲಿಸಮುದ್ರದ ಎದುರು ನಿಂತುಅದರ ರೋಧನವ ಅರಿ ಮನುಷ್ಯರ ಬದುಕಿನ ದೇಹದ ನಶ್ವರತೆಯ ಅವಲೋಕಿಸು ಹಾಗೂ ….ಹಾಗೂನನ್ನ ಕಣ್ಣುಗಳ ದಿಟ್ಟಿಸುನನ್ನ ತೋಳಿನಲ್ಲಿ ಸುಮ್ಮನೆ ಕರಗಿಹೋಗು….. ಚಾಡಿಗಳ ಜಾಡಿಸಿ ಒದೆಕಿವಿ ಕಚ್ಚುವವರ ಕುಡಗೋಲಿನಿಂದ ಕೊಚ್ಚಿಹಾಕುಹಾಳು ಹಡಬೆ ರಂಡೆಯರಮಾತಿಗೆ ಅಡುಗೆ ಮನೆಯ ಲಟ್ಟಣಿಗೆಯಿಂದ ತಿವಿ ನಾನು ಉರಿವ ಕೆಂಡದಂಡೆ ದಿಗ್ಭ್ರಮೆಗೊಳ್ಳುವಂತೆ ಹರಿವ ನದಿ…ಜಗದ ಮೌನ ಗರ್ಭೀಕರಿಸಿಕೊಂಡ ಕಣಿವೆಸುಮ್ಮನೆ ನನ್ನೆದುರು ಕುಳಿತು ಅಪ್ಪಿ ಆಲಂಗಿಸು … ನೀ ಬದಲಾದರೆ ಎಂಬ ಪ್ರಶ್ನೆಗಳ ಹುಟ್ಟಿದಲ್ಲಿ ನೇತು ಹಾಕು ಬಿಮ್ಮನೆ ಘಮ್ಮನೆ ಮಘ ಮಘಿಸುವ ಮಲ್ಲಿಗೆಯಂತೆ ಪ್ರೀತಿಸು, ಪ್ರೀತಿಸು…; ಅಪ್ಪಟವಾಗಿ ಪ್ರೀತಿಸು…ಪ್ರೀತಿ ಬೆಳಕೆಂಬ ಬೆಳಕಿನ ಬೆನ್ನು ಹತ್ತು…. *********************









