ಹೇಳದೇ ಹೋಗದಿರು
ಗಝಲ್ ಶ್ರೀದೇವಿ ಕೆರೆಮನೆ ಅದೆಷ್ಟೊ ಶತಮಾನಗಳಿಂದ ಕಾದಿರುವೆ ಹೇಳದೇ ಹೋಗದಿರುನೀ ಬರುವ ಹಾದಿಗೆ ಕಣ್ಣು ಕೀಲಿಸಿರುವೆ ಹೇಳದೇ ಹೋಗದಿರು ಬರಿದೆ ಮತ್ತೇರದಿರು ಸುರೆಗೆಲ್ಲಿದೆ ನಿನ್ನ ಮರೆಸುವ ತಾಕತ್ತುದೇಹದ ಬಟ್ಟಲಿಗೆ ಮದಿರೆ ತುಂಬಿಸಿರುವೆ ಹೇಳದೇ ಹೋಗದಿರು ಹಗಲಿರುಳೂ ಮತ್ತೇನೂ ಇಲ್ಲ ನಿನ್ನದೇ ಧ್ಯಾನದ ಹೊರತಾಗಿತಲಬಾಗಿಲ ಮೆಟ್ಟಿಲಲಿ ಕಾದು ಕುಳಿತಿರುವೆ ಹೇಳದೇ ಹೋಗದಿರು ಜೋಡಿಮಂಚದ ಬದಿಯಲ್ಲಿ ಹಚ್ಚಿಟ್ಟ ದೀಪದ ಎಣ್ಣೆ ತೀರಿದೆದೇವರ ಗೂಡಿಂದ ಹಣತೆಯೊಂದ ತರುವೆ ಹೇಳದೇ ಹೋಗದಿರು ವಿರಹ ತುಂಬಿದ ರಾತ್ರಿ ನಿದ್ದೆಯಿರದೆ ಬಲು ದೀರ್ಘವಾಗುವುದಂತೆಜೋಗುಳ ಹಾಡಿ ಮಡಿಲೊಳಗೆ ಮಲಗಿಸುವೆ ಹೇಳದೆ ಹೋಗದಿರು ಕಾಸಿದ ತುಪ್ಪವಿದೆ ಜೊತೆಗೆ ನಾನೆ ಮಾಡಿದ ಘಮಗುಡುವ ಹೋಳಿಗೆಮಧುರಾತ್ರಿಗೂ ಮುನ್ನ ಮೃಷ್ಟಾನ್ನ ಸಿದ್ಧಪಡಿಸುವೆ ಹೇಳದೇ ಹೋಗದಿರು ಕಣ್ಣು, ಕಿವಿ ಮೂಗು ನಾಲಿಗೆಗಳೆಲ್ಲವೂ ತಮ್ಮ ಕೆಲಸ ಮರೆತಿವೆಮುತ್ತಿನಲ್ಲೆ ಅಮರಾವತಿಯ ಧರೆಗಿಳಿಸುವೆ ಹೇಳದೇ ಹೋಗದಿರು ಸಿರಿ, ನಿನ್ನ ಪಾಲಿನ ಕಟ್ಟಿಗೆಯನ್ನೆಸೆದು ಬಿಡು ಅಗ್ನಿಕುಂಡದಲಿಚಿತೆಗೇರುವ ಮುನ್ನ ಕಣ್ತುಂಬಿಕೊಳ್ಳುವೆ ಹೇಳದೇ ಹೋಗದಿರು ************









