ಎದುರೇ ಪ್ರೀತಿ ಇರುವಾಗ
ನಾಗರಾಜ್ ಹರಪನಹಳ್ಳಿ -೧-ಎದುರೆ ಪ್ರೀತಿ ಇರುವಾಗಎಲ್ಲಿ ಹೊರಡಲಿಅಲೆಯಲು -೨-ಇಳೆಗೆ ಮಳೆಯ ಧ್ಯಾನನನಗೆ ಅವಳ ಹೆರಳಪರಿಮಳದ ಧ್ಯಾನ. -೩-ಅವಳ ತುಟಿಗಳು ಮಾತಾಡಿದವುಕವಿತೆ ಹುಟ್ಟಿತು -೪- ತುಟಿಗೆ ತುಟಿ ಇಟ್ಟೆಜನ್ಮ ಜನ್ಮದಬಂಧನ ನೆನಪಾಯಿತು -೫-ಅವಳು ಅಂಗೈಗೆಮುತ್ತಿಟ್ಟಳುಪ್ರೇಮದ ಉದಯವಾಯಿತು -೬-ಅವಳ ಅಂಗೈಗೆಅದ್ಭುತ ಶಕ್ತಿಅದಕೆಬೆಸುಗೆಗೆ ಬಿಸಿ -೭-ನನ್ನ ಬಲ ಅಂಗೈ ನೋಡಿಕೊಂಡಾಗಲೆಲ್ಲಾಅವಳ ಮುಖದ್ದೇ ನೆನಪುಕಾರಣಮೊದಲು ಅವಳ ತುಟಿ ತಾಗಿದ್ದುಅಂಗೈಗೆ* -೮-ಆಕೆ ಹೇಳುವುದುಒಂದೇಉಸಿರಾಟದ ಏರಿಳಿತಎದೆ ಬಡಿತ ನೀನು -೯-ಎದೆಯ ಮೇಲೆ ಕೈಯಿಟ್ಟರೆಅವಳ ಹೆಸರುಕಿವಿಗೆ ಅಪ್ಪಳಿಸಿತ -೧೦-ಕುಡಿಯುತ್ತಿದ್ದೆ ಅಲೆಯುತ್ತಿದ್ದೆಅವಳ ದರ್ಶನವಾಯಿತುಎದೆಗೆ ಪ್ರೀತಿಯ ಬೀಜಹಾಕಿದಳುಅದೀಗ ಹೆಮ್ಮರವಾಗಿದೆ**********
ಎದುರೇ ಪ್ರೀತಿ ಇರುವಾಗ Read Post »









