ಅರಮನೆ
ಕವಿತೆ ಕೃಷ್ಣಮೂರ್ತಿ ಕುಲಕರ್ಣಿ. ಅರಮನೆಗಳು ಎಂದರೆಹಾಗೇಯೆ ಸ್ವಾಮಿ,ಒಂದಿಲ್ಲ ಒಂದುದಿನಅವು ತಮ್ಮದಿಮಾಕು ದೌಲತ್ತುಕಳೆದುಕೊಳ್ಳುತ್ತವೆ!ಬದುಕಿನಲ್ಲಿ ಬರುವಸುಖ ದುಃಖಗಳಂತೆ,ದುಃಖದ ನೋವಿಗೆ ನರಳದೆ,ಸುಖದ ಸಡಗರಕ್ಕೆ ಹಿಗ್ಗದೆ,ಅಲ್ಲಿರುವ ಬಾಗಿಲು ಕಿಟಕಿಗೋಡೆಯಲಿ ಹೂತಿರುವ ಗೂಟಗಳು ಮಾತ್ರ ನಿರಂಬಳವಾಗಿಉಳಿಯಲು ಸಾಧ್ಯ,ಅಲ್ಲಿಯೇ ಹುಟ್ಟಿಬೆಳೆದಇರುವೆಗಳು ಸಾಗಿಹೋಗುತ್ತವೆ,ಅರಮನೆ ಇರುವ ಮನೆಯಲ್ಲ,ಅದೊಂದು ಸ್ಮಾರಕ ಎಂಬುದು ಅವುಗಳ ಗಮನಕ್ಕೆ ಬಂದಿರಬೇಕು,ತಾವು ಕಟ್ಟುವ ಗೂಡಿಗೆಗೆದ್ದಿಲೊ ಹಾವೋ ಬರುವಹಾಗೆ,ದುಃಸ್ವಪ್ನ ಕಂಡಿರಲೂಬೇಕು,ವಿಶಾಲವಾದ ಸೌಧ ಕಟ್ಟಿದವರು,ವಿಶಾಲ ಮನೋಭಾವ ಬೆಳೆಸಲಿಲ್ಲ,ಅರಮನೆಯ ಅಂಗಳದಲ್ಲಿ,ಭಿನ್ನತೆಯ ಕರ್ಕಿ ಆಳಕ್ಕೆಬೇರುಗಳ ಇಳಿಬಿಟ್ಟು ದಟ್ಟವಾಗದಿದ್ದರೂ,ದಿಟ್ಟವಾಗಿಯೇ ಹಬ್ಬಿಹರಡಿದ್ದು,ಕಟ್ಟಿದವರ ಗಮನಕ್ಕೆ ಬರಲೇಇಲ್ಲ,ಸಂಕುಚಿತ ಮನೋಭಾವಗಳಸಂತೆ ಜರುಗಿದಾಗ,ಅರಮನೆ ಆಡಂಬರ ಕಳೆದುಕೊಂಡು ಬರಡಾಯಿತು,ಏಕಾಂಗಿ ಸ್ಮಾರಕದ ಸುತ್ತಲೂ,ಬೀಸುವ ಬಿರುಗಾಳಿ ರಭಸಕ್ಕೆಮಾಗಿದ ಜೀವದಂತೆ ಸಹಿಸದನೋವು,ಮನೆಮುಂದೆ ಬೆಳೆದ ತುಳಸಿಹಿತ್ತಲಿನ ಮಲ್ಲಿಗೆ ಬಳ್ಳಿ,ಹೇಗೊ ಅಸ್ತಿತ್ವ ಉಳಿಸಿಕೊಂಡಿವೆ,ಪೂಜೆಗೆ ಕೊಂಡ್ವ್ಯಲು ಬರುವರೆಂದು,ದೊರೆ ಇರದ ಅರಮನೆಗೆಕಾವಲುಗಾರನೇಕೆ ಇದ್ದಾನು?ಪರಿವಾರದವರೇಕೆ ಸುಳಿದಾರು?ಸಂತೆ ಮುಗಿದಮೇಲೆಅಲ್ಯಾರು ಉಳಿದಾರು?ಅರಮನೆ ಅಂಗಳದಿ ಬೀಜಬಿತ್ತಲು ಮುಂದಾದರೈತರಿಗೂ ತಕರಾರು,ಗೊಂದಲದ ಗೂಡು ಅರಮನೆ, *********









