ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಆಹ್ಲಾದಕರ ಭಾವನೆಯಲಿ ನಾವು

ಕವಿತೆ ರಾಘವೇಂದ್ರ ದೇಶಪಾಂಡೆ ಗುನುಗುತಿದೆ ಹೆಸರೊಂದು ಹೃದಯ ಶಹನಾಯಿಯೊಳಗೆಬೆಸೆದಾಗಿದೆ ಆ ಹೆಸರಲ್ಲಿ ನನ್ನ ಬಾಳಉಸಿರುರೂಪಿಸಿಹನು ಭಗವಂತ ಪ್ರೀತಿ ಭರಿತ ಸಂಬಂಧವನುಒಳಗೊಂಡಿದೆ ನಮ್ಮೀ ಸಂಬಂಧವುಸೃಷ್ಟಿಕರ್ತನ ಫಲದೊಳಗೆ… ಹೇಳಿಕೊಳ್ಳಲಾಗದ ಏಕಾಂಗಿತನವಿದೆ ಪ್ರೀತಿ ತಿರುವಿನಲಿಒಂಟಿಯಾಗುವೆ…ಕೆಲವೊಮ್ಮೆ ನಾನು ಒಂಟಿತನದಲಿಇಚ್ಛೆಪಟ್ಟಿರುವನೊ ಕರ್ತೃ ಹೀಗೆಯೇ ಇರಬೇಕೆಂದುಆಗುವುದೊಮ್ಮೆ ನಿರ್ಜನ…ಮತ್ತೊಮ್ಮೆ ಸ್ವರ್ಗಲೋಕಆಳವಾದ ಪ್ರೀತಿ ಇದೆಯೆನೋ… ದುಖಃದಲಿ ದುಖಿಃಯಾಗಿರುವೆ ಸುಖಃದಲಿ ಸುಖಿಃನೀಗಿಸಿಕೊಂಡಿರುವೆ ಸಂತಸದ ಹಸಿವನು ನಿನ್ನ ಹಸನ್ಮುಖತೆಯಲಿಎದೆಬಡಿತ ನಿಲ್ಲುವುದು ವ್ಯಾಕುಲತೆಯಲಿ ನೀನಿರುವಾಗಹಂಚಿಕೊಳ್ಳುವ ಪ್ರಣಯಾಮೃತವನು ಜುಮ್ಮೆನ್ನುವ ಮಿಂಚಿನಲಿದಾಂಪತ್ಯ ದೀವಿಗೆಯ ಬೆಳಕಿನಲಿ… ಸುವರ್ಣ ಲೇಖನಗಳಾಗಿವೆ ಚೈತನ್ಯಭರಿತ ಹೆಜ್ಜೆಗಳುಕಥೆಯಾಗಿರುವೆವು ಬದುಕೆಂಬ ಲೇಖನದ ಹೊಳಪಿನಲಿವಿರಹಿಸೋಣ ಭರವಸೆಯ ಭಾವಲೋಕದಲಿಸಾಗೋಣ ಒಲವಿನ ಅಲೆಯಲಿ ನಾಳೆಂಬ ನಿರೀಕ್ಷೆಯಲಿಚುಂಬಿಸೋಣ ಆಗಸವ ಸ್ವಚ್ಛಂದದಿ ಹಾರಾಡುವ ಹಕ್ಕಿಗಳಾಗಿ ಹೆಸರೊಂದು ಕೊರೆದಾಗಿದೆ ಹೃದಯಾಂತರಾಳದಲಿತಳುಕುಹಾಕಿಕೊಂಡಿದೆ ಮೈ ಮನಸುಗಳಲಿ ನನ್ನ ಹೆಸರುಸೃಷ್ಟಿಯಾಗಿದೆ ಸಂಬಂಧವೊಂದು ಅದ್ಭುತ ಪರಿಕಲ್ಪನೆಯಲಿಜೊತೆಯಾಗಿರೋಣ ಜೀವಂತಿಕೆಯ ಕಾಲಚಕ್ರದೊಳಗೆಸಾಧಿಸಿ ತೋರಿಸೋಣ ಹೌದೆನ್ನುವ ಹಾಗೆ… **************

ಆಹ್ಲಾದಕರ ಭಾವನೆಯಲಿ ನಾವು Read Post »

ಕಾವ್ಯಯಾನ

ಕರುಣಾಮಯಿ

ಕವಿತೆ ಪೂಜಾ ನಾರಾಯಣ ನಾಯಕ ಆಸುಪಾಸಿನ ಬೇಲಿಯಲಿದ್ದಕಾಷ್ಟದ ತುಂಡಾಯ್ದುಕಲಬೆರಕೆ ಅಕ್ಕಿಯಲಿ ಬೆರೆತಿರುವ ಕಲ್ಲಾಯ್ದುಹೊಲದಲ್ಲಿ ಬೆಳೆದ ಕಾಯಿಪಲ್ಲೆಯ ಕೊಯ್ದುಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳುಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂಆಶಾ-ಭರವಸೆಯ ನುಡಿಯಾಡಿಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆತಾನೊಬ್ಬಳೇ ಹೋರಾಡಿಹರಿದಿರುವ ಹರುಕು ಅಂಗಿಯ ತುಂಡಿಗೂಮೊಂಡಾದ ಸೂಜಿಗೂಮಧುರವಾದ ಬಾಂಧವ್ಯ ಬೆಸೆದವಳುಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗಕರುಳಬಳ್ಳಿಯ ಅಳಲು ತಾ ಮನದಲ್ಲೆ ಅರಿತುನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿನನ್ನ ಸಾವಿರ ಕನಸುಗಳನ್ನುನನಸು ಮಾಡಲು ಹೊರಟು ನಿಂತವಳುಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿಶಾಲೆಗೆ ಪೀಜು ತುಂಬಿತನ್ನ ಹರುಕು ಸೀರೆಯ ಲೆಕ್ಕಿಸದೆನನಗೊಂದು ಹೊಸ ಅಂಗಿಯ ಕೊಡಿಸಿದೊಡ್ಡ ಅಧಿಕಾರಿಯ ಸ್ಥಾನದಲಿತಾ ಕೂಸ ನೋಡಬೇಕೆಂದುಆಸೆಯಿಂದ ಕಾಯುತ್ತ ಕುಳಿತವಳುಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?….ಅವಳ ಋಣ ತೀರಿಸಲು ಸಾಧ್ಯವಿಹುದೇನು?…ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?…ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?…. ******

ಕರುಣಾಮಯಿ Read Post »

ಕಾವ್ಯಯಾನ

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ

ಕವಿತೆ ವಿದ್ಯಾ ಕುಂದರಗಿ ನಿರ್ಬಂಧಗಳ ಜಡಿದು ಬಂಧಿಸಲಾಗಿದೆ ಇಲ್ಲಿರೆಕ್ಕೆ ಬಡಿದು ಬಾನಿಗೆ ಹಾರಬೇಕಿದೆ ನನಗೆ ಕಣ್ಕಟ್ಟಿದ ಖುರಪುಟಕೆ ಒಂದೇ ಗುರಿಯುದೆಸೆದೆಸೆಗೆ ಕಣ್ಣಗಲಿಸಿ ನೋಡಬೇಕಿದೆ ನನಗೆ ಗೊರಕೆಯ ಸದ್ದಿಗೆ ಗೋಡೆಯಾಗುತ್ತಿದೆ ಪಟಲಗಾಳಿಪಟವಾಗಿ ಆಕಾಶ ಚುಂಬಿಸಬೇಕಿದೆ ನನಗೆ ರಾತ್ರಿಕನಸು, ಭಾವಗಳಿಗೆ ಕೊಡಲಾಗದ ಕಾವುಸಂಜೆ ಮುಂಜಾವಿಗೆ ಚಿಂವ್‌ಗುಟ್ಟಬೇಕಿದೆ ನನಗೆ ಚಿವುಟಿ ಚಿಮ್ಮಿದರೂ ಟಿಸಿಲೊಡೆಯುವ ಪಸೆಹಬ್ಬಿ ಆಕಾಶದೆತ್ತರಕೆ ಕೈ ಚಾಚಬೇಕಿದೆ ನನಗೆ ‘ಸಖಿ’ ನಿಸ್ಸಂಗವಾಗಿ ಕಳೆದ ಮಾಸಗಳೇಷ್ಟೋಒಮ್ಮೆ ಚಿತ್ತಪೌರ್ಣಿಮೆ ಆಗಬೇಕಿದೆ ನನಗೆ *******************

ಒಮ್ಮೆ ಪೌರ್ಣಿಮೆಯಾಗಬೇಕಿದೆ ನನಗೆ Read Post »

ಕಾವ್ಯಯಾನ

ಆಯ್ಕೆ

ಕವಿತೆ ಮಾಲತಿಹೆಗಡೆ ಹೆತ್ತವರ ಹುಟ್ಟೂರವ್ಯಾಮೋಹ ಬಿಟ್ಟವರು..ಕತ್ತರಿಸಿ ನೆಟ್ಟ ಗಿಡದಂಥವರುನಗರವಾಸಿಗಳಿಗೊಲಿದವರುಹೋದೆಡೆಯೆಲ್ಲ ಚಿಗುರುವಹಟದಲ್ಲಿ ಬೇರು ಬೆಳೆಸಿಕೊಂಡವರಲ್ಲವೇ ನಾವು ? ಅಂಗೈ ಗೆರೆ ಮಾಸುವಷ್ಟುಪಾತ್ರೆ ಬಟ್ಟೆ ಉಜ್ಜಿ ಉಜ್ಜಿಮುಂಬಾಗಿಲು ತೊಳೆದುರಂಗೋಲಿಯಿಕ್ಕಿಕಟ್ಟಡವನ್ನುಮನೆಯಾಗಿಸಿಯೂತವರು ಮನೆ ಯಾವೂರು?ಗಂಡನ ಮನಿ ಯಾವೂರು?ಪ್ರಶ್ನೆ ಎದುರಿಸುತ್ತಅಡುಗೆಮನೆ ಸಾಮ್ರಾಜ್ಯದಲಿಹೊಗೆಯಾಡುವ ಮನಕ್ಕೆತಣ್ಣೀರೆರೆಚಿ ಹೂನಗೆ ಬೀರುವವರಲ್ಲವೇನಾವು? ತೊಟ್ಟಿಲು ತೂಗಿ,ಹೆಮ್ಮೆಯಲಿ ಬೀಗಿವಿರಮಿಸಲೂ ಬಿಡುವಿರದೇಸಂಸಾರ ಸಾವರಿಸಿಹೀಗೆಯೇ ಸಾಗುವುದುಹಣೆಬರಹ ಎನ್ನುತ್ತಬದುಕುವ‌ ನಗರವಾಸಿ ನಾರಿಯರಲ್ಲವೇ ನಾವು? *************

ಆಯ್ಕೆ Read Post »

ಕಾವ್ಯಯಾನ

ಹೇಳಲೇನಿದೆ

ಕವಿತೆ ಡಾ.ಗೋವಿಂದಹೆಗಡೆ ಇಲ್ಲ, ನಿಮ್ಮೆದುರು ಏನನ್ನೂಹೇಳುವುದಿಲ್ಲ ಹೇಳಿದಷ್ಟೂ ಬೆತ್ತಲಾಗುತ್ತೇನೆಮತ್ತೆ ಬಿತ್ತಿಕೊಳ್ಳಲು ಏನುಉಳಿಯುತ್ತದೆಹೇಳಿದಷ್ಟು ಜೊಳ್ಳಾಗುತ್ತೇನೆಮೊಳೆಯಲು ಮತ್ತೆಉಳಿಯುವುದೇನು ಖರೇ ಅಂದರೆನಿಮಗೆ ಏನನ್ನೂ ಹೇಳುವಅಗತ್ಯವೇ ಇಲ್ಲ ಕಣ್ಣುಗಳಲ್ಲೇ ಸೆರೆಹಿಡಿದುದೋಷಾರೋಪಪಟ್ಟಿ ಸಲ್ಲಿಸಿಯಾವ ಪಾಟೀಸವಾಲೂಇಲ್ಲದೇಶಿಕ್ಷೆ ವಿಧಿಸಿ… ಹೇಳಲೇನಿದೆ? ***********

ಹೇಳಲೇನಿದೆ Read Post »

ಕಾವ್ಯಯಾನ

ಬೊಗಸೆಯೊಡ್ಡುವ

ಕವಿತೆ ಗೋಪಾಲ ತ್ರಾಸಿ ಅಹೋರಾತ್ರಿಬಾನು ಭುವಿಯ ನಡುವೆ ಚಲನಶೀಲ ಶಿಖರದಂದದಿ ಉದ್ದಾನುದ್ದಕೆರಾಶಿರಾಶಿ ಮೋಡಗಳ ಜಂಬೂಸವಾರಿ,ಕಾರಿರುಳ ದಿಬ್ಬಣಕೆ,ಅಲ್ಲೊಂದು ಇಲ್ಲೊಂದುಅಂಜುತ್ತಂಜುತ್ತ ಇಣುಕುವಮಿಣುಕು ನಕ್ಷತ್ರಗಳು, ಸಾಕ್ಷಿ. ಮೈಭಾರವಿಳಿಸಿಕೊಳ್ಳಲೇನೊ, ತಾನೇತಾನು ಮೈತುಂಬ ಕನ್ನಕೊರೆದುನಸುಕಿನಿಂದಲೆ, ಧಸಧಸ ಸುರಿದುಕೊಂಡಮೋಡ;ರ್ರೊಯ್ಯನೆ ಹೊಯಿಲೆಬ್ಬಿಸುವ ಗಾಳಿಗೌಜು,ಧಡಾಂಧುಡೂಂ, ಛಟ್ ಛಟ್ ಛಟೀಲ್ಗುಡುಗು ಮಿಂಚಿನ ಜುಗಲ್ಬಂಧಿಏರುಮಧ್ಯಾಹ್ನವೇ ಸಂಜೆಗತ್ತಲ ಭ್ರಾಂತಿ;ಹೊರಗೆ. ಆಯಾಸದಿಂದ ಕಿಟಕಿಬಾಗಿಲು ಸಂದಿತೂರಿಸುಯ್ಯನೆ ಒಳಸುಳಿದುಅಪ್ಯಾಯಮಾನವಾಗಿ ಕಚಗುಳಿಯಿಡುವಒದ್ದೆಗಾಳಿಗರಿಗರಿಯಾಗಿ ಮೈಮನಸ್ಸು ಬೆಚ್ಚಗೆಗರಿಗೆದರಬೇಕಿತ್ತು ; ಒಳಗೆ. ಮಾಗಿಯ ಚುಮುಚುಮು ಚಳಿಯ ಜೊತೆ ಅನಾಯಾಸ ಬೆವರಿಳಿಸುವನಿರ್ಜೀವ ಜಡ ಜಂತುಭೂಮ್ಯಾಕಾಶ ಬಾಹು ಚಾಚಿಕೊಳ್ಳುತ್ತಲೆ, ಎಲ್ಲೋ ಕ್ಷಿತಿಜದಂಚಿಂದದಿಢೀರನೆ, ಹೊಸ್ತಿಲಲಿ ಹೊಂಚು ! ಹೊರಟೇ ಹೋಯಿತೆನ್ನಿಬಂದಂತೆ ವೈಶಾಖ, ಪೆಚ್ಚುಮೋರೆ ಹಾಕಿಅಟ್ಟಕ್ಕೇರಿದ ಹರ್ಷೋಲ್ಲಾಸವರ್ಷಾಕಾಲಿಟ್ಟರೂ ಮಿಸುಕಾಡಲಿಲ್ಲರಾಹು ಬಡಿದಂತೆ ಮಂಕು ಸಮಯ ! ರೆಕ್ಕೆ ಪುಕ್ಕ ತೊಯ್ದುಹಿಂಜಿ ಹಿಂಡಿ ಇನ್ನಿಲ್ಲವೆಂಬಂತೆಮುದುಡಿ ಹಿಡಿಯಾದ ತೈನಾತಿ ದಿನಚರಿಪಿಳಿಪಿಳಿಗಣ್ಣು ನಿಸ್ತೇಜ ಪಾಪೆತೆರೆಗಣ್ಣಲಿ ಮೂರ್ಛೆ ಹೋದಮಾನವನಹಮಿಕೆಅಳಿದುಳಿದ ಅಂತ:ಸ್ಥೈರ್ಯಮಂಡಿಯೂರಲೂ ಘನಕಾರಣವಿರಬೇಕು;ಇರಲಂತೆ, ಇರುವಂತೆ. ತೊಯ್ಯಲಾಗದ ಮೃದುಲ ಮನಸ್ಸಿನವಿಭ್ರಾಂತಿನಿಮ್ನೋನ್ನತ ಹಾದಿಗುಂಟ ತಲ್ಲಣಗಳ ಸಂತೈಸುತ್ತಲೇ ಪಾರಾಗಬೇಕಿನ್ನುಸಕಲ ಪೀಡಾವಿನಾಶಕ ವಿಪ್ಲವಕ್ಕೆಗದ್ಗದಿತ ಮೋಡ ತೊಟ್ಟಿಕ್ಕುವ ಆ ಕೊನೇಯಸಂಜೀವಿನಿ ಹನಿಗೆಭೊಗಸೆಯೊಡ್ಡುವ ಆವೊಂದುತಂಪು ಬೆಳಕಿನ ಬೆಳಗಿಗೆ…

ಬೊಗಸೆಯೊಡ್ಡುವ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸುಜಾತಾ ಲಕ್ಮನೆ ಇಲ್ಲಿ ಅಬ್ಬರದ ಬಿನ್ನಾಣ, ಮಾತಿನ ಸಂಚಲಿ ಮೌನ ಗೆಲ್ಲುವುದಿಲ್ಲಸಭ್ಯ ನಡೆಗೆಲ್ಲ ನ್ಯಾಯದ ತಕ್ಕಡಿಯಲಿ ಮಾನ್ಯತೆ ಸಿಗುವುದಿಲ್ಲ ತಾ ನಡೆವ ದಾರಿಯೆಲ್ಲವೂ ರಾಜಪಥವೆಂಬ ವಿಭ್ರಮೆ ತರವೇಯಾವ ಪಯಣವೂ ಕವಲೊಡೆಯದೇ ಗುರಿ ತಲುಪುವುದಿಲ್ಲ ಶಶಿ ಸೂಸುವ ಕಿರಣ ಪ್ರಭೆ ಇಳೆಯ ಕಣಕಣಕೂ ತಂಪನ್ನೆರಚದೇಒಳತೋಟಿಗಳ ತೂರಿದಂತೆ ಎದೆಯ ತೊಳಲಾಟ ತಗ್ಗುವುದಿಲ್ಲ ಅಂತರಂಗ ತೆರೆದಿಟ್ಟ ಭಾವಗಳು ಬೀದಿಗಳಲಿ ಬಿಕರಿಯಾಗುತ್ತವೆಸುಳ್ಳಿನ ಜಗದಲಿ ಸತ್ಯದ ಕದಪಿಗಿಟ್ಟ ಮಸಿ ಬಿಳಿಯಾಗುವುದಿಲ್ಲ ನೇರವಾಗಿ ನಿಂತಷ್ಟೂ ವಕ್ರರೇಖೆಯ ಬಣ್ಣ ಬೆನ್ನಿಗೆ ಮೆತ್ತುವರುಒಳದನಿಯ ಧಿಕ್ಕರಿಸಿ ನಡೆದಂತೆಲ್ಲ ಬಂಧ ಹಿತವಾಗುವುದಿಲ್ಲ ಕೈ ಚೀಲ ಹಿಡಿದು ಹಲ್ಕಿರಿದು ಓಲೈಸುವವರಿಗಷ್ಟೇ ಮನ್ನಣೆಯಿಲ್ಲಿನಲ್ನುಡಿಗಳಿಗೂ ಕೆಸರೆರಚುವವರ ಘನತೆ ಅಟ್ಟಕ್ಕೇರುವುದಿಲ್ಲ ಒಲವು, ಆದರವಿಲ್ಲದ ಕಡೆ ಇದ್ದು ಸಾಧಿಸುವುದೇನು “ಸುಜೂಅಸಲಿ, ನಕಲಿಯನೆ ಒರೆ ಹಚ್ಚಲು ಸೋತರೆ ಮೌಲ್ಯವಿರುವುದಿಲ್ಲ **************************

ಗಜಲ್ Read Post »

ಕಾವ್ಯಯಾನ

ವರುಣರಾಗ

ಕವಿತೆ ಅರುಣ್ ಕೊಪ್ಪ ಹಸಿರು ಚಿಮ್ಮುವ ಬುವಿಯೊಳು….ವರುಣನ ಹನಿಗಳ ಸದ್ದು.!ಕವಿದ ಮೋಡಗಳು…ಎಲ್ಲೋ ಸೇರಿಹೋದವು…ಹನಿಯೊಂದೇ …..ಕೂಗುತ್ತಾಕ್ರಮಿಸುತ್ತಿದೆ….ಭೂ ಗರ್ಭವ!ಆಳ ಆಳವನು ಸೇರುವಾಸೆ….ಎಲ್ಲ ಕಡೆ ನರ್ತನ ಮಾಡುವಾಸೆ…ನಿನ್ನ ಹಾಡಿಗೆ ದ್ವನಿಗೂಡುವಹಿಂಡೇ ಈ ಪ್ರಪಂಚ!!ನೀ ಇದ್ದರೆ ಜೀವವೇ ಸಂಗೀತಮಯ…ಹಸಿರು…,ಹಸೀವು…,ಒಲವು ಎಲ್ಲ…..ನೀ ನರಿಯದಿಹ ಮಿಂಚು!!ಬಿರುಗಾಳಿ ಬೆನ್ನಟ್ಟಿ ಬಂದಾಗಆಗುವ ಭಯ!!ನೀ ಕಾಣದಾದಾಗ ಆಗುವ ವ್ಯಥೆ …..ಬಣ್ಣಿಸಲಾಗದಷ್ಟು ಭಾವಪೂರಿತ…ನೀ ಸುರಿವ ಸದ್ದೆ ಚಂದನೀ ಬೆರೆವ ಸಾಲು ಸಾಲುನೆರೆಗಳೇ ….ಪ್ರಾಕೃತಿಕ ಸೌಂದರ್ಯದ ಅಂತರಾಳ….ಆದರೆ ನಿನ್ನ ಆಳವ ಬಲ್ಲವರಾರಿಲ್ಲ….ಸಾಗರವೇ….??ನೀ ಮಳೆಯ ಮಗು,ನಗು,ಮಡದಿ,ಎಲ್ಲ ವೂ ನೀನೇ. ಎಲ್ಲ ನಿನ್ನ ಮಾಯೇ **************

ವರುಣರಾಗ Read Post »

ಕಾವ್ಯಯಾನ

ಬಂದಿಯಾಗಿಹ ರವಿ

ಕವಿತೆ ನೀ.ಶ್ರೀಶೈಲ ಹುಲ್ಲೂರು ಉದಯಿಸುವ ರವಿಯ ದಿನದೋಟಕೆಅಡ್ಡಿಯಾಗಿದೆ ಕುರಿಮೋಡ ಕರಿಸಾಲುಕುರಿಗಾರ ಪವನನೆದ್ದು ಬರುವನಕಹಿಂಡು ಕುರಿಗಳ ನಡುವೆ ರವಿ ಕಂಗಾಲು ಮಳೆಗಾಲದೀಗಿನೀ ಹಗಲ ಹೊತ್ತುಮೋಡಗಳದು ನಿಲದ ನಿತ್ಯ ರಂಪಾಟಕೆಂಪಾದವನಿಗದೇನೋ ಮಮಕಾರಮೋಡಗಳೊಂದಿಗವನದೂ ತುಂಟಾಟ ಶುಕಪಿಕಗಳ ಇನಿದನಿಯ ಗಾಢಮೌನಮಂಕಾದ ಮನಗಳಲಿ ಗೌಣ ಸೊಗಸುಅವನೆದ್ದರೆ ಬೆಳಗು ಏಳುವರು ಎಲ್ಲಹೊದಿಕೆಯಡಿಯಲೆ ಕಾಣುವರು ಕನಸು ಸುರಿವ ವರುಣನ ನಡುವೆ ನೆಲದ ಗಾನಝರಿ ತೊರೆ ನದಿಗಳಲಿ ರಭಸದೋಟತಡೆವರಾರಿಲ್ಲ ತಿಮಿರದಾಲಿಂಗನವಮೋಡಗಳಡಿಯೆ ರವಿಯ ಮಿಲನ ಕೂಟ ಕಡಲಿನೊಡಲಿಗದೇನೋ ಸಡಗರರವಿಯ ಚುಂಬನವು ಮರೆತ ಗೀತಅಮ್ಮನೊಡಲಲಿ ನದಿಗೆ ಧನ್ಯ ಭಾವಕಡಲ ಕುಡಿಗಳಲದೋ ನವ ಸಂಗೀತ **********

ಬಂದಿಯಾಗಿಹ ರವಿ Read Post »

ಕಾವ್ಯಯಾನ

ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ

ಕವಿತೆ ನಾಗರಾಜಹರಪನಹಳ್ಳಿ ಪ್ರತಿಕ್ಷಣದ ಉಸಿರುನನ್ನೆದೆಯಲ್ಲಿ ಬಿಸಿರಕ್ತವಾಗಿದೆಕೈ ಬೆರಳ ಸ್ಪರ್ಶಹಾಡಿದ ರಾಗ ಅನುರಣಿಸುತ್ತಿದೆಕಣ್ಣುಗಳಲ್ಲಿ ಮುಚ್ಚಿಡಲಾಗುತ್ತಿಲ್ಲಒಲವ ಒಳಹರಿವು ……..** ಹಗಲು ರಾತ್ರಿಗಳನ್ನುಂಡು ನಿಶಬ್ದವಾಗಿಮಲಗಿರುವ ಬೆಟ್ಟಸಾಲುಗಳೇಬಯಲು ಕಣಿವೆ ಮುದ್ದಿಸಿ ಸಾಗುವಮಂಜು ಮೋಡಗಳೇಆಕೆಗೆಮುಗಿಲ ಸಂದೇಶವ ಅನುವಾದಿಸಿ ಬಿಡಿ ಈಗೀಗಪ್ರತಿ ಮಾತು ಒಲವಿನ ಸಂದೇಶಹೊತ್ತು ತರುತ್ತಿದೆಬದುಕು ಹಿತವೆನಿಸುತ್ತಿದೆಹಕ್ಕಿಯ ಇಂಚರಮಳೆಯ ಧ್ಯಾನಕ್ಕೂಹೊಸ ಅರ್ಥವ್ಯಾಪ್ತಿ ದಕ್ಕುತ್ತಿದೆ…….** ನಿನ್ನ ಬೆರಳಸ್ಪರ್ಶದಿಂದಕವಿತೆಗೆ ಹೊಸಅರ್ಥ ದಕ್ಕಿತುನಿನ್ನ ಹೆರಳಪರಿಮಳ ನನ್ನೆದೆಯಲ್ಲಿಹೊಸ ತರಂಗಗಳಅಲೆ ಎಬ್ಬಿಸಿತು

ಕಣ್ಣುಗಳಲಿ ಮುಚ್ಚಿಡಲಾಗುತ್ತಿಲ್ಲ ಒಲವ Read Post »

You cannot copy content of this page

Scroll to Top