ಕವಿಗಿನ್ನೇನು ಬೇಕು?
ಕವಿತೆ ಕವಿಗಿನ್ನೇನು ಬೇಕು? ಮಾಲತಿ ಶಶಿಧರ್ ಕವಿತೆಯೊಳಗೊಂದು ಭಾವಬೆರೆತು ಹಾಲಿನಲ್ಲಿ ಲೀನವಾದಜೇನಿನಂತೆ ಸವಿಯಾಗಿರಲುಕವಿಗಿನ್ನೇನು ಬೇಕು? ಭಾವ ಭಾಷೆಗಳ ಮಿಲನಪ್ರಸವವಾಗಲು ಕವಿತೆಮಡಿಲಲ್ಲಿ ಕಣ್ದೆರೆಡುನಗುವ ಹಾಲುಗಲ್ಲದಕೂಸಿನಂತೆಕವಿಗಿನ್ನೇನು ಬೇಕು? ಮನ ಭಾವಗಳ ಬಂಧವದುಅರಿವಿನೊಳಗಿಟ್ಟ ಗಂಧದ ಕೊರಡುಸುಗಂಧ ಎಲ್ಲೆಡೆ ಹಬ್ಬಿಮುದವ ಹಂಚುತಿರಲುಕವಿಗಿನ್ನೇನು ಬೇಕು? ಎದೆಯೊಳಗಿನ ತದ್ಭವಗಳೆಲ್ಲಾಹೆಣೆದುಕೊಂಡು ತತ್ಸಮಗಳಪಂಕ್ತಿಗಳಾಗಿ ಅರಳಿದರೆಮೊಗ್ಗೊಂದು ಬಿರಿದು ಮುಗುಳುನಗುವಂತೆಕವಿಗಿನ್ನೇನು ಬೇಕು?? ಕವಿತೆ ಲೋಕದ ಕನ್ನಡಿಎಡಬಲಗಳಾಚೆ ಚಂದ ತೋರುವಪದ ಲಾಸ್ಯ ಮೃದು ಹಾಸ್ಯಜೀವ ಭಾವಗಳ ಜಲದೋಟನಿಲದೆ ಓಡುತ ಲೋಕವ ಶುದ್ಧಿಮಾಡಲುಕವಿಗಿನ್ನೇನು ಬೇಕು??ಕವಿತೆ ಇದ್ದರೆ ಸಾಕು… ***********************









