ಅನುವಾದಿತ ಕವಿತೆ
ರಾಹತ್ ಇಂದೋರಿ ಕನ್ನಡಕ್ಕೆ:ರುಕ್ಮಿಣಿ ನಾಗಣ್ಣವರ ವಿರೋಧವಿದ್ದರೆ ಇರಲಿ ಅದು ಪ್ರಾಣ ಅಲ್ಲವಲ್ಲಇದೆಲ್ಲವೂ ಮುಸುಕು ಹೊಗೆ ಆಕಾಶ ಅಲ್ಲವಲ್ಲ ಬೆಂಕಿ ಹೊತ್ತಿದರೆ ಆಹುತಿ ಆಗುವವು ಬಹಳ ಮನೆಇಲ್ಲಿರುವುದು ಕೇವಲ ನನ್ನ ಮನೆ ಮಾತ್ರ ಅಲ್ಲವಲ್ಲ ನಾನು ಹೇಳಿರುವುದೇ ಇಲ್ಲಿ ಅಂತಿಮಬಾಯೊಳಗೆ ಇರುವುದು ನಿನ್ನ ನಾಲಗೆ ಅಲ್ಲವಲ್ಲ ನನಗೆ ಗೊತ್ತಿದೆ ಅಸಂಖ್ಯ ವೈರಿಗಳು ಇರುವರುನನ್ನ ಹಾಗೆ ಜೀವ ಕೈಯಲ್ಲಿ ಹಿಡಿದವರು ಅಲ್ಲವಲ್ಲ ಇಂದಿನ ಈ ಪಾಳೆಗಾರಿಕೆ ನಾಳೆ ಇರುವುದಿಲ್ಲಅವರು ಬಾಡಿಗೆದಾರರು, ಸ್ವಂತದ ಮನೆ ಅಲ್ಲವಲ್ಲ ಇಲ್ಲಿನ ಮಣ್ಣಲ್ಲಿ ಎಲ್ಲರ ನೆತ್ತರ ಹನಿಯೂ ಸೇರಿದೆಈ ಹಿಂದೂಸ್ತಾನ್ ಯಾರ ಅಪ್ಪನದೂ ಅಲ್ಲವಲ್ಲ ******************************








