ಕವಿತೆ ಹೀಗೊಂದು ವಿರಹ ಗೀತೆ ಒತ್ತಿ ಉಕ್ಕುವ ಮನಕೆ ತಂಪೆರೆವ ಬಿಸುಪಿಲ್ಲಎಲ್ಲಿಂದ ಬರಬೇಕು, ನಾನು ಬಡವಿ…..ಬಿಸುಪಿಲ್ಲದಾ ಭಯಕೆ ತೆರೆಯದಾತನ ತೋಳುಅದನರಿತ ಮೇಲೂ.. ಆತ ಬಡವ… ಹರೆಯದಲಿ ಹೀಗಿರಲಿಲ್ಲ, ಚೆನ್ನಿತ್ತು ಚೆಲುವಿತ್ತುಒಲವಿತ್ತು ನಾ -ನೀನು ಬೇಧವಿರದೇನಿನ್ನೊಳಗೆ ನಾನು, ನನ್ನೊಳಗೆ ನೀನೆಂಬುವುದುಮುದವಿತ್ತು ಸಂಗೀತ ಲೋಪವಿರದೇ ಈಗ ನಿಶ್ಶಬ್ದದಲಿ ಈಟಿಯಂತೆಯೆ ಇರಿವನಿನ ಮೌನ ಸಹಿಸುವುದು ಕಷ್ಟ ಎನಗೆಇಷ್ಟ ಇರದಿದ್ದರೂ ನನ ಮಾತು ಜೋರಾಗಿಗುಡುಗು ಸಿಡಿಲುಗಳಂತೆ ಶಬ್ದ ಕೊನೆಗೆ ಕೊಟ್ಟರೆ ಕಳೆದುಬಿಡುವಂತೆಂಬ ನಿನ ಪ್ರೀತಿಇಟ್ಟರೆ ಹಳಸಿಬಿಡುವಂತೆ ನಾನೂಇಟಿಗೆ ಗಾರೆಯ ಹಾಕಿ ಕಟ್ಟುವುದೆ ಗೋಡೆಯನುಈಚೆ ನಾ ಮರುಗುತಿಹೆ, ಆಚೆ ನೀನು ಒಡೆದ ಗೊಂಬೆಯ ಕೆಡವಿ ಸರಿಮಾಡಬಹುದೆಂತುಕೆತ್ತನೆಯು ನಮಗೊಲಿದ ವಿದ್ಯೆಯೆಂದುಮರೆತುಹೋಯಿತೆ ಪ್ರೀತಿ ಅಂಟೆಂದು ಜೋಡಿಸಲುಚೂರಾದ ಹೃದಯಗಳ ಮಾಡಲೊಂದು ಮೆಚ್ಚಿ ಆಡುವ ಮಾತು ಚುಚ್ಚುವಂತಾಯಿತು ಏಕೆಬೆಚ್ಚಿಹೆನು, ಬೆದರಿಹೆನು ಏಕಾಂತದಿಅಚ್ಚುಮೆಚ್ಚಿನ ಸೊಡರು ಕೊಚ್ಚಿ ಹೋಗುತಲಿಹಿದುಇಚ್ಛೆಯಿದ್ದರೂ ಉಳಿಸಿಕೊಳದ ಹಠದಿ… *********************