ಕಾವ್ಯಯಾನ
ತೆರವುಗೊಳಿಸಿದ್ದು ಡಾ.ಗೋವಿಂದಹೆಗಡೆ ಆ ವಿಶಾಲ ಮೂಲೆ ನಿವೇಶನವನ್ನುತೆರವುಗೊಳಿಸಲಾಯಿತುತ್ರಿಭುಜದಂತಿರುವ ಸೈಟು. ಎರಡು ಕಡೆರಸ್ತೆ. ವಿಶಾಲ ಹಳೆಯ ಮನೆಒತ್ತಾಗಿ ಬೆಳೆದ ಹಲವು ಗಿಡ ಬಳ್ಳಿಹೂವು ಚಿಗುರು ಮೊದಲುಮಲ್ಲಿಗೆ ಹಂಬು ನಂದಿಬಟ್ಟಲುಗುಲಾಬಿ ದಾಸವಾಳ ಕ್ರೋಟನ್ಗಳಿಗೆಮುಕ್ತಿ ಸಿಕ್ಕಿದ್ದು. ಮರುದಿನ ಮನೆ ಬಿದ್ದುಗುಪ್ಪೆ ಮಣ್ಣು, ಸೊಟ್ಟ ತಂತಿಗಳಅಸ್ಥಿಪಂಜರ. ನಾಲ್ಕು ದಿನ ಕಳೆದಾಗ ಹಸಿರೇ ಮೈಯಾಗಿದ್ದಮಾವು ಮಾಯ. ಹಬ್ಬದ ಈ ದಿನಗಳಲ್ಲಿಪುಕ್ಕಟೆ ಸೊಪ್ಪು ಸಿಕ್ಕ ಸಂಭ್ರಮದ ನೆರೆ.ಅವರಿವರ ತೋರಣ, ಮಂಟಪಗಳಲ್ಲಿ ಖುಷಿಸಿರಬಹುದೇಮಾವಿನ ಚಿಗುರು,ಬಾಡುವ ಮುನ್ನ ಇಂದುಅಂಚುಗಳಲ್ಲಿ ಕಾವಲಿಗೆ ಎಂಬಂತೆನಿಂತಿದ್ದ ಹತ್ತಾರುತೆಂಗಿನ ಮರಗಳು ನೆಲ ಕಂಡವುಅಳತೆ ಮಾಡಿ ಸಮವಾದ ತುಂಡು-ಗಳಾಗಿ ಅವನ್ನು ಕತ್ತರಿಸಲಾಗಿತ್ತು ಹೀಗೆ ಇಂಚಿಂಚೂ ತುಂಬಿದ್ದೆಲ್ಲಖಾಲಿಯಾದ ಅಲ್ಲಿ ಈಗ ಉಳಿದದ್ದು-ಗೇಟಿನ ಒಂದೇ ರೆಕ್ಕೆಒಳಗೆ ಅಷ್ಟು ದೂರದಲ್ಲಿಒಂಟಿ ನಿಂತ, ಗಿಡವಿಲ್ಲದ ಬೋಳು ತುಳಸೀಕಟ್ಟೆ *****************************









