ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ರೇಷ್ಮಾ ಕಂದಕೂರ. ಮುಗ್ದ ಮನಸುಗಳು ನಾವು ಚಿವುಟದಿರಿ ನಮ್ಮನ್ನಕಂಡ ಕನಸುಗಳು ನನಸಾಗ ಬೇಕಿದೆ ಇನ್ನ ನೋವುಗಳ ಸಹಿಸದ ಹಸುಳೆಗಳು ನಾವುಕ್ರೌರ್ಯದ ದಾಳಿಗೆ ಸಿಲುಕಿಸದಿರಿ ತನುವನ್ನ ಭರವಸೆಗಳ ಬೆಳಕಿನಡಿ ಸಾಗಬೇಕಿದೆ ಜೀವನಎಸೆಯ ಬೇಡಿ ಮೃದುಲತೆಗೆ ಮೋಹದ ಜಾಲವನ್ನ ಜ್ಞಾನದ ಹಂಬಲಕೆ ಕೈ ಚಾಚಿದೆ ಕರೆದಿದೆ ಮನವುವಿವಾಹ ಕೂಪಕೆ ವಶಪಡಿಸದಿರಿ ಕುಸುಮವನ್ನ ನಿರ್ಮಲತೆಯ ನಾಜೂಕು ನನ್ನೊಡನಾಟಹೊಸಕಿ ಹಾಕದಿರಿ ನಾಜೂಕು ರೇಷಿಮೆಯನ್ನ

ಗಝಲ್ Read Post »

ಕಾವ್ಯಯಾನ

ಪ್ರೀತಿ ಹೊನಲು

ಕವಿತೆ ಶ್ರೀವಲ್ಲಿ ಶೇಷಾದ್ರಿ ಮನದ ಮಾತಿನ್ನು ಮುಗಿದಿಲ್ಲ ನಲ್ಲಮೆಲ್ಲನೆದ್ದು ಯಾಮಾರಿಸ ಬೇಡನಿನ್ನೆದೆಯೊಳಗೊಂದು ಮುಳ್ಳಿನ ಪಕ್ಕಕೆಂಪು ಗುಲಾಬಿ ಗಂಧವಿದೆಯೆಂದುನೀ ಹೇಳದಿದ್ದರೂ ನಾ ಬಲ್ಲೆಗಂಡಸು ಹಾಗೆ ಬಲು ಗಡಸುಎಲ್ಲಿಂದ ಬಂದೀತು ನಯ ಸೊಗಸುಬೇಕೆಂದೆ ಮುಖ ಗಂಟಿಕ್ಕಿ ಮುನಿಸುಲಘು ಬಿಗು ಮುತ್ತುದುರಿದ ಮಾತುಕೋಪವಾರಿದಾಗ ಅಪರೂಪಕ್ಕೊಂದು ನಗುದೂರ ನಿಂತ ಬಾನಲ್ಲಿ ಮಿಂಚಂತೆಆಲಿ ಕಲ್ಲುಗಳ ಕಲ್ಲೆಂದರಾದೀತೆಧರೆ ತಬ್ಬಿದೊಡೆ ನೀರಾದಂತೆಪ್ರೀತಿ ಹೊನಲು ಹರಿವ ಬಾ ಇನಿಯ *************************

ಪ್ರೀತಿ ಹೊನಲು Read Post »

ಕಾವ್ಯಯಾನ

ಕಡಲು ಕರೆದ ಗಳಿಗೆ

ಕವಿತೆ ಕಡಲು ಕರೆದ ಗಳಿಗೆ ಪ್ರೇಮಶೇಖರ ಕಡಲ ತಡಿಯಲ್ಲೊಂದು ಗುಡಿಯ ಕಂಡುಮಿಂದು ಮಡಿಯಾಗಿ ದರ್ಶನಕ್ಕೆಂದುನಡೆದರೆಗುಡಿಯಲ್ಲಿ ದೇವತೆಇರಲಿಲ್ಲ. ಮರಳಲ್ಲಿ ದಿಕ್ಕುಮರೆತು ಕಾಲಾಡಿಸಿ,ಬೊಗಸೆ ತುಂಬಶಂಖಚಿಪ್ಪಿ ಆಯ್ದು,ಪುಪ್ಪುಸ ಪೂರ್ತಿಪಡುವಣದ ಗಾಳಿಯೆಳೆದು,ಕಣ್ಣತುಂಬಾ ನೀಲಿನೀಲಿಕಡಲನು ಆಹ್ವಾನಿಸಹೊರಟರೆಅಲ್ಲಿ ಕಂಡಳು ಅವಳು. ಮುಂಗುರುಳ ಹಾರಲು ಬಿಟ್ಟುಸೆರಗಿಗೂ ಸ್ವಾತಂತ್ರ್ಯ ಕೊಟ್ಟು,ಜತೆಗೆ ಮನಕೂ ರೆಕ್ಕೆ ಕಟ್ಟಿ,ಎತ್ತಿಕೋಎಂದು ಕಾಲಪ್ಪಿದ ಅಲೆಗಳಿಗೆಕವನ ಜೋಗುಳದ ಗುಟುಕು ಕೊಡುತ್ತಲೇಕಡಲಿಗೆ ಹಾಯಿಯೇರಿಸಿಯಾನ ಹೊರಡುವಸನ್ನಾಹದಲ್ಲಿದ್ದಳು.ನನಗೆ ದೇವತೆ ಸಿಕ್ಕಿದ್ದಳು. ಶತಶತಮಾನಗಳಿಗೊಮ್ಮೆ ಬರುವಸುಮುಹೂರ್ತ ಅದು.ಗಡಬಡಿಸಿ ಎದೆಗೂಡಲ್ಲಿ ಗುಡಿಕಟ್ಟಿ ದೇವತೆಯನುಪ್ರತಿಷ್ಟಾಪಿಸಿಬಿಟ್ಟೆ. ಇಂದು ನನ್ನೆದೆಯೊಂದುಅಗಾಧ ಕಡಲು,ಕಡಲಲ್ಲೊಂದುಬೆಳ್ಳನ್ನ ಬಿಳೀ ಹಾಯಿದೋಣಿ,ದೋಣಿಯಲ್ಲಿ ದೇವತೆ. ನನ್ನ ಉಸಿರೀಗ ಅನುದಿನವೂ ಅನಂತಕಾವ್ಯಯಾನ. ಪ್ರೇಮಶೇಖರ

ಕಡಲು ಕರೆದ ಗಳಿಗೆ Read Post »

ಕಾವ್ಯಯಾನ

ಮುಗಿಯದ ಪಯಣ

ಕವಿತೆ ಮುಗಿಯದ ಪಯಣ ವೀಣಾರಮೇಶ್ ಸಾವೇ ಕಾಡದಿರು ನನ್ನಮುಗಿದಿಲ್ಲ ಇನ್ನೂ ಬದುಕುವ ಹಲವುಕಾರಣ ಮನಸ್ಸಿಗಿದೆ ಇನ್ನೂ ದ್ವಂದ್ವಅರ್ಥ ಆಗದಮುಗ್ದ ಮನಸ್ಸುಗಳ ಜೊತೆ ಯುದ್ಧ ,.ಆಸೆ ಆಮಿಷಗಳಕತ್ತು ಹಿಸುಕಿ ಕಟ್ಟಬೇಕಿದೆನನ್ನ ಸೌಧಹೇಗೆ ಮುಗಿಯುವುದುನನ್ನ ಪಯಣನನ್ನ ಜೇಬಿನ್ನೂ ಭಣ ಭಣ ತಡಕಾಡಿದರೂ ಸಿಗದು ಕಾಂಚಾಣ ಪಾಪ ಪ್ರಜ್ಞೆಗಳು ಸುತ್ತುವರಿದು,ಮೋಸ,ಭ್ರಷ್ಟಾಚಾರ ದಿಕ್ಕು ತಪ್ಪಿಸಿಭಾವನೆಗಳೆಲ್ಲ ಸತ್ತು ಹೆಣವಾಗಿದೆ ನೀನು ಮತ್ತೆ ಕಾಡದಿರುಸಾವೇ, ನಾನಿಲ್ಲಿ ಸುಟ್ಟುಕರಕಲಾಗಿದ್ದೀನಿನನ್ನ ದಾರಿಗೆ ಅಡ್ಡ ಬರಬೇಡ ಎಲ್ಲದಕ್ಕೂಹೇಳುವೆ ಸಕಾರಣ

ಮುಗಿಯದ ಪಯಣ Read Post »

ಕಾವ್ಯಯಾನ

ಸ್ಮಿತಾಭಟ್ ಕಾವ್ಯಗುಚ್ಛ

ಸ್ಮಿತಾಭಟ್ ಕಾವ್ಯಗುಚ್ಛ ನಿರಂತರ ಈಗೀಗ ಒಲವಾಗುವದಿಲ್ಲಅವನ ಮೇಲೆಮುನಿಸು ಕೂಡಾ,, ಹೇಗಿದ್ದೀ ಎಂದು ಕೇಳದಿರೂಕೇಳದೇ ಹೋದರೂಅಂತಹ ವ್ಯತ್ಯಾಸವೇನಿಲ್ಲ, ಸಿಡಿಮಿಡಿ ಬಹಳ-ದಿನ ಉಳಿಯುವುದಿಲ್ಲಪ್ರೀತಿ ಆಗಾಗ-ಹುಟ್ಟಿದ್ದು ಗೊತ್ತೇ ಆಗುವದಿಲ್ಲ. ಇಣುಕಿಣುಕಿ ನೋಡುವ ರಸಿಕತೆಯಿಲ್ಲತಿರುಗಿ ನೋಡುವ ಆತುರವೂ ಇಲ್ಲಉಪಸ್ಥಿತಿ ಅನುಪಸ್ಥಿತಿಯಲ್ಲಿಬದಲಾವಣೆ ಇಲ್ಲ. ಎತ್ತಿಟ್ಟ ಸಾಲೊಂದುಓದದೇ ಹೋಗುತ್ತಾನವ,ಬರೆಯದೇ ಇಟ್ಟ ಹಾಡಿಗೆರಾಗ ಹುಡುಕಿ ಗುನುಗಿಕೊಳ್ಳುವಾಗಕದ್ದು ಕೇಳುವ ನವಿರುಅರಿತೂ ಅರಿಯದೇ ಆತುಕೊಳ್ಳುವ ಬೆರಗು ನೀ ನನ್ನೊಳಗಿರುವದಕ್ಕೆನಾ ನಿನ್ನೊಳಗಿರುವದಕ್ಕೆಸಾಕ್ಷಿ ಆಗಾಗ ಸಿಗುತ್ತದೆಮತ್ತದು ಅಧಿಕಾರವೂಮಾತೊಗೆದು ಹೋಗುವಾಗ ಸಣ್ಣ ಮೌನಮರಳಿ ಬರುವಾಗ ಎಲ್ಲ ದಮನ ಸವೆದ ದಾರಿಯಲೂ ಗರಿಕೆತಲೆಯೆತ್ತುತ್ತಲೇ ಇರುತ್ತದೆ.ಸಂಪೂರ್ಣ ಸಮ್ಮೋಹನಗೊಂಡ ಹಾಡೊಂದುಆಗಾಗ ಅಪರಿಚಿತವಾಗುತ್ತಲೇ ಇರುತ್ತದೆ ನೋವುಗಳಿಗೆ ಒಡ್ಡಿಕೊಂಡಷ್ಟೂಗಟ್ಟಿಯಾಗುತ್ತೇವೆಂಬುದುನಾವೇ ಗೀಚಿದ ಬರಹಕ್ಕೆ ಶರಾ ಬರೆದಂತೆ. ಎಂದೂ ಮುಗಿಯದ ನರಳಿಕೆಗೆಅಳುವ ಮನಸಿಗೂ ಸಣ್ಣ ಅಸಹ‌ನೆಸಹಿಸಿದಷ್ಟೂ ಸಹನೆ ಜಾಸ್ತಿ ಹೌದುಸೀದು ಹೋಗಿದ್ದು ಮಾತ್ರ ಮನಸು.. ಶಾಂತ ಕೊಳದಲಿ ಕಲ್ಲೊಗೆದುಇಣುಕುವ ಪ್ರವೃತ್ತಿ ಇಂದು ನಿನ್ನೆಯದಲ್ಲ.ಮೌನ ಕೊಲ್ಲುವ ಹತ್ಯಾರ;ಮಾತು ಇರಿಯುವ ಹತ್ಯಾರ; ಹೂತಿಟ್ಟ ಕನಸಿಗೆ ಕಾಮನಬಿಲ್ಲು-ಕಟ್ಟುವಾಗ ದಟ್ಟ ಮೋಡ;ಸಿಗದ ನಕ್ಷತ್ರಕ್ಕೆ ದಿನವೂ ಎಣಿಕೆ,ಬಾವಿಯಲಿ ಬಿದ್ದ ಚಂದ್ರನಿಗೆ ಮುಗಿಯದ ಹರಕೆ. ಎತ್ತಿಟ್ಟುಕೊಂಡಿದ್ದೆಲ್ಲ ಆಪತ್ತಿನೊಳಗಿಲ್ಲ.ಆಪ್ತಭಾವದೊಳಗೆ ಬರದೇ ಹೋದದ್ದು!?ಸಹಿಸಿಕೊಂಡಿದ್ದೂ ಸಹಿತವಲ್ಲ.ಅಳತೆಗೋಲೇ ಇಲ್ಲದ ಅನಾದರಚುಕ್ಕಿ ಇಟ್ಟಾಗಲೇ ಮುಗಿದು ಬಿಡಬೇಕು ಸಾಲು. ಮುಳ್ಳು ಕಿತ್ತಮೇಲೂ ಚುಚ್ಚುವ ನೋವು,ಬೇಕಂತಲೇ ಹಾಕಿಸಿಕೊಂಡ ಹಚ್ಚೆ,ಅಳಿದೂ ಉಳುಯುವ ತೊಳಲಾಟಕೊಡವಿಕೊಳ್ಳಲೂ ಒಂದು ಘಟ್ಟಿತನ ಬೇಕು.. ಕೂಡುವ ದಾರಿ* ವಿಶಾಲವಾಗಿ ಹರಡಿದ ಮರದ ಬುಡದಲ್ಲಿದಾರಿಗಳು ಸಂದಿಸುತ್ತಿದ್ದವು.ನಿತ್ಯ ಬರುವವರೂ ಮರದ ಸುತ್ತ ಕುಳಿತುದಣಿವಾರಿಸಿಕೊಂಡು ಮುಂದುವರಿದುಸಾಗುತ್ತಿತ್ತು ದಾರಿ. ಎಷ್ಟೊಂದು ಸಮಸ್ಯೆ ಗಳನ್ನು ಕೇಳುತ್ತಿತ್ತುಆ ಮರ ಮತ್ತು ಅದಕ್ಕಾತುಕೊಂಡ ದಾರಿ! ನನಗಾಗಿ ಕಾಯುತ್ತಿದ್ದ ನೀನು.ನಿನಗಾಗಿಯೇ ಕಾಯುತ್ತಿದ್ದ ನಾನು.ಈ ಕೂಡುವ ದಾರಿಯಲಿ ಕೂಡದೇ ಸಾಗಿಸಂಧಿಸುವ ದಿನಗಳು ಹುಟ್ಟಿ ಕೊಳ್ಳಲೇ ಇಲ್ಲ!ಅಲ್ಲಿಯೇ ಹುಟ್ಟಿ ಗರಿ ಗೆದರಿದ ಭಾವಗಳಿಗೆಗೂಡಿನಲಿದ್ದ ಮೊಟ್ಟೆಯಷ್ಟು ಬೆಚ್ಚಗಿನ ಭಾವ. ಈಗಲ್ಲಿ ಕವಲುಗಳು ಬಹಳ ಒಡೆದಿದೆ.ಗುರುತುಗಳಿಗೆಲ್ಲ ತೇಪೆ ಹಾಕಿದಂತೆಮೆತ್ತಿಕೊಂಡ ಟಾರುಮರಕ್ಕೆ ಕೆತ್ತಿದ ಗೆರೆಗಳು ನಿಧಾನವಾಗಿ ಮುಚ್ಚಿತ್ತಿದೆ.ನೆಲಕ್ಕೆ ಅಂಟಿಕೊಂಡ ಮೊಟ್ಟೆಯ ಜೀವಸಂಧಿಸುವ ಕಾಲುದಾರಿಬೆನ್ನು ಮಾಡಿ ನಿಂತ ಭಾವವೃತ್ತವೊಂದು ಸುತ್ತುವರಿದುಎತ್ತ ಸಾಗಿದರೂಒಂದು ದಾರಿ ಚಾಚಿಕೊಳ್ಳುತ್ತದೆ. ಮತ್ತದರ ಗಮ್ಯನಡೆದೇ ಅರಿಯಬೇಕಿದೆ! ***************************************** , **************************************************

ಸ್ಮಿತಾಭಟ್ ಕಾವ್ಯಗುಚ್ಛ Read Post »

ಕಾವ್ಯಯಾನ

ತೇಜಾವತಿ ಕಾವ್ಯಗುಚ್ಚ

ತೇಜಾವತಿ ಕಾವ್ಯಗುಚ್ಚ ಕಾರಣ ಕೇಳದಿರಿ ನೀವು.. ! ಸಪ್ಪೆ ಮೊಗದ ಹಿಂದಿನ ಕಾರಣ ಕೆಳದಿರಿ ನೀವುದುಃಖದ ಕಟ್ಟೆಯೊಡೆದುನೋವಿನ ಕೋಡಿಹರಿದುಕಂಬನಿಯ ಪ್ರವಾಹ ಹರಿದೀತು….! ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವುಮುಳ್ಳುಹಾಸಿನ ಮೇಲೆ ನಡೆದುಬೆಂಕಿಯ ಕೆನ್ನಾಲಿಗೆಯಲಿ ಸಿಲುಕಿಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು…! ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವುತಮದ ಕೂಪದಲಿ ಮಿಂದುಕಣ್ಣೆದುರು ಹರಿದಾಡಿದ ನೆರಳು ಕಂಡುಮನಸು ಮತಿಭ್ರಮಣೆಗೆ ಒಳಗಾದೀತು.. ! ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವುಭರವಸೆಯ ಬೆಟ್ಟ ಕುಸಿದುನೆಮ್ಮದಿಯ ಕಣಿವೆ ಸವೆದುಕಂಡ ಕನಸುಗಳು ಕೊಚ್ಚಿ ಹೋದಾವು…! ಎಷ್ಟು ದಿನ ಅಂತ ಉಪ್ಪಿನಕಾಯಿ ಆಗಿರಲಿ ನಾನು? ಮೂಗಿಗೆ ಕಮ್ಮನೆ ಪರಿಮಳ ಬಂದೊಡನೆ ಬಾಯಲ್ಲಿ ನೀರೂರಿ ನಾಲಗೆ ಚಪ್ಪರಿಸಿ ನೆಕ್ಕುವರು…! ಉಪ್ಪಿನಕಾಯಿ ಊಟದ ರುಚಿಗಷ್ಟೇ ಹೊರತು ಊಟಕ್ಕಲ್ಲ..ಉಪ್ಪಿನಕಾಯಾಗಿ ನಾನಿಲ್ಲದಿದ್ದರೂ ಹೊಟ್ಟೆ ತುಂಬಾ ಉಣಬಹುದಲ್ಲದೆಊಟವೇ ಇಲ್ಲದಿದ್ದರೆ..?! ಉಪ್ಪಿನಕಾಯಾಗುವ ಕ್ಷಣಿಕ ಕೀರ್ತಿಗೆ ನಾನೇಕೆ ಭಾಜನವಾಗಲಿ..?ಒಪ್ಪತ್ತಿಗಾದರೂ ಊಟವಾಗಬೇಕು ನಾನುಉಂಡ ಕರುಳಿಗೆ ತೃಪ್ತಿ ನೀಡಬೇಕು ಬಹುಕಾಲದವರೆಗೆ. ರುಚಿಯೆಂದು ಅತಿಯಾಗಿ ಉಪ್ಪಿನಕಾಯನ್ನು ಸೇವಿಸಿದೆಯೋಬಿಪಿ ಏರುವುದು ಗ್ಯಾರಂಟಿ.ಜೊತೆಗೆ ಸರಣಿ ರೋಗರುಜಿನಗಳೂ ಫ್ರೀ.. ಬರಿದೇ ಊಟವಾದರೆಸ್ವಲ್ಪಮಟ್ಟಿಗಾದರೂ ಅರೋಗ್ಯ ವೃದ್ಧಿಸುವುದು ಮಿಂಚಿ ಮರೆಯಾಗುವ ಮಿಂಚುಹುಳಕ್ಕಿಂತಮಾಗಿದ ರಸಭರಿತ ಹಣ್ಣಾಗಬೇಕು ನಾನು..ನನ್ನ ಜೀವನ ಸಾರ್ಥಕವಾಗಬೇಕು ಖಗ ಮೃಗ ಹದ್ದು ಗಿಡುಗಗಳ ಕಾಟದ ಆರ್ಭಟದಲ್ಲಿಮಿಡಿಗಾಯಿ ಬಲಿಯುವುದಾದರೂ ಹೇಗೆ?ಹೌದು.. ನಾನೀಗ ಅವಿತು ಕೂರಲೇಬೇಕುಎಲೆಯ ಮರೆಯೊಳಗೆ ಅನಿವಾರ್ಯವಾಗಿ ಲೋಕಕ್ಕೆ ಕಣ್ಣಾಗಬೇಕಾದ ಹೆಣ್ಣಾಗಿರುವನಾನಂತೂ ಉಪ್ಪಿನಕಾಯಿ ಆಗಲಾರೆ ಬಿಡಿ..,ಹೂ ಹೀಚಾಗಿ ಕಾಯಾಗಿ ಬಲಿತುಮಾಗಿದ ಸತ್ವಯುತ ಹಣ್ಣಾಗಬಯಸುವೆರಸಪುರಿ ಮಾವು ನಾನು….. !

ತೇಜಾವತಿ ಕಾವ್ಯಗುಚ್ಚ Read Post »

ಕಾವ್ಯಯಾನ

ನಿನ್ನ ನಿರೀಕ್ಷೆಯಲ್ಲೇ..

ಕವಿತೆ ನಿನ್ನ ನಿರೀಕ್ಷೆಯಲ್ಲೇ.. ನೀ.ಶ್ರೀಶೈಲ ಹುಲ್ಲೂರು ಜೊತೆಯಿದ್ದವರೆಲ್ಲಹೋದರು ಮುಂದೆ ಮುಂದೆನಾನುಳಿದೆ ನಿನ್ನ ನಿರೀಕ್ಷೆಯಲ್ಲೇ…ನೀನು ಬಂದೇ ಬರುವೆ ಎಂಬಭಾಷೆ ಇತ್ತಲ್ಲ ಹೇಗೂ.. ನಿರ್ಗಮಿಸಿದ ದಿನಕರಇಣುಕಿದ ಚಂದ್ರ ನೀಲಾಗಸದಿನಕ್ಷತ್ರಗಳೆಲ್ಲ ಸಾಕ್ಷಿಯಾದವುಮಿನುಗಿತು ಬೆಳ್ಳಿಚುಕ್ಕಿಯೂಹುಂಜಗಳೆಲ್ಲ ಕೂಗು ಹೊಡೆದವುಕೋಗಿಲೆಯ ಕುಹೂ ಕುಹೂಆಗಲೂ ನಾ ನಿನ್ನ ನಿರೀಕ್ಷೆಯಲ್ಲೇ.. ದೇವ , ದೇವಲೋಕದಯೆ ತೋರಲಿಲ್ಲನಿಜಕ್ಕೂ ನೀ ಬರಲೇ ಇಲ್ಲಇಳೆಯಲಿ ಮೈದಳೆಯಿತುಹೊಸತು ಹೊಂಬೆಳಕುನಿನ್ನ ನೆನಪಲಿ ಮೊಳೆತುಕುಡಿಯೊಡೆದವು ಕಂಬನಿ ತುಂಬಿದೆದೆಯ ಶಿಖರಾಗ್ರದ ಮೇಲಿಂದಿಳಿದ ಕಣ್ಣಹನಿ ಕಣಿವೆಯ ದಾಟಿನೆಲವನಪ್ಪಿತು ಥಟ್ಟನೆಎದೆ ಮೇಲೊರಗಿದಸೆರಗಿಗೂ ತೇವ ಭಾಗ್ಯಆಗಲೂ ನೀನು ಬರಲಿಲ್ಲ ಆಗಸದಿ ಹೊಳೆಯತೊಡಗಿತು ಮಿಂಚು ಫಳಫಳನಡುಗತೊಡಗಿತುಭೂಮಿ ಬಾನು ಗಡ ಗಡಅಷ್ಟ ದಿಕ್ಕುಗಳಲೂಕಿವಿಗಡಚಿಕ್ಕುವ ಸದ್ದು ನೀರಿನ ಹನಿಗಳೊಂದಿಗೆಆಲಿಕಲ್ಲುಗಳ ಸುರಿಮಳೆಬಿರುಗಾಳಿಗೆ ನಡು ಮುರಿದುಕೊಂಡವು ಟೊಂಗೆಗಳುಆಗಲೂ ಸಹ ನಾನಿನ್ನ ನಿರೀಕ್ಷೆಯಲ್ಲೇ.. ಜೋರಾದ ಗಾಳಿ ಮಳೆಗೆಕಪ್ಪರಿಸಿ ಬೀಳತೊಡಗಿದವುನೆನೆದ ಗೋಡೆಗಳು ಧೊಪ್ಪನೆತುಂಬತೊಡಗಿತು ನೀರುಹೊಲ ಗದ್ದೆ ತೋಟಗಳಲ್ಲಿನದಿಗೂ ಪ್ರಳಯದ ಮಹಾಪೂರ ದೇವ,ದೇವಲೋಕದಯೆ ತೋರಲಿಲ್ಲ ಆಗಲೂ..ನನ್ನ ಕಾಲಡಿಯ ನೆಲಕುಸಿಯತೊಡಗಿತುಮೆಲ್ಲ ಮೆಲ್ಲಗೆ.. *************************************

ನಿನ್ನ ನಿರೀಕ್ಷೆಯಲ್ಲೇ.. Read Post »

ಕಾವ್ಯಯಾನ

ಕವಿತೆಯೆಂದರೆ…

ಕವಿತೆ ಕವಿತೆಯೆಂದರೆ… ವಿದ್ಯಾಶ್ರೀ ಎಸ್ ಅಡೂರ್ ಕವಿತೆಯೆಂದರೆ ಮನದೊಳಗೊಂದುಚುಚ್ಚುವ ನೋವು….ಕವಿತೆಯೆಂದರೆ ಉಕ್ಕಿಹರಿವಮನಸಿನ ನಲಿವು…. ಕವಿತೆಯೆಂದರೆ ಮೌನಮನಸಿನಸ್ವಚ್ಚಂದ ಆಕಾಶಕವಿತೆಯೆಂದರೆ ಗಿಜಿಗುಡುವಏಕತಾನತೆಯ ಆಕ್ರೋಶ ಕವಿತೆಯೆಂದರೆ ಸುಮ್ಮನೆನಿಡುಸುಯ್ದ ನಿಟ್ಟುಸಿರುಕವಿತೆಯೆಂದರೆ ನೀರು-ಗೊಬ್ಬರಹಾಕಿ ಬೆಳೆಸಿದ ಹಸಿರು ಕವಿತೆಯೆಂದರೆ ರಂಗುರಂಗಿನಬಣ್ಣ ಬಣ್ಣದ ಕಾಮನಬಿಲ್ಲುಕವಿತೆಯೆಂದರೆ ಗಾಢಾಂಧಕಾರದಿಬಿಡುಗಡೆಯ ಸೊಲ್ಲು ಕವಿತೆಯೆಂದರೆ ಮೌನಮನಸ್ಸಿನ ಟಿಪ್ಪಣಿಕವಿತೆಯೆಂದರೆ ಕೂಗಿ ಕರೆಯುವಹಾರಿ ಸಾರುವ ಪುರವಣಿ ಕವಿತೆಯೆಂದರೆ ಜಗಕ್ಕೆ ಬೆನ್ನು ಮಾಡಿಉಪ್ಪಿ ಅಪ್ಪಿದ ಮೌನಕವಿತೆಯೆಂದರೆ ಅಂಗೈಯಲ್ಲಿಮೊಗೆಮೊಗೆದು ಅನುಭವಿಸುವ ಜೀವನ ಕವಿತೆಯೆಂದರೆ ಹೆಪ್ಪುಗಟ್ಟಿದಭಾವಗಳ ಕಾರ್ಮುಗಿಲುಕವಿತೆಯೆಂದರೆ ಧುಮ್ಮಿಕ್ಕಿ ಸುರಿಯುವಮನಸಿನ ದಿಗಿಲು ಕವಿತೆಯೆಂದರೆ ಬಿದ್ದಾಗಆಸರೆ ಕೊಡುವ ನೆಲಕವಿತೆಯೆಂದರೆ ಸದಾ ಹಸಿರುತೆನೆಗಳಿಂದ ತೊಯ್ದಾಡುವ ಹೊಲ ಕವಿತೆಯೆಂದರೆ ಮನದ ತಮ ಕಳೆಯಲುನಾನೇ ಹಚ್ಚಿದ ದೀಪಕವಿತೆಯೆಂದರೆ ಬಗೆ ಬಗೆಭಾವದ ಬಗೆಬಗೆ ರೂಪ ಕವಿತೆಯೆಂದರೆ ನನ್ನ ಸದಾಪೊರೆವ ಅಮ್ಮನ ಮಡಿಲುಕವಿತೆಯೆಂದರೆ ಭಾವದ ಕೂಸುಮಲಗಿರುವ ತೂಗುವ ತೊಟ್ಟಿಲು ********************************************

ಕವಿತೆಯೆಂದರೆ… Read Post »

ಕಾವ್ಯಯಾನ

ಸಂಗಾತಿ ಬುದ್ದ

ಕವಿತೆ ಸಂಗಾತಿ ಬುದ್ದ ನಳಿನ ಡಿ ಬುದ್ಧನಿಗೊಂದು ಪ್ರೇಮದ ಕೋರಿಕೆ ಸಲ್ಲಿಸಿದ್ದೆ,ಒಪ್ಪಿರುವ ಎನಿಸಿದಾಗ,ಸುಖವ ಉಂಡು ಹೃದಯ ಉಬ್ಬಿಹೋಗಿ ಮನೆಗೆ ಮರಳಿದ್ದೆ.. ಕಡೆಗೋಲು ಕಡೆದು ಬೆಣ್ಣೆ ಎತ್ತಿಡುವಾಗ,ಬುದ್ಧ ಬಂದಿದ್ದ ಬಾಲಕನಾಗಿ,ಅಂಗಳದಿ ಸಗಣಿ ಸಾರಿಸಿ ರಂಗೋಲಿ ಚುಕ್ಕಿ ಇಡುವಾಗ,ಬುದ್ಧನಿದ್ದ ಸಾಲು ಸಾಲುಗಳ ಬಣ್ಣಗಳಲಿ,ನಡುವೆ ಆಯಾಸದಿ ನಿದ್ದೆಎಳೆದೊಯ್ದಾಗ,ತಂಪು ಹಳ್ಳದ ಏರಿಯ ಮೇಲೆಕರೆದು ಕೂಗಿದಾಗ ಹೇಳಿದಂತಾಯ್ತು ‘ಸಿಗು ಆಮೇಲೆ’..ಹಣಹಣಿಸಿ ಸೆಣಸುತಿರುವ ಉಭಯ ಬಣಗಳ ನಡುವೆಇರುವಾಗಲೇ ಬುದ್ಧ ಕೈಹಿಡಿದು ಕರಗಿಸಿದ, ಪ್ರೇಮಮಯಿ, ಕ್ಷಮೆಯಾಧರಿತ್ರಿ ಈ ಸುಂದರಿ ಎಂದವರೆಲ್ಲಾ ಎದುರೇ ಒಂದಾಗಿ ಅತ್ತು ಕರೆದು ಮಾಯವಾದರು,ಜನನಿಬಿಡ ಹಾದಿಗುಂಟ ಕೈ ಬೀಸುತಲೇ ಇರಲು, ಕಾಡುಗುಡ್ಡದ ನಡುವೆ, ಅಲೆಮಾರಿ ಹಕ್ಕಿಯಾಗಲುರೆಕ್ಕೆಯಾದವ ಬುದ್ಧ,ಈಶಾನ್ಯ ಗಾಳಿಗೆ ಒಡ್ಡಿದ ದೀಪವೆಂದುಕೊಂಡಾಗ, ಎರಡು ಹಸ್ತಗಳ ನಡುವೆ ದೀವಿಗೆ ಹಿಡಿವವನು,ನಾ ಹುಡುಕಿದಾಗ ಸಿಕ್ಕಿದ ಬುದ್ಧನ ಪ್ರಮಾಣದಂತೆ ಅನುರಣನ ಅವನ ಇರುವಿಕೆ… **********************

ಸಂಗಾತಿ ಬುದ್ದ Read Post »

ಕಾವ್ಯಯಾನ

ಯಾರೊಬ್ಬರಾದರೂ…

ಕವಿತೆ ಯಾರೊಬ್ಬರಾದರೂ… ಅನುರಾಧಾ ಪಿ. ಎಸ್ ಒಂದಷ್ಟು ಸಾಲು ಹುಟ್ಟುತ್ತವೆ ಅವರ ಹೆಸರಲ್ಲಿ,ಗಾಳಿಗೊಪ್ಪಿಸುತ್ತೇನೆ.ವಿಳಾಸ ಹುಡುಕಿ ತಲುಪಿಸುತ್ತದೆ ಗಾಳಿಯೂ ಅಷ್ಟೇ ನಿಷ್ಠೆಯಲ್ಲಿ. ಅವರ ಕಣ್ಣು ಬೆಳಗುತ್ತವೆ,ಆ ಕ್ಷಣ ನಾನು ಹೊಳಪುಂಡ ತಾರೆಯೆನಿಸುತ್ತೇನೆಹೊರನಿಂತು ಮೂಲಸ್ರೋತವನಕ್ಕರೆಯಲಿ ಮೆಲ್ಲ ತಡವುತ್ತೇನೆಕಣ್ಮುಚ್ಚಿ ಮೃದುವೊಂದು ಮಗುವಂತೆಅದು ಮಗ್ಗುಲು ಹೊರಳುತ್ತದೆ ನನಗೋ ಸುಖದ ಅಮಲುಒಳಗೂ ಆ ಅಮಲಡರಿದ ಘಮಲುಅವರುದ್ಗರಿಸುತ್ತಾರೆ,“ಎಂಥ ಭಾಷೆ, ಎಂಥ ಜೀವಭಾವ, ಎಷ್ಟು ಕಾವ್ಯ ನಿನ್ನ ಬರಹದಲ್ಲಿ!” ತಟ್ಟನೆಕಾಲಡಿಯ ನೆಲ ತುಸು ಚುಚ್ಚಿ ಎಚ್ಚರಿಸುತದೆ-‘ನೀನಿನ್ನೂ ತಾಕುವುದಾಗಿಲ್ಲ’ನಾನೆಚ್ಚೆತ್ತುಕೊಳುತೇನೆ,ಒಳಗೆ ಅರಳಿ ನಿಂತಿದ್ದ ಮೌನ ನರಳುತ್ತದೆ- ‘ಸ್ರೋತವವರಿಗೆ ಕಾಣುವುದಿಲ್ಲಮೂಲವನಾರೂ ತಲುಪುವುದಿಲ್ಲ‘ಎಷ್ಟು ಚಂದ ನಿನ್ನ ಪ್ರೀತಿ’ ಎಂದೊಬ್ಬರೂ ಹೇಳುವುದಿಲ್ಲ **********************************

ಯಾರೊಬ್ಬರಾದರೂ… Read Post »

You cannot copy content of this page

Scroll to Top