ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದ್ವೇಷ

ಅನುವಾದಿತ ಕವಿತೆ ದ್ವೇಷ ಇಂಗ್ಲೀಷ್ ಮೂಲ: ಸ್ಟೀಫನ್ಸ್ ಕನ್ನಡಕ್ಕೆ: ವಿ.ಗಣೇಶ್ ಕಗ್ಗತ್ತಲ ಆ ಕರಾಳ ರಾತ್ರಿಯಲಿ ಬಂದುಎದುರಿಗೆ ನಿಂತ ಆ ನನ್ನ ಕಡುವೈರಿದುರುದುರುಗುಟ್ಟಿ ನನ್ನ ನೋಡುತ್ತಿದ್ದಾಗತುಟಿಯದುರುತ್ತಿತ್ತು, ತನು ನಡುಗುತ್ತಿತ್ತು. ಹರಿದು ತಿನ್ನುವ ತೆರದಿ ವೈರಿಯ ನೋಡುತದೂರ್ವಾಸನಂತೆ ಉರಿಗಣ್ಣು ಬಿಟ್ಟಾಗನನ್ನ ಎರಡು ಕಣ್ಣುಗಳು ಕಾದ ಕಬ್ಬಿಣದಂತೆಕೆಂಪಾಗಿ ಕೆಂಡ ಕಾರುತ್ತಾ ಉರಿಯುತ್ತಲಿದ್ದವು ಶಾಂತಿಸಹನೆಯ ಮೂರ್ತಿಯಾದ ನನ್ನ ವೈರಿನಸುನಗುತ “ಗೆಳೆಯಾ, ಏಕಿಷ್ಟು ಉಗ್ರನಾಗಿರುವೆ?ಬಾಲ್ಯದಿಂದಲೂ ಕೂಡಿ ಕಳೆದ ಆ ಸಿಹಿ ದಿನಗಳನ್ನುಅದಾಗಲೇ ಮರೆತುಬಿಟ್ಟೆಯಾ?” ಎನ್ನ ಬೇಕೇ? “ಏನೋ ನಡೆಯ ಬಾರದ ಕಹಿ ಘಟನೆ ನಡೆದುನಮ್ಮಿಬ್ಬರ ಹಾದಿಯಲ್ಲಿ ಒಡಕಾದ ಮಾತ್ರಕ್ಕೆನಮ್ಮಿಬ್ಬರ ಪ್ರೀತಿಯ ತೊರೆ ಬತ್ತಿ ಬರಡಾಗಿಬದುಕು ಇಲ್ಲಿಗೇ ಮುಗಿದು ಹೋಯಿತೆನ್ನುವೆಯಾ?” “ನಿನ್ನ ಬತ್ತಳಿಕೆಯ ವಿಷಪೂರಿತ ಮೊನಚಾದಬಾಣಗಳೆಲ್ಲಾ ಬರಿದಾದಾಗ, ‘ನಾವೇಕೆ ಹೀಗೆದ್ವೇಷಿಸುತ್ತಿದ್ದೆವು?’ ಎಂಬುದಕ್ಕೆ ಉತ್ತರಿಸಬಲ್ಲೆಯಾ?ಅರ್ಥವಿಲ್ಲದ ಈ ದ್ವೇಷಕ್ಕೆ ಕೊನೆಯಿಲ್ಲವೇ?” ಎಂದಾಗ ಆ ವೈರಿಯ ಮುಂದೆ ತುಂಬಾ ಚಿಕ್ಕವನಾಗಿಮಾತೇ ಹೊರಡದೆ ಮೂಕನಾಗಿಬಿಟ್ಟೆತಗ್ಗಿಸಿದ ತಲೆಯನಾಗ ಮೇಲೆತ್ತಲಾರದೇಅದಾಗಲೇ ತಣ್ಣಗಾಗಿ ಕುಸಿಯ ತೊಡಗಿದೆ ಪ್ರೀತಿಯ ಸಿಹಿ ಕೋಪದ ಕಹಿಯ ಕರಗಿಸಿದಾಗನಾಚಿ ನೀರಾಗುತ್ತ ಅವನತ್ತ ನೋಡಿದೆನಮ್ಮಿಬ್ಬರ ದೃಷ್ಟಿ ಮತ್ತೆ ಕಲೆತಾಗ, ಬಾಲ್ಯದನೆನಪು ಮನದಾಳದಿಂದ ಚಿಮ್ಮತೊಡಗಿತು ಆಗ ನಾನೇನು ಹೇಳುವೆನೋ ಎಂದು ಕಾತರದಿನನ್ನೆಡೆಗೆ ನೋಡುತ್ತಿದ್ದವನ ಎದುರಿಸಲಾಗದೇಎಲ್ಲಿ ಹಿಡಿದು ಮುತ್ತಿಡುವೆನೋ ಏನೋ ಎಂದುಮುಖನೋಡಲಾಗದೇ ಹಾಗೇ ಒಳಕ್ಕೆ ಓಡಿದೆ. ಬಾಡಿ ಮುದುಡಿದ ಗೆಳೆತನದ ಸಸಿ ಅಂದುಚಿಗುರೊಡೆದು ಹಸಿರಾಗಿ ಬೆಳೆಯತೊಡಗಿದಾಗನನ್ನ ಕೋಪದ ಬಂಡೆ ಅದಾಗಲೇ ಕರಗಿ ನೀರಾಗಿಚಿಗುರುತಿಹ ಆ ಸಸಿಗೆ ನೀರೆರೆಯತೊಡಗಿತ್ತು. ********************************

ದ್ವೇಷ Read Post »

ಕಾವ್ಯಯಾನ

ಮಿಗೆಯಗಲ ನಿಮ್ಮಗಲ

ಕವಿತೆ ಮಿಗೆಯಗಲ ನಿಮ್ಮಗಲ ನೂತನ ದೋಶೆಟ್ಟಿ ದೇಹವನೆ ದೇಗುಲ ಮಾಡಿಜಗ ಮುಗಿಲುಗಳಗಲ ನಿಂತಕಾಣಲಾರದ ಕೂಡಲಸಂಗನಕರಸ್ಥಲದಲ್ಲೆ ಕರೆಸಿಭಕ್ತಿ ದಾಸೋಹವನೆಗೈದಜಗದ ತಂದೆ ಸಕಲ ಜೀವರಾತ್ಮವೂ ಪರಶಿವನ ನೆಲೆಮೇಲು – ಕೀಳೆಂಬುದು ಇಳೆಯ ಕೊಳೆಇದ ತೊಳೆವುದೇ ಶಿವ ಪಾದಪೂಜೆಕೂಡುಂಡ ಅನ್ನವೇ ಕರಣಪ್ರಸಾದಅರಿವ ಜ್ಯೋತಿ ಬೆಳಗಿಸಿದಕ್ರಾಂತಿಕಾರಿ ಅಣ್ಣ ದಯೆಯ ಬೀಜಮಂತ್ರವ ಪಠಿಸಿಸುಳ್ಳು- ಸಟೆ ಬಿಡುನೀತಿ ನಡೆ ನುಡಿಯೇ ಕೂಡಲಸಂಗಮಆವು ತಾವೆಂಬ ಸರಳತೆಯ ಕಲಿಸಿದಮಮತೆಯ ಮಾತೆ ಚಂದ್ರ- ಚಕೋರರ, ಭ್ರಮರ – ಬಂಡುವಅಂಬುಜ- ರವಿ, ಜ್ಯೋತಿ – ತಮಂಧಆಡುವ ನವಿಲು, ಓದುವ ಗಿಳಿಜಗವ ಅವನಲಿ ಕಂಡುತನ್ನ ಅವನಲಿ ಪಡೆದುಆರಾಧಿಪ ಕವಿ ಇಳೆಯ ಬಾಚಿ ನಿಂತುಭಕ್ತಿ -. ವಿರಕ್ತಿಗಳ ಮುಕ್ತಿಸಿನೀತಿ – ದಯೆಗಳ ನುಲಿಸುವಆನು – ತಾನುಗಳ ಪ್ರಣವಜಂಗಮಕ್ಕಳಿವಿಲ್ಲ ದಿಟ. *************************************************

ಮಿಗೆಯಗಲ ನಿಮ್ಮಗಲ Read Post »

ಕಾವ್ಯಯಾನ

ನೀ ಬರಲಾರೆಯಾ

ಕವಿತೆ ನೀ ಬರಲಾರೆಯಾ ವಿದ್ಯಾಶ್ರೀ ಅಡೂರ್ ಚಂದಿರನ ಬೆಳಕಿನಲಿ ತಂಪಮಳೆ ಸುರಿದಾಗನನ್ನ ಜತೆಗಿರಲು ನೀ ಬರಲಾರೆಯಾ ಇನ್ನು ಸನಿಹಕೆ ಸಾಗಿ ಉಸಿರ ಬಿಸಿಯನು ಸೋಕಿನನ್ನ ಜತೆಗಿರಲು ನೀ ಬರಲಾರೆಯಾ ಒಂದಿರುಳು ಕನಸಿನಲಿ ನಿನ್ನ ಜತೆ ಕೈಹಿಡಿದುಕಡಲಬದಿ ನಿಲುವಾಸೆ ನೀ ಬರಲಾರೆಯಾ ಮರಳಿನಲಿ ನಿನ ಹೆಜ್ಜೆ ಮೇಲೆನ್ನ ಹೆಜ್ಜೆಯನುಇಡುವಾಸೆ ಒಂದೊಮ್ಮೆ ಬರಲಾರೆಯಾ ಭೋರ್ಗರೆವ ಅಲೆಗಳಿಗೆ ಮೈಯೊಡ್ಡಿ ನಿಲುವಾಗಬಿಡದೆನ್ನ ಕೈಹಿಡಿಯೇ ಬರಲಾರೆಯಾ ಮಾಯಕದ ನಗುವೊಂದು ಚಂದದಲಿ ಮೂಡಿರಲುನನ ಮೋರೆ ದಿಟ್ಟಿಸಲು ಬರಲಾರೆಯಾ. ********************************

ನೀ ಬರಲಾರೆಯಾ Read Post »

ಕಾವ್ಯಯಾನ

ಅಂದುಕೊಳ್ಳುತ್ತಾಳೆ

ಕವಿತೆ ಅಂದುಕೊಳ್ಳುತ್ತಾಳೆ ಪ್ರೇಮಾ ಟಿ.ಎಂ.ಆರ್. ಏನೆಲ್ಲ ಮಾಡಬೇಕೆಂದುಕೊಳ್ಳುತ್ತಾಳೆ ಅವಳು ನಗಿಸಬೇಕು ನಗಬೇಕುನೋವುಗಳಿಗೆಲ್ಲ ಸಾಂತ್ವನವಾಗಬೇಕುಕಲ್ಲೆದೆಗಳ ಮೇಲೆ ನಿತ್ಯನೀರೆರೆದು ಮೆತ್ಗಾಗಿಸಿ ನಾದಬೇಕು ತನ್ನೊಳಗಿನ ಕೊರತೆಗಳನ್ನೆಲ್ಲಪಟ್ಟಿಮಾಡಿ ಒಪ್ಪಿಕೊಂಡುಬಿಡಬೇಕೆಂದುಕೊಳ್ಳುತ್ತಾಳೆನೀರವ ಇರುಳಲ್ಲಿ ತಾರೆಗಳಎಣಿಸುತ್ತ ಹೊಳೆದಂಡೆಮರದಡಿಗೆ ಕೂತಲ್ಲೇ ಅಡ್ಡಾಗಿನಿದ್ದೆಹೋಗಬೇಕು ಕಪ್ಪು ಕಲ್ಲರೆಮೇಲೆ ಬೆಳ್ನೊರೆಯಕಡಲಾಗೋ ಮಳೆಹನಿಯಜೊತೆಗೊಮ್ಮೆ ಜಾರಬೇಕುಹಿಂದೆಹಿಂದಕೆ ಹಿಂತಿರುಗುವಂತಿದ್ದರೆಕುಂಟಾಬಿಲ್ಲೆ ಕಣ್ಣಾಕಟ್ಟೆಮತ್ತೊಮ್ಮೆ ಆಡಬೇಕುಬಿಸಿಲುಕೋಲುಗಳೆಲ್ಲ ಸಾರ್ಕೆಹೊರೆಮಾಡಿ ಹೊರಬೇಕುಮರದಡಿಯ ನೆರಳುಗಳಬರಗಿ ಬುತ್ತಿಯ ಕಟ್ಟಿತಲೆಮೇಲೆ ಹೊತ್ತು ಬಿಸಿಲಡಿಯಜೀವಗಳಿಗೆ ಹೊದೆಸಬೇಕುಅದೆಷ್ಟು ಸಾಲಗಳಿವೆ ತೀರುವದಕ್ಕೆಬಿಡಿಸಿಕೊಳ್ಳಬೇಕಿತ್ತುಗೋಜಲುಗಳ ಗಂಟುಗಳಅಂದುಕೊಳ್ಳುತ್ತಾಳೆಸದ್ದಿಲ್ಲದೇ ನಿದ್ದೆಹೋದ ಹಾದಿಯಮೇಲೆ ಒಬ್ಬಂಟಿಯಾಗಿ ನಡೆಯುತ್ತಲೇಇರಬೇಕು ಯಾರೂಅತಿಕ್ರಮಿಸದ ಗ್ರಹವೊಂದಕ್ಕೆಒಮ್ಮೆ ಗುಳೆಹೋಗಬೇಕು ತನ್ನಉಸಿರನ್ನೊಮ್ಮೆ ತಾನೇ ಕೇಳಿಸಿಕೊಳ್ಳಬೇಕುಅಂದುಕೊಳ್ಳುತ್ತಾಳೆ ***************************

ಅಂದುಕೊಳ್ಳುತ್ತಾಳೆ Read Post »

ಕಾವ್ಯಯಾನ

ಅಬಾಬಿ ಕಾವ್ಯ

ಕವಿತೆ ಅಬಾಬಿ ಕಾವ್ಯ ಹುಳಿಯಾರ್ ಷಬ್ಬೀರ್ 01 ತಸ್ಬಿ ಮುಟ್ಟಿದ ಕೈಹಳೆಯ ಕೋವಿಯನಳಿಕೆಯಲ್ಲಿನ ಗೂಡು ಬಿಚ್ಚಿತುಷಬ್ಬೀರ್…!ಆತ್ಮ ರಕ್ಷಣೆಗಾಗಿ. 02 ಸಾಮರಸ್ಯದ ಹೆಸರೇಳಿರಾಮ ರಹೀಮರನ್ನುದ್ವೇಷಿಗಳಾಗಿಸಿರುವರುಷಬ್ಬೀರ್…!ಖಾದಿ ಖಾವಿಯ ಮುಖವಾಡ. 03 ಜಾನಿಮಾಜ಼್ ನ ಮೇಲೆಜಾನ್ ಇಟ್ಟು ನಮಾಜ಼್ಆವಾಹಿಸಿಕೊಂಡವರುಷಬ್ಬೀರ್…!ಭಗವಂತನಿಗೆ ಶರಣಾದವರು. 04 ಪುಡಿಗಾಸಿನಲ್ಲೇಇಡೀ ಬದುಕ ಬಿಡಿ ಬಿಡಿಯಾಗಿಅಂದೇ ದರ್ಬಾರ್ ಮಾಡುವರುಷಬ್ಬೀರ್…!ನನ್ನ ಜನ ನನ್ನವರು. 05 ಯಾ..! ಅಲ್ಲಾ…ಎಲ್ಲಾ ಯೋಜನೆಗಳಂತೆನನ್ನ ಕನಸುಗಳಿಗೂಷಬ್ಬೀರ್…!ಸಬ್ಸಿಡಿ ಕೊಡಿಸುವೆಯಾ..? *************************

ಅಬಾಬಿ ಕಾವ್ಯ Read Post »

ಕಾವ್ಯಯಾನ

ಕವಿತೆ ಕಮಲೆ ಮಾಂತೇಶ ಬಂಜೇನಹಳ್ಳಿ ಕೆರೆಯ ಏರಿ ಮೇಲೆನಿನ್ನ ಕನಸುಗಳ ಬೆನ್ನೇರಿಕುಳಿತ ನಾ… ಅಲ್ಲೇ ಸನಿಹತಣ್ಣಗೆ ಸುಳಿದೋಗುವಾಗಕಾಣಲಿಲ್ಲವೇ? ಕೆರೆ ದಿಣ್ಣೇಲಿ ಆಜಾನುಬಾಹುಆಲದ ಬಿಳಲು, ನಾ ಜೀಕುವಜೋಕಾಲಿ, ನೀನೇ ಹರಿದದ್ದು..ತಿಳಿದೂ ಬೇಸರಿಸದೆಮರೆತುಬಿಟ್ಟಿರುವೆ… ರವಿ ಪಡುವಣಕ್ಕಿಳಿದ,ಕಣ್ಣುಗಳೋ ಮಬ್ಬಾಗುತಿವೆ..ನನ್ನವೇ ಕನಸುಗಳಪುಕ್ಕಟೆ ಬಿಕರಿಗಿಟ್ಟಿದ್ದೇನೆ‌‌..ಚೌಕಾಸಿಯಿನ್ನೇಕೆ?!..ನೀಡಿಬಿಡುವೆ ನಿನಗೆ,ಕಾಣಬಾರದೇ?.. ಇಳಿ ಹೊನ್ನ ಸಂಜೇಲಿ,ನಿರ್ಜನ ನೀರವ ಮೌನದಿ,ನಿರೀಕ್ಷೆಯ ಕಂಗಳಲಿ,ಸುತ್ತಲೂ ಹುಡುಕುತಲೇ..ನೆನಪುಗಳ ಅಡಕುತಿರುವೆ,ಬರಬಾರದೇ?.. ಕೆರೆಯೊಳಗೆದ್ದು ತಾಕಿಯೂ..ಅಂಟದ ತೇವ ಬಿಂದುಗಳ್ಹೊತ್ತಪಂಕಜೆಯ ಪತ್ರಗಳಂತೆ,ನನ್ನ ಕನಸುಗಳಕೊಳ್ಳಲೊಪ್ಪದ, ಅಪ್ಪದಓ ಕಮಲೇ..ಒಮ್ಮೆ ಒಪ್ಪು ಬಾರೆ… **********************

Read Post »

ಕಾವ್ಯಯಾನ

ಹೊರಗಿನವ

ಕವಿತೆ ಹೊರಗಿನವ ಡಾ. ಅರಕಲಗೂಡು ನೀಲಕಂಠ ಮೂರ್ತಿ. ನಾನೀಗ ಹೊರಗಿನವಇದ್ದ ಹಾಗೆ.ಒಳಗೂ ಇಲ್ಲದವನುಹೊರಗೂ ಹೋಗದವನು–ಪೂರ್ತಿಆದರೂ…ನಾನೀಗ ಹೊರಗಿನವಇದ್ದಂತೆ. ಎಷ್ಟರಮಟ್ಟಿಗೆ ಹೊರಗಿನವನುಅಥವ ಎಷ್ಟು ಇನ್ನೂ ಒಳಗಿನವನುಈ ಅಂದಾಜು ನನಗೇ ಸಿಗದವನು! ಹೆಜ್ಜೆಯೊಂದ ಹೊಸ್ತಿಲಾಚೆಇಟ್ಟವನಿರಬಹುದುಆದರೆ ವಾಸ್ತವವೆಲ್ಲಒಳಗೇ ಇನ್ನೂ… ಊರಿಗೆ ಹೊರಟಂತೆರೆಡಿಯಾಗಿ ಕೂತವನಂತೆ–ಅಂತೂ…ಯಾವ ಗಳಿಗೆಯಲ್ಲೂ ಗಾಡಿಬಂದು ನಿಲ್ಲಬಹುದು… ಹೌದು–ಸಂಜೆಯ ಮಬ್ಬು ಗಾಢವಾಗುವ ಹಾಗೆಕಣ್ಣ ಹರಿತ ಮೊಂಡಾದಹೊತ್ತು…ನಾನೀಗ ಹೊರಗಿನವಇದ್ದಹಾಗೆ…ಇನ್ನೆಷ್ಟು ಹೊತ್ತು–ಹೊರಗಿನವನೇ ಪೂರ್ತಿಆಗಲು ಅನಾಮತ್ತು…! ***************************************

ಹೊರಗಿನವ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ನನ್ನ ನೋವು ಸಾತುಗೌಡ ಬಡಗೇರಿ ಕಣ್ಣೀರ ಹನಿಯೊಂದುಹೇಳುತ್ತಿದೆ ಹೊರಬಂದುನೊಂದ ಹೃದಯದ ತನ್ನ ವ್ಯಥೆಯ.ಸೂತ್ರವು ಹರಿದಂತಹಪಟದಂತೆ ಬಾಳಾಗಿಕಥೆಯಾಗಿ ಹೇಳುತ್ತಿದೆ ಬೆಂದು ಹೃದಯ. ಜೊತೆಯಾಗಿ ಉಸಿರಾಗಿನಿನಗಾಗಿ ನಾನಿರುವೆ..ಮಾತು ಕೊಟ್ಟನು ನಲ್ಲನಂದು.ಮರೆತು ಹೊರಟಿಹನುತಬ್ಬಲಿಯ ನನಮಾಡಿಕಂಬನಿ ಮಿಡಿಯುತ್ತಿದೆ ಕೇಳಿಯಿಂದು. ನಿನಬಾಳು ಬೆಳಕಾಗಿನಗುತಲಿರು ಓ ಗೆಳೆಯಾ…ನಿನ್ನಮೊಗ ತೋರದಿರು ಮುಂದೆ ಎಂದು.ಕಹಿ ನೆನಪ ನಾಹೊತ್ತುಬಾಳುವೆ ನಾನಿಲ್ಲಿಕಣ್ಣೀರಧಾರೆ ಸುರಿಸುತ್ತಾ ಮುಂದು ****************************

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಎ.ಹೇಮಗಂಗಾ ಮಧುಶಾಲೆಗಿನ್ನು ಮರಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲುನೆನಪ ಗೋರಿಯನಿನ್ನು ಅಗೆಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಏಕಾಂಗಿ ಜೀವದ ತಾಪ ತಣಿಸಲೆಂದೇ ಏಕಾಂತದಿ ಮೈ ಮರೆತವನುನೋವ ಕುಲುಮೆಯಲ್ಲಿನ್ನು ಬೀಳಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಸಾವಿರ ಟೀಕೆಗಳ ಕತ್ತಿ ಇರಿತಕೆ ಬಲಿಯಾಗಿಸಿದರು ಕುಹಕಿ ಗೆಳೆಯರುನಾಲಿಗೆಗಿನ್ನು ಆಹಾರವಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಮಂದ ಬೆಳಕಿನ ನಿಶೆಯ ನಶೆ ಲೋಕ ಬಲೆಯಾಗಿ ಉಸಿರುಗಟ್ಟಿಸಿದೆಬೇಡುತ ಮದಿರೆಗಿನ್ನು ದಾಸನಾಗಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ಬದುಕಿನ ಗಮ್ಯ ಸಾರ್ಥಕತೆಯತ್ತ ಸೆಳೆಯಲು ಕೈ ಬೀಸಿ ಕರೆಯುತ್ತಿದೆಅವನತಿ ಹಾದಿಯನಿನ್ನು ತುಳಿಯಲಾರೆ ಸಾಕಿ ಬೇಡವಾಗಿದೆ ಮಧುಬಟ್ಟಲು ***********************************

ಗಝಲ್ Read Post »

ಕಾವ್ಯಯಾನ

ಕಾಂಕ್ರೀಟ್ ಬೋಧಿ

ಕವಿತೆ ಕಾಂಕ್ರೀಟ್ ಬೋಧಿ ಪೂಜಾ ನಾರಾಯಣ ನಾಯಕ ಯಾವ ಹಕ್ಕಿ ಎಸೆಯಿತೋ, ನನ್ನ ಬೀಜವನಿಲ್ಲಿಅದರ ಪರಿಣಾಮವೇ ಬೆಳೆದೆನಾಯಿಲ್ಲಿಸಿಮೆಂಟ್ ಗಾರೆಯ ಬಿರುಕಿನಾ ಕಿಂಡಿಅದುವೇ ನನ್ನ ಬದುಕಿನಾ ಮೊದಲನೆಯ ಬಂಡಿಗೆದ್ದುಬರುತ್ತಿದ್ದೆ ಆ ಬಿರುಕ ಇನ್ನೂ ಸರಿಸಿಆದರೆ ನೀ ಬರದೇ ಇರಲಾರೆ, ಕೀಳಲು ನನ್ನರಸಿ ಕರವೊಡ್ಡಿ ಬೇಡುವೇ, ಕೀಳಬೇಡವೋ ಮನುಜಕೀಳದಿದ್ದರೆ ನಾ ನೀಡುವೆ, ಔಷಧೀಯ ಕಣಜನಿನಗಷ್ಟೇ ಎಂದು ತಿಳಿಬೇಡವೋ ಅಣ್ಣಾಖಗಗಳಿಗೂ ನೀಡುವೆನೋ ತಿನ್ನಲು ಹಣ್ಣಾನಿಮ್ಮಿಬ್ಬರಿಗೆ ಎಂದು ತಿಳಿಯದಿರು ಮತ್ತಣ್ಣಮೃಗಗಳಿಗೂ ನೀಡುವೆನೋ ನನ್ನ ಮೇವಣ್ಣ ನೀನಾಗಿಹೆ ಇಂದು ಕ್ರೋಧದಾ ಬಂಧನಕೇಳಿಸುತ್ತಿಲ್ಲವೇನೋ ನಿನಗೆ, ನನ್ನ ಮನದ ಆಕ್ರಂದನಹಿಡಿದು ನಿಂತಿರುವೆ ನೀನಿಂದು, ಖಡ್ಗ ಮಹಾರಾಜನಕೆಳಗಿಳಿಸೋ ಮಾರಾಯಾ, ಕೊಡುವೆ ನಾನಿಂಧನನನ್ನ ನೆರಳಿನಲಿ ಕುಳಿತಿದ್ದು, ಮರೆತೋಯ್ತೋ ಏನೋ?ನೀ ಮರೆತೆಯೆಂದು, ನಾ ಮರೆವೆನೇನೋ? ನೀ ಕೂರದೇ ಇರಬಹುದು, ನೆರಳಿನಾ ಕೆಳಗೆಯಾಕೆಂದರೆ ನೀನಿರುವೆ ಕಾಂಕ್ರೀಟ್ನ ಒಳಗೆನೀ ಬಯಸಲಾರೆ, ಎಸಿಯಲಿ ಉಳಿದುಬಯಸುವನು ರೈತ, ಬಿಸಿಲಿನಲಿ ಬಸವಳಿದುಕೇಳಿಸಿಕೋ, ಕೇಳಿಸಿಕೋ ಮನದಾಳದ ಕೂಗವಾಸಿಮಾಡುವೆನು ನಿನ್ನ ಧೀರ್ಘಕಾಲದ ರೋಗ ಬುದ್ಧನಿಗೆ ನೀಡಿದೆ ಜ್ಞಾನವನಾನಂದುನೀನಾಗಬೇಡವೋ ಕೊಲೆಗಡುಕನಿಂದುಸುಡು ಬಿಸಿಲ ಸಹಿಸಿ,ಪರ ಹಿತವ ಬಯಸಿನಾ ಬಾಳುವ ಪರಿಅದುವೇ ನಿನಗೆ ಆದರ್ಶದ ಗರಿ. ******************************************************

ಕಾಂಕ್ರೀಟ್ ಬೋಧಿ Read Post »

You cannot copy content of this page

Scroll to Top