ಅವ್ವ
ಕವಿತೆ ಅವ್ವ ಡಾ. ಅರಕಲಗೂಡು ನೀಲಕಂಠ ಮೂರ್ತಿ ಅವ್ವಮೂವತ್ತು ಮಳೆಗಾಲಮತ್ತಷ್ಟೇ ಬೇಸಿಗೆ ಬಿಸಿಲುಕೆಲವೊಮ್ಮೆ ಬೆಂಕಿಯುಗುಳುಎಲ್ಲ ಸವೆಸಿದ್ದಾಯ್ತು ನೀ ಇಲ್ಲದೆ! ಅಂದು –ನಿನ್ನ ಹೂತು ಬಂದಆ ಮಣ್ಣ ಅಗುಳ ಕಣ ಕಣಜೊತೆಗೆ ಒಡೆದ ಮಡಕೆಯ ಚೂರು ಪಾರುಇನ್ನೂ ಬಿಟ್ಟಿಲ್ಲ ನನ್ನಮೆದುಳಲ್ಲವಿತು ಕಸಿಯಾಗಿಸೂಸುವುದುಅರಳಿ ದಿನಕ್ಕೊಂದು ಹೊಸ ಹೂವಾಗಿ…ಹೂಸ ಹೊಸ ಕಂಪು!ಮತ್ತು ಕತ್ತು ಹಿಸುಕುವ ನೆನಪು… ಒಂದು ದಿಕ್ಕಿಗೆ ಕಾಚು ಕಡ್ಡಿಪುಡಿಇನ್ನೊಂದೆಡೆ ಮರೆಮಾಚಿದ ರೋಗರುಜಿನಮತ್ತು ನಿತ್ಯ ನಂಜಾದದಾಯಾದಿ ಅವಿಭಕ್ತಕುಟುಂಬ!ಕೊನೆಗೆ ಹೆಣಗೆಲಸದ ಹೆಣಗು –ಈ ನಾಲ್ಕು ಶೂಲಗಳು ನಾಲ್ಕು ದಿಕ್ಕಿನಹೆಗಲಾಗಿ ಹೊತ್ತು ಹೋದದ್ದುಇಂದಿಗೂ ನನ್ನ ಗುಂಡಿಗೆಯ ದದ್ದು! ಕ್ರಮೇಣಅಪ್ಪನ ಪಯಣಜೊತೆಜೊತೆಗೆಒಡಹುಟ್ಟಿದವರೂ ಕೂಡ ಚಿತೆಗೆಸರದಿಯೋಪಾದಿ…ನನ್ನ ಶೇಷವಾಗುಳಿಸಿಬಹುಶಃ ನಿನ್ನ ಪ್ರತಿನಿಧಿಸಿ! ಈಗಎಲ್ಲಿ ಶೋಧಿಸಲಿಈ ಅನಂತ ಬ್ರಹ್ಮಾಂಡದಲಿನಿನ್ನ ಮರುಹುಟ್ಟುಎಂಬ ಹುಚ್ಚು ಕನಸು ಹೊತ್ತುಯಾವ ಜೀವಯಾವ ಜಂತುಆಕಾರದಲಿ ನಿನ್ನ ಆ ಅಂದಿನ ದಿರಿಸುಅಥವನಮ್ಮ ಮೀರಿ ಬೆಳೆದವಿಶ್ವರೂಪದಪ್ರತಿಮೆಯ ಹೊಸ ಜೀವಿಗಳಲಿ…ಎಲ್ಲಿ ಸಂಶೋಧಿಸಲಿ –ನೀನೀಗ ತಳೆದನಿನ್ನ ಆ ಹೊಸ ಆಕೃತಿಒಮ್ಮೆಯಾದರೂ ನನ್ನಮರಣದ ಮುನ್ನ…? ***********************************









