ಅವ್ಯಕ್ತ
ಕವಿತೆ ಅವ್ಯಕ್ತ ಡಾ.ಪ್ರೀತಿ. ಕೆ. ಎ ಹೇಳಿಬಿಡಬಹುದಿತ್ತು ನಾನುನಿನ್ನ ಪ್ರತಿಯೊಂದು ಮಾತುನನ್ನಲ್ಲಿ ಅನುರಾಗದ ಅಲೆಗಳನ್ನುಎಬ್ಬಿಸುವುದೆಂದು ನಿನ್ನ ಸಾಮೀಪ್ಯವು ನನಗೆಎಷ್ಟೊಂದು ಮುದನೀಡುವುದೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಹೊಗಳಿಕೆಯೊಂದುಇಂದಿಗೂ ಕೂಡನನ್ನ ಕೆನ್ನೆಯ ರಂಗೇರಿಸುವುದೆಂದು ನನ್ನ ನಗೆಯ ಹಿಂದಿನಕಾರಣವು ನೀನಷ್ಟೇಆಗಿರುವೆಯೆಂದು ಹೇಳಿಬಿಡಬಹುದಿತ್ತು ನಾನುನಿನ್ನ ಒಂದೇ ಒಂದು ಸ್ಪರ್ಶನನ್ನೊಳಗಿನ ಭಾವ ತಂತಿಯನ್ನುಮೀಟುವುದೆಂದು ನಿನ್ನ ಬಾಹುಗಳಲ್ಲಿನನ್ನನ್ನೇ ನಾನುಕಳೆದುಕೊಳ್ಳುತ್ತೇನೆಂದು ಹೇಳಿಬಿಡಬಹುದಿತ್ತು ನಾನುನೀನು ನನ್ನೊಡನಿದ್ದ ಕ್ಷಣನನಗೆ ಮತ್ತೇನೂನೆನಪಾಗುವುದಿಲ್ಲವೆಂದು ಎದೆ ಬಡಿತ ನಿಲ್ಲುವ ತನಕನನ್ನ ಹೃದಯ ನಿನ್ನ ಹೆಸರನ್ನಷ್ಟೇಕೂಗುವುದೆಂದು ಆದರೂ ಹೇಳಲಿಲ್ಲಏಕೆಂದರೆ ನನಗೆ ಗೊತ್ತುನಿನ್ನೆಡೆಗಿನ ನನ್ನ ಪ್ರೀತಿಹೇಳಿದರಷ್ಟೇ ನಿನಗೆ ಗೊತ್ತಾಗುವಷ್ಟುಬಲಹೀನವಲ್ಲವೆಂದು ! **********************************









