ಈ ರೋಗ…
ಕವಿತೆ ಈ ರೋಗ… ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೊರಗೆ ಕಾಯುತ್ತ ಇದ್ದಾನೆನನಗಾಗಿಕ್ಲಿನಿಕ್ ರಷ್ ಆಗಿದೆಹೇಳಿ ಕೇಳಿಕೋವಿಡ್ ಕಾಲ!ಆತನ ಮನೆಗೆ ಹೋಗಿಬರಬೇಕಿದೆ… ಬೈಕ್ ಹತ್ತಿ ಹೊರಟಾಗಹೊರಟಾಗ ಗಾಢ ಸಂಜೆನಾ ಮುಂದು ಆತ ಹಿಂದೆಯಾರದೋ ಜಮಾನಿನಕಾಲುದಾರಿ ಹಿಡಿದುಹಳ್ಳಿಯಕಡೆ… ಝಗಮಗವಿಲ್ಲದ ಊರಲ್ಲಿಎಲ್ಲೆಲ್ಲೂ ಮಬ್ಬುಗತ್ತಲೆಇಲ್ಲಿ ಈ ಹೆಂಚಿನಮನೆಯೊಳಗೂ ಅರೆಜೀವದಮಿಣುಕುದೀಪಅದೇ ಅವಸ್ಥೆಯಲಿನರಳುತ್ತಮೂಲೆಯ ಮಂಚವೊಂದರಮೇಲುರುಳಿದ್ದವಯೋವೃದ್ಧಆಗಲೇ ಅರೆಜೀವದ ಸೊಪ್ಪು…ಮೂಳೆ ಚಕ್ಕಳ!ಜೊತೆಗೆ ಬಿಡುವಿಲ್ಲದ ಕೆಮ್ಮಿಗೆಉಬ್ಬಿಳಿವ ಹೊಕ್ಕುಳ…ಮೈ ಕೆಂಪಾದ ಜ್ವರದ ತಾಪಉಲ್ಬಣಿಸಿತ್ತುಅಷ್ಟರಲ್ಲಿ ಕ್ಷಯ ಆಸ್ಥಿತಿಗೆ!ಎಂಥ ರೋಗ ಈಜನದ ನಡುವೆ!ಎಲ್ಲಿ ಕೊಡಲಿ ಮದ್ದುಇಲ್ಲಿ ಇಂಥ ಮನೆಯಲ್ಲಿಇಂಥ ರೋಗಿಗೆತೊಟ್ಟಿಮನೆಯಂಥಈ ಕುಟುಂಬದಲ್ಲಿ!ಸಾವಿಗೆ ಒಂದೇ ಒಂದಡಿಮೇಲಿನ ತ್ರಿಶಂಕು ರೋಗಿ!ಈ ಸಂಕಟದ ನನ್ನಈ ಗತಿಯಾವ ಆಸ್ಪತ್ರೆಗೂಕಳಿಸಲೂ ಆಗದ ಸ್ಥಿತಿಏನು ವೃತ್ತಿಯೋಎಷ್ಟರ ವೈದ್ಯವೋ ಏನೋ…ಅಂತೂ ವಿಧಿಯೆಂದುಹೇಳಿದೆ…ಬೈಕ್ ಏರಿ ಹೊರಟೆ… **********************************









