ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ಅವನು ನನ್ನದೆಯಲ್ಲಿ ದೀಪ ಹಚ್ಚಿಟ್ಟಿದ್ದಾನೆ ಸಖಿಮುಚ್ಚಿದ ಕದ ತೆರೆದು ಕತ್ತಲೆ ಬಚ್ಚಿಟ್ಟಿದ್ದಾನೆ ಸಖಿ ನಮ್ಮಿಬ್ಬರ ಪ್ರೀತಿಯನು ಮುಗಿಲೆತ್ತರಕ್ಕೆ ಹಿಡಿದಿದ್ದಾನೆತುಟಿದೆರೆಯದೆ ಒಲವಿನ ಮಾತುಗಳ ಬಿಚ್ಚಿಟ್ಟಿದ್ದಾನೆ ಸಖಿ ಮೊಗ್ಗುಗಳಿಗೆ ನಗುವ ಕಲಿಸುವ ಖಯಾಲಿ ಅವನದುಒಡಲ ಹೊದರಿನಲಿ ನೋವುಗಳ ಮುಚ್ಚಿಟ್ಟಿದ್ದಾನೆ ಸಖಿ ಅಂಗಳದ ಹಣತೆಗಳಿಗೆ ಅವನದೇ ಕಣ್ಣ ಹೊಳಪುಚುಚ್ಚುವ ಮುಳ್ಳುಗಳ ಲೆಕ್ಕಿಸದೆ ಹೂವ ಮುತ್ತಿಟ್ಡಿದ್ದಾನೆ ಸಖಿ ಬೆಳ್ಳಗಿರುವ ಬೆಳಕಿಗೂ ಬಣ್ಣ ಬಳಿಯುತ್ತಾರಲ್ಲ ಅರುಣಾಬರುವ ಬೇಸರಿಕೆಗಳನು ತಡೆದು ಅಲ್ಲಲ್ಲೇ ಹತ್ತಿಟ್ಟಿದ್ದಾನೆ ಸಖಿ **************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ವಿ.ಹುಸೇನಿ ವಲ್ಲೂರು ಜಿಂದಗಿ ತುಂಬಾ ಬರಿ ಇರುಳ ತುಂಬಿದೆ ನಿನ್ನ ಬಿಟ್ಟು ಹೇಗೆ ಇರಲಿ ಸಖಿ!ಮೊಹಬತ್ತಿನ ತುಂಬಾ ಅರಳಿದ ಇರಳು ಓಡಿಸಬೇಕು ಇಲಾಲು ಹಿಡಿದು ಬಾ ಸಖಿ!! ಹಗಲು ನಾಚಿತು ಮೈ ಬಾಚಿತು ಸೆರಗ ತುಂಬ ಗಂಟು ಕಟ್ಟಿಕೊಂಡು!ಜೀವದೊಳಗ ಜೀವ ನೀನು ಹುಡುಕುತ್ತಿದೆ ಮನಸು ಸನಿಹಕ್ಕೆ ಬಾ ಸಖಿ!! ತುಟಿ ಕಚ್ಚಿ ಹೇಳಬೇಕೆಂದ ಒಂದು ಮಾತು ನನ್ನ ಮನಸಲ್ಲೇ ಉಳಿಯಿತು!ನಾ ಹೋದರು ಮಸಣದ ಗೋರಿ ಮೇಲಿನ ಮರಕ್ಕೊಂದು ಹಾಡು ಕಲಿಸು ಬಾ ಸಖಿ!! ಎಷ್ಟೊಂದು ಆಶೆಗಳು ಹೆಪ್ಪುಗಟ್ಟಿವೆ ನಿನ್ನ ನೋಡದೆ ತಲಬಾಗಿಲ ಮುಂದೆ!ಊರ ಅಂಗಳ ತುಂಬಾ ನಿನಗಾಗಿ ರಂಗೋಲಿ ಕಾಯುತ್ತಿದೆ ಬಾ ಸಖಿ!! “ವೀರ” ಪ್ರೇಮಿಯ ಮುಂದೆ ಬತ್ತಿದ ಕೆರೆಯಂಗಳ ಆಗಬೇಡ ಸಖಿ!ಎಷ್ಟು ಸಲ ಸೋತು ಸೋತು ಮಂಡಿ ಊರಿದ್ದೇನೆ ನಿನಗಾಗಿ ಬಾ ಸಖಿ!! *************************************

ಗಜಲ್ Read Post »

ಕಾವ್ಯಯಾನ

ಬಿಕ್ಕಳಿಸಿದ ಅವ್ವ

ಕವಿತೆ ಬಿಕ್ಕಳಿಸಿದ ಅವ್ವ ಡಾ.ಸುಜಾತಾ.ಸಿ ನವ ಮಾಸ ಹೊತ್ತುರಕ್ತ ಮಾಂಸ ತುಂಬಿಆಕಾರ ಕೊಟ್ಟಗರ್ಭಕ್ಕೆ ಕಪ್ಪನೆಕಾರ್ಮೊಡ ಕವಿದುಬದುಕಿನ ಕ್ಷಣ ಕ್ಷಣವುದುರ್ರಗಮನವಾಗಿಸಂಚಾರಿಸುತ್ತಿರಲುಬೇಡಾ ತಾಯಿಸಾಕು ಮಾಡುಗರ್ಭಧರಿಸಿಧರೆಯನ್ನು ಕಾಣಿಸುವುದು ಹಾಲುಣಿಸುವಾಗಕಚ್ಚಿ ಕಚ್ಚಿ ಹೀರಿದ ಮೊಲೆ ತೊಟ್ಟುಆಕಾಶಕ್ಕೆ ಬಾಯ್‌ತೆರೆದುನಿಂತರು ಹಸಿದ ಹೊಟ್ಟೆಗೆಮಾಂಸದ ಹಾಲುಣಿಸಿನಗುವ ಹಾಗೆ ಮಾಡಿದನಿನಗೆ ಇವತ್ತು ಬೀದಿಗೆತಂದಿಕ್ಕಿದ್ದಾರೆ ಮರುಳರು ನೆತ್ತಿಯ ಬಡಿತ ಹೆಚ್ಚಸಬಾರದೆಂದುಗAಧ ಮಿಶ್ರಿತ ದ್ರವ್ಯವನ್ನುಸವರಿ ಮುದ್ದಗಿ ತಿಡಿದನಿನ್ನ ಕೊಮಲ ಬೆರಳಿಗೆಹಾದಿ ಬೀದಿ ಕಸಗುಡಿಸಲುಹಚ್ಚಿ ಮೆರೆಯುತ್ತಿದ್ದಾರೆಸಾಕು ತಾಯಿ ಧರೆಗೆಎಂದು ಕರೆಯಬೇಡ ಮೆತ್ತನೆಯ ಹಾಸಿಗೆ ಹೊದಿಕೆ ಮಾಡಿಮಲಗಲೆಂದು ಕೈಯನ್ನೆ ದಿಂಬವಾಗಿಸಿಪಕ್ಕಕ್ಕೆ ಜಾರಿ ನಿದ್ರೆ ಮಾಡಿದ ನಿನಗೆಸ್ವಾರ್ಥ ತುಂಬಿದ ಮನುಜಹುಚ್ಚಿ ಪಟ್ಟ ಕಟ್ಟಿರೈಲ್ವೆ ಬಸ್ಸಸ್ಟಾಂಡಗಳಲ್ಲಿದಿನ ನಿತ್ಯ ಮಲಗುವಂತೆಮಾಡಿ ಹೆಂಡರ ಮಕ್ಕಳ ಜೊತೆಕುರ್ಲಾನ ಹಾಸಿಗೆಯಲ್ಲಿಮೂಢತ್ವದಿಂದ ಕಾಲು ಚಾಚಿಮಲಗಿದ್ದಾನೆ ತಾಯೇ *********************************** ಹಾಲುಂಡ ಎದೆಗೆಚೂರಿ ಇರಿಸಿದ ಮನುಷ್ಯಇನ್ನೆಂದು ಬದಲಾದಾನುದಯವಿಟ್ಟು ಬಿಕ್ಕಳಿಸಬೇಡಮತ್ತೆ ಮರುಕಳಿಸುತ್ತೆಬಿಕ್ಕಳಿಕೆಯ ನಾದಹೊರ ಬರುವ ಕಾಲ ************************************

ಬಿಕ್ಕಳಿಸಿದ ಅವ್ವ Read Post »

ಕಾವ್ಯಯಾನ

ನೀನೊಂದು ಕಾವ್ಯ

ಕವಿತೆ ನೀನೊಂದು ಕಾವ್ಯ ಆನಂದ ಆರ್.ಗೌಡ ತಾಳೇಬೈಲ್ ನೀನೊಂದು ಕಾವ್ಯಭಾವ ಮನದ ಧರೆಯಲಿನಿನ್ನ ನಡಿಗೆಯೊಳಗಿನ ಮಿಲನತೆನಿಗೂಢ ಬೆಳಕು ಬೀರಿದೆ ನಗುವಿನ ಕೆನ್ನೆ ಗುಳಿ ನಕ್ಷತ್ರ ಕಡ್ಡಿಯಹೊಳಪಿನ ವದನ ಆಗಾಗ ಸಹನೆಯಿಂದಜಾರುವ ಕಣ್ಣಹನಿ ಆರಾಧನೆಯ ಹೃನ್ಮನತಬ್ಬಿಕೊಂಡಾಗಿನ ಧನ್ಯತೆನನ್ನ ತೆಕ್ಕೆಯಲ್ಲಿ ಹಾಗೇಹುದುಗುವ ಪರಿ ಎಲ್ಲವೂ ಮೊದಲಿನಂತೆ ಮಧ್ಯಾಹ್ನದ ನೆರಳಿನಂತೆನನ್ನೊಳಗೆ ನೀನಿದ್ದೆಬೆವೆತ ಎದೆ ಮೇಲಿನ ನಿನ್ನ ಮೊಗನನ್ನ ನಿದಿರೆ ಕದ್ದು ಮೆರೆಯುತ್ತಿದ್ದುಮೊದಲ ಸಲುಗೆ ಅಪ್ಪುಗೆಯ ದಾಹಎಲ್ಲವನ್ನೂ ತಣಿಸಿದ ಪರಿಒಲುಮೆಯ ಕಾವ್ಯದಂತೆ ನಿನ್ನ ಮುನಿಸಿನ ಸನಿಹದಸ್ಪರ್ಶದಲಿ ಯಾವುದೇ ಗಾಯವಿಲ್ಲಮಡಿಕೆಯಲಿ ತುಂಬಾನೇಬೇಸಿ ಉಂಡ ನೆನಪು ಎಂದಿಗೂ ಮಾಸದಿರಲಿಹಾಗೇ ಸುಮ್ಮನೆ ಒಡೆಯದಿರಲಿನನ್ನದೊಂದು ಕನಸಿನಂತೆನಿನ್ನ ಮಡಿಲು ನನ್ನ ಚಿರನಿದ್ರೆಯನೆಲೆಯಾಗಿರಲಿ ! *********************************************

ನೀನೊಂದು ಕಾವ್ಯ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಲ್ಲಾಗಿರಿರಾಜ್ ಕನಕಗಿರಿ. ನೀವು ಒಂದು ದಿನ ನನಗೆ ಒಪ್ಪಿಗೆ ಕೊಟ್ಟರೆ ನನ್ನ ಕಬ್ರ್ ನಾನೇ ತೋಡಿಕೊಳ್ಳುತ್ತೇನೆ.ನನ್ನ ಗೋರಿ ಕಟ್ಟಲು ತಂದ ಈ ಬಂಡೆಗಲ್ಲಿನ ಮೇಲೆ ನಾ ಹಿಂದೂಸ್ತಾನಿ ಎಂದು ನಾನೇ ಕೆತ್ತಿಕೊಳ್ಳುತ್ತೇನೆ. ನೀವು ಸುಮ್ಮನಿದ್ದರೆ ನನ್ನ ಮಸಣ ನಾನೇ ನಿರ್ಮಿಸಿಕೊಳ್ಳುತ್ತೇನೆ.ನಾಳೆ ನನ್ನ ಗಜಲ್ ಓದುವಾಗ ಯಾರೂ ಧರ್ಮ ಹುಡುಕಬಾರದೆಂದು ಬೇಡಿಕೊಳ್ಳುತ್ತೇನೆ. ನೀವು ದೂರವಿದ್ದರೆ ನನ್ನ ಗೋರಿ ಮೇಲೆ ಬಿಳಿ ಹೂ ಹುಟ್ಟಲು ಕೇಳಿಕೊಳ್ಳುತ್ತೇನೆ.ನನ್ನ ಗೋರಿ ಬಳಿ ಯಾವ ಧರ್ಮದ ಝಂಡಾ ಹಾರದಿರಲಿಯೆಂದು ವಿನಂತಿಸಿಕೊಳ್ಳುತ್ತೇನೆ. ನೀವು ಬರುವುದಾದರೆ ನನ್ನ ಗೋರಿ ಬಳಿ ಗಡ್ಡ ಜುಟ್ಟ ದಾರದ ಕುರುಹು ಕೇಳಬೇಡಿ ಎಂದು ಕೈಜೋಡಿಸುತ್ತೇನೆ.ನನ್ನ ಗಜಲ್ ನಿಮ್ಮ ನಡುವೆ ಮನುಷ್ಯ ಪ್ರೀತಿ ಕಟ್ಟಲಿಯೆಂದು ದುವಾ ಮಾಡುತ್ತೇನೆ. ನೀವು ಧರ್ಮದ ಅಮಲಿನಲ್ಲಿ ಸಾವು ಬೇಡುವುದಾದರೆ ನಾನು ಗೋರಿಯಲ್ಲಿ ಮರು ಜನುಮ ಧಿಕ್ಕರಿಸುತ್ತೇನೆ.ನನ್ನ ಗೋರಿ ಸುತ್ತ ಬಿಳಿ ಪಾರಿವಳದ ದಂಡು “ಗಿರಿರಾಜ”ನ ಐಕ್ಯತೆಯ ಮಂತ್ರ ಪಠಿಸಲಿಯೆಂದು ಬೇಡಿಕೊಳ್ಳುತ್ತೇನೆ **********************************.

ಗಜಲ್ Read Post »

ಕಾವ್ಯಯಾನ

ಕಪ್ಪುಬಿಳುಪಿನ ಚಿತ್ರ

ಕವಿತೆ ಕಪ್ಪುಬಿಳುಪಿನ ಚಿತ್ರ ಬಿದಲೋಟಿ ರಂಗನಾಥ್ ಅವಳಿಗಾಗಿ ಕಾದ ಭರವಸೆಯ ದೀಪಹೊಯ್ಲಾಡುತ್ತಿರುವಾಗಲೇಇರುವೆಯೊಂದು ಕೂತು ಮೂತಿ ತೀಡಿಮುಂಗೈ ಮೇಲಿನ ಗುರುತ ನೋಡಿ ಕಣ್ಣ ಮಿಟುಕಿಸಿತು ಕಾದ ತಂಗೂದಾಣದ ಗೋಡೆಯ ತೊಡೆಗೀಚಿದ ಅಕ್ಷರಗಳ ಮೌನ ಮುರಿದುಬರುವ ಬಸ್ಸಿನ ಸೌಂಡಿಗೆಉಗುರ ಬಣ್ಣ ಕಚಗುಳಿಯಿಟ್ಟುಬೆರಳ ತುದಿಯ ಅವಳ ಸ್ಪರ್ಶದ ನಗುತುಟಿಯ ಕಚ್ಚಿ ಬೆಳಕಾಡಿತು ಆ ಸಂದಣಿಯಲ್ಲೂ ಸೂಟಿಯಿಟ್ಟ ಕಣ್ಣುಕೆನ್ನೆಕಚ್ಚಿದ ಗುರುತನು ಹುಡುಕಿಭಾವಜಾಡಿನ ಬಲೆನೇಯ್ದುಹಕ್ಕಿಮರಿಯ ಪ್ರೇಮದಂಚು ಹೊಳೆದುಚಂದ್ರಗೆರೆಯ ಕರುಣೆ ಮುದ್ದಾಡಿಕಾಲನ ಕರುಳು ಮರುಗಿನೆಲದ ಬೆವರು ಚಿಗುರಿಸಿದ ಕನಸು ಒಂಟಿ ಚಿಪ್ಪಿನಲಿ ನಿಲ್ಲದ ತೂಕದ ಬೊಟ್ಟುಸತ್ಯದ ಬೆನ್ನಿಗೆ ಬರೆದ ಕಪ್ಪುಬಿಳುಪಿನ ಚಿತ್ರಕಾವಳ ಬಂದ ದಿನ ಶಪಿಸಿದ ಮನಸುಕಾಣದ ಅವಳ ಆಕೃತಿಗೆ ಮರುಗಿಜೀವತಂತುವಿನ ಸದ್ದುಬಯಲ ಮಾರ್ದನಿಸಿಭಾವಸ್ಪರ್ಶದ ಗಿಡದ ಬೇರಿನನಾಲಿಗೆ ಒಣಗಿಎದೆ ಬಿರಿದ ಶೋಕಇನ್ನೂ ಕೇಳುತ್ತಿದೆ. **********************

ಕಪ್ಪುಬಿಳುಪಿನ ಚಿತ್ರ Read Post »

ಕಾವ್ಯಯಾನ

ಸಾಕು ಬಳುಬಳಿ…

ಕವಿತೆ ಸಾಕು ಬಳುಬಳಿ… ಕೃಷ್ಣಮೂರ್ತಿ ಕುಲಕರ್ಣಿ ಸಾಲು ದೀಪ ಉರಿಯುವಾಗಒಂದಕಂಟಿದೆ ಸೊಡರುಮಕ್ಕು ಕವಿದು ಬಿಕ್ಕುವಾಗಅದ್ಯಾರು ನೋಡ್ವರು ಹೇಳುದೀಪಗಳು ಪ್ರಜ್ವಲತೆಯಲಿಸುತ್ತ ಬೆಳಗುವಾಗಹಬ್ಬದ ಸಡಗರ ಹಬ್ಬಿರುವಾಗಆರ್ಥ ಧ್ವನಿಯತ್ತಹರಡದು ಯಾರ ಚಿತ್ತಈ ತನಕ ಬೆಳಗಿದೆಬೇಕಿದೆ ಈಗ ವಿರಾಮಎಂದಾರುತಿದೆ ಬಸವಳಿದ ದೀಪಅದಕು ಮುನ್ನ ಬೆಳಗಿಸಿದೆಇನ್ನೊಂದು ರೂಪದೀಪದಿಂದ ದೀಪಹಚ್ಚಬೇಕು ಮಾನವಅದೆ ದೀಪ ಉಳಿಯಲೆಂಬಸೊಲ್ಲು ಬೇಡಾ ಕೇಳುವಬೆಳಕು ಮುಖ್ಯ ಬದುಕಿನಲ್ಲಿಅಂಧತೆಯ ತೊಡೆಯಲುನಾನು ನನದು ಎಂಬುದೆಲ್ಲಬತ್ತಿಯಾಗಿ ಉರಿಯಲುಶಕ್ತಿ ಕೊಡು ದೀಪಾವಳಿಸಾಕು ಇದೇ ಬಳುವಳಿ… **********************

ಸಾಕು ಬಳುಬಳಿ… Read Post »

ಕಾವ್ಯಯಾನ

ಬೆಳಕು

ಕವಿತೆ ಬೆಳಕು ಬಸವರಾಜ ಕಾಸೆ ಕತ್ತಲು ಎಲ್ಲೆಲ್ಲಿ ಇದೀಯೋಅಲ್ಲಿ ಎಲ್ಲಾ ಒಮ್ಮೆಯಾದರೂತೂಗಿ ಬಿಡಬೇಕು ಆಕಾಶಬುಟ್ಟಿಮಮತೆಯ ತೊಟ್ಟಿಲಂತೆ* ನಾ ಬೆಳಕು ಬಯಸಿದೆಕತ್ತಲೆಯಲ್ಲಿ ನಿಂತುಒಂದು ಹಣತೆ ಹಿಡಿದುಆದರೆ ಆ ಕತ್ತಲೆತಾನೇ ಬೆಳಗಾಗ ಬಯಸಿತ್ತು* ಮನೆಯೊಳಗಿನ ಮನಗಳ ದೀಪಹಪಾಹಪಿಸುತ್ತಿತ್ತುಹೊರಗೂ ಬೆಳಕಾಗಲುಅದಕ್ಕಾಗಿಯೇ ಹಚ್ಚಿದರುಹೆಚ್ಚು ಸಾಲುಗಳ ದೀಪ* ನಾವು ಹಚ್ಚಿದೆವೆಂದು ಹತ್ತು ದೀಪಅಲ್ಲೊಬ್ಬ ಹಚ್ಚಿದ ಇಪ್ಪತ್ತು ದೀಪ ಆದರೆ ಬೆಳಕು ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆಸದ್ದಿಲ್ಲದೆ ಪ್ರಸಾರವಾಗಿಪರಸ್ಪರ ವಿನಿಮಯವಾಗುತ್ತಿತ್ತು* ಅತ್ತಿತ್ತ ಓಲಾಡಿ ಕುಲುಕುವ ದೀಪಕ್ಷಣ ಕ್ಷಣ ಚಂಚಲವಾಗಿಮತ್ತೆ ಧೃಡವಾಗುವಈ ಮನಸ್ಸಿನ ವಯ್ಯಾರದಷ್ಟೆ ಸಹಜ* ಕತ್ತಲೆಗೆ ತೋರಿಸಬೇಕು ಅಲ್ವಾಬೆಳಕು ತನ್ನ ಆಂತರ್ಯದ ಬಗೆಯನ್ನುಅದಕ್ಕೆ ದೀಪಾವಳಿಯಾಯಿತುಅಮವಾಸೆಯ ದಿನದಂದೇ ***********************************

ಬೆಳಕು Read Post »

tilaka nagaraj
ಕಾವ್ಯಯಾನ

ಮೌನ

ಕವಿತೆ ಮೌನ ತಿಲಕ ನಾಗರಾಜ್ ಹಿರಿಯಡಕ ನಾನು ಸುಮ್ಮನಿದ್ದೆನೀನೂ ಸುಮ್ಮನಾದೆ ನಿನ್ನೆದೆಯ ಭಾವಾಂತರಂಗದತುಡಿತಗಳ ಅರಿವತವಕ ನನ್ನೊಳಗಿತ್ತು… ದಿನ ಕಳೆಯುತ್ತಲೇ ಹೋಯಿತುಜಡಿದ ಮೌನದ ಬೀಗಬಿಚ್ಚದೆ ಅಲ್ಲೇ ತುಕ್ಕುಹಿಡಿದಿತ್ತು.. ಜತೆಗೆ ಹಿಡಿದ ಹಠವೂಕರಗದೆ ಹೆಪ್ಪುಗಟ್ಟಿತ್ತು..ನೀ ಸೋಲುವೆಯೋ?ಇಲ್ಲ ನಾನೋ?ಇಲ್ಲ ಯಾರಿಗೂ ಸೋಲುವ ಮನಸ್ಸಿಲ್ಲದೆ ಬದುಕುಕವಲು ದಾರಿಯಲ್ಲಿ ಸಾಗಿತ್ತುನೀ ಎಲ್ಲೋ… ನಾ ಇನ್ನೆಲ್ಲೋ.. *************************

ಮೌನ Read Post »

ಕಾವ್ಯಯಾನ

ಇನ್ನೆಷ್ಟು ತ್ಯಾಗ ಮಾಡಬೇಕು.

ಕವಿತೆ ಇನ್ನೆಷ್ಟು ತ್ಯಾಗ ಮಾಡಬೇಕು. ಅನಿಲ ಕಾಮತ ಒಡಲಲ್ಲಿ ನಿನ್ನ ಕುಲದ ಕುಡಿಯನುಜತವಾಗಿಸಿಕೊಂಡಿರುವೆನಿನ್ನ ಕೆಣಕಿಸಿ ಜನರುಉಡಾಫೆಯ ನಗು ನಕ್ಕರುನಿನ್ನನ್ನು ನಾನು ಸಂತೈಸಿರುವೆ ತಾಳ್ಮೆ ಕಳೆದುಕೊಂಡುಸೋತ ಮೊಗವ ಹೊತ್ತುಮನೆಯ ಮೂಲೆ ಸಂಧಿಯಲಿಕೂತಾಗ ನಗುವಲ್ಲೇ ತೇಲಿಸಿದ್ದೇನೆ ಮದಿರೆಯಲಿ ಮಿಂದೆದ್ದಾಗನಿನ್ನ ಮರ್ಯಾದೆ ಮುಕ್ಕಾಗದ ಹಾಗೆನಟಿಸಿದ್ದೇನೆಕೋಪಾಗ್ನಿಗೆ ಬೆನ್ನ ಮೇಲಿನಬರೆಗಳು ನಿನ್ನನ್ನೇ ದಿಟ್ಟಿ ಸುತ್ತಿವೆ ನಿನ್ನ ಬರುವಿಕೆಗಾಗಿಅದೆಷ್ಟು ಇರುಳನ್ನುಏಕಾಂತದಲ್ಲೇ ಕಳೆದಿದ್ದೇನೆನಿನ್ನ ಕಾಮದ ಜ್ವಾಲಾಮುಖಿಗೆಸುಟ್ಟು ಕರಕಲಾಗಿದ್ದೇನೆನಿನಗಾಗಿ ಇನ್ನೆಷ್ಟು ತ್ಯಾಗ ಮಾಡಬೇಕು… ***********************

ಇನ್ನೆಷ್ಟು ತ್ಯಾಗ ಮಾಡಬೇಕು. Read Post »

You cannot copy content of this page

Scroll to Top