ಗಜಲ್
ಕುರುಡರ ರಾಜ್ಯಕೆ ಶಶಿಯ ಹೊಂಬೆಳಕೇ?
ಸೋತು ಬರಲು ಬೇಕಿಲ್ಲ ಕಾರಣ ನಿನಗೆ
ಕವಿತೆ ತೆವಳುವುದನ್ನುಮರೆತ ನಾನು ವಿಶ್ವನಾಥಎನ್. ನೇರಳಕಟ್ಟೆ ನಾನು ತೆವಳುತ್ತಾ ಸಾಗುತ್ತಿದ್ದೆ‘ಎದ್ದು ನಿಂತರೆ ಚೆನ್ನಾಗಿತ್ತು’ಎಂದರವರು ಎದ್ದು ನಿಂತೆಅವರ ಬಾಯಿಗಳು ಸದ್ದು ಮಾಡಿದವು‘ನಿಂತರೆಸಾಲದು, ನಡೆಯಬೇಕು’ ನಡೆಯುತ್ತಾ ಹೊರಟೆ ಮತ್ತುಎಡವಿದೆ‘ಎಡವದೆಯೇನಡೆ’ ಎಂಬ ಸಲಹೆ ಎಡವದೆಯೇ ನಡೆಯುವುದನ್ನು ರೂಢಿಸಿಕೊಂಡೆ‘ಈಜುವುದು ಗೊತ್ತಿಲ್ಲವಲ್ಲ ನಿನಗೆ?’ ಎಲುಬಿಲ್ಲದ ನಾಲಗೆಗಳು ನನ್ನ ಕಿವಿಗೆ ಮುತ್ತಿಕ್ಕಿದವು ಮೀನಿನ ಅಪ್ಪನಂತೆ ಈಜಿದೆಮತ್ತು ಅವರ ಮುಖ ನೋಡಿದೆಅವರೊಳಗಣ ಅತೃಪ್ತ ಆತ್ಮ ಪಿಸುಗುಟ್ಟಿತು‘ಹಾರಲಾರೆ ನೀನು’ ಸವಾಲೇ ರೆಕ್ಕೆಗಳಾದವು ನನಗೆಹಾರತೊಡಗಿದೆ ಮತ್ತುಹಾರುತ್ತಲೇ ಇದ್ದೆ ಕೆಳಗನ್ನು ನೋಡಿದರೆಮತ್ತೆ ತುಟಿಗಳ ಪಿಟಿಪಿಟಿ-‘ಈಗ ತೆವಳುನೀನು, ಸಾಧ್ಯವಾದರೆ’ ತೆವಳ ಹೊರಟ ನಾನೀಗ ಪರಾಜಿತಏಕೆಂದರೆ, ಹಾರುವ ತರಾತುರಿಯಲ್ಲಿಮರೆತೇಬಿಟ್ಟಿದ್ದೇನೆ- ತೆವಳುವುದನ್ನು
ತೆವಳುವುದನ್ನುಮರೆತ ನಾನು Read Post »
ಕವಿತೆ ಜೀವದಾತೆ ಪ್ರಕೃತಿ ಮಾತೆ ಸುವಿಧಾ ಹಡಿನಬಾಳ ಹೇ ಪ್ರಭು , ಋತುರಾಜ ವಸಂತನೀ ಬಂದೆ ನಸುನಗುತಪ್ರಕೃತಿಗೆ ಹೊಸ ಕಳೆಯ ನೀಡುತ್ತಆದರೆ ಕಳೆದಿಲ್ಲ ಮನುಕುಲದದುಗುಡ ದುಮ್ಮಾನ ನಿನ್ನ ಆಗಮನದಿಂದ ! ಗಿಡಮರಗಳು ಹಸಿರೆಲೆ ಚಿಗುರು ಬಿಟ್ಟುಹೂ ಹಣ್ಣು ಕಾಯಿ ತೊಟ್ಟುಕೋಗಿಲೆ ಗಿಳಿ ಗೊರವಂಕಗಳುಲಿವಾಗಮನುಜನಿಗೇಕೆ ಈ ವಿಯೋಗ ? ಜೀವಸಂಕುಲವೆ ತಿಂದುಂಡು ನಲಿದುಹಾಯಾಗಿ ಇರುವಾಗ ನಿನ್ನದೆಒಂದು ಭಾಗ ಹುಲು ಮಾನವನಿಗೇಕೆಜೀವಭಯ ತಳಮಳ ತುಮುಲ? ಹೇ ಕಾಮಧೇನು ಕರುಣಾಮಯೀಪ್ರಕೃತಿ ಮಾತೆ ಜೀವದಾತೆನಿನ್ನ ಮೇಲೆ ಅಟ್ಡಹಾಸಗೈವಸ್ವಾರ್ಥ ನರನ ಮೇಲೆ ಕೋಪವೆಅಥವಾ ನಿನ್ನ ಬಲಿದಾನಕೆ ನೀನಿಟ್ಡ ಶಾಪವೆ? ಸಾಕು ಪ್ರಭು, ಸಹಿಸಲಾಗುತ್ತಿಲ್ಲಸಾವಿನ ಸರಣಿ ಓಟವಮುಗ್ಧ ಜನರ ನರಳಾಟವಕಂಬನಿ ತುಂಬಿದ ಕಣ್ಣ ನೋಟವ ಇನ್ನಾದರೂ ಬುದ್ಧಿ ಕಲಿತಾನು ಬಿಡುಅಧಿಕಾರ ಹಣದಾಸೆ ಅಹಂಕಾರ ಸೇಡುಕರುಣೆ ತೋರು ಮೊರೆಯ ಕೇಳುರಕ್ಷಿಸು ಮನುಕುಲವ ಹೇ ದಯಾಸಿಂದೂ…… *****************************************
ಜೀವದಾತೆ ಪ್ರಕೃತಿ ಮಾತೆ Read Post »
“ಅನ್ನದಾತನ ಸ್ವಗತ “ ಗೀತಾ ಅನಘ ಮುನಿನಸ್ಯಾಕೆ ತಾಯಿ ನನ್ನ ಮ್ಯಾಲ,ಕಾರ್ಖಾನೆ ಕಟ್ಟಿ ನಿನ್ನುಸಿರ ಮಲಿನ ಗೊಳಿಸಲಿಲ್ಲ,ರಾಜಕಾರಣಿಗಳಂತೆ ಸುಳ್ಳು ಭರವಸೆನೀಡಲಿಲ್ಲ,ಬ್ಯಾಂಕಿಗೆ ಸಾಲ ಕೇಳಿದೆ ಅಷ್ಟೇ,!!!!!!ಬೆಳೆ ಬಿತ್ತಲು,,,,,,,,,,,,,ಪಚ್ಚೆ ಪೈರು ಗಳಿಂದ ನಿನ್ನೊಡಲ ತುಂಬಲು,ಅದೇಕೋ ಕಾಣೆ ನಿನಗೂ ನನ್ನ ಮೇಲೆ ಮುನಿಸು,ಕೆಲವೊಮ್ಮೆ ಇಳೆಗೆ ಮಳೆಯ ಸುರಿಸದೆ,ನನಗೆಂದು ಮೀಸಲಿಟ್ಟ ನಿನ್ನ ದೇಹದ ಒಂದಿನಿತು ಭಾಗ ಬರಡಾಯಿತು,ಇನ್ನೊಮ್ಮೆ ಬಹಳಷ್ಟು ಮಳೆ ಬಂದು ಇಳೆ ನೆಂದು ನಿನ್ನೊಡಲ ಹಸಿರಾಗಿಸಿ ಫಸಲು ನೋಡಿ,ಸಂಭ್ರಮಿಸುವ ಸಮಯದಿಯಾಕೆ ನಿನ್ನಯ ರುದ್ರನರ್ತನ?! ಬಯಸಿದ್ದಕ್ಕಿಂತ ಹೆಚ್ಚು ಮಳೆರಾಯನ ಆರ್ಭಟ ಹೆಸರೆಂಬುದು ಪ್ರವಾಹ, ಮಾಧ್ಯಮಗಳಿಗೆ ಆಹಾರ, ನನಗೆ! ನನ್ನ ಗೂಡು,ಗುಡಿಸಲು, ಬೆಳೆ ಎಲ್ಲವನ್ನು ಕಳೆದುಕೊಂಡುಅನಾಥನಾಗಿ ಗಂಜಿಕೇಂದ್ರ ಸೇರಿದನೆಲ್ಲ,ಆಗ ನಮ್ಮಯ ಸ್ಥಿತಿ ಕಂಡು ಶ್ರೀಮಂತ ವರ್ಗದವರು ಮರುಗಿದರು.!!!!!!!!“ಛೇ ,,,,,ಪಾಪ”“ಅಯ್ಯೋ ಪಾಪ”“ಅಯ್ಯೋ ಬಿಡಿ ಪ್ರತಿವರ್ಷವೂ ಇವರದು ಇದೇ ಗೋಳು”ಅದ್ಯಾಕೋ ಅರಿವಾಗಲಿಲ್ಲ ಅವರಿಗೆ,ಅವರ ಕುಟುಂಬವು ಸವಿಯುತ್ತಿರುವ ಮೃಷ್ಟಾನ್ನ ಭೋಜನಕ್ಕೆ ಕಾರಣಕರ್ತರು ನಾವೆಂದು!!! ಎಲ್ಲವೂ ಸರಿ ಎನಿಸಿ, ಮಳೆ ಸಕಾಲದಲ್ಲಿ ಸಹಕರಿಸಿ ,ನಾನು ನನ್ನವರು, ನನ್ನ ಬಾಂಧವರು ಬೆವರು ಸುರಿಸಿ,ಬೆಳೆ ಬೆಳೆಸಿ,ದೂರದ ಕಂಡು ಕಾಣದ ಪ್ಯಾಟೆಗೆ ಬಂದರೆ,ಬೆಲೆ ಕುಸಿತ, ದಲ್ಲಾಳಿಗಳಿಂದಲೆ ತೊಂದರೆ,ಬ್ಯಾಂಕಿನ ಸಾಲ ವಿರಲಿ,“ಬೇಸಾಯ ಮನೆ ಮಂದಿಯೆಲ್ಲ ಸಾಯ”ಎಂಬ ಗಾದೆಮಾತಿನಂತೆ ಪರಿಶ್ರಮಕ್ಕೆ ಬೆಲೆ ಇಲ್ಲ,ಕೈಗಳು ಕಾಣಲಿಲ್ಲ ಕಾಂಚಾಣದ ಕಂತೆ,‘ದಲ್ಲಾಳಿಗಳೇಕೇ’ ನಾನೇ ಮಾರಿ ಬರುವೆ ಎಂದು ಬಂದ ನನಗೆ ದಿಕ್ಕು ತೋಚದಾಯಿತು.ಹೇಳಿದ ಬೆಲೆಗೆ ಅರ್ಧಕ್ಕೆ ಕೇಳುವ ಚೌಕಾಸಿ ಮಾಡುವ ಜನರಿಗೆ ನನ್ನ ನೋವು ಅರ್ಥವಾಗಲಿಲ್ಲ. ನನ್ನ ಮಗನನ್ನು ಇಂಗ್ಲೀಷ್ ಶಾಲೆಗೆ ಸೇರಿಸಲಿಲ್ಲ ,ಹಾಗಾಗಿ ಅವನ ಮಾತೃಭಾಷಾ ಪ್ರೇಮಕ್ಕೆ ದ್ರೋಹವಿಲ್ಲ ಅದುಮಾತ್ರವಲ್ಲ ನಮ್ಮನ್ನು ವೃದ್ಧಾಪ್ಯದಲ್ಲಿ ವೃದ್ಧಾಶ್ರಮಕ್ಕೆ ಸೇರಿಸಲಿಲ್ಲ,ಗುರು- ಹಿರಿಯರ ಬಗ್ಗೆ ಭಕ್ತಿಸಂಸ್ಕಾರ,ಶಾಲೆ ಕಲಿಕೆಗಿಂತ, ನಮ್ಮನ್ನು ನೋಡಿ ಕಲಿಯುತ್ತಾರೆ.ಎಂಬುದು ನಿಮಗೆ ಅರ್ಥವಾಗುವುದೇ ಇಲ್ಲ..ಇನ್ನೂ ನನ್ನಾಕೆ ಪೌಡರ್ ಪಾರ್ಲರ್ ಕಾಣದಾಕೆ ,ನನ್ನ ಮುನಿಸು, ನನ್ನ ನೋವು ಸಹಿಸು ವಾಕೆ.ಚಿಕ್ಕ ಚಿಕ್ಕ ವಿಚಾರಕ್ಕೆ ವಿಚ್ಛೇದನ ಕೇಳುವ ನಿಮ್ಮ ವಿಚಾರ ದಡಿಯಲ್ಲಿ ಸುಸಂಸ್ಕೃತಳು ಈಕೆ. ಇನ್ನು ವರ್ಷಕ್ಕೊಮ್ಮೆ ಬರುವ ಜಾತ್ರೆಯ ಸಡಗರ, ಸದ್ದಿಲ್ಲದೇ ಸಾಗುತ್ತಿದೆ ನಿರೀಕ್ಷಿಸದೆ ಆಡಂಬರ. ಹಾಗೆ, ಐದು ವರ್ಷಕ್ಕೊಮ್ಮೆ ಠಾಕುಠೀಕಾಗಿ ಬಂದು ಇಳಿಯುವಿರಿ ಕಾರಿನಲಿ,ಒಂದಷ್ಟು ಮುಗ್ಧ, ಒಂದಷ್ಟು ಪುಡಾರಿಗಳು ಮಿಂದೇಳುವ ರು ನಿಮ್ಮ ಮೋಸದ ಜಾಲದಲ್ಲಿ. ಓಟು, ನೋಟು ,ಬಿರಿಯಾನಿ ಮೋಹದ ಬರಾಟೆ, ನುಚ್ಚುನೂರಾಗಿಸಿ ನಮ್ಮಯ ನೆಮ್ಮದಿಯ ಕೋಟೆ . ನಿಮ್ಮಲ್ಲಿ ಯಾರೊಬ್ಬರಿಗೋ ಜಯಭೇರಿ,ತದನಂತರ ಯಾರಿಲ್ಲ ನಮ್ಮ ತಿಳಿಯಲು ನೋವಿನ ಪರಿ. ಒಮ್ಮೆ ಬಾರದ ಮಳೆಗಾಗಿ ಬೆಳೆ ಕಳೆದುಕೊಂಡೆ ,ಇನ್ನೊಮ್ಮೆ ಬೆಳೆದ ಬೆಳೆಗೆ ಬೆಲೆ ಕಾಣದೆ ಬಳಲಿದೆ ,ಮಗದೊಮ್ಮೆ ಅತಿವೃಷ್ಟಿ ತೀವ್ರತೆಗೆ ನಲುಗಿದೆ.ಕೊನೆಗೊಮ್ಮೆ ನಿರ್ವಿಕಾರ ದಿ,ಸಾಲದ ಬಾಧೆ ತಾಳಲಾರದೆ,ನನ್ನ ನೆಲದ, ಒಂಟಿ ಮರದ ರಂಬೆಗೆ,ನಾನೇ ತಂದ ಹಗ್ಗಕ್ಕೆ ,ನನ್ನ ಕರುಳಮಂದಿ ಮರೆತು ಕೊರಳ ಕೊಡ ಬಯಸುವೆ. ಯಾರನ್ನು ದೂಷಿಸಲಿ? ****************************
ಕವಿತೆ ಸ್ವಾರ್ಥ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗದ್ದುಗೆಯೇರಲುಹಣವನು ಎಸೆಯಿತುಗಳಿಕೆಯ ತೃಷೆಯಲಿನಶೆಯ ನೀಡಿತುಸ್ವಾರ್ಥದ ಮತವನು ಮುತ್ತಿ ಸಲಿಗೆಯ ಸುಲಿಗೆ ಮಾಡುತಒಸರುವ ಬೆವರಿನಬುತ್ತಿಯ ಕಟ್ಟಿತುನೆತ್ತರು ಹಿಚುಕಿ,ನೆಕ್ಕಿ ಕಾಡಿತುಕತ್ತಲು ಮುಕ್ಕಿ ಅನುದಿನ ಮತ್ತಿನಲಿಅಮೃತ ತುತ್ತಿನಲಿಕಡಲಾದರೂ ಕುಡಿದು,ಗತ್ತಿನಲಿ-ವಿಗತಿಯೆಡೆಗೆಒಂದನ್ಹತ್ತು ಸೇರಿಸಿತು ಸುಖದ ತಿರುಳ ಸವಿಯುತಸೇವಕನೆಂಬುದ ಮರೆಯಿತುಅಡಿಗೊಮ್ಮೆ ಜೊಳ್ಳ ನುಡಿದು,ಪರರ ಬಾದೆಯನರಿಯದೆನ್ಯಾಯ ನೀತಿ ಮಾತಾಡಿತು ಕೃತಕ ಕೀರ್ತಿಯ ಪಡೆಯಿತುವಿಕೃತ ಸೊಗದಲಿ ಹಾಡಿತುಸುಕೃತ ಭಾವವಿರದೆಅಂಬರವೇರಿಕೈ ಬೀಸಿ ಕರಗಿತು ಯಾರೋ ಬಿತ್ತಿದ ಬೀಜಹೂ-ಕಾಯಿಗಳ ಬಿಡದೆ ತಿಂದು,ಒಳಗು ಹೊರಗೂಗಿಡದ ಬುಡದನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.……************************
ಗಜಲ್ ಸಿದ್ಧರಾಮ ಹೊನ್ಕಲ್ ದಿನಾರಾತ್ರಿ ನೆನಪುಗಳ ಕಾಡಾಟ ಅತಿಯಾಗಿ ನಾಳೆಯಿಂದವಳ ಮರೆಯಬೇಕು ಅನ್ಕೋತೇನೆಇವಳಿಂದೆನಾಗಬೇಕಿದೆ ಈ ಮನಸಿಗರಾಯಳ ಸಹವಾಸವೇ ಬಿಟ್ಟು ಬಿಡಬೇಕು ಅನ್ಕೋತೇನೆ ಸಿಟ್ಟು ಸೆಡವು ದು:ಖ ಸೊಕ್ಕು ಸ್ವಾಭಿಮಾನ ನೆನಪಾಗಿ ಕ್ಷಣ ಹೀಗಂದುಕೊಂಡಿರುತ್ತೇನೆಅವಳು ಕೊಟ್ಟ ಕಂಫರ್ಟಲಿ ಶುಭರಾತ್ರಿ ಹೇಳಿ ಮನಸಾರೆ ಮರೆಯದಿರಬೇಕು ಅನ್ಕೋತೇನೆ ಬೆಳಿಗ್ಗೆ ಎದ್ದೊಡನೆ ಹಿಂದಿನದೇನು ನೆನಪಿಡದೆ ಹೃದಯದಿ ಶುಭೋದಯ ಹೇಳಿರುತ್ತೇನೆಮಾತು ಕಥೆ ಯಥಾ ರೀತಿ ಪ್ರೀತಿ ಮೂಗಿನ ತುದಿಯ ಕೋಪವಿರಬೇಕು ಅನ್ಕೋತೇನೆ ಅನುನಯದ ಮಾತಿಗಿಂತ ಕೋಪತಾಪದ ಮಾತು ತುಸು ಜಾಸ್ತಿ ಆಗಿದೆಯೇನೋಆದರೇಕೋ ಬಿಟ್ಟೆನೆಂದರೂ ಬಿಡದೀ ಮೋಹ ಸದಾ ಸಂಗದಲ್ಲಿರಬೇಕು ಅನ್ಕೋತೇನೆ ಅವಳಿಗೆ ಏನಿವೆಯೋ ಸಂಕಟ ಹೇಳಲಾರಳು ಕೇಳಿ ಇರಲೆಂದು ಸಂತೈಸುವ ಹೃದಯವಂತೆಹೊನ್ನಸಿರಿ’ಬದುಕಿರಲಾರ ಅನುರಾಗದಿ ಸದಾ ನೀನು ಜೊತೆಗಿರಲೇಬೇಕು ಅನ್ಕೋತೇನೆ *********************************
ಮುಗಿಯದ ಕನವರಿಕೆಗಳ ನಡುವೆ
ಜೀವ ಬಾರದ ಕಲ್ಪಿನೆಗಳಿಗೆ ಕಡಿವಾಣ ಹಾಕಲಾಗದೆ ಮುನಿಸಿಕೊಂಡ ರಾತ್ರಿಗಳು
ಆಗೆಲ್ಲಾ ಒದ್ದೆಯಾಗುತ್ತಿದ್ದದ್ದು ಅಮ್ಮನ ಮಡಿಲು.
ಕಲ್ಪನೆಗೂ ಜೀವ ಬರುವಂತಿದ್ದರೆ Read Post »
You cannot copy content of this page