ಕೊನೆ ಆಗುವ ಮೊದಲು
ಕವಿತೆ ಕೊನೆ ಆಗುವ ಮೊದಲು ಅಕ್ಷತಾ ಜಗದೀಶ ಬಿಸಿಲು ಕುದುರೆ ಬೆನ್ನತ್ತಿಓಡಿದೆ ಮನವು ಕಾಲ್ಕಿತ್ತಿಬಯಸಿದ್ದು ಎಲ್ಲಿಯು ಸಿಗದೆ ಹೋಯ್ತುಕಾದ ಜೀವಕೆ ಈಗ ಸುಸ್ತಾಯ್ತು… ಕಾಲವದು ಕಣ್ಮುಂದೆ ಕರಗುತಿದೆಕೈಗೆ ಸಿಲುಕದೆ ಮರೆಯಾಗುತಿದೆಎಲ್ಲವೂ ಬಹುಬೇಗ ಸಾಗುತಿದೆನಾನೇಕೋ ನಿಧಾನವಾದೆನೋ ಎನಿಸುತಿದೆ……. ಎಲ್ಲೋ ಒಂದು ಸಣ್ಣ ಹೊಳಪುಪದೇ ಪದೇ ಅದೇ ಹಳೆ ನೆನಪುಬಾಡಿ ಹೊಗುವ ಮೊದಲೆ ಹೂ..ಮುಡಿ ಸೇರಲಾರದ ನೋವು.. ಮರುಭೂಮಿಯಲ್ಲಿ ಕಾಣಬಹುದೇ ಒರತೆ…ಸಣ್ಣ ಆಸೆ ಇಟ್ಟು ಬರೆದೆ ಈ ಕವಿತೆಕಳಿಸಿಕೊಡುವೆ ದೇವ ಈ ಬರಹ ನಿನಗೆಹೊಸ ಚಿಲುಮೆ ಉಕ್ಕಲಿಬಾಳಿಗೆ ಪೂರ್ಣವಿರಾಮ ಇಡುವ ಮೊದಲು……… *********************************************









