ಗಜಲ್
ಗಜಲ್ ಕೆ.ಸುನಂದಾ ನಿನ್ನ ಕಂಡ ಕ್ಷಣದಿಂದ ಆನಂದದ ಭಾಷ್ಪಗಳು ಸುರಿಯುತಿದೆ ಗೆಳೆಯಆಡಿದ ಮಾತುಗಳೆಲ್ಲ ಮಧುರ ಸಂಗೀತದಂತೆ ಸೆಳೆಯುತಿದೆ ಗೆಳೆಯ ಅದೆಷ್ಟೋ ವರ್ಷಗಳಿಂದ ಕದಲದೆ ಕಾಯುತ್ತಿರುವೆ ನೀನು ಬರುವೆ ಎಂದುವಸಂತನ ಆಗಮನದ ಆನಂದವಿಂದು ನಮ್ಮಲಿ ಉಲಿಯುತಿದೆ ಗೆಳೆಯ ಮೌನವೆ ಎನ್ನ ಬದುಕೆಂದು ದೂಡುತ್ತಲಿದ್ದೆ ಕಹಿಯಾದ ಕ್ಷಣಗಳನ್ನುಬರಡಾದ ಭೂವಿಗೆ ವರ್ಷಧಾರೆ ಬಂದಂತೆ ಹರ್ಷ ಮೆರೆಯುತಿದೆ ಗೆಳೆಯ ಪವಿತ್ರ ಪ್ರೇಮಕೆ ಆತಂಕಗಳು ಹೆಚ್ಚು ಕೊನೆಗೆ ಜಯ ಸಿಕ್ಕೇಸಿಗುವುದುಅಂತರಂಗದ ಖುಷಿಗೆ ಅಂತರಾತ್ಮದ ನಂದಾದೀಪ ಉರಿಯುತಿದೆ ಗೆಳಯ ಸರ್ವಸ್ವವೂ ನೀನೆ ಎಂದು ನಂಬಿದ್ದ “ನಂದೆ”ಗೆ ಮೋಸ ಆಗದುವಿಶ್ವಾಸಕ್ಕೆ ಇನ್ನೊಂದು ಹೆಸರೇ ನೀನು ಸಂತಸ ಹರಿಯುತಿದೆ ಗೆಳೆಯ *************************************









