ಗಜಲ್
ಗಜಲ್ ಶ್ರೀ ಲಕ್ಷ್ಮಿ ಅದ್ಯಪಾಡಿ ನಿನ್ನ ಉಸಿರ ರಾಗಕ್ಕಾಗಿ ಹುಡುಕಾಡುತ್ತಿರುವೆನಿನ್ನ ಒಲವ ಪಿಸುನುಡಿಗಾಗಿ ಹುಡುಕಾಡುತ್ತಿರುವೆ.. ಕದ್ದು ನೋಡುವ ಸಾವಿರಾರು ಕಣ್ಣುಗಳ ನಡುವೆನಿನ್ನ ಪ್ರೇಮದ ನೋಟಕ್ಕಾಗಿ ಹುಡುಕಾಡುತ್ತಿರುವೆ.. ನನ್ನ ಕುಡಿ ನೋಟಕ್ಕೆ ಕಾದಿವೆ ನೂರು ಭ್ರಮರಗಳುಕೆನ್ನೆ ಸವರಿದ ಪುಟ್ಟ ಹೂವಿಗಾಗಿ ಹುಡುಕಾಡುತ್ತಿರುವೆ.. ಬಣ್ಣಗಳಲ್ಲಿ ಅದ್ದಿದ ಸಾವಿರ ಕುಂಚಗಳು ಕಾದಿವೆನಿನ್ನ ನೆನಪಿನ ಒಂದು ರೇಖೆಗಾಗಿ ಹುಡುಕಾಡುತ್ತಿರುವೆ ಜಗದ ಬನದೊಳು ಅರಳಿವೆ ವಿಧವಿಧವಾದ ಹೂಗಳುಒಡಲ ಕಂಪು ಸೂಸಿದ ಕಸ್ತೂರಿಗಾಗಿ ಹುಡುಕಾಡುತ್ತಿರುವೆ *****************************









