ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನವನು

ಕವಿತೆ ನನ್ನವನು ಅನಿಲ ಕಾಮತ ಮದಿರೆಯ ಅಮಲಿನಲ್ಲಿದ್ದಾಗಕೈಹಿಡಿದು ಕುಳುಣಿಸಿದ್ದೇನೆಹಸಿವಿನಿಂದ ಒಡಲುಉರಿ ಎದ್ದರುಒಡಲು ತುಂಬಿದವರಂತೆನಟಿಸಿರುವೆ ಮಾನನಿಯರ ಸಂಘದಲ್ಲಿಮುಳುಗಿದರುಮೌನ ಮುರಿಯದಿರುವೆಮೈಯ ಮೇಲಿನಬರೆ ಸರಿಕರಿಗೆಸಣ್ಣ ಗುಮಾನಿಯೂಬರೆದ ಹಾಗೆಸೀರೆಯಿಂದಸುತ್ತಿಕೊಂಡಿರುವೆರಂಡೆ ಮುಂಡೆಯಬೈಗಳಿಗೆ ದಿನಂಪ್ರತಿಆಹಾರವಾಗಿರುವೆನಿನ್ನ ಸಿಟ್ಟಿಗೆ ಅದೆಷ್ಟು ಸಲನಾನು ಆಹುತಿಯಾಗಿರುವೆಏಕೆಂದರೆ ನೀನುನನ್ನವನು…………. ******************************************************

ನನ್ನವನು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಎ. ಹೇಮಗಂಗಾ ವಿರಹ ಹೃದಯಕೆ ಹೊರೆಯಾಗುತಿದೆ ತೊರೆದು ಹೋಗದಿರು ನನ್ನಸನಿಹ ನೀನಿರದ ಕೊರಗು ಕೊರೆಯುತಿದೆ ತೊರೆದು ಹೋಗದಿರು ನನ್ನ ಹೊಂಬೆಳಕ ಸೂರ್ಯನೂ ಕೆಂಡದಂತೆ ಸುಡುವನು ನಿಷ್ಕರುಣಿಯಾಗಿಕುದಿಎಸರಿನಂತೆ ಮನಸು ಕುದಿಯುತಿದೆ ತೊರೆದು ಹೋಗದಿರು ನನ್ನ ಭಾವ ಸಂವಹನಕೆ ಬರಿಯ ಕಂಗಳೇ ಸಾಕು ಮಾತಿನ ಹಂಗಿಲ್ಲ ನನಗೆಎದೆಗೂಡಲಿ ಪ್ರೀತಿದೀಪವಿನ್ನೂ ಬೆಳಗುತಿದೆ ತೊರೆದು ಹೋಗದಿರು ನನ್ನ ಸುಖವೆಲ್ಲಿದೆ ಒಂಟಿ ಬಾಳಲ್ಲಿ ನಿನ್ನ ಕೂಡಿ ಒಡನಾಡದ ಹೊರತು ?ಮಧುಪಾನಕೆ ಅಧರ ಹಂಬಲಿಸುತಿದೆ ತೊರೆದು ಹೋಗದಿರು ನನ್ನ ತನುವಿಂದು ಕೊರಡಾಗಿ ಬಾಡಿದೆ ಹಿತ ಸಂವೇದನೆಯ ಸ್ಪರ್ಶವಿರದೇಅಪ್ಪುಗೆಯ ಬಿಸುಪು ನೆನಪಾಗಿ ಕಾಡುತಿದೆ ತೊರೆದು ಹೋಗದಿರು ನನ್ನ ನನ್ನ ಮರೆತು ಬದುಕುವುದು ಬದುಕೇ ಅಲ್ಲವೆಂದು ಹಳಹಳಿಸಿದ್ದೆಜೀವ ಸಹಿಸಲಾಗದ ನೋವ ಸಹಿಸುತಿದೆ ತೊರೆದು ಹೋಗದಿರು ನನ್ನ ಬುವಿಯೊಂದು ಗೋಲ ಮರಳಲೇಬೇಕು ‘ಹೇಮ’ ಳೆಡೆಗೆ ಕೊನೆಗೊಮ್ಮೆಹೊಸಬದುಕು ನಮಗಾಗಿ ಕಾಯುತಿದೆ ತೊರೆದು ಹೋಗದಿರು ನನ್ನ ******************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ಚಳಿಯ ನಿನ್ನಯ ಆಲಿಂಗವನ್ನು ಬಯಸುತಿದೆಒಂಟಿತನ ನಿನ್ನಯ ಜೊತೆಯನ್ನು ಬಯಸುತಿದೆ ಬದುಕಿನಲ್ಲಿ ಬಹು ದೂರ ಸಾಗಬೇಕಾಗಿದೆ ನಾನುಜೀವನವು ನಿನ್ನಯ ಸನಿಹವನ್ನು ಬಯಸುತಿದೆ ನನ್ನೆದೆಯ ಗೂಡು ಹಾಳುಬಿದ್ದ ಕೊಂಪೆಯಾಗಿದೆನನ್ನ ಹೃದಯವು ನಿನ್ನ ಬಡಿತವನ್ನು ಬಯಸುತಿದೆ ತಿಂದ ಅನ್ನ ರುಚಿಯೆನಿಸುತಿಲ್ಲ ಮುದ್ದು ಬಂಗಾರಿಜೀವವು ನಿನ್ನ ಪ್ರೀತಿಯ ಕೈತುತ್ತನ್ನು ಬಯಸುತಿದೆ ‘ಮಲ್ಲಿ’ಯ ಮೈ-ಮನವು ಮರೆತಿದೆ ಬದುಕುವುದನ್ನುಬರಡಾದ ಬಾಳು ನಿನ್ನ ಸಾಂಗತ್ಯವನ್ನು ಬಯಸುತಿದೆ

ಗಜಲ್ Read Post »

ಕಾವ್ಯಯಾನ

ನಾಲ್ಕು ದಿನದ ಪಯಣ

ಕಾವ್ಯಯಾನ ನಾಲ್ಕು ದಿನದ ಪಯಣ ತೇಜಾವತಿ ಹೆಚ್.ಡಿ. ಪ್ರವಾಹವೋ ಬಿರುಗಾಳಿಯೋಚಂಡಮಾರುತವೋ ಜ್ವಾಲಾಮುಖಿಯೋ ಸುನಾಮಿಯೋ… ಯಾವುದೋ ಒಂದು ವಿಕೋಪಬಂದೆರಗಲೇಬೇಕುನವನೆಲೆ ರೂಪಾಂತರವಾಗಲುಹೊಸ ಅಲೆ ಪ್ರಸಾರವಾಗಲು… ಬೇಕಾದದ್ದು ಬೇಡವಾಗಿಬೇಡವಾದದ್ದು ಬೇಕಾಗಿಕಸ ರಸವಾಗಿ, ರಸ ಕಸವಾಗಿಎಲ್ಲವೂ ತಲೆಕೆಳಾಗಾಗುವವಿಚಿತ್ರ ಸತ್ಯ-ಮಿಥ್ಯ ಪ್ರತಿಬಿಂಬಗಳ ದರ್ಶನವಾಗಲು…ಓ ಕಾಲನೇ… ವಜ್ರಕ್ಕಿಂತಲೂ ನೀನೆಷ್ಟು ಕಠೋರ.. ನಿನ್ನನುಗ್ರಹವಿದ್ದರೆಹೂವಿನ ಮೇಲಿನ ನಡಿಗೆಇಲ್ಲದಿದ್ದರೆ..ಕತ್ತಿಯ ಮೇಲಿನ ನಡಿಗೆಮುಟ್ಟಿದ್ದೆಲ್ಲಾ ಮಲ್ಲಿಗೆಯಾಗಿಸುವ ನಿನಗೆತಾಕಿದ್ದೆಲ್ಲ ನಂಜಾಗಿಸುವ ಕಲೆಯೂ ಕರಗತವಾಗಿದೆ ಬಿಡು.. ಎಂದಾದರೂ ನಿನ್ನಂತರಗವ ಅಳೆಯಲಾದೀತೇ…?ಈ ಕ್ಷಣಿಕದ ಗೊಂಬೆಗಳು..! ದಾನ ಮಾಡಿದ ಕರಗಳು ಬೇಡುವುದೆಂದರೇನು..ತನ್ನಸ್ತಿತ್ವವ ಪರರ ವಶದಲ್ಲಿಟ್ಟುನಶ್ವರದ ಬಾಳು ಬದುಕುವುದೆಂದರೇನು.. ನೂರೊಂದು ಮನೆಗಳ ಬೆಳಗಾಗಿದ್ದ ಬೆಳಕುಕತ್ತಲಕೋಣೆಯಲ್ಲಿ ಕೊಳೆಯುವುದೆಂದರೇನು…ದೃಷ್ಟಿ ಕಳೆದುಕೊಂಡ ನಯನಗಳುಎಲ್ಲಿದ್ದರೇನು… ಎಂತಿದ್ದರೇನು? ಭೂಮಿ ತಿರುಗುವುದುಕಾಲ ಉರುಳುವುದುಕಾಡು ನಾಡಾಗಿ, ನಾಡು ಕಾಡಾಗಿನೆಲ ನೀರಾಗಿ, ನೀರು ನೆಲವಾಗಿದೇಹ ಮಣ್ಣಾಗಿ, ಜೀವ ಹಾರಿಹೋಗಿ ಆತ್ಮ ಅಮರವಾಗುವುದು…. ಇದಿಷ್ಟೇ ತಾನೇ…ನಾಲ್ಕು ದಿನದ ಪಯಣ..ಇದಿಷ್ಟೇ ತಾನೇ..ಮುಕ್ತಗುಟ್ಟು… **************************

ನಾಲ್ಕು ದಿನದ ಪಯಣ Read Post »

ಕಾವ್ಯಯಾನ

ಸಾವಿತ್ರಿ

ಕವಿತೆ ಸಾವಿತ್ರಿ ಡಾ.ಸುರೇಖಾ ರಾಠೋಡ ವೀರ ಮಹಿಳೆ ಸಾವಿತ್ರಿಅಕ್ಷರದ ಅವ್ವ ಸಾವಿತ್ರಿ ಅಕ್ಷರ ಕಲಿಯಲು ಹೊರಾಡಿದಅಕ್ಷರ ಕಲಿಸಲು ಶ್ರಮಿಸಿದವೀರ ಮಹಿಳೆ ಸಾವಿತ್ರಿ ದಿನ ದಲಿತರ ಶಿಕ್ಷಣಕ್ಕಾಗಿನಿಂದನೆ, ಅಪಮಾನ, ಅವಮಾನಗಳನ್ನುಸಹಿಸಿದ ವೀರ ಮಾತೆ ಸಾವಿತ್ರಿ ಬಡವಬಲ್ಲಿದವರೆನ್ನೆದೆ ಎಲ್ಲರಸೇವೆ ಮಾಡಿದದೇಶದ ಮೊದಲ ಶಿಕ್ಷಕಿಮೊದಲ ಮುಖ್ಯೋಪಾಧ್ಯಾಯಿನಿಸಾವಿತ್ರಿ ಮಹಿಳಾ ಶಿಕ್ಷಣಕ್ಕಾಗಿ ಜೀವನವನ್ನೇಮುಡುಪಾಗಿಟ್ಟವೀರ ಮಾತೆ ಸಾವಿತ್ರಿ ಜ್ಯೋತಿ ಬಾ ಪುಲೆಯವರೊಂದಿಗೆಶಾಲೆಗಳನ್ನು ತೆರೆದ ಶಿಕ್ಷಣದಾತೆಸಾವಿತ್ರಿ ಜನರ ಕೆಂಗಣ್ಣಿಗೆ ಗುರಿಯಾಗಿಸಂಪ್ರದಾಯಸ್ಥರನ್ನು ಎದುರು ಹಾಕಿಕೊಂಡುದಿಟ್ಟತನದಿಂದ ಮುಂದೆ ನಡೆದದಿಟ್ಟ ಮಹಿಳೆ ಸಾವಿತ್ರಿ ಶಾಲಾ ಮಕ್ಕಳ ಬೇಕು ಬೇಡಗಳನ್ನುಕುಂದುಕೊರತೆಗಳನ್ನು ನಿಗಿಸಿದಸಹನಾಮಯಿ ಸಾವಿತ್ರಿ ಶಿಕ್ಷಣದ ಜೊತೆಗೆಜೀವನ ಕೌಶಲ್ಯ ಕಲಿಸಿದಜೀವನವಿಧಾತೆ ಸಾವಿತ್ರಿ ರೂಢಿ, ಸಂಪ್ರದಾಯ, ಸಮಾಜಿಕರಣದಕಟ್ಟಳೆಗಳನ್ನು ಮುರಿದು ಶವಸಂಸ್ಕಾರವ ಮಾಡಿದ ಧೈರ್ಯವಂತೆ ಸಾವಿತ್ರಿಅಕ್ಷರದವ್ವ ಸಾವಿತ್ರಿಮೊದಲ ಶಿಕ್ಷಕಿ ಸಾವಿತ್ರಿ ***********************

ಸಾವಿತ್ರಿ Read Post »

ಕಾವ್ಯಯಾನ

ಕಾದಿದೆ ಮುಂಬೆಳಗು

ಕವಿತೆ ಕಾದಿದೆ ಮುಂಬೆಳಗು ಯಮುನಾ.ಕಂಬಾರ ಕಾದಿದೆ ಮುಂಬೆಳಗುಹೊಸ ವರುಷದ ಹೊಸ್ತಿಲಲಿಹುಡುಕುತ್ತಿದೆ – ತೆರೆದ ಬಾಗಿಲುಗಳಿಗೆ !! ತಡಕಾಡುತ್ತಿದೆ – ಕತ್ತಲಲಿಬಚ್ಚಿಟ್ಟ ಪ್ರೀತಿ ಸಹಕಾರಗಳಿಗಾಗಿದೂರಕೆ ಹರಿದ ಬೇರುಗಳು ಸಿಗದೇ – ನರಳುತಿದೆ !! ತನ್ನ ಕೈ ಕೊಸರುತಿದೆ – ಜಾತಿಯ ಜಾಲಗಳಲ್ಲಿ ಸಿಕ್ಕುವಾಗ್ವಾದ ನಡೆಸುತಿದೆ – ಮನುಷ್ಯನ ಬರುವು ನಿರ್ಗಮನ – ಕೇವಲ ಬರಿ ಮೈ ಎಂದು‌!! ತನ್ನ ಅಸ್ಮಿತೆ ಹಾಳಾಗದಿರಲೆಂದುರಾತ್ರಿ ಕಣ್ಣಾಗಿ ತೆರೆದುಕೊಂಡೇ ನಿಂತಿದೆ.ಶ್ರಮವು ವ್ಯರ್ಥವಾಗದಿರಲೆಂದುಮುಗಿಲಿಗೆ ಮುಖಮಾಡಿ ಗೋಳಿ ಡುತಿದೆ – ಈ ಬದುಕು ಶುಭವಾಗಲೆಂದು !! ತನ್ನ ಶಕ್ತಿ ಸಾಮರ್ಥ್ಯಗಳು ನಾಡ ಹಬ್ಬಕೆ ಎಂದುಮೂಡಲಿ ಕ್ಢಿತಿಯಲಿ ಹೊಸ ದಿಗಂತ ತೆರೆದುಒಂದಾದರೂ ಹೆಜ್ಜೆ ಗುರುತು ಉಳಿಯಲಿ ಎಂದು !!. ಬಹು ಆಸೆ ಹೊತ್ತು ಬಂದಹೊಂಗನಸುಹೂವಾಗಿ ಅರಳಲಿ ಎಂದು ಹಲಬುತಿದೆಹಣ ಅಧಿಕಾರಗಳ ಬಂಡೆ ಗಲ್ಲಿಗೆ ಸಿಕ್ಕಿಕೊಂಡು !! *********************************************

ಕಾದಿದೆ ಮುಂಬೆಳಗು Read Post »

ಕಾವ್ಯಯಾನ

ಹೊಸತು ಉದಯಿಸಲಿ

ಕವಿತೆ ಹೊಸತು ಉದಯಿಸಲಿ ಪ್ರತಿಮಾ ಕೋಮಾರ ನೋವ ಕರಿ ಛಾಯೆಹಿಡಿದೇ ಹೊಸ್ತಿಲೊಳಗೆ ಬಂದೆಅನುಕಂಪದ ಲವ ಲೇಷವೂಇಲ್ಲದೇ ಇಡೀ ವರುಷ ನಿಂದೆ ನಲಿವಿನ ಬಯಲಲ್ಲಿ ನೋವಿನಬೀಜವನು ಬಿತ್ತಿ ನೀರೆರೆದುಬಲವಾಗಿ ಬೆಳೆದೆಬೀಗಬೇಡ ಬಾಗು ಎಂಬಪಾಠ ಪ್ರತಿ ಎದೆಯೊಳಗೆ ಬರೆದೆ ಇಪ್ಪತ್ತರ ವರುಷಮಾಯವಾಗಿಸಿದೆ ಹರುಷಬದುಕು ಬೆಳಗಿಲ್ಲನಡೆಸಿದೆ ಕತ್ತಲೊಳಗೆಉಸಿರ ಬಿಗಿ ಹಿಡಿದು ಈಗ ಹೊರಟಿದ್ದೀಯಾದೊಡ್ಡ ಪಾಠವನು ಕಲಿಸಿಎಂದೂ ಎಚ್ಚರ ತಪ್ಪದ ಹಾಗೇಹಳೆಯಂಗಿ ಕಳಚಿಹೊಸದಾಗಿ ಕಾಲಿಟ್ಟ ಇಪ್ಪತ್ತೊಂದುತೊಳೆದುಬಿಡು ಹಳೆ ಕೊಳೆಯ ನೀರೆರೆ ತುಸು ಬತ್ತಿದ ಕನಸುಗಳಿಗೆಉದಯಿಸಲಿ ಹೊಸತು ಕಾಂತಿಎಲ್ಲರ ಕಂಗಳಲಿಗತವು ಮತ್ತೇ ಮರುಕಳಿಸದ ಹಾಗೇಹೊಸ ಹರುಷಕೆ ಮುನ್ನುಡಿ ಗೀಚಿಬಿಡು *******************************

ಹೊಸತು ಉದಯಿಸಲಿ Read Post »

ಕಾವ್ಯಯಾನ

ಶ್ರಮಿಕ

ಕವಿತೆ ಶ್ರಮಿಕ ಡಾ.ಜಿ.ಪಿ.ಕುಸುಮ, ಮುಂಬಯಿನನ್ ತಾಯಿ….ನೀ ಗೆಲ್ಲಬೇಕೆಂದುನಾ ನಿಂತೆ ಒಳಗೆ.ದೂರ ದೂರದವರೆಗೆಯಾರೂ ಇಲ್ಲ ಹೊರಗೆ.ಗಲ್ಲಿಗಲ್ಲಿಗಳಲ್ಲಿ ಮೌನ ಮಲಗಿದೆಮಣ್ಣು ಒಣಗಿದೆ.ನನ್ನೆದೆ ಗೂಡು ಒದ್ದೆಯಾಗ್ತಿದೆನಿನ್ನ ಬಿಟ್ಟು ಹೋಗೊಕಾಗಲ್ಲಹೋದ್ರೆ ಹೋದಲ್ಲಿಬದುಕೋಕಾಗಲ್ಲ.ನನ್ನ ದಿನ, ನನ್ನ ರಾತ್ರಿನನ್ನ ಸೋಲು, ನನ್ನ ಗೆಲುವುಎಲ್ಲವೂ ನೀನೆ..ನೀ ಯಾವತ್ತೂ ಹೀಗೆಮನೆಬಾಗಿಲು ಮುಚ್ಕೊಂಡುಮೂಕಿಯಾಗಿದ್ದಿಲ್ಲ.ಅಂಗಾಂಗ ಸುಟ್ಟುಕೊಂಡಾಗ್ಲೂಮಳೆನೀರು ಮುಳಗಿಸಿದಾಗ್ಲೂಭಯ ಗೆದ್ದಿಲ್ಲ…ಇದೀಗ ಏನಾಯ್ತೋ ತಾಯಿಕಾಣದ ವೈರಿಗೆಎಷ್ಟೊಂದು ಸೊರಗಿದೆ.ಹಳಿತಪ್ಪಿದೆ ನೋಡು ಬದುಕಬಂಡಿಸ್ವಪ್ನನಗರಿಯಲ್ಲೀಗಬದುಕು ಘಮಘಮಿಸುವುದಮರೆತಿದೆ.ಬರಿಗಾಲಲಿ ಬರಿಕಿಸೆಯಲಿಬರಿಹೊಟ್ಟೆಗೆ ಕೈಯನಿಟ್ಟುನೆತ್ತಿಮೇಲೆರಡು ಪ್ಯಾಂಟು ಶರ್ಟುರಾಶಿ ಬಿಸಿಲ ಸೀಳಿಕಾಲನ್ನೆತ್ತಿ ಹಾಕುತಸಾಗ್ತೇನೆ ನಾನುಹೊಸ ಕನಸುಗಳ ನೇಯಲುತೀರ ಬಿಟ್ಟುಸಾಗರವ ದಾಟಲು. ***************************

ಶ್ರಮಿಕ Read Post »

ಕಾವ್ಯಯಾನ

ಹುನ್ನಾರ

ಕವಿತೆ ಹುನ್ನಾರ ಡಾ.ಸುರೇಖಾ ರಾಠೋಡ ಕಾಲಲಿ ಗೆಜ್ಜೆ ಹಾಕಿನನ್ನ ಚಲನವಲನನಿಯಂತ್ರಿಸುವಹುನ್ನಾರ ನಿನ್ನದು ಕೊರಳಲಿ ತಾಳಿ ಕಟ್ಟಿನನ್ನ ತಾಳ್ಮೆಪರೀಕ್ಷಿಸುವಹುನ್ನಾರ ನಿನ್ನದು ಕೈಯಲ್ಲಿ ಕೈ‌ಬಳೆ ತೊಡಿಸಿಏನು ಮಾಡದಂತೆಕೈಕಟ್ಟಿ ಹಾಕುವಹುನ್ನಾರ ನಿನ್ನದು ಹಣೆಗೆ ನಿನ್ನ ಹೆಸರಿನಕುಂಕುಮವ ಹಚ್ಚಿಸಿಹಣೆಯ ಬರಹವೆನಿನ್ನದಾಗಿಸಿಕೊಳ್ಳುವಹುನ್ನಾರ ನಿನ್ನದು ಕಾಲಿನ ಬೆರಳುಗಳಿಗೆಕಾಲುಂಗುರವ ತೊಡೆಸಿನಡೆಯನ್ನೆ ಕಟ್ಟಿ ಹಾಕುವಹುನ್ನಾರ ನಿನ್ನದು ಎಲ್ಲವ ತೊಡಿಸಿಕಟ್ಟಿ ಹಾಕಿರುವೇ ಎಂದುನೀ ಬಿಗುತ್ತಿರುವಾಗ …ನನ್ನ ಮನಸ್ಸನ್ನುಕಟ್ಟು ಹಾಕಲುಸಾಧ್ಯವೇ?… *********************************************************

ಹುನ್ನಾರ Read Post »

ಕಾವ್ಯಯಾನ

“ಶಾವಾ”ತ್ಮ ಪದಗಳು

ಮನದ ಮಾತು ಶಾಂತಿವಾಸು ಮನಸನ್ನೊಂದು ಮಾತು ಕೇಳು….ಹುಟ್ಟಿನಿಂದ ಕಲಿತು, ಸರಿತಪ್ಪುಗಳನ್ನರಿತು, ಲೋಕಾರೂಢಿಯನುಭವ ಪಡೆದರೇನು? ಕಾರ್ಯಸಿದ್ದಿಗೆ,ಮನಸನ್ನೊಂದು ಮಾತು ಕೇಳು…. ಮನಕ್ಕೊಪ್ಪುವ ಕೆಲಸ ಮಾಡು….ಯಾರೆಷ್ಟು ನಿಂದಿಸಲೇನು? ನಿನ್ನೆತ್ತರವನ್ಹೊಗಳಲೇನು? ತಟಸ್ಥ ಮನಕೆ ಶಕ್ತಿ ತುಂಬಿ ಆತ್ಮತೃಪ್ತಿಯಿಂದ,ಮನಕ್ಕೊಪ್ಪುವ ಕೆಲಸ ಮಾಡು…. ಮನವನೊಮ್ಮೆ ಇಣುಕಿ ನೋಡು….ಎಲ್ಲವೂ ನಿನದಾಗಿ ಕಂಡರೂ, ಬಂದುದು ಕೈತಪ್ಪಿ ಹೋಗಲು ನೆಪವೊಂದಿದೆಯೆಂಬ ಸತ್ಯವರಿತ,ಮನವನೊಮ್ಮೆ ಇಣುಕಿ ನೋಡು…. ಮನಸಿಗೊಂದು ಮಾತು ಹೇಳು…ಜಗದೆಲ್ಲವೂ ನೀನಲ್ಲ, ಜಗದಲ್ಲಿಹುದೆಲ್ಲವೂ ನಿನದಲ್ಲ. ಇರುವರರಿತು, ಬಾಳಲದುವೇ ಬದುಕೆಂದು,ಮನಸಿಗೊಂದು ಮಾತು ಹೇಳು…. *****************************

“ಶಾವಾ”ತ್ಮ ಪದಗಳು Read Post »

You cannot copy content of this page

Scroll to Top