ಗಜಲ್
ತೀರದ ದನಿ ಆರದ ಬೆಳಕು ಅರಸಿ ಹೊರಟಿರುವೆನು ನಾನೀಗ
ಹಳೆ ನಾಗರಿಕತೆಗೆ ಹೊಸ ತೊಟ್ಟಿಲು ಕಟ್ಟುತ್ತಿದ್ದಾರೆ ನೀನು ಹಾಗೇ ನೋಡುತ್ತಿರು
ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ
ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ
ಇತಿಹಾಸದ ಯಾವ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ ಹಿಡಿದು
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು
ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ
ಹುಟ್ಟು ತಿರುಗಿಸುವ ಹರೆಯದ ಮಗಳು
ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು
ಅಮ್ಮ ಬಿಕ್ಕಳಿಸಲಿಲ್ಲ
ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ? Read Post »
You cannot copy content of this page