ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕನಸುಗಳ ಕಮರಿಸುವವರಿಗೆ

ಕವಿತೆ ಕನಸುಗಳ ಕಮರಿಸುವವರಿಗೆ ಡಾ.ಸುರೇಖಾ ರಾಠೋಡ ಕೊಡಬೇಡಿ ಮಗಳಹಣವ ಕೇಳುವಹಣವಂತರಿಗೆ… ಕೊಡಬೇಡಿಬಂಗಾರದಂತಹ ಮಗಳಬಂಗಾರವ ಕೇಳುವವರಿಗೆ… ಕೊಡಬೇಡಿಅಧಿಕಾರಿಯಾಗುವ ಮಗಳ ;ಅಧಿಕಾರಿಗಳಾದವರಿಗೆ ಕೊಟ್ಟು ,ಅವಳು ಅಧಿಕಾರಿಯಾಗುವಅವಕಾಶವನ್ನೆಕಿತ್ತುಕೊಳ್ಳುವವರಿಗೆ…. ಕೊಡಬೇಡಿಶಿಕ್ಷಣ ಪಡೆಯುವ ಮಗಳನ್ನು ;ಅವಳಿಗೆ ಶಿಕ್ಷಣವನ್ನು ನೀಡಲುನಿರಾಕರಿಸುವವರಿಗೆ…. ಕೊಡಬೇಡಿಕನಸು ಕಾಣುವ ನಿಮ್ಮ ಮಗಳನ್ನು ;ಅವಳ ಕನಸುಗಳನ್ನೆಕಮರಿಸುವವರಿಗೆ …. ಕೊಡಬೇಡಿಹಕ್ಕಿಯಂತೆ ಹಾರ ಬಯಸುವ ಮಗಳನ್ನು ;ಅವಳ ರಕ್ಕೆಯನ್ನೆಕತ್ತರಿಸುವವರಿಗೆ… ಕೊಡಬೇಡಿಜನ್ಮ ನೀಡುವ ಮಗಳನ್ನು ;ಅವಳ ಜೀವವನ್ನೇತಗೆಯುವವರಿಗೆ…. ಕೊಡಬೇಡಿಜಗವ ರಕ್ಷಿಸುವ ಮಗಳಿಗೆಅವಳ ಜಗತ್ತನ್ನೇಕಸಿದುಕೊಳ್ಳುವವರಿಗೆ… ಕೊಡಬೇಡಿನಿಮ್ಮ ಗೌರವ,ಅಂತಸ್ತಿಗೆದಕ್ಕೆ ತರುವವರಿಗೆಹಾಗೂಅವಳ ಗೌರವವನ್ನೇನಾಶಪಡಿಸುವವರಿಗೆ… ಕೊಡಬೇಡಿ ಮಗಳಿಗೆವಿವಾಹದ ಹೆಸರಿನಲ್ಲಿಬೇರೆಯವರಿಗೆಮಾರುವವರಿಗೆ….*************************************

ಕನಸುಗಳ ಕಮರಿಸುವವರಿಗೆ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಆಸೀಫಾ ಬೇವು ಬೆಲ್ಲದೊಳಿಟ್ಟು ಕಷ್ಟ ಸುಖದ ಸಾಂಗತ್ಯ ಸಾರುತಿದೆ ಯುಗಾದಿಅಭ್ಯಂಜನವ ಮಾಡಿಸಿ ನವಚೈತನ್ಯ ಚೆಲ್ಲುತಿದೆ ಯುಗಾದಿ. ಹೊಸ ಚಿಗುರಿನ ಹೊದಿಕೆಯಲಿ ಕಂಗೊಳಿಸುತಿವೆ ಗಿಡಮರಗಳುಯುಗದ ಆದಿಯ ನೆನಪಿಸಿ ಹರ್ಷ ಹಂಚುತಿದೆ ಯುಗಾದಿ ಮೈಮರೆತ ದುಂಬಿಗಳ ಝೇಂಕಾರ ಹೊಂಗೆ ಬೇವು ಮಾಮರದ ತುಂಬಾಸವಿಜೇನಿನೊಲವು ಮನದ ಗೂಡುಗಳಲಿ ತುಂಬುತಿದೆ ಯುಗಾದಿ ತಳಿರು ತೋರಣ ಚೈತ್ರದಾಗಮನಕೆ ಸೂಚನೆಯನಿತ್ತು ನಗುತಿದೆಬ್ರಹ್ಮ ಸೃಷ್ಟಿಗೆ ಶಿರಬಾಗಿ ಶತಕೋಟಿ ನಮನ ಹೇಳುತಿದೆ ಯುಗಾದಿ ಹಳೆಯ ಹಗೆಯ ಕಳಚಿ ನಿಲ್ಲೋಣ ವಸಂತನಾಗಮನಕೆ ಎಲ್ಲಾಹೊಸ ವರುಷಕೆ ಕೈಬೀಸಿ ಆಸೀಯ ಕರೆಯುತಿದೆ ಯುಗಾದಿ ********************************

ಗಝಲ್ Read Post »

ಕಾವ್ಯಯಾನ

ಹಬ್ಬದ ಸಂತೆ

ಕವಿತೆ ಹಬ್ಬದ ಸಂತೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಇನ್ನೇನುಹತ್ತಿರ ಹಬ್ಬದ ಕಾಲಸಂತೆಗಳಲಿ ಮಾರಾಟಕೆಪಂಚೆ ಸೀರೆ ಒಂದೆರಡು ಪಿಂಡಿಮುತುವರ್ಜಿ ವಹಿಸಿನೇಯತೊಡಗಿರುವನುನೇಕಾರ ಹಗಲು ರಾತ್ರಿ ಎನ್ನದೆಮುಂದಿನ ನಾಲ್ಕಾರು ತಿಂಗಳಹೊಟ್ಟೆಪಾಡಿಗೆ! ಇನ್ನು ವಾರದಲ್ಲೆಸಂತೆಗಳ ಸುರಿಮಳೆ…ಅಷ್ಟರಲ್ಲಿ ಅದೆಂಥದೋ ಕಾಯೆಲೆಜಗಕೆಲ್ಲ ಸುಂಟರಗಾಳಿಯ ಹಾಗೆಹಬ್ಬಿಅದೇನೋ ಸಂಜೆ ಕರ್ಫ್ಯೂಅಂತ ಹೇರಿದರುಜೊತೆಜೊತೆಗೆ ಘಂಟೆ ಜಾಗಟೆಬಾರಿಸಿರೆಂದರುದೀಪ ಬೆಳಗಿಸಿ ಕುಣಿಸಿದರುಎಲ್ಲರೊಡನೆ ತಾವೂ ಕೂಡಿಕೊಂಡರುಈ ನೇಕಾರರುಅಮಾಯಕರು… ಹಾಗೆ ಕುಣಿಕುಣಿದುದೀಪ ಜಾಗಟೆಗಳಶಬ್ದ ಬೆಳಕಿನಾಟದ ನಡುವೆಯಲಿದಿಢೀರನೆ ಸಿಡಿಲು ಬಡಿದುಮರಗಳು ಬೆಂದು ಉರಿದ ಹಾಗೆಲಾಕ್ ಡೌನ್! ಲಾಕ್ ಡೌನ್!ಎಂದು ಗುಡುಗಿದರುನಾಡೆಲ್ಲ ಒಟ್ಟೊಟ್ಟಿಗೆ ಬಂದ್ ಬಂದ್!ಮತ್ತೆ ಗುಡುಗುಟ್ಟಿದರು… ಮೂಲೆಯಲಿ ಸದ್ದಿಲ್ಲದೆ ಕೂತಿದ್ದಪಿಂಡಿಗಳುಇದ್ದಕ್ಕಿದ್ದಂತೆ ನೆಲಕ್ಕುರುಳಿಅಂಗಾತ ಮಲಗಿಬಿಟ್ಟವುನೇಕಾರನ ಕಣ್ಣುಗಳುಅಸಹಾಯಕವಾಗಿಆ ಪಿಂಡಿಗಳನೇ ನೆಟ್ಟಗೆ ದಿಟ್ಟಿಸಿತಮಗೆ ತಾವೇ ಬಲವಾಗಿ ಒತ್ತಿಮುಚ್ಚಿಮೆಲ್ಲ ಮೆಲ್ಲ ಸುರಿದ ಕಣ್ಣೀರೊಡನೆಉರುಳಿದವು ಒಂದೆರಡುಕೆಂಪು ಹನಿ…! *********

ಹಬ್ಬದ ಸಂತೆ Read Post »

ಕಾವ್ಯಯಾನ

ಹೊಸ ಹಿಗ್ಗು…..!!

ಕವಿತೆ ಹೊಸ ಹಿಗ್ಗು…..!! ಯಮುನಾ.ಕಂಬಾರ ಎಲ್ಲಿಹುದು ಹೊಸಹಿಗ್ಗು – ಕ್ಷಣ ನಾನುಕಣ್ತೆರೆವೆ – ಮೈ ಮನ ಒಂದಾಗಿ ಕಾಯುತಿರುವೆಬೆಳ್ಳಿ ಮೋಡದಕಪ್ಪಿನಲ್ಲೋ …ಇಲ್ಲಾಕರಿಯ ನೆಲದ ಕಣ್ಣಿನಲ್ಲೋ …ಅಂತೂ ರಚ್ಚೆಹಿಡಿದು ಕುಳಿತಿರುವೆ. //ಪ// ನೀಲಿ ಆಗಸದಎದೆ ತುಂಬಿತುಳುಕಿದೆ – ಮೊಗ್ಗಿನೊಲು ಹೊಸ ಕಬ್ಬ ಹೀರಲು ಮುಂದಾಗಿಅದೇ ಆ ಎಂದಿನಕಲುಷಿತ ಹವೆಏರಿ ಬರುತಿದೆ ಮುಗಿಲ ಮಾರಿಗೆ ನಾಚಿಕೆಯ ಸರಿಸಿ //ಪ// ಋಷಿ ಮುನಿಯತಪದಂತೆ ಏಕವೃತಸ್ಥೆಯಾಗಿ ಹಸಿರು ಚಿಮ್ಮಿದ ಚಲುವೆ ದೀನಳಾಗಿಹಳುಹೊಸ ಚಿಗುರುಹಸಿರೆಲೆಯು ಕಳೆಗುಂದಿ ನಲುಗುತಿವೆ ನುಂಗದ ವಿಷ ಜಲವ ಒಕ್ಕಿ //ಪ// ಹೊರಳುತಿವೆ ಹಗಲುಗಳುಸರಿಯುತಿವೆ ರಾತ್ರಿಗಳುಅಂಕೆ ಸಂಕಲೆಗಳಿಲ್ಲದೇ ನವಿರು ನವಿರಾಗಿಗಡಿಯ ದಾಟಿದಲೆಕ್ಕ ವಿಧಿ ಮಿಕ್ಕಿ ಹರಿಯುತಿದೆಮೂಗಿನ ನೇರಕ್ಕೆ ಗುಣಕ ಚಿನ್ಹವ ಹಾಕಿ //ಪ// ಅಧಿಕಾರ ಅಂತಸ್ತುಕೇಕೆ ಹಾಕಿವೆ ಇಲ್ಲಿಭಾತೃತ್ವ ಸಹಕಾರ ಕೊಲೆಯ ಮಾಡಿಸತ್ತ ಶವಗಳಕಬ್ಬವಾಸನೆಯು ಎಲ್ಲೆಲ್ಲೂಹೊಸ ಹಿಗ್ಗು ಎಲ್ಲಿಹುದು ಹುಡುಕುತಿರುವೆ. //ಪ್// ಇದ್ದ ಮೂವರಲ್ಲಿಕದ್ದವರು ಯಾರೆಂದುಹುಡುಕುವುದು ಕಷ್ಟವೇ….!!?? ಅಂತೂ ಒಗಟುಜಾಳಿಗೆ ಬಗರಿಕೈಯಲ್ಲಿ ಇರಲುತಿರಗದೇನು…..??!! ಬುಗುರಿ ತಡವೇತಕೇ……!!!?? //ಪ// ನಾನು ನಾನೇ ಎಂಬನನ್ನ ಸುಖವೇ ಮೊದಲೆಂಬವರ್ತುಳಗಳು ಸುತ್ತಿತ್ತಿರುವ ನಿತ್ಯ ಸಮಯನನ್ನ ವರ್ತುಳ ಫರಿಧಿಮತ್ತೊಂದ ವರ್ತುಳಗಡಿಗೆ ಬದುಕ ಹಂಚಿಕೊಂಡ ಸತ್ಯ ಮರೆತಿಹೆವು ಇಂದು //ಪ// ಅಂಗೈ ಹುಣ್ಣಿಗೆಕನ್ನಡಿ ಏಕೆ..?ಬಲ್ಲೆವಾದರೂ ನಾವು ಕೈ ನೋಡಲಾರೆವುಹೊಸ ಹೊಸ ಶಬ್ದಹೊಸ ಹೊಸ ಕವಿತೆಬರೆದೆವಾದರೂ ನಾವು ಓದಲಾರೆವು. //ಪ// ****************************************

ಹೊಸ ಹಿಗ್ಗು…..!! Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1)ಹೆಣ್ಣಲ್ಲವೇ ನೀ :ಕಲ್ಲು ರೂಪದಿ ಕೂಡಾಮಮತೆ ಸೆಲೆ. 2)ಕಲ್ಲಾಗಿ ಹೋದೆ :ಸ್ವಾರ್ಥಿ ಜಗವು ಕೊಟ್ಟನೋವು ಕಾಣಿಕೆ. 3)ಹಣೆಯ ಬೊಟ್ಟುಅವನಿಟ್ಟ ನೆನಪುಹೃದಯೋಡೆಯ 4)ಕಾದು ಕಲ್ಲಾದೆ :ನಲ್ಲನ ಆಗಮನಕಾಮನಬಿಲ್ಲು. 5)ಅಹಲ್ಯ ರೂಪಶ್ರೀ ರಾಮ ಬರುವನೇ,ಕಲಿಯುಗದಿ. 6)ಗಂಭೀರ ಮೊಗಕಂದನಂದದ ಮನಬಾಳು ನಂದನ. 7)ಮೌನದ ತಾಣಹೆಣ್ಣು ಜೀವದ ಕಣ್ಣು,ತೀರದ ಋಣ. *************************************

ಹಾಯ್ಕುಗಳು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಶೋಕ ಬಾಬು ಟೇಕಲ್ ಹಾಲುಂಡ ಹಸುಳೆಯೇ ಹದ್ದಂತೆ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಈಗಹೊತ್ತೊತ್ತಿಗೂ ಮಡಿಲೇರಿದ ಕೂಸೇ ಕಾಳ ಸರ್ಪದಂತೆ ಬುಸುಗುಟ್ಟುತ್ತಿದೆ ಈಗ ನಿತ್ರಾಣಗೊಂಡು ಪಾತಾಳ ತುಳಿದಾಗ ಕೈ ಹಿಡಿದು ಮೇಲೆತ್ತಿದ್ದೆಕೃತಜ್ಞತೆಯ ಮರೆತು ನೇಣು ಕುಣಿಕೆ ಹುರಿಗೊಳಿಸುತ್ತಿದೆ ಈಗ ಮಾನವೀಯತೆ ಮುಂದೆ ಮಿಕ್ಕೆಲ್ಲವೂ ಗೌಣವೆಂದೇ ಭಾವಿಸಿದ್ದೆಅದೇ ಮಾನವೀಯತೆಗೆ ಚಟ್ಟ ಕಟ್ಟಿ ಬೀದಿಗಿಟ್ಟು ಹರಾಜಾಕುತ್ತಿದೆ ಈಗ ಊರಿಗೆ ಊರೇ ಅಪಸ್ವರದ ಕೊಳಲು ನುಡಿಸುತಿತ್ತು ಅಲ್ಲಿ !ಬುದ್ಧ ಸಾಗಿ ಬಂದ ಹಾದಿಯೂ ಮುಳ್ಳುಗಳನು ಮೊಳೆಸುತ್ತಿದೆ ಈಗ ಈಚಲು ಮರದ ನೆರಳು ಮಜ್ಜಿಗೆಗೆ ಯೋಗ್ಯವಲ್ಲ ಎಂದು ಅಬಾಟೇ ಗೆ ಹೇಳಿದ್ದೆಕಂಡವರ ಕಣ್ಣು ನಶೆ ಕುಡಿದು ಅಮಲೇರಿ ಬೊಬ್ಬೆ ಇಡುತ್ತಿದೆ ಈಗ. *************************************

ಗಜಲ್ Read Post »

ಕಾವ್ಯಯಾನ

ಕವಿತೆ ಮತ್ತೆ ಯುಗಾದಿ ಹೊಸ ವರ್ಷವ ಸ್ವಾಗತಿಸುತ ಬಂದಿದೆ ಯುಗಾದಿಯುಗ ಯುಗಗಳ ಹೊಸ ಪಲ್ಲವಿಯನು ಹಾಡಿ. ಮಾರನ ಹೂ ಬಾಣದ ಜುಮ್ಮೆನ್ನುವ ಅಮಲುಪ್ರತಿ ಹೃದಯದ ಮೇಲೆರಗಿದೆ ಮೈಗಂಧದ ಘಮಲು. ಎಲೆಯುದುರುವ ಕಾಡಲ್ಲಿ ಚಿಗುರಿನ ದನಿ ಹಾಡುಪ್ರತಿ ಗಿಡಗಳು ಹಸಿರುಟ್ಟಿವೆ ಹೂ ಬಟ್ಟೆಯ ನೋಡು. ಹೂ ಹೂಗಳ ಕೇಸರದಲಿ ದುಂಬಿಯ ಹೂ ಮುತ್ತುಗಿಡ ಮರಗಳು ಅನುಭವಿಸಿವೆ ಪ್ರಣಯದ ನಶೆ ಮತ್ತು! ಒಣ ಶಿಶಿರವು ಚೇತರಿಸದು ಹೂ ಚೈತ್ರದ ಹೊರತುವನಮಾಲಿಯ ಅಡಿ ಅಡಿಯಲು ಮಧು ಮಾಸದ ಗುರುತು. ಪ್ರತಿ ಕಾಡಲು ಬರಿ ಬಯಲಲು ಹೂ ಹಣ್ಣಿನ ರಾಶಿಹಕ್ಕಿಗಳುಲಿ ಇಂಪಲು ಸವಿ ಕಂಪನು ಸೂಸಿ. ಯುಗ ಯುಗಾದಿಯು ಬರುತಿರಲಿ ನಮ್ಮಯ ಹೊಸತನಕೆನಾಳೆಯ ಸದ್ವಿಕಾಸಕೆ ನವ ಚೈತನ್ಯದ ಹರಕೆ ************************************************************ ಫಾಲ್ಗುಣ ಗೌಡ ಅಚವೆ

Read Post »

ಕಾವ್ಯಯಾನ, ಗಝಲ್

ಗಜ಼ಲ್

ಗಜ಼ಲ್ ಎ. ಹೇಮಗಂಗಾ ಕೊರೋನಾ ಕನಸುಗಳ ಕಮರಿಸಿದೆ ಮರಳಿ ಊರ ಸೇರುವುದು ಹೇಗೆ ?ಹಾಳು ಸುರಿವ ಬೀದಿ ಮಸಣವಾಗಿದೆ ಮರಳಿ ಊರ ಸೇರುವುದು ಹೇಗೆ ? ಶಾಂತವಾಗಿ ಹರಿಯುತ್ತಿದ್ದ ಬಾಳಕಡಲಿನಲಿ ಎಣಿಸದ ಉಬ್ಬರವಿಳಿತಇರುವ ನೆಲೆ ಜೀವಗಳ ನಲುಗಿಸಿದೆ ಮರಳಿ ಊರ ಸೇರುವುದು ಹೇಗೆ ? ದುಡಿಮೆ ಆದಾಯವಿಲ್ಲದ ಬದುಕು ನರಕಸದೃಶವಲ್ಲದೇ ಮತ್ತೇನು ?ತಿನ್ನುವ ಅನ್ನಕೂ ತತ್ವಾರವಾಗಿದೆ ಮರಳಿ ಊರ ಸೇರುವುದು ಹೇಗೆ ? ಅನುಕಂಪವಿಲ್ಲದ ಸಾವು ಹಗಲಲ್ಲೂ ಭೀತಿಯ ಕಾರಿರುಳ ಹರಡಿದೆಬೆದರಿದ ಮನ ದೃಢತೆ ಕಳೆದುಕೊಂಡಿದೆ ಮರಳಿ ಊರ ಸೇರುವುದು ಹೇಗೆ ? ತಿಳಿದಿಲ್ಲ ಹೊಂಚು ಹಾಕಿದ ಹದ್ದಿನಂತೆ ಎಂದೆರಗುವುದೋ ಎಂದುಮದ್ದಿಲ್ಲದ ಮಹಾಮಾರಿ ಹೆದರಿಸಿದೆ ಮರಳಿ ಊರ ಸೇರುವುದು ಹೇಗೆ ? *****************

ಗಜ಼ಲ್ Read Post »

ಕಾವ್ಯಯಾನ

ಅರಳುವುದೇಕೋ.. ?ಬಾಡುವುದೇಕೋ

ಕವಿತೆ ಅರಳುವುದೇಕೋ.. ?ಬಾಡುವುದೇಕೋ ಲಕ್ಷ್ಮೀ ಮಾನಸ ಕಾಲದ ಗಾಲಿಯುಉರುಳುತ್ತಾ,ಜವದಿಂದೆಸೆದಅಗಣಿತ ಪ್ರಶ್ನೆಗಳಸರಮಾಲೆಯಲ್ಲಿ,ಮೃದು ಹೃದಯ ಸಿಲುಕಿ,ಅರಳಿ ಮುದುಡುವುದುರಅರ್ಥ ಅರಿಯಲು,ಕಾಲವನ್ನೇ ಮರೆಯುತಿದೆ….. ಕುಸುಮಗಳ ಸರಮಾಲೆಯಲ್ಲಿ,ಸುಮಗಳಿಂದು  ನಲುಗುತಿವೆ,ನೀರವ ಮೌನದಲ್ಲಿ….,ಬಿಸಿಲು -ಮಳೆಯೆನ್ನದೆ,ಬಾಳ ಕೊನೆಯನರಿಯದೆ…… ತಾನಾಗಿಯೂ ಅರಳಲಿಲ್ಲ,ತಾನಾಗಿಯೂ ಮುದುಡಲಿಲ್ಲ,….,ಅರಳುವ ಆಸೆಯೂ ಇರಲಿಲ್ಲ,ಮುದುಡುವ ಬಯಕೆಗೂ ಬರವಿಲ್ಲ…, ಬಿಡಿಸಲಾಗದ ಗಂಟುಗಳಲ್ಲಿ,ಉತ್ತರವಿಲ್ಲದ ಪ್ರಶ್ನೆಗಳಲ್ಲಿ,ಪ್ರಶ್ನೆಗಳಿಗೇ ಪ್ರಶ್ನೆಯಾಗಿ,ಬಾಳುತಿರುವ  ಈ ಕುಸುಮಅರಳುವುದೇಕೋ… ?ಮುದುಡುವುದೇಕೋ… ? ************************

ಅರಳುವುದೇಕೋ.. ?ಬಾಡುವುದೇಕೋ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅರುಣಾ ನರೇಂದ್ರ ನಿನ್ನೆದೆಗೆ ಒರಗಿ ವೇದನೆ ಮರೆಯಬೇಕೆಂದಿರುವೆ ದೂರ ಸರಿಸದಿರುನಿನ್ನ ಮಡಿಲ ಮಗುವಾಗಿ ನಗೆ ಬೀರಬೇಕೆಂದಿರುವೆ ದೂರ ಸರಿಸದಿರು ಬೀಸುವ ಗಾಳಿ ಸೆರಗೆಳೆದು ನಕ್ಕು ಕಸಿವಿಸಿಗೊಳಿಸುತ್ತಿದೆನಿನ್ನ ತೋಳ ತೆಕ್ಕೆಯಲಿ ಚುಕ್ಕಿಗಳ ಎಣಿಸಬೇಕೆಂದಿರುವೆ ದೂರ ಸರಿಸದಿರು ಕಡಲ ಮೊರೆತ ಕಿವಿಗೆ ಅಪ್ಪಳಿಸಿದಾಗ ಜನ್ಮ ಜನ್ಮದ ವಿರಹ ಕೇಕೆ ಹಾಕುತ್ತದೆಮೈ ಬೆವರ ಗಂಧದಲಿ ರಾತ್ರಿಗಳ ಕಳೆಯಬೇಕೆಂದಿರುವೆ ದೂರ ಸರಿಸದಿರು ಉಕ್ಕೇರುವ ಯೌವನದ ಮಧು ಬಟ್ಟಲು ನಿನ್ನ ತುಟಿ ಸೋಕಲು ಕಾಯುತ್ತಿದೆನಶೆ ಏರಿದ ನಿನ್ನ ಕಣ್ಣ ಕೊಳದಲ್ಲಿ ಈಜಾಡಬೇಕೆಂದಿರುವೆ ದೂರ ಸರಿಸದಿರು ರಸಿಕತೆ ರಂಗೇರಿದಾಗ ಕೋಣೆಯ ದೀಪ ನಾಚಿ ಮುಖ ಮುಚ್ಚಿಕೊಳ್ಳುತ್ತದೆಅರುಣಾ ನೀ ಕೊಟ್ಟ ಹಿಡಿ ಪ್ರೀತಿ ಉಣ್ಣಬೇಕೆಂದಿರುವೆ ದೂರ ಸರಿಸದಿರು *******************************************

ಗಜಲ್ Read Post »

You cannot copy content of this page

Scroll to Top